
ಹಾಯ್ ಫ್ರೆಂಡ್ಸ ಇವತ್ತಿನ ಸಂಡೇ ಸಾಯಿನ್ಸ ಅಂಕಣದಲ್ಲಿ ನಾವು "ಸ್ತನಪಾನದಿಂದ ಅಂದರೆ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ತಾಯಿಗಾಗುವ 5 ಅದ್ಭುತ ಲಾಭಗಳ" ಬಗ್ಗೆ ತಿಳಿದುಕೊಳ್ಳೊಣಾ. ಈ ಅಂಕಣವನ್ನು ಬರೆಯಲು ನನಗೆ ಗೈಡ ಮಾಡಿದ ನನ್ನ ಕುಚುಕು ಬೆಸ್ಟ ಫ್ರೆಂಡ್ ಡಾ. ಪ್ರಿಯಾಂಕಾಳಿಗೆ ದೊಡ್ಡ ಥ್ಯಾಂಕ್ಸ & ಲಾಟ್ಸ ಆಫ್ ಲವ್.

ಸ್ತನಪಾನ ಮಾಡಿಸುವುದು ಅಂದರೆ ಮಗುವಿಗೆ ಮೊಲೆಹಾಲನ್ನು ಕುಡಿಸುವುದು ತುಂಬಾನೇ ಒಳ್ಳೆಯದಾಗಿದೆ ಹಾಗೂ ಆರೋಗ್ಯಕರವಾಗಿದೆ. ಆದರೆ ಕೆಲ ಮಾತೆಯರು ತಮ್ಮ ಸೌಂದರ್ಯ ಹಾಳಾಗುತ್ತದೆ ಅಂತಾ ತಮ್ಮ ಮಗುವಿಗೆ ಎದೆಹಾಲನ್ನು ಕುಡಿಸುವುದಿಲ್ಲ. ಅಂಥವರಿಗಾಗಿ ಸ್ಪೆಷಲಾಗಿ ನಾನು ಈ ಅಂಕಣವನ್ನು ಬರೆಯುತ್ತಿರುವೆ. ತಮ್ಮ ಮಗುವಿಗೆ ಮೊಲೆ ಹಾಲನ್ನು ಕುಡಿಸುವ ಎಲ್ಲ ಮಾತೆಯರಿಗೆ ದೊಡ್ಡ ಸಲಾಂ. ಮಗುವಿಗೆ ಎದೆಹಾಲನ್ನು ಕುಡಿಸಿದಾಗ ಮಗುವಿಗೆ ಉತ್ತಮ ಪೋಷಣೆ ಸಿಗುತ್ತದೆ. ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಜೊತೆಗೆ ತಾಯಿಗೂ ಕೂಡ ಕೆಲವೊಂದಿಷ್ಟು ಅದ್ಭುತ ಲಾಭಗಳಾಗುತ್ತವೆ. ಅವು ಇಂತಿವೆ ;

1) ಸ್ತನಪಾನ ಗರ್ಭಾಶಯದ ಸೈಜನ್ನು ಕಡಿಮೆ ಮಾಡಲು ಮತ್ತು ಅದನ್ನು ಮತ್ತೆ ಅದರ ನಾರ್ಮಲ ಸೈಜಗೆ ರಿಟರ್ನ್ ತರಲು ಹೆಲ್ಪ ಮಾಡುತ್ತದೆ. ಮಗುವಿಗೆ ಜನ್ಮ ನೀಡುವಾಗ ಗರ್ಭಾಶಯದ ಗಾತ್ರ ಹೆಚ್ಚಾಗಿರುತ್ತದೆ, ಅದನ್ನ ಮತ್ತೆ ನಾರ್ಮಲ ಸೈಜಿಗೆ ತರಲು ಸ್ತನಪಾನ ಸಹಾಯ ಮಾಡುತ್ತದೆ.

2) ಮಗುವಿಗೆ ಸ್ತನಪಾನ ಮಾಡಿದಾಗ ತಾಯಿಯಲ್ಲಿ ಹ್ಯಾಪಿ ಹಾರ್ಮೋನುಗಳು ರೀಜಿಲಾಗುತ್ತವೆ. ಇದರಿಂದ ಅವಳು ಫುಲ್ ಖುಷಿಯಾಗಿರುತ್ತಾಳೆ. ಜೊತೆಗೆ ಫುಲ್ ಪೋಜಿಟಿವ ಮೂಡನಲ್ಲಿರುತ್ತಾಳೆ.

3) ಸ್ತನಪಾನದಿಂದ ದಿನಕ್ಕೆ 500 ಕ್ಯಾಲೋರಿ ತನಕ ಬರ್ನ ಮಾಡಬಹುದು. ವೇಟ ಲಾಸ ಮಾಡಿಕೊಳ್ಳಲು ಮಾತೆಯರಿಗೆ ಇದು ಬೆಸ್ಟ ಐಡಿಯಾವಾಗಿದೆ. ನೀವು ನಿಮ್ಮ ಮಗುವಿಗೆ ಎದೆಹಾಲನ್ನು ಕುಡಿಸಿ ಈಜಿಯಾಗಿ ತೂಕ ಇಳಿಸಿಕೊಳ್ಳಬಹುದು.

4) ಸ್ತನಪಾನ ಮಾಡುವುದರಿಂದ ಹಾರ್ಟ ಅಟ್ಯಾಕ, ಪ್ಯಾರಾಲೈಸಿಸ, ಹ್ರದಯ ಸಂಬಂಧಿ ಕಾಯಿಲೆಗಳು, ಬ್ರಿಸ್ಟ ಕ್ಯಾನ್ಸರ್, ಓವಿರಿಯನ ಕ್ಯಾನ್ಸರಗಳು ಆಗುವ ಚಾನ್ಸಸ ತುಂಬಾನೇ ಕಡಿಮೆಯಾಗುತ್ತದೆ. ಸ್ತನಪಾನದಿಂದ ಬ್ಲಡ ಪ್ರೆಶರ್, ಎಮೋಷನಲ ಪ್ರೆಶರ ಹಾಗೂ ಡಿಪ್ರೆಶನ್ ಕೂಡ ಕಡಿಮೆಯಾಗುತ್ತದೆ. ಸ್ತನಗಳಲ್ಲಿ ಹೆಚ್ಚಿಗೆ ಹಾಲು ಉತ್ಪಾದನೆಯಾದಾಗ ಅವುಗಳ ಮೇಲೆ ಬಹಳಷ್ಟು ಒತ್ತಡ ಬೀಳುತ್ತದೆ. ಮಗುವಿಗೆ ಸ್ತನಪಾನ ಮಾಡಿದಾಗ ಈ ಒತ್ತಡ ಕೂಡ ಕಡಿಮೆಯಾಗುತ್ತದೆ.

5) ಸ್ತನಪಾನ ಸಂಪೂರ್ಣವಾಗಿ ಫ್ರಿಯಾಗಿದೆ. ಇದರಿಂದ ನಿಮ್ಮ ಟೈಮ ಹಾಗೂ ಹಣ ಎರಡೂ ಸೇವ ಆಗುತ್ತವೆ. ಪಾಕೆಟ ಹಾಲನ್ನು ಹಣ ಕೊಟ್ಟು ಖರೀದಿಸಿ ಆನಂತರ ಅದನ್ನು ಕಾಯಿಸಿ ಆರಿಸಿ ನಂತರ ಮಗುವಿಗೆ ಕುಡಿಸುವಷ್ಟರಲ್ಲಿ ನಿಮ್ಮ ಟೈಮ, ಮನಿ ಹಾಗೂ ಎನರ್ಜಿ ಕೂಡ ವೇಸ್ಟಾಗುತ್ತದೆ. ಸೋ ಅದರ ಬದಲಾಗಿ ನಿಮ್ಮ ಎದೆಹಾಲನ್ನು ಕುಡಿಸುವುದು ಒಳ್ಳೆಯದಾಗಿದೆ. ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲು ದಿನಾಲು ನಿಮ್ಮ ಸ್ತನಗಳಲ್ಲಿ ಉತ್ಪಾದನೆಯಾಗುತ್ತದೆ. ಮಗುವಿನ ಡಿಮ್ಯಾಂಡಗೆ ತಕ್ಕಂತೆ ಹಾಲನ್ನು ಸಪ್ಲಾಯ ಮಾಡುವಷ್ಟು ಸಾಮರ್ಥ್ಯ ಸ್ತನಗಳಲ್ಲಿದೆ.

ಇವೀಷ್ಟು ಮಗುವಿಗೆ ಸ್ತನಪಾನ ಮಾಡುವುದರಿಂದ ತಾಯಿಗಾಗುವ ಅದ್ಭುತ ಲಾಭಗಳು. ನಂಗೊತ್ತು ಫಸ್ಟಟೈಮ ಸ್ತನಪಾನ ಮಾಡುವಾಗ ನಿಮಗೆ ಪೇನ ಆಗುತ್ತದೆ, ಪಬ್ಲಿಕಲ್ಲಿದ್ದರೆ ಶೇಮ ಆಗುತ್ತದೆ ಅಂತಾ. ಆದರೂ ತಾಯಿ ಧರ್ಮದ ಮುಂದೆ ಎಲ್ಲವೂ ಶೂನ್ಯವಾಗುತ್ತದೆ. ಸೌಂದರ್ಯ ಹಾಳಾಗುತ್ತದೆ ಎಂಬ ಗೊಡ್ಡುವಾದವನ್ನು ಬಿಡಿ, ಅದರಲ್ಲಿ ಯಾವುದೇ ಸತ್ಯವಿಲ್ಲ. ನೀವು ದೇವತೆಯರ ಸಮಾನ, ನೀವು ಹೇಗಿದ್ದರೂ ನಿಮ್ಮ ಸೌಂದರ್ಯಕ್ಕೆ ಸರಿಸಾಟಿಯಾದವರು ಯಾರಿಲ್ಲ. ಸೋ ನಿಮ್ಮ ಮಕ್ಕಳಿಗೆ ಸ್ತನಪಾನ ಮಾಡಿಸಿ.

ಓಕೆ ಗೆಳೆಯರೇ, ನಿಮಗೆ ಈ ಸಂಡೇ ಸಾಯಿನ್ಸ ಅಂಕಣ ಇಷ್ಟವಾಗಿದೆ, ಹೊಸ ವಿಷಯಗಳು ಕಲಿಯಲು ಸಿಕ್ಕಿವೆ ಅಂತಾ ಭಾವಿಸುವೆ. ಈ ಅಂಕಣವನ್ನು ಬರೆಯಲು ನನಗೆ ಗೈಡ ಮಾಡಿದ ನನ್ನ ಬೆಸ್ಟ ಫ್ರೆಂಡ ಡಾ.ಪ್ರಿಯಾಂಕಾಳಿಗೆ ಧನ್ಯವಾದಗಳು. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ ಕಮೆಂಟ ಮಾಡಿ. ಜೊತೆಗೆ ಇದನ್ನು ಎಲ್ಲೆಡೆಗೆ ಬಿಂದಾಸಾಗಿ ಶೇರ್ ಮಾಡಿ. ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ತಪ್ಪದೇ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಮತ್ತೆ ಮುಂದಿನ ಸಂಡೇ ಸಾಯಿನ್ಸ ಅಂಕಣದೊಂದಿಗೆ ಮತ್ತೆ ಸಿಗೋಣಾ ಧನ್ಯವಾದಗಳು...
