ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada

ಸ್ತನ ಕ್ಯಾನ್ಸರನ ಕಾರಣಗಳು, ಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳು : Symptoms, Causes and Safety Precautions of Breast Cancer in Kannada 

                                    ಹಾಯ್ ಗೆಳೆಯರೇ, ಇವತ್ತಿನ ಸಂಡೇ ಸಾಯಿನ್ಸ ಅಂಕಣದಲ್ಲಿ ನಾವು "ಸ್ತನ ಕ್ಯಾನ್ಸರ" ಬಗ್ಗೆ ತಿಳಿದುಕೊಳ್ಳೊಣಾ. ಸ್ತನ ಕ್ಯಾನ್ಸರ್ ಎಂದರೇನು? ಅದು ಹೇಗೆ ಬರುತ್ತದೆ? ಅದರ ಲಕ್ಷಣಗಳೇನು? ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಡಿಸ್ಕಸ ಮಾಡೋಣಾ. ಈ ಅಂಕಣವನ್ನು ‌ಬರೆಯಲು ನನಗೆ ಗೈಡ ಮಾಡಿದ ನನ್ನ ದಿ ಬೆಸ್ಟ್‌ ಫ್ರೆಂಡ್ ಡಾ. ಪ್ರಿಯಂಕಾಳಿಗೆ ದೊಡ್ಡ ಥ್ಯಾಂಕ್ಸ & ಲಾಟ್ಸ ಆಫ್ ಲವ್... 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

ಸ್ತನ ಕ್ಯಾನ್ಸರ್ ಎಂದರೇನು? What is Breast Cancer? 

                                     ಸ್ತನಗಳ ಜೀವಕೋಶಗಳಲ್ಲಾಗುವ ಕ್ಯಾನ್ಸರಗೆ ನಾವು ಸ್ತನ ಕ್ಯಾನ್ಸರ್ ಅಥವಾ ಬ್ರೀಸ್ಟ ಕ್ಯಾನ್ಸರ್ ಎನ್ನುತ್ತೇವೆ. ಇದು ಬರೀ ಮಹಿಳೆಯರಿಗೆ ಮಾತ್ರ ಬರುತ್ತದೆ ಅಂತಲ್ಲ, ಇದು ಪುರುಷರಿಗೂ ಬರುತ್ತದೆ. ಇದು ಲಿಂಗ ಬೇಧ ಭಾವ ಮಾಡದೇ ಸ್ತ್ರೀ ಪುರುಷರಿಬ್ಬರಿಗೂ ಬರುತ್ತದೆ. ಆದರೆ ಕಾಮನಾಗಿ ಮಹಿಳೆಯರಲ್ಲಿ ಹೆಚ್ಚಾಗಿ ‌ಕಂಡು ಬರುತ್ತದೆ. ಇದೇನು ಎಲ್ಲರಿಗೂ ಬರುವ ಭಯಾನಕ ಜೀವಫಾತಕ ಕಾಯಿಲೆಯೇನಲ್ಲ. ಆದರೆ ಕೇರಲೇಸ ಮಾಡಿದರೆ ಸಣ್ಣ ಕಾಯಿಲೆಯಾದರೂ ಪ್ರಾಣ ಹೋಗುತ್ತದೆ. ಸದ್ಯಕ್ಕೆ ಸ್ತನ ಕ್ಯಾನ್ಸರನ್ನು ಗುಣಪಡಿಸಲು ಬಹಳಷ್ಟು ಅಡ್ವಾನ್ಸ್ಡ್ ಟ್ರಿಟಮೆಂಟಗಳಿವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಆರಂಭಿಕ ಲಕ್ಷಣಗಳು ಕಂಡು ಬಂದಾಗಲೇ ಚಿಕಿತ್ಸೆ ತೆಗೆದುಕೊಳ್ಳುವುದು ಬೆಟರ ಆಗಿದೆ. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

ಸ್ತನ ಕ್ಯಾನ್ಸರಗೆ ಕಾರಣಗಳು : Causes of Breast Cancer 

     ಸ್ತನ ಕ್ಯಾನ್ಸರಗೆ ಬಹಳಷ್ಟು ತರಹದ ಕಾರಣಗಳಿವೆ. ಅವು ಇಂತಿವೆ ; 

1) ಸ್ಮೋಕಿಂಗ, ಆಲ್ಕೋಹಾಲ್ ಡ್ರಿಂಕಿಂಗನಂಥ ಬ್ಯಾಡ ಹ್ಯಾಬಿಟ್ಸಗಳು. ಬ್ಯಾಡ ಲೈಫ ಸ್ಟೈಲ‌. ಅನಹೆಲ್ದಿ ಲೈಫ ಸ್ಟೈಲ. ವ್ಯಾಯಾಮ ರಹಿತ ಜೀವನ. 

2) ಜೆನೆಟಿಕ್ಸ್ ಅಂದರೆ ಅನುವಂಶೀಕವಾಗಿ ಕೂಡ ಸ್ತನ ಕ್ಯಾನ್ಸರ್ ಬರಬಹುದು. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

3) ಈಗಾಗಲೇ ಬೇರೆ ರೋಗದ ಚಿಕಿತ್ಸೆಗಾಗಿ ರೇಡಿಯೇಷನ ಥೆರಪಿ ಅಥವಾ ಹಾರ್ಮೋನ ಥೆರಪಿಗಳನ್ನು ಮಾಡಿಕೊಂಡಿದ್ದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. 

4) ಈಸ್ಟ್ರೋಜನ್ ಹಾರ್ಮೋನನ ಲೆವೆಲದಲ್ಲಿ ವಿಪರೀತ ‌ಹೆಚ್ಚಳ. ಯಾವ ಹುಡುಗಿಯಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಪೀರಿಯಡ್ಸಗಳು (Early Menstruation) ಶುರುವಾಗುತ್ತವೆಯೋ ಅವಳಿಗೆ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆ ಅಧಿಕವಾಗಿರುತ್ತದೆ. ಯಾವ ಮಹಿಳೆಯರಲ್ಲಿ 55 ವರ್ಷ ದಾಟಿದರೂ ಪೀರಿಯಡ್ಸಗಳು ನಿಲ್ಲುವುದಿಲ್ಲವೋ (Menopause) ಅವರಿಗೂ ಕೂಡ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆ ಅಧಿಕವಾಗಿರುತ್ತದೆ. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

5) ಓವರ ಬಾಡಿ ವೇಟ ಅಂದರೆ ಅಧಿಕ ದೇಹ ತೂಕ. 

6) ಡೇಂಜರಸ ಕಾಸ್ಮೆಟಿಕ್ಸಗಳ ಬಳಕೆ. ಹಾನಿಕಾರಕ ಸೌಂದರ್ಯವರ್ಧಕಗಳ ಬಳಕೆ. 

7) ಪ್ರೆಗ್ನಂಟ ಆಗದೇ ಇರುವುದು. ಯಾವ ಮಹಿಳೆ ಪ್ರೆಗ್ನಂಟ ಆಗಲ್ವೋ ಅವಳಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇನ್ನೂ ಯಾವ ಮಹಿಳೆ ಬಹಳಷ್ಟು ಲೇಟಾಗಿ (35 ವರ್ಷಗಳ ನಂತರ) ಮಗುವಿಗೆ ಜನ್ಮ ಕೊಡುತ್ತಾಳೋ ಅವಳಿಗೂ ಸ್ತನ ಕ್ಯಾನ್ಸರ್ ಆಗುವ ಚಾನ್ಸಸ ಇದೆ‌. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

ಸ್ತನ ಕ್ಯಾನ್ಸರನ ಲಕ್ಷಣಗಳು : Symptoms of Breast Cancer 

                     ಸ್ತನ‌ ಕ್ಯಾನ್ಸರನ ಲಕ್ಷಣಗಳು ಸ್ತ್ರೀ ಪುರುಷರಲ್ಲಿ ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಅದಕ್ಕಾಗಿ ನಿಮ್ಮ ಸ್ತನಗಳ ಬಗ್ಗೆ ಕಾಳಜಿ ವಹಿಸಿ‌. ಸ್ನಾನ ಮಾಡುವಾಗ ಇಲ್ಲವೇ ಬಟ್ಟೆ ಧರಿಸುವಾಗ ಅವುಗಳನ್ನು ಆಗಾಗ ಗಮಿನಿಸುತ್ತಿರಿ. ಕೆಳಗಿನ ಯಾವುದಾದರೂ ಲಕ್ಷಣಗಳು ‌ಕಂಡುಬಂದರೆ ಮನೆಯಲ್ಲಿ ‌ನೀವೇ ಡಾಕ್ಟರ ಆಗುವ ಮೂರ್ಖತನ ಮಾಡದೇ‌ ಸೀದಾ ಸೂಕ್ತ ಡಾಕ್ಟರನ್ನು ಸಂಪರ್ಕಿಸಿ. ಆರಂಭಿಕ ಲಕ್ಷಣಗಳು ‌ಕಂಡು ಬಂದಾಗಲೇ ಸೂಕ್ತ ಚಿಕಿತ್ಸೆ ತೆಗೆದುಕೊಂಡರೇ ನೀವು ‌ಶೀಘ್ರವೇ ಗುಣಮುಖರಾಗುತ್ತೀರಿ. ಸ್ತನ ಕ್ಯಾನ್ಸರನ ಲಕ್ಷಣಗಳು ಇಂತಿವೆ :

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

1) ಸ್ತನಗಳ ಮೇಲೆ ಗಂಟುಗಳಾಗುವುದು. ಸ್ತನಗಳ ಪಕ್ಕದಲ್ಲಿ ಇಲ್ಲವೇ ತೋಳುಗಳ ಸಂದಿಯಲ್ಲಿ (Armpit) ಗಂಟುಗಳಾಗುವುದು. ಸ್ತನಗಳ ಮೇಲಿನ ಚರ್ಮ ದಪ್ಪಗಾಗುವುದು. ದೇಹದ ಬಣ್ಣಕ್ಕಿಂತ ಸ್ತನಗಳ ಚರ್ಮದ ಬಣ್ಣ ಮಾತ್ರ ಬೇರೆಯಾಗುವುದು. ಸ್ತನಗಳು ಊದಿಕೊಳ್ಳುವುದು. ಸ್ತನಗಳ ಚರ್ಮ ಒರಟಾಗುವುದು. ಸ್ತನಗಳ ಚರ್ಮ ಬದಲಾಗುವುದು,‌ ಒರಟಾಗುವುದು.‌ ಸ್ತನಗಳ ಅಂದ ಮಾಸಿ ಅವುಗಳ ಸೌಂದರ್ಯ ಹಾಳಾಗುವುದು. ಸ್ತನಗಳ ಮೇಲಿನ ಹಾಗೂ ಮೊಲೆತೊಟ್ಟುಗಳ ಸುತ್ತಮುತ್ತಲಿನ ಚರ್ಮವೆಲ್ಲ ಒಣಗಿ ಒರಟಾಗಿ ಸುಕ್ಕುಗಟ್ಟಿದಂತಾಗಿ ಸುಲಿಯುತ್ತಾ ಹೋಗುವುದು. ಸ್ತನಗಳ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿ ಕಿತ್ತಳೆಯಂತಾಗುವುದು. ಸ್ತನಗಳ ಚರ್ಮದಲ್ಲಿ ಊರಿತ ಉಂಟಾಗುವುದು. ನಿಪ್ಪಲ್ಸಗಳ ಮೇಲೆ Rashes ಬೀಳುವುದು. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

2) ಸಡನ್ನಾಗಿ ಸ್ತನಗಳ ಗಾತ್ರ, ಆಕಾರ, ನೋಟದಲ್ಲಿ ವಿಚಿತ್ರ ಅಥವಾ ಭಯ ಹುಟ್ಟಿಸುವಂಥ ಬದಲಾವಣೆ ಆಗುವುದು. ಸ್ತನಗಳಲ್ಲಿ ಮತ್ತು ಮೊಲೆತೊಟ್ಟುಗಳಲ್ಲಿ ವಿಚಿತ್ರ ಅಸಹಜ ಬದಲಾವಣೆಗಳಾಗುವುದು.

            ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

3) ಹೊಸದಾಗಿ ತಲೆಕೆಳಗಾದ ಮೊಲೆತೊಟ್ಟು ಬೆಳೆಯುವುದು. (Inverted Nipples) ಮೊಲೆತೊಟ್ಟುಗಳಿಂದ ರಕ್ತಸ್ರಾವ ಆಗುವುದು ಇಲ್ಲವೇ ಬೇರೆಬೇರೆ ದ್ರವಸ್ರಾವವಾಗುವುದು. (Bleeding from Nipples) ನಿಪ್ಪಲಗಳ ಒಳಗಿನಿಂದ ನೋವಾಗುವುದು. ನಿಪ್ಪಲಗಳಲ್ಲಿ ತುರಿಕೆ ಹಾಗೂ ಊರಿತ ಉಂಟಾಗುವುದು. ಸ್ತನಗಳಲ್ಲಿ ಹಾಗೂ ತೋಳುಸಂದಿಗಳಲ್ಲಿ ವಿಪರೀತ ನೋವಾಗುವುದು. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer in Kannada

ಸ್ತನ ಕ್ಯಾನ್ಸರಗೆ ಮುಂಜಾಗ್ರತಾ ‌ಕ್ರಮಗಳು : Precautions for Breast cancer. 

1) ದಿನಾಲು ತಪ್ಪದೇ ಎಕ್ಸರಸೈಜ ಮಾಡಿ. ಯೋಗ ಹಾಗೂ ಪ್ರಾಣಾಯಾಮ ಮಾಡಿ. ಏನು ಮಾಡಲಾಗದಿದ್ದರೂ ಅರ್ಧ ಗಂಟೆ ವಾಕಿಂಗಾದರೂ ಮಾಡಿ. ಡ್ಯಾನ್ಸ ಮಾಡಿ, ಆಟವಾಡಿ, ಒಟ್ನಲ್ಲಿ ಏನಾದರೂ ಫಿಜಿಕಲಿ ಆ್ಯಕ್ಟಿವಿಟಿ ಮಾಡಿ. ಸೋಮಾರಿ ಸುಂದರಿಯಾಗಬೇಡಿ, ಫಿಟ & ಹೆಲ್ದಿ ಸೋದರಿಯಾಗಿ... 

2) ಎಲ್ಲಾ ತರಹದ ದುಶ್ಚಟಗಳಿಂದ ದೂರವಿರಿ. ಉದಾಹರಣೆಗೆ : ಸ್ಮೋಕಿಂಗ ಹಾಗೂ ಆಲ್ಕೊಹಾಲ್ ಡ್ರಿಂಕಿಂಗ. 

3) ಹೆಲ್ದಿ ಆಹಾರವನ್ನು ಸೇವಿಸಿ. ಹೆಚ್ಚಿಗೆ ಸಸ್ಯಾಹಾರ ಸೇವಿಸಿ, ಹಣ್ಣು ಹಂಪಲುಗಳನ್ನು ಸೇವಿಸಿ. ನಾನವೇಜನ್ನು ಬಿಟ್ಟುಬಿಡಿ, ಜಂಕ ಫುಡಗಳನ್ನು ಮರೆತು ಬಿಡಿ. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada

4) ನಿಮಗೆ ಸಾಧ್ಯವಾದರೆ ಅಥವಾ ನಿಮ್ಮ ಮನೆಯಲ್ಲಿ ಪ್ರೈವೆಸಿ ಇದ್ದರೆ ನಿಮ್ಮ ದೇಹವನ್ನು ಸೂರ್ಯನ ಬಿಸಿಲಿಗೆ ಎಕ್ಸಪೋಜ ಮಾಡಿ ಅಂದರೆ ಸನ ಬಾಥಿಂಗ ಮಾಡಿ. ಸಾಧ್ಯವಾದಷ್ಟು ಕಡಿಮೆ ಬಟ್ಟೆಯಲ್ಲಿ ಇಲ್ಲವೇ ಕಾಟನ ಯೋಗಾ ಬಟ್ಟೆಯಲ್ಲಿ ಸನಬಾಥಿಂಗ ಮಾಡಿ. ನಿಮ್ಮ ನಾಭಿಗೆ ಹಾಗೂ ಬೆನ್ನಿಗೆ ಸೂರ್ಯನ ಬಿಸಿಲು ನೇರವಾಗಿ ತಗಲಬೇಕು ಆ ರೀತಿ ಸೂರ್ಯಸ್ನಾನ (ಸನ ಬಾಥಿಂಗ) ಮಾಡಿ. ಇದನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಮಾಡಬೇಡಿ. ಮಾರ್ನಿಂಗ್ ಹಾಗೂ ಈವನಿಂಗ ಸಾಫ್ಟ ಎಳೆ ಬಿಸಿಲಿರುವಾಗ ಮಾತ್ರ ಮಾಡಿ. 

5) ನೀವು ತಾಯಿಯಾದಾಗ ತಪ್ಪದೇ ‌ನಿಮ್ಮ ಮಗುವಿಗೆ ನಿಮ್ಮ ಎದೆಹಾಲನ್ನು ಕುಡಿಸಿ. ಇದರಿಂದ ನಿಮ್ಮ ದೇಹದ ತೂಕ ಕೂಡ ಕಡಿಮೆಯಾಗುತ್ತದೆ, ಸ್ತನ ಕ್ಯಾನ್ಸರನ ರಿಸ್ಕ ಕೂಡ ಕಡಿಮೆಯಾಗುತ್ತದೆ. 

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada

                              ನನ್ನೆಲ್ಲ ಅಕ್ಕರೆಯ ಸೋದರಿಯರೇ, ನೀವು ಸೇಫಾಗಿದ್ದರೆ ಹೆಲ್ದಿಯಾಗಿದ್ದರೆ ಈಡೀ ಕುಟುಂಬ ಸೇಫಾಗಿರುತ್ತದೆ. ಅದಕ್ಕಾಗಿ ನಿಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಕಾಳಜಿ ವಹಿಸಿ. ಯಾವಾಗಲೂ ಹೆಲ್ದಿಯಾಗಿರಿ, ಹ್ಯಾಪಿಯಾಗಿರಿ. ಓಕೆ ಗೆಳೆಯರೇ, ನಿಮಗೆ ಈ ಸಂಡೇ ಸಾಯಿನ್ಸ ಅಂಕಣ ಇಷ್ಟವಾಗಿದೆ, ಹೊಸ ವಿಷಯಗಳು ಕಲಿಯಲು ಸಿಕ್ಕಿವೆ ಅಂತಾ ಭಾವಿಸುವೆ. ಈ‌ ಅಂಕಣವನ್ನು ಬರೆಯಲು ನನಗೆ ಗೈಡ ಮಾಡಿದ ನನ್ನ ದಿ ಬೆಸ್ಟ ಫ್ರೆಂಡ ಡಾ‌.ಪ್ರಿಯಾಂಕಾಳಿಗೆ ಧನ್ಯವಾದಗಳು. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ ಕಮೆಂಟ ಮಾಡಿ. ಜೊತೆಗೆ ಇದನ್ನು ಎಲ್ಲೆಡೆಗೆ ಬಿಂದಾಸಾಗಿ ಶೇರ್ ಮಾಡಿ. ಫೇಸ್‌ಬುಕ್‌ ಹಾಗೂ ಇನಸ್ಟಾಗ್ರಾಮಗಳಲ್ಲಿ ತಪ್ಪದೇ ಡೈರೆಕ್ಟರ್ ಸತೀಶಕುಮಾರ ‌ಪೇಜನ್ನು ಫಾಲೋ ಮಾಡಿ. ಮತ್ತೆ ಮುಂದಿನ ಸಂಡೇ ಸಾಯಿನ್ಸ ಅಂಕಣದೊಂದಿಗೆ ಮತ್ತೆ ಸಿಗೋಣಾ‌ ಧನ್ಯವಾದಗಳು...

ಸ್ತನ ಕ್ಯಾನ್ಸರನಿಂದ ಹುಷಾರಾಗಿರಿ : Breast Cancer Symptoms, Causes and Safety Precautions in Kannada


Blogger ನಿಂದ ಸಾಮರ್ಥ್ಯಹೊಂದಿದೆ.