ಗಂಡಸರ ದೊಡ್ಡ ವೀಕನೆಸ : Biggest Weakness of Men - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗಂಡಸರ ದೊಡ್ಡ ವೀಕನೆಸ : Biggest Weakness of Men

ಗಂಡಸರ ದೊಡ್ಡ ವೀಕನೆಸ : Biggest Weakness of Men

                                    ಹಾಯ್ ಗೆಳೆಯರೇ, ಇವತ್ತಿನ ಮಂಡೇ ಮ್ಯಾಟರ್ ಅಂಕಣದ ವಿಷಯ ಸ್ವಲ್ಪ ಎಲ್ಲರಿಗೂ ಕಿರಿಕಿರಿ ಮಾಡುತ್ತದೆ. ಆದರೆ ಎಷ್ಟೋ ಯುವಕರು ದಾರಿ ತಪ್ಪುವುದನ್ನು ತಪ್ಪಿಸುತ್ತದೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ಅದೇ ನಂಬಿಕೆಯ ಮೇಲೆ ನಾನು ಈ ಅಂಕಣವನ್ನು ಬರೆಯುತ್ತಿರುವೆ. ಈ ಅಂಕಣದಲ್ಲಿ "ಗಂಡಸರ ದೊಡ್ಡ ವೀಕನೆಸ" ಬಗ್ಗೆ ಡಿಸ್ಕಸ ಮಾಡೋಣಾ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಇದನ್ನ ಶೇರ್ ಮಾಡಿಕೊಳ್ಳಿ‌‌‌... 

ಗಂಡಸರ ದೊಡ್ಡ ವೀಕನೆಸ : Biggest Weakness of Men

                             ಈ ಅಂಕಣವನ್ನು ಓದಿದ ನಂತರ ಎಲ್ಲಾ ಗಂಡಸರು ಈ ರೀತಿ ಇರಲ್ಲ ಅಂತಾ ವಾದಿಸಲು ಬರಬೇಡಿ. ಎಲ್ಲರೂ ಹೀಗೆ ಅಂತಾ ನಾನು ಯಾವತ್ತೂ ಹೇಳಿಲ್ಲ, ಹೇಳೋದು ಇಲ್ಲ. ಕುಂಬಳಕಾಯಿ ಕಳ್ಳ‌ ಅಂದರೆ ಅದು ನೀವೇ ಅಂತಾ ಯಾಕೆ ಅಂದುಕೊಳ್ತಿರಾ? ಜನರಲ್ಲಾಗಿ ನಾನು ಹೇಳ್ತಿರುವೆ, ನೀವು ಕೇರಫುಲ್ಲಾಗಿ ಇದನ್ನು ಅರ್ಥಮಾಡಿಕೊಳ್ಳಿ. ಗಂಡಸರು ಶಕ್ತಿವಂತರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರಿಗೂ ಒಂದು ದೊಡ್ಡ ವೀಕನೆಸ ಇದೆ. ಆ ವೀಕನೆಸ ಏನಪ್ಪಾ ಅಂದರೆ "ಸ್ಕರ್ಟ ಚೇಜಿಂಗ ಗುಣ, ಲಂಗಗಳು ಕಂಡಾಗ ಮಂಗನಂತೆ ವರ್ತಿಸುವ ಗುಣ, ಪೇಟಿಕೋಟನ್ನು ನೋಡಿ ಪೆದ್ದರಾಗುವ ಗುಣ, ಹೆಣ್ಣಿಗಾಗಿ ಮಣ್ಣು ತಿನ್ನುವ ಗುಣ, ಸುಂದರಿಗಾಗಿ ಸರ್ವಸ್ವವನ್ನು ಸಾಯಿಸುವ ಮೂರ್ಖತನ...". ಹೌದು ಗೆಳೆಯರೇ, "ಹೆಂಗಸರ ಚಪಲ...." ಗಂಡಸರ ದೊಡ್ಡ ವೀಕನೆಸ ಆಗಿದೆ. ಹೆಂಗಸರ ಬಟ್ಟೆಗಳು ಟೈಟಾದಷ್ಟು ಗಂಡಸರ ಬಟ್ಟೆಗಳು ಲೂಜಾಗುತ್ತವೆ ಇದೇ ಗಂಡಸರ ದೊಡ್ಡ ವೀಕನೆಸ್ಸಾಗಿದೆ. ಹೆಣ್ಣಿನ ಗುಲಾಮಗಿರಿಯನ್ನು ಮಾಡಲು ಸಾಯುವುದು ಗಂಡಸರ ವೀಕನೆಸ್ಸಾಗಿದೆ. 

ಗಂಡಸರ ದೊಡ್ಡ ವೀಕನೆಸ : Biggest Weakness of Men

                                  ಫ್ರೆಂಡ್ಸ ನಿಮಗೆ ಈ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಅಂತಾ ನಂಗೊತ್ತು. ಆದರೆ ಇದೇ ಸತ್ಯವಾಗಿದೆ. ಸತ್ಯ ಯಾವಾಗಲೂ ಬಿಸಿ ತುಪ್ಪದಂತೆ ಇರುತ್ತದೆ. ಹೆಂಗಸರ ಚಪಲ ಗಂಡಸರ‌ ದೊಡ್ಡ ವೀಕನೆಸ ಆಗಿದೆ. ‌ನಿಮಗೆ ಡೌಟಿದ್ರೆ ನಮ್ಮ ಪುರಾಣಗಳನ್ನು ನೋಡಿ, ಇತಿಹಾಸವನ್ನು ಓದಿ, ಅಷ್ಟೇ ಏಕೆ ಈಗೀನ ಯುವಕರು ಹೇಗೆ ಹುಡುಗಿಯರ ಹಿಂದೆ ನಾಯಿಯಂತೆ ಅಲೆಯುತ್ತಿದ್ದಾರೆ ಎಂಬುದನ್ನು ನೋಡಿ, ಹೇಗೆ ಪುರುಷರು ಬೇರೆಯವರ ಹೆಂಗಸರ ಜೊತೆಗೆ ಹಾಸಿಗೆ ಹಂಚಿಕೊಳ್ಳಲು ಹೋಗಿ ಸಮಾಜದ ಮುಂದೆ ಬೆ**ತ್ತ**ಲಾಗಿದ್ದಾರೆ ಅಂತಾ ನೋಡಿ, ಬೇರೆಯವರ ಜೊತೆಗೆ ಬೆ**ತ್ತ**ಲಾಗಿ ಸಿಡಿಗಳಿಂದ ಇಂಟರ್ನೆಟಲ್ಲಿ ಹೇಗೆ  ಬೆ**ತ್ತ**ಲಾಗುತ್ತಿದ್ದಾರೆ ಅಂತಾ ನೋಡಿ ನಿಮಗೆ ಗಂಡಸರ ದೊಡ್ಡ ವೀಕನೆಸ ಏನಂತಾ ಕನಫರ್ಮಾಗುತ್ತದೆ. 

ಗಂಡಸರ ದೊಡ್ಡ ವೀಕನೆಸ : Biggest Weakness of Men

                           ಮಹಾನ ಋಷಿಮುನಿಗಳು, ವೀರಾಧಿ ವೀರಶೂರ ರಾಜರು, ದೊಡ್ಡ ದೊಡ್ಡ ಸಾಧಕರು, ಬಿಲೆನಿಯರ ಬಿಜನೆಸಮ್ಯಾನಗಳು, ಫೇಮಸ ಸೆಲೆಬ್ರಿಟಿಗಳು, ಪೋಲಿಟಿಷಿಯನಗಳು ಹಾಳಾಗಿದ್ದು ಪೇಟಿಕೋಟಗಳ ಸಹವಾಸ ಮಾಡಿಯೇ. ಹೆಂಗಸರ ಸಹವಾಸ ಮಾಡಿಯೇ. ಎಷ್ಟೋ ಜನ ಯುವಕರು ಹುಡುಗಿಯರ ಹಿಂದೆ ಅಲೆದು ಹಾಳಾಗಿದ್ದಾರೆ, ಎಷ್ಟೋ ಜನ ಗಂಡಸರು ಬೇರೆ ಹೆಂಗಸರ ಸಂಗ ಮಾಡಿ ತಮ್ಮ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾರೆ, ಎಷ್ಟೋ ಜನ ಫೇಮಸ ಸಿನಿಮಾ ಸ್ಟಾರಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಹೆಂಗಸರ ಜೊತೆಗೆ ಹಾಸಿಗೆ ಹಂಚಿಕೊಳ್ಳಲು ಹೋಗಿ ಸಮಾಜದ ಮುಂದೆ ಬೆ**ತ್ತ**ಲಾಗಿದ್ದಾರೆ, ಜೀವನಪೂರ್ತಿ ಕಷ್ಟಪಟ್ಟು ಸಂಪಾದಿಸಿದ ಒಳ್ಳೆ ಹೆಸರನ್ನು ಒಂದೇ ರಾತ್ರಿಯಲ್ಲಿ ಕಳೆದುಕೊಂಡಿದ್ದಾರೆ.   

ಗಂಡಸರ ದೊಡ್ಡ ವೀಕನೆಸ : Biggest Weakness of Men

                    ಎಷ್ಟೋ ಜನ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲ ಸುಂದರಿಯರ ಮೇಲೆ ಸುರಿದು ಬೀದಿಪಾಲಾಗಿದ್ದಾರೆ. ಎಷ್ಟೋ ‌ಜನ ಹೆಂಗಸರ ಹಿಂದೆ ಬಿದ್ದು ಹಣ ಆಸ್ತಿ ಅಂತಸ್ತನಲ್ಲೆಲ್ಲ ಕಳೆದುಕೊಂಡು ದಿವಾಳಿಯಾಗಿದ್ದಾರೆ. ಎಷ್ಟೋ ಜನ ಹೆಂಗಸರ ಹಿಂದೆ ಬಿದ್ದು ಹುಚ್ಚರಾಗಿದ್ದಾರೆ. ಹೆಂಡತಿ ರಾತ್ರಿ ಬೆಡಶೇರ್ ಮಾಡದೇ ಬೆಡರೂಮ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ ಸಾಕು ಗಂಡ ಅವಳ ತಾಳಕ್ಕೆ ತಕ್ಕಂತೆ ‌ಕುಣಿಯುತ್ತಾನೆ, ತನ್ನ ತಾಯಿತಂದೆಯನ್ನು ಬಿಟ್ಟು ಅವಳ ಗುಲಾಮಗಿರಿ ಮಾಡುತ್ತಾ ಬೇರೆ ಮನೆಗೆ ಓಡುತ್ತಾನೆ. ಇದೇ ಗಂಡಸರ ದೊಡ್ಡ ವೀಕನೆಸ ಆಗಿದೆ.‌ ಹೆಂಗಸರ ಹಿಂದೆ‌ ಬಿದ್ದ ಯಾವನೂ ಉದ್ಧಾರವಾಗಿಲ್ಲ. ರಾವಣನಂಥ ಮಹಾಜ್ಞಾನಿ ಕೂಡ ಮಣ್ಣಾಗಿದ್ದಾನೆ, ದುರ್ಯೋಧನನಂತ ಮೇಧಾವಿ ಕೂಡ ದುರಂತ ಅಂತ್ಯ ಕಂಡಿದ್ದಾನೆ. ವಿಶ್ವಾಮಿತ್ರನಂತ ತಪಸ್ವಿ ಕೂಡ ದಾರಿ‌ ತಪ್ಪಿದ್ದಾನೆ. ಹೆಂಗಸರ ಎದೆ ನೋಡಿ ಹಾಳಾದವರು ತುಂಬಾ ಜನ ಇದಾರೆ. ಹೆಣ್ಣು ಮಾಯೆಯಾಗಿದ್ದಾಳೆ. ಅವಳ ಮೋಡಿಯಲ್ಲಿ ಬಿದ್ದ ಯಾವ ಗಂಡಸು ಕೂಡ ಉದ್ಧಾರವಾಗಿಲ್ಲ, ಸಕ್ಸೆಸಫುಲ್ಲಾಗಿಲ್ಲ. ಸೋ ಹೆಣ್ಣಿನ ಹಂಬಲ ಗಂಡಸರ ದೊಡ್ಡ ವೀಕನೆಸ್ಸಾಗಿದೆ. 

ಗಂಡಸರ ದೊಡ್ಡ ವೀಕನೆಸ : Biggest Weakness of Men

                    ಫ್ರೆಂಡ್ಸ ನಾವು ಸ್ಕರ್ಟ ಚೇಜರ ಆದರೆ ಸೋಲು, ಸಾವು, ನೋವು, ಅವಮಾನ, ದಾರಿದ್ರ್ಯಗಳು ನಮ್ಮನ್ನು ಚೇಜ ಮಾಡಿಕೊಂಡು ಬರುತ್ತವೆ, ನಮ್ಮನ್ನು ಸಕ್ಸೆಸಿನ ಶಿಖರದಿಂದ ಕೆಳತಳ್ಳಿ‌ ಜೀವಂತ ಶವ ಮಾಡಿ ಹೋಗುತ್ತವೆ. ಅದಕ್ಕಾಗಿ ‌ನಾವು ಪೇಟಿಕೋಟಗಳಿಂದ ಸಾಧ್ಯವಾದಷ್ಟು ‌ದೂರವಿರಬೇಕು, ಸ್ಕರ್ಟ ಚೇಜರ ಆಗಬಾರದು. ಲಂಗ ನೋಡಿ ಮಂಗನಂತೆ ಆಡಬಾರದು.‌ ನಮ್ಮ  ಈ ವೀಕನೆಸ ಮೇಲೆ ನಾವು ಸ್ಟ್ರಾಂಗ ಕಂಟ್ರೋಲನ್ನು ಸಾಧಿಸಲೇಬೇಕು. ನಾನು ನಿಮಗೆ ಲವ್ ಮಾಡಬೇಡಿ, ಮದುವೆಯಾಗಬೇಡಿ ಅಂತಾ ಹೇಳ್ತಿಲ್ಲ‌. ಲೈಫಲ್ಲಿ ಸರಿಯಾಗಿ ಸೆಟ್ಲಾಗುವ ತನಕ ಮೇನಕೆಯರಿಂದ ದೂರವಿರಿ, ಮದುವೆಯಾದ ಮೇಲೆ ಶೂರ್ಪನಖಿಯರಿಂದ ದೂರವಿರಿ ಎಂದಷ್ಟೇ ನಾನು ಹೇಳ್ತಾಯಿರೋದು. ಮದುವೆಗೂ ಮುಂಚೆ ಹನುಮಂತನಂತೆ ಇರಿ,‌ ಮದುವೆಯಾದ ಮೇಲೆ ಶ್ರೀರಾಮನಂತೆ ಇರಿ. ಬರೀ ಒಬ್ಬಳಿಗೆ ಮಾತ್ರ ನಿಮ್ಮ ಸರ್ವಸ್ವವನ್ನು ಮೀಸಲಾಗಿಡಿ. ಶಾರ್ಟಟೈಮ ಸುಖಕ್ಕಾಗಿ ಪೇಟಿಕೋಟಗಳನ್ನು ಫಾಲೋ ಮಾಡಿ ಜೀವನಪೂರ್ತಿ ‌ಕಷ್ಟಪಟ್ಟು ಸಂಪಾದಿಸಿದ ಒಳ್ಳೆ ಹೆಸರನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬೇಡಿ, ಮುಂದೆ‌ ನಿಮ್ಮದೊಂದು ಹೊಸ ಸಿಡಿ ರೀಲಿಸ ಆಗೋ ತರ ಮಾಡಿಕೊಳ್ಳಬೇಡಿ. 

ಗಂಡಸರ ದೊಡ್ಡ ವೀಕನೆಸ : Biggest Weakness of Men

                     ಕೊನೆಯದಾಗಿ ಒಂದು ಮಾತನ್ನು ಹೇಳುವೆ ಕೇರಫುಲ್ಲಾಗಿ ಕೇಳಿ "ನಿಮ್ಮ ಕ್ಯಾರೆಕ್ಟರ್ ‌ಕ್ಲೀನಾಗಿದ್ದರೆ, ಪರ್ಸನಾಲಿಟಿ ಪವರಫುಲ್ಲಾಗಿದ್ದರೆ, ಪ್ರಾಪರ್ಟಿ ಪೇಪರ್ಸೆಲ್ಲ ರೈಟಾಗಿದ್ದರೆ, ನಿಮ್ಮ ಪ್ಯಾಂಟ ಝೀಪ ಟೈಟಾಗಿದ್ದರೆ ನಿಮ್ಮನ್ನು ಅಲುಗಾಡಿಸುವ ಸಾಮರ್ಥ್ಯ ಯಾವನಿಗೂ ಇಲ್ಲ".  ಓಕೆ ನಿಮ್ಮ ಲೈಫ ‌ನಿಮ್ಮಿಷ್ಟ. ಯಾವಾಗಲೂ ಹ್ಯಾಪಿ & ಸಕ್ಸೆಸಫುಲ್ಲಾಗಿರಬೇಕೆಂದರೆ ಹೆಂಗಸರ ಚಪಲದಿಂದ ದೂರವಿರಿ. ‌ಆಲ ದ ಬೆಸ್ಟ & ಥ್ಯಾಂಕ್ಸ ಯು....

ಗಂಡಸರ ದೊಡ್ಡ ವೀಕನೆಸ : Biggest Weakness of Men


Blogger ನಿಂದ ಸಾಮರ್ಥ್ಯಹೊಂದಿದೆ.