ಹಾಯ್ ಗೆಳೆಯರೇ, ಇವತ್ತಿನ ಮಂಡೇ ಮ್ಯಾಟರ್ ಅಂಕಣದ ವಿಷಯ ಸ್ವಲ್ಪ ವಿಚಿತ್ರವಾಗಿದೆ. ಆದರೆ ಇದು ಎಷ್ಟೋ ಅಮಾಯಕಿಯರ ಬದುಕು ಅತಂತ್ರವಾಗುವುದನ್ನು ತಪ್ಪಿಸುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ. ಅದೇ ನಂಬಿಕೆಯ ಮೇಲೆ ನಾನು ಈ ಅಂಕಣವನ್ನು ಬರೆಯುತ್ತಿರುವೆ. ಈ ಅಂಕಣದಲ್ಲಿ "ಹೆಂಗಸರ ದೊಡ್ಡ ವೀಕನೆಸ" ಬಗ್ಗೆ ಡಿಸ್ಕಸ ಮಾಡೋಣಾ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಇದನ್ನ ಶೇರ ಮಾಡಿಕೊಳ್ಳಿ...
ನಾನು ಹೆಂಗಸರು ದುರ್ಬಲರು ಅಂತಾ ಹೇಳುತ್ತಿಲ್ಲ. ಎಲ್ಲಿಯೂ ಹೆಂಗಸುತನವನ್ನು ಹೆಚ್ಚಿಸುವ ಮಾತ್ರೆ ಔಷಧಿಗಳನ್ನು ಮಾರಲ್ಲ, ಆದರೆ ಎಲ್ಲೆಡೆಗೆ ಗಂಡಸುತನವನ್ನು ಹೆಚ್ಚಿಸುವ ಮಾತ್ರೆಗಳನ್ನು ಔಷಧಿಗಳನ್ನು ಮಾರುತ್ತಿದ್ದಾರೆ. ನ್ಯೂಜ ಪೇಪರ ತುಂಬೆಲ್ಲ ಗಂಡಸುತನ ವೃದ್ಧಿಯ ಅಡ್ವಟೈಜಮೆಂಟ ನೋಡಿದ್ದು ಸಾಲದಂತ ಸೀಟಿ ತುಂಬ ಕೂಡ ಅವೇ ಅಡ್ವಟೈಜಮೆಂಟಗಳನ್ನು ನೋಡಬೇಕಾಗುತ್ತದೆ. ಸೋ ಹೆಂಗಸರು ದುರ್ಬಲರಲ್ಲ. ಹೆಣ್ಣು ಸಾಕ್ಷಾತ್ ದೇವತೆಯಾಗಿದ್ದಾಳೆ, ಸರ್ವಶಕ್ತಳಾಗಿದ್ದಾಳೆ. ಅವಳು ಎಲ್ಲದಕ್ಕೂ ಸಮರ್ಥಳಾಗಿದ್ದಾಳೆ. ಆದರೆ ಅವಳಿಗೂ ಒಂದು ವಿಕನೆಸ ಇದೆ, ದುರ್ಬಲತೆ ಇದೆ. ಅವಳು ವೀಕ್ ಅಲ್ಲ, ಆದರೆ ಅವಳಿಗೂ ಒಂದು ದೊಡ್ಡ ವೀಕನೆಸ ಇದೆ. ಅವಳ ಆ ದೊಡ್ಡ ವೀಕನೆಸ ಏನಪ್ಪಾ ಅಂದರೆ ಅವಳಲ್ಲಿನ "ಸ್ಟೂಪಿಡ ಸಾಫ್ಟ ಕಾರ್ನರ"...!! ಹೌದು ಅವಳ ಮುಗ್ಧ ಸ್ಟೂಪಿಡ ಸಾಫ್ಟ್ ಕಾರ್ನರ ಅವಳ ದೊಡ್ಡ ವೀಕನೆಸ ಆಗಿದೆ.
ನಮ್ಮ ಸೋದರಿಯರಲ್ಲಿ ಒಂದು ಸ್ಟೂಪಿಡ ಸಾಫ್ಟ ಕಾರ್ನರ ಇರುತ್ತದೆ. ಅದಕ್ಕಾಗಿಯೇ ಅವರು ಬೇಗನೆ ಪದೇಪದೇ ಮೋಸ ಹೋಗುತ್ತಾರೆ. ಮೋಸದ ಪ್ರೀತಿಗೆ ಮೈಕೊಟ್ಟು ನರಳುತ್ತಾರೆ. ಯಾರಾದರೂ ಅವರಿಗೆ ಖುಷಿ ಕೊಡುವ ನಾಲ್ಕು ಮಾತಾಡಿದರೆ ಸಾಕು ಅವರೊಂದಿಗೆ ಅವರು ಬೇಗನೆ ಎಮೋಷನಲಿ ಕನೇಕ್ಟಾಗುತ್ತಾರೆ. ಯಾರು ಅವರಿಗೆ ಎಮೋಷನಲ ಸಪೋರ್ಟ್ ಕೊಡುತ್ತಾರೋ, ಅವರ ಮನಸ್ಸಿಗೆ ಖುಷಿ ಕೊಡುವ ರೀತಿಯಲ್ಲಿ ವರ್ತಿಸುತ್ತಾರೋ, ಅವರನ್ನು ಮಾನಸಿಕವಾಗಿ ಖುಷಿಪಡಿಸುತ್ತಾರೋ ಅವರನ್ನು ಇವರು ಬೇಗನೆ ದೈಹಿಕವಾಗಿ ಖುಷಿಪಡಿಸಲು ಮುಂದಾಗುತ್ತಾರೆ. ಅಂದರೆ ಅವರೊಂದಿಗೆ ಬೇಗನೆ ತಮ್ಮ ದೇಹ ಹಂಚಿಕೊಳ್ಳಲು ಮುಂದಾಗುತ್ತಾರೆ. ಮುದ್ದಾಗಿ ಮಾತಾಡಿ ಇಲ್ಲವೇ ಏನಾದರೂ ಕೊಟ್ಟು ಮನಸ್ಸನ್ನು ಖುಷಿಪಡಿಸಿದವರಿಗೆ ಅವರು ಬೇಗನೆ ತಮ್ಮ ಮೈಯೊಪ್ಪಿಸಿ ಮೋಸ ಹೋಗುತ್ತಾರೆ. ಮಾನಸಿಕ ಸುಖಕ್ಕೆ ಬದಲಾಗಿ ಮರಳಿ ಮಾನಸಿಕ ಸುಖವನ್ನು ನೀಡುವ ಬದಲು ಅವರು ದೈಹಿಕ ಸುಖ ನೀಡಲು ಮುಂದಾಗುತ್ತಾರೆ. 99% ಹೆಂಗಸರು ತಮ್ಮ ಮನಸ್ಸನ್ನು ಖುಷಿಪಡಿಸಿದವರಿಗೆ ತಮ್ಮ ದೇಹದಿಂದ ಸುಖ ಕೊಡುತ್ತಾರೆ. ಬಹಳಷ್ಟು ಹೆಂಗಸರು ಮೈಯೊಪ್ಪಿಸಿ ಸೆರಗು ಹಾಸುವುದನ್ನೇ ಪ್ರೀತಿಯನ್ನು ತೋರಲು ಇರಲು ಶ್ರೇಷ್ಠ ಮಾರ್ಗವೆಂದುಕೊಂಡಿದ್ದಾರೆ. ಇದು ಹುಡುಗಿಯರಲ್ಲಿರುವ ಒಂದು ದೊಡ್ಡ ಸ್ಟೂಪಿಡ ಸಾಫ್ಟ್ ಕಾರ್ನರ ಆಗಿದೆ. ಇದು ಅವರ ದೊಡ್ಡ ವಿಕನೇಸ ಆಗಿದೆ.
ಹೆಂಗಸರಲ್ಲಿನ ಈ ಸ್ಟೂಪಿಡ ಸಾಫ್ಟ ಕಾರ್ನರನ್ನು ಅರ್ಥಮಾಡಿಕೊಂಡು ಎಲ್ಲರೂ ಅವರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲರೂ ಮಾತೆಯರನ್ನು ಮಾತಲ್ಲೇ ಮರುಳು ಮಾಡಿ ತಮ್ಮ ಆಸೆ ಈಡೇರಿಸಿಕೊಂಡು ಮಾಯವಾಗುತ್ತಾರೆ. ಉದಾಹರಣೆಗೆ :
1) ಹುಡುಗಿಯರ ಬಾಯಫ್ರೆಂಡಗಳು ಅವರಿಗೆ ಸಿಲ್ಲಿಸಿಲ್ಲಿ ಗಿಫ್ಟ್ಸ ನೀಡಿ ಅವರನ್ನು ಮಾನಸಿಕವಾಗಿ ಖುಷಿಪಡಿಸುತ್ತಾರೆ, ನಂತರ ಹುಡುಗಿಯರು ಬೇಗನೆ ಅವರನ್ನು ದೈಹಿಕವಾಗಿ ಖುಷಿಪಡಿಸಿ ಮೋಸ ಹೋಗುತ್ತಾರೆ. ಹುಡುಗರು ತಮ್ಮ ಗರ್ಲಫ್ರೆಂಡ ಕೇಳದಿದ್ದರೂ ಅವಳಿಗೆ ದಿನಾ ಗಿಫ್ಟ್ಸ ಕೊಡುತ್ತಾರೆ, ಆಕೆ ಹೇಳದಿದ್ದರೂ ಅವಳ ಕೇರ್ ಮಾಡುತ್ತಾರೆ. ಇದರಿಂದ ಆಕೆ ಎಮೋಷನಲಿ ಖುಷ್ ಆಗುತ್ತಾಳೆ. 18 ವರ್ಷ ಹೆತ್ತು ಹೊತ್ತು ಬೆಳೆಸಿದ ತಂದೆತಾಯಿಗಿಂತ ತನ್ನ ಬಾಯಫ್ರೆಂಡೇ ಬೆಸ್ಟ ಅಂತಾ ಶಾರ್ಟಟೈಮ ಕೇರಲ್ಲಿ ಡಿಸೈಡ ಮಾಡುತ್ತಾಳೆ. ಈ ಟೈಮಲ್ಲಿ ಹುಡುಗರು ತಮ್ಮ ಗರ್ಲಫ್ರೆಂಡಗೆ ಗಿಫ್ಟ್ಸಕೊಟ್ಟು ಅವಳನ್ನು ದೈಹಿಕವಾಗಿ ಬಳಸಿಕೊಂಡು ಬಿಡುತ್ತಾರೆ. ಯಾವಾಗ ಹುಡುಗ ಗರ್ಲಫ್ರೆಂಡಗೆ ಕೇಳದೇನೆ ಗಿಫ್ಟಗಳನ್ನು ಕೊಡುತ್ತಾನೋ ಆ ದಿನಗಳಲ್ಲಿ ಆತ ಅವಳನ್ನು ದೈಹಿಕವಾಗಿ ಬಳಸಿಕೊಳ್ಳುತ್ತಾನೆ. ಆಕೆ ತನ್ನ ಸುಖಕ್ಕೆ ಸಹಕರಿಸಬೇಕು, ಏನು ನಖರಾ ಮಾಡದೇ ಅವನಿಗೆ ಸುಖ ಕೊಡಬೇಕು ಅಂತಾನೆ ಆತ ಅವಳಿಗೆ ಗಿಫ್ಟ್ಸ, ಡ್ರೆಸ್, ಮೊಬೈಲ ಇತ್ಯಾದಿಯೆಲ್ಲ ಕೊಟ್ಟು ನೈಸ ಮಾಡಿರುತ್ತಾನೆ. ಸಾಕಾಗುವ ತನಕ ಬಳಸಿಕೊಂಡು ಬೋರಾದಾಗ ಬ್ರೇಕಪ ಮಾಡಿಕೊಂಡು ಹೊಸ ಹುಡುಗಿ ಹುಡುಕಿಕೊಳ್ಳುತ್ತಾನೆ.

2) ಮುಂದೆ ಮದುವೆಯಾದಾಗಲೂ ಅಷ್ಟೇ ಗಂಡ ತನಗೆ ಬೇಕಾದಾಗ ಹೆಂಡತಿಯನ್ನು ನೈಸ ಮಾಡಿ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಲೇ ಹೋಗುತ್ತಾನೆ. ಅವಳ ವೀಕನೆಸ ಅರ್ಥ ಮಾಡಿಕೊಂಡು ಅವಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾನೆ.
3) ಒಂದು ವೇಳೆ ಗಂಡ ಯಾವುದಾದರೂ ಕೆಲಸದಲ್ಲಿ ಟೆನ್ಶನ ಮಾಡಿಕೊಂಡು ಸ್ವಲ್ಪ ಹೆಂಡತಿಗೆ ಸಿಡುಕಿದರೆ ಆಕೆ ಅದನ್ನೇ ದೊಡ್ಡ ರಂಪಾಟ ಮಾಡುತ್ತಾಳೆ. ಗಂಡನನ್ನೇ ವಿಲನ ತರಹ ನೋಡುತ್ತಾಳೆ. ಈ ಟೈಮಲ್ಲಿ ಅವಳಿಗೆ ಬೇರೆ ಯಾರಾದರೂ ಪರಪುರುಷ ಸ್ವಲ್ಪ ಸಿಹಿ ಮಾತನಾಡಿದರೆ ಸಾಕು ಆಕೆ ಕೂಡಲೇ ಅವನಿಗೆ ಸೆರಗು ಹಾಸುತ್ತಾಳೆ. ಗಂಡಹೆಂಡತಿಯರ ಮಧ್ಯೆ ಜಗಳವಾದಾಗ ಬೇರೆ ಪುರುಷ ಬಂದು ಆ ಹೆಂಡತಿಯ ಕೇರ ಮಾಡಿದಾಗ ಅವಳಿಗೆ ಮೋಟಿವೇಟ ಮಾಡಿದಾಗ ಆಕೆ ತನ್ನ ಗಂಡನನ್ನು ಬಿಟ್ಟು ಆ ಪುರುಷನೊಂದಿಗೆ ಮೂವ ಮಾಡುತ್ತಾಳೆ. ಹೆಂಡತಿ ಮನೆಯಲ್ಲಿ ಗಂಡನೊಂದಿಗೆ ಜಗಳ ಮಾಡಿಕೊಂಡು ಆಫೀಸಿಗೆ ಹೋದಾಗ ಅಲ್ಲಿ ಯಾರಾದರೂ ಗಂಡಸು ಅವಳಿಗೆ ನಾಲ್ಕು ಪ್ರೀತಿ ಮಾತಾಡಿದರೆ ಸಾಕು ಆಕೆ ಅವನಿಗೆ ಸೋಲುತ್ತಾಳೆ, ಅವನಿಗೆ ಸೆರಗು ಹಾಸುತ್ತಾಳೆ. ಬಹಳಷ್ಟು ಹೆಂಡತಿಯರು ಜಸ್ಟ ಎಮೋಷನಲ್ ಸಪೋರ್ಟಗಾಗಿ ಅಕ್ರಮ ಸಂಬಂಧಗಳನ್ನು ಪ್ರಾರಂಭಿಸುತ್ತಾರೆ. ಇದು ಮುಂದೆ ಅವರ ಗಂಡಂದಿರಿಗೆ ಗೊತ್ತಾಗಿ ಡೈವರ್ಸ ಕೇಸ ಶುರುವಾಗುತ್ತದೆ. ಬಹಳಷ್ಟು ಹೆಂಗಸರು ಶಾರ್ಟಟೈಮ ಎಮೋಷನಲ ಸಪೋರ್ಟ ಕೊಟ್ಟವರಿಗೆ ಸೆರಗು ಹಾಸಿ ಲೈಫಟೈಮ ಗಂಡನನ್ನು ಕಳೆದುಕೊಳ್ಳುತ್ತಾರೆ.
ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಿರುವುದಕ್ಕೆ ಸ್ವಾರಿ ಸೋದರಿಯರೇ ! ನಿಮ್ಮ ಸ್ಟೂಪಿಡ ಸಾಫ್ಟ ಕಾರ್ನರ ನಿಮ್ಮ ದೊಡ್ಡ ವೀಕನೇಸ ಆಗಿದೆ. ಇದರಿಂದಲೇ ನಿಮ್ಮ ಸಂಸಾರಗಳು ಹಾಳಾಗುತ್ತಿವೆ. ಇದರಿಂದಲೇ ನೀವು ಪದೇಪದೇ ಮೋಸ ಹೋಗುತ್ತಿದ್ದೀರಿ. ನಿಮ್ಮ ಸಾಫ್ಟ ಕಾರ್ನರ ಮೇಲೆ ಒಂದು ಸ್ಟ್ರಾಂಗ ಕಂಟ್ರೋಲ ಸಾಧಿಸಿ. ನಿಮಗೆ ಎಮೋಷನಲ ಸಪೋರ್ಟ್ ಕೊಟ್ಟವರ ಜೊತೆಗೆ ಇಲ್ಲ ಮಾನಸಿಕವಾಗಿ ಖುಷಿಪಡಿಸಿದವರ ಜೊತೆಗೆ ಬೇಗನೆ ಫಿಜಿಕಲ ಕಾಂಟ್ಯಾಕ್ಟ್ ಬೆಳೆಸಿ ಮೋಸ ಹೋಗಬೇಡಿ. ಎಲ್ಲದಕ್ಕೂ ಒಂದು ವೇಟಿಂಗ ಪೀರಿಯಡ ಅಂತಾ ಇರುತ್ತದೆ. ಸ್ವಲ್ಪ ವೇಟ ಮಾಡಿ ನಿಮಗೆ ಅವರು ಸರಿಯಾದ ವ್ಯಕ್ತಿಯಾಗಿದ್ದರೆ ಮಾತ್ರ ಅವರೊಂದಿಗೆ ಮುಂದುವರೆಯಿರಿ ಇಲ್ಲವಾದರೆ ಮುಂದೆ ನೀವೇ ಕಣ್ಣೀರಾಗುತ್ತೀರಿ. ನಾನು ಹೇಳಿದ ಮಾತಿನಿಂದ ನಿಮಗೆ ಹರ್ಟಾಗಿದ್ದರೆ ಸ್ವಾರಿ, ಆಲ ದ ಬೆಸ್ಟ. ಧನ್ಯವಾದಗಳು....