ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾವು ಮಹಾಜ್ಞಾನಿ ಶುಕ್ರಾಚಾರ್ಯರ ನೀತಿಗಳ ಬಗ್ಗೆ ನೋಡೋಣಾ. ಶುಕ್ರ ನೀತಿಗಳು ಇಂತಿವೆ ;
1) ನಮ್ಮ ಮಾನ, ಅಪಮಾನ, ಧನ, ಮಂತ್ರ, ವಯಸ್ಸು, ಮನೆ ಸಮಸ್ಯೆ, ಔಷಧ, ಲೈಂಗಿಕ ಸಂಬಂಧ, ದಾನಗಳನ್ನು ಯಾವಾಗಲೂ ನಾವು ಗುಪ್ತವಾಗಿಡಬೇಕು.
2) ಈ ನಾಲ್ಕು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಸಂಸಾರ ಖಂಡಿತ ಹಾಳಾಗುತ್ತದೆ.
* ಸದಾ ಸುಳ್ಳೇಳುವುದು
* ಕುಟುಂಬದ ಪರಂಪರೆಯ ಹಾಗೂ ಸಂಪ್ರದಾಯದ ವಿರುದ್ಧ ಕೆಲಸ ಮಾಡುವುದು
* ಪರಸ್ತ್ರೀಯರ ಜೊತೆಗೆ ಸಂಬಂಧ ಬೆಳೆಸುವುದು
* ಮಾಂಸಾಹಾರ ಸೇವಿಸುವುದು
3) ಸ್ತ್ರೀಯರಿಗೆ, ಮೂರ್ಖರಿಗೆ, ಚಿಕ್ಕ ಮಕ್ಕಳಿಗೆ, ಸ್ವಾರ್ಥಿಗಳಿಗೆ, ನೀಚರಿಗೆ ನಿಮ್ಮ ಯಾವುದೇ ಗುಪ್ತ ವಿಷಯಗಳನ್ನು ಹೇಳಬಾರದು.
4) ಯಾವುದೇ ಕೆಲಸವನ್ನು ಮಾಡುವಾಗ ಭವಿಷ್ಯದ ಬಗ್ಗೆ ಯೋಚಿಸಿ ಮಾಡಿ. ಮುಂದಾಲೋಚನೆಯಿಂದ ಮಾಡಿ ಆದರೆ ಸದ್ಯದ ಕೆಲಸವನ್ನು ಬಿಡಬೇಡಿ. ಸದ್ಯದ ಕೆಲಸವನ್ನು ಸರಿಯಾಗಿ ಮಾಡಿ.
5) ಅವಶ್ಯಕತೆಗಿಂತ ಅಧಿಕವಾಗಿ ಯಾರ ಮೇಲೂ ಭರವಸೆ ಇಡಬಾರದು.ಇಟ್ಟರೆ ಖಂಡಿತ ನಮಗೆ ನೋವಾಗುತ್ತದೆ, ನಷ್ಟವಾಗುತ್ತದೆ.
6) ಯಾವತ್ತೂ ಕೂಡ ಅನ್ನದ ಅಪಮಾನ ಮಾಡಬಾರದು. ಅನ್ನ ಪರಬ್ರಹ್ಮವಾಗಿದೆ. ಊಟ ಮಾಡುವಾಗ ಅನ್ನಕ್ಕೆ ನಮಸ್ಕರಿಸಿ ಮಾಡಬೇಕು.
7) ಯೌವ್ವನ, ಜೀವನ, ಮನಸ್ಸು, ಛಾಯೆ, ಲಕ್ಷ್ಮೀ ಹಾಗೂ ಅಧಿಕಾರ ಇವು ಬಹಳಷ್ಟು ಚಂಚಲವಾಗಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇವುಗಳನ್ನು ನಿಯಂತ್ರಿಸಲು ಬಹಳಷ್ಟು ಪ್ರಯತ್ನಿಸಬಾರದು.
ಈ ಶುಕ್ರ ನೀತಿಗಳು ನಿಮಗಿಷ್ಟವಾಗಿದ್ದರೆ ತಪ್ಪದೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಫೇಸ್ಬುಕ್ ಹಾಗೂ ಇನಸ್ಟಾಗ್ರಾಮಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು.....