
ಹಾಯ್ ಫ್ರೆಂಡ್ಸ, ಯಾರಯಾರಿಗೆ ಅಕ್ಕ ಇದಾರೋ ಅವರು ತುಂಬಾನೇ ಅದೃಷ್ಟವಂತರು. ಏಕೆಂದರೆ ಅವರಿಗೆ ಎರಡನೇ ಅಮ್ಮ ಅಕ್ಕಾನೇ ಆಗಿರ್ತಾಳೆ. ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಹೆಚ್ಚಾಗಿ ಗೊಂಬೆಯಿಟ್ಟುಕೊಂಡು ಅದನ್ನೇ ಮಗು ಅಂತಾ ನಂಬಿ ಅದರೊಂದಿಗೆ ಆಟವಾಡುತ್ತಾರೆ, ಆ ಗೊಂಬೆಯನ್ನು ತಮ್ಮ ಮಗುವಿನಂತೆ ಜೋಪಾನ ಮಾಡುತ್ತಾರೆ. ಆ ಗೊಂಬೆಗೆ ಬಟ್ಟೆ ಹಾಕೋದು, ಊಟ ಮಾಡಿಸೋದು, ಸ್ನಾನ ಮಾಡಿಸೋದು ಅವರ ನೆಚ್ಚಿನ ಆಟವಾಗಿರುತ್ತದೆ. ಮುಂದೆ ಅವರ ಮನೆಯಲ್ಲಿ ತಮ್ಮ ಹುಟ್ಟಿದ್ರೆ ಸಾಕು ಆ ಗೊಂಬೆಯನ್ನು ಮೂಲೆಗೆ ಬೀಸಾಕಿ ತಮ್ಮನನ್ನು ಕಾಳಜಿ ಮಾಡಲು ಸ್ಟಾರ್ಟ ಮಾಡುತ್ತಾರೆ. ಅಮ್ಮ ಹೇಳದಿದ್ದರೂ ಮುದ್ದು ತಮ್ಮನ ಕಾಳಜಿ ಮಾಡುತ್ತಾರೆ, ಅವನಿಗೆ ಆಟವಾಡಿಸುತ್ತಾರೆ, ಊಟ ಮಾಡಿಸುತ್ತಾರೆ. ಸೋ ನಮ್ಮ ಅಕ್ಕಂದಿರು ನಮಗೆ ಎರಡನೇ ಅಮ್ಮವಾಗುತ್ತಾರೆ. ಮುಂದೆಯೂ ಅಷ್ಟೇ ! ಅಕ್ಕಂದಿರು ನಮಗೆ ಗುರುವಾಗಿ ಗೈಡ ಮಾಡುತ್ತಾರೆ, ಸಿಕ್ಕಾಪಟ್ಟೆ ಕಾಳಜಿ ಮಾಡುತ್ತಾ ಪ್ರೀತಿಸುತ್ತಾ ನಮಗೆ ಸರಿ ದಾರಿ ತೋರಿಸುತ್ತಾರೆ, ತಪ್ಪಿದಾಗ ತಿದ್ದುತ್ತಾರೆ, ಬಿದ್ದಾಗ ಎಬ್ಬಿಸಿ ಸಂತೈಸುತ್ತಾರೆ, ಮನೆಯಲ್ಲಿ ನಮ್ಮನ್ನು ಸದಾ ಬಚಾವ ಮಾಡುತ್ತಾರೆ, ನಮಗೆ ಎಲ್ಲದರಲ್ಲೂ ಸಪೋರ್ಟ್ ಮಾಡುತ್ತಾರೆ.ನಮ್ಮ ಲವ್ ಮ್ಯಾಟರ ಮನೆಯಲ್ಲಿ ಎಲ್ಲರಿಗಿಂತ ಮೊದಲು ಅಕ್ಕಂದಿರಿಗೇನೆ ಗೊತ್ತಾಗುತ್ತದೆ. ಏಕೆಂದರೆ ಅವರೊಂದಿಗೆ ನಮ್ಮ ಬಾಂಡಿಂಗ ಅಷ್ಟೊಂದು ಡೀಪಾಗಿರುತ್ತದೆ. ನಮ್ಮ ಅಕ್ಕಂದಿರು ನಮ್ಮನ್ನು ಬಹಳಷ್ಟು ಪ್ರೀತಿಸುತ್ತಾರೆ. ಬಟ್ ನಮ್ಮಲ್ಲಿ ಬಹಳಷ್ಟು ಜನರಿಗೆ ಅವರ ಪ್ರೀತಿ ಕಾಳಜಿ ಗೊತ್ತಾಗಲ್ಲ. ಸಿಲ್ಲಿ ವಿಷಯಗಳಿಗೆ ಅವರಿಗೆ ನಾವು ಸಿಕ್ಕಾಪಟ್ಟೆ ನೋವು ಕೊಡುತ್ತೇವೆ. ಅಕ್ಕಂದಿರ ಅಕ್ಕರೆಯ ಪ್ರೀತಿಗೆ ನಾವು ಬೆಲೆ ಕೊಡಲೇಬೇಕು. ಅವರಿಗೆ ನಾವು ಸಪೋರ್ಟಿವ ಆಗಿ ನಿಲ್ಲಬೇಕು. ಕೊನೆತನಕ ನಾವು ಅಕ್ಕಂದಿರ ಮುದ್ದಿನ ತಮ್ಮನಾಗೆ ಉಳಿಯಬೇಕು.

ನನ್ನ ಭವಾನಿ ಅಕ್ಕಾ ಕೂಡ ನನಗೆ ತುಂಬಾನೇ ಮುದ್ದು. ಅವಳು ನನಗೆ ಬೆಸ್ಟ ಬಿಜನೆಸ ಗುರು ಜೊತೆಗೆ ಬೆಸ್ಟ ಫ್ರೆಂಡ ಕೂಡ ಹೌದು. ಅವಳ ಪ್ರೀತಿ, ಪ್ರೋತ್ಸಾಹ, ಗೈಡನ್ಸ ಹಾಗೂ ಸಪೋರ್ಟದಿಂದಲೇ ನಾನು ಇಷ್ಟೆಲ್ಲವನ್ನು ಸಾಧಿಸಿದ್ದು. ನನ್ನ ವಯಸ್ಸಿನ ಹುಡುಗರು ಜಾಬಗಾಗಿ ಸ್ಟ್ರಗಲ ಮಾಡುವಾಗ ನಾನು 20 ಜನ ಕೆಲಸ ಮಾಡುವ ಕಂಪನಿಗೆ CEO ಆಗಿರುವೆ ಅಂದ್ರೆ ಅದಕ್ಕೆ ಅಕ್ಕನ ಪ್ರೀತಿ, ಗೈಡನ್ಸ ಹಾಗೂ ಸಪೋರ್ಟೆ ಕಾರಣ. ನಮ್ಮ ಎಲ್ಲ ಕಂಪನಿಗಳ, ಸ್ಟಾರ್ಟಪಗಳ ಮ್ಯಾನೇಜ್ಮೆಂಟ್ ಕೆಲಸಗಳನ್ನು ಅಕ್ಕಾನೆ ನೋಡಿಕೊಳ್ಳುತ್ತಾಳೆ. ಅವಳಿಗೆ ಅಷ್ಟೆಲ್ಲ ಬಿಜಿ ಕೆಲಸಗಳಿದ್ದರೂ ನನ್ಮೇಲೆ ಬರೀ ಒಂದು ಕಣ್ಣಲ್ಲ ಎರಡು ಕಣ್ಣುಗಳನ್ನು ಇಟ್ಟಿರುತ್ತಾಳೆ. ನಾನು ಸರಿಯಾಗಿ ಕೆಲಸ ಮಾಡ್ತಿದಿನಾ? ದಿನಾಲು ಬೆಳಿಗ್ಗೆ 4 ಗಂಟೆಗೆ ಎದ್ದು ವರ್ಕೌಟಗೆ ಹೋಗ್ತಿನಾ? ಟೈಮಟೈಮಗೆ ಸರಿಯಾಗಿ ಊಟ ಮಾಡ್ತಿದಿನಾ? ಒಳ್ಳೆಯವರ ಜೊತೆಗೆ ಫ್ರೆಂಡಶೀಪ ಮಾಡ್ತಿದಿನಾ? ರಾಣಿನಾ ಚೆನ್ನಾಗಿ ನೋಡಿಕೊಳ್ತಿದಿನಾ? ಅಂತೆಲ್ಲ ಅವಳು ಚೆಕ ಮಾಡುತ್ತಾಳೆ. ಈ ಕೆಲಸದಲ್ಲಿ ಅವಳ ಬೆಸ್ಟಫ್ರೆಂಡ ವರ್ಷಕ್ಕಾ ಅವಳಿಗೆ ಹೆಲ್ಪ ಮಾಡುತ್ತಾಳೆ. ನನ್ನ ಹಾಗೂ ರಾಣಿ ಮಧ್ಯೆ ಏನಿಟೈಮ ಕೋಳಿ ಜಗಳಗಳು ಕೊಲ್ಡ ಕಾಂಪಿಟೇಷನಗಳು ನಡೆಯುತ್ತಲೆ ಇರುತ್ತವೆ. ಅವು ಹೆಚ್ಚಾಗಿ ನಮ್ಮಿಬ್ಬರ ಮಧ್ಯೆ ಮುನಿಸು ಬಂದಾಗ ಮತ್ತೆ ಅಕ್ಕ ನಮಗೆ ಬುದ್ಧಿವಾದ ಹೇಳಿ ಕಾಂಪ್ರೋಮೈಸ ಮಾಡಿಸುತ್ತಾಳೆ. ಈ ಜನ್ಮದಲ್ಲಿ ನಿಮ್ಮಿಬ್ಬರಗೆ ಬುದ್ಧಿ ಹಾಗೂ ಸೀರಿಯಸನೆಸ ಬರಲ್ಲ ಅಂತಾ ಬೈಯುತ್ತಾಳೆ. ಆದರೆ ನಮ್ಮಿಬ್ಬರನ್ನು ಹೆಚ್ಚಾಗಿ ಅವಳೇ ಪ್ರೀತಿಸುತ್ತಾಳೆ. ಈ ಜಗತ್ತಿನಲ್ಲಿ ನಮ್ಮಿಬ್ಬರ ಬಗ್ಗೆ ಜಾಸ್ತಿ ಕಾಳಜಿ ವಹಿಸುವ ಏಕೈಕ ಜೀವಾ ಅಂದ್ರೆ ಭವಾನಿ ಅಕ್ಕಾ ಮಾತ್ರ.

ನನ್ನಕ್ಕನಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಹಾಗೂ ಕಾಳಜಿಯಿದೆ. ಅವಳು ನನ್ನ ಯಾವುದರಲ್ಲೂ ಬಿಟ್ಕೊಡಲ್ಲ. ನನಗೆ ಎಲ್ಲದರಲ್ಲೂ ಸಪೋರ್ಟ್ ಮಾಡುತ್ತಾಳೆ, ಸರಿಯಾಗಿ ಗೈಡ ಮಾಡುತ್ತಾಳೆ. ಸದಾ ನಗುತ್ತಾ ನನಗೆ ಎನಕರೇಜ ಮಾಡುತ್ತಾಳೆ. ನೋವಾದಾಗ ಸಂತೈಸಿ ಮೋಟಿವೇಟ ಮಾಡುತ್ತಾಳೆ. ನಾನು ಏನಾದರೂ ಮಿಸ್ಟೇಕ ಮಾಡಿದಾಗ ಯಾವುದೇ ಮುಲಾಜಿಲ್ಲದೆ ನನಗೆ ಬೈಯುತ್ತಾಳೆ, ಕಿವಿ ತಿರುಚಿ ಸರಿದಾರಿಗೆ ತರುತ್ತಾಳೆ. ಕೆಲವು ಸರ್ತಿ ಕಾಲೆಳೆದು ತಮಾಷೆ ಮಾಡಿದರೆ ಕೆಲವು ಸರ್ತಿ ಮುದ್ದಾಗಿ ಹೊಡೆಯುತ್ತಾಳೆ. ನನಗೆ ಬೈದಾಗ ನನಗಿಂತ ಹೆಚ್ಚಾಗಿ ಅವಳಿಗೇನೆ ನೋವಾಗುತ್ತದೆ. ಅದಕ್ಕೆ ನಾನು ಅವಳಿಗೆ ಇಷ್ಟವಿಲ್ಲದ ಯಾವ ಕೆಲಸವನ್ನು ಮಾಡಲ್ಲ, ಅವಳಿಗೆ ಬೇಜಾರಾಗುವ ರೀತಿಯಲ್ಲಿ ಯಾವತ್ತೂ ನಡೆದುಕೊಳ್ಳಲ್ಲ. ಬಟ ಕೆಲವು ಸಲ ಸಮಾಜ ಸೇವೆ, ಸಹಾಯ ಮಾಡಲು ಹೋಗಿ ಏನಾದರೂ ಸಣ್ಣಪುಟ್ಟ ಮಿಸ್ಟೇಕಗಳಾಗುತ್ತವೆ, ಒಬ್ಬರಿಗೆ ಒಳ್ಳೆಯದಾದಾಗ ಕೆಲವರಿಗೆ ಹೊಟ್ಟೆ ಉರಿದೆ ಉರಿಯುತ್ತದೆ. ಸಹಾಯ ಮಾಡಿದ ತಪ್ಪಿಗೆ ಬೀದಿಯಲ್ಲಿನ ಮಾರಿಗಳು ನನ್ನ ಮೈಮೇಲೆ ಬರುತ್ತವೆ. ಈ ನ್ಯೂಜಗಳು ಎಲ್ಲರಿಗಿಂತ ಮೊದಲು ಅಕ್ಕನಿಗೇನೆ ಗೊತ್ತಾಗುತ್ತವೆ, ಆಗ ಮಂಗಳಾರುತಿ ಕೂಡ ಆಗುತ್ತವೆ. ಅಕ್ಕ ಬೈದಾಗ ನಾನೇನು ಬೇಜಾರು ಮಾಡಿಕೊಳ್ಳಲ್ಲ. ನನ್ನ ಬೈಯ್ಯೋ ಅಧಿಕಾರ ಅವಳನ್ನು ಬಿಟ್ಟರೆ ಬೇರೆ ಯಾರಿಗಿದೆ? ಅವಳು ನನಗೆ ಅಕ್ಕನಿಗಿಂತ ಮೊದಲು ಬಿಜನೆಸ ಗುರು, ಆಕೆ ಬೈದಷ್ಟು ನಾನು ಶ್ರೀಮಂತನಾಗುತ್ತಾ ಹೋಗುವೆ, ಬೇಗನೆ ಸಕ್ಸೆಸಫುಲ ಆಗುವೆ. ಅವಳು ಬೈದಾಗಲೇ ನಾನು ಲೈಫಲ್ಲಿ ಮುಂದೆ ಹೋಗುವೆ.

ಆದರೂ ನನಗೆ ಬೈದಾಗ ಅಕ್ಕನಿಗೆ ಬೇಜಾರಾಗಿರುತ್ತದೆ. ಅವಳದನ್ನ ಎಲ್ಲರೆದುರು ತೋರಿಸಿಕೊಳ್ಳಲ್ಲ. ರಾತ್ರಿ ಊಟವಾದ ಮೇಲೆ ನನ್ನ ರೂಮಿಗೆ ಬರುತ್ತಾಳೆ, ನನ್ನನ್ನು ಅವಳ ಮಡಿಲಲ್ಲಿ ಮಲಗಿಸಿಕೊಂಡು ಮತ್ತೆರಡು ಬೈದು ಬುದ್ಧಿವಾದ ಹೇಳಿ ಮುದ್ದು ಮಾಡುತ್ತಾ ಸರಿಯಾಗಿ ಗೈಡ ಮಾಡುತ್ತಾಳೆ. "ಈ ಜಗತ್ತು ನಿನ್ನಷ್ಟು ಒಳ್ಳೆಯದಾಗಿಲ್ಲ, ಸ್ವಲ್ಪ ಕೆಟ್ಟವರಾದಾಗಲೇ ಬದುಕಲು ಸಾಧ್ಯ, ಜಸ್ಟ ಬಿಜನೆಸ ಮೇಲೆ ಫೋಕಸ ಮಾಡು, ನಿನ್ನ ಗೋಲ್ಸ ಮೇಲೆ ಮಾತ್ರ ಫೋಕಸ ಮಾಡು, ನಿನ್ನನ್ನು ನಂಬಿ ನಾವೆಲ್ಲ ಇದಿವಿ. ನಿನಗೆ ಸ್ವಲ್ಪ ನೋವಾದರೂ ರಾಣಿ ಅಳ್ತಾ ಕೂಡ್ತಾಳೆ. ನಿನ್ನ ಕೆಲಸ ಮಾಡಿ ನೀನು ಸುಮ್ನೆ ಇದ್ದು ಬಿಡು, ಒಣ ಊರ ಊಸಾಬರಿ ಬೇಕಾಗಿಲ್ಲ. ಸಮಾಜ ಸೇವೆ ಮಾಡಿದವರಿಗೆ ನಮ್ಮ ಜನ ಸಾವು ನೋವು ಬಿಟ್ಟರೆ ಬೇರೆನು ಕೊಟ್ಟಿಲ್ಲ. ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಹೆಲ್ಪ ಮಾಡು, ಯಾರಿಗೆ ನಿಜವಾಗಿಯೂ ನಿನ್ನ ಅವಶ್ಯಕತೆ ಇದೆಯೋ ಅವರಿಗಷ್ಟೇ ಹೆಲ್ಪ ಮಾಡು. ನಾಟಕ ಮಾಡುವವರಿಗೆ, ಫೇಕ ಫ್ರೆಂಡ್ಸಗಳಿಗೆ ಸ್ವಲ್ಪವೂ ಇಂಪಾರಟನ್ಸನ್ನು ಕೊಡಬೇಡ" ಅಂತೆಲ್ಲ ಬುದ್ಧಿವಾದ ಹೇಳುತ್ತಾಳೆ. ಹೋಗುವಾಗ ತಲೆ ಸವರಿ ಹಣೆಗೊಂದು ಮುತ್ತಿಟ್ಟು ಟೈಟ ಹಗ ಕೊಟ್ಟು ಬೆನ್ನಿಗೊಂದು ಪ್ರೀತಿ ಏಟು ಹೊಡೆದು ಹೋಗುತ್ತಾಳೆ. ಅವಳಿಂದಾಗಿಯೇ ನಾನಿಷ್ಟು ಒಳ್ಳೆಯವನಾಗಿರೋದು, ಕಡಿಮೆ ತಪ್ಪುಗಳನ್ನು ಮಾಡುತ್ತಾ ಎಲ್ಲರ ದ್ರಷ್ಟಿಯಲ್ಲಿ ಹೀರೋ ಆಗಿರೋದು.

ಅಮ್ಮನಿಂದ ಸಿಗದ ಪ್ರೀತಿ ನನಗೆ ಅಕ್ಕನಿಂದ ಸಿಕ್ಕಿದೆ. ಅದಕ್ಕೆ ಅವಳಿಗೆ ನಾನು ಬಹಳಷ್ಟು ಋಣಿಯಾಗಿರುವೆ. ಅವಳನ್ನು ನಾನು ಬಹಳಷ್ಟು ಪ್ರೀತಿಸುವೆ. ಅವಳು ಹೆಮ್ಮೆಯಿಂದ ನನ್ನ ಬಗ್ಗೆ ಹೇಳಿಕೊಂಡು ತಲೆಯೆತ್ತಿ ಓಡಾಡುವಂತೆ ಬದುಕುತ್ತಿರುವೆ. ಸಾಯೋತನಕ ಅಷ್ಟೇ ಅಲ್ಲ ಸತ್ತ ಮೇಲೂ ಹೀಗೆ ಇರುವೆ. ಸದಾ ಅವಳ ಹೆಮ್ಮೆಯ ತಮ್ಮನಾಗಿರುವೆ. ಅವಳಿಗೆ ನಾನು ಎಷ್ಟೇ ಥ್ಯಾಂಕ್ಸ ಹೇಳಿದರೂ ಕೂಡ ಕಮ್ಮಿನೇ. ನನ್ನಕ್ಕ ನನಗೆ ಮೆಂಟರ, ಫ್ರೆಂಡ, ಮೋಟಿವೇಟರ, ಐಡಿಯಲ್, ಸೂಪರ ಹೀರೋ, ಲೀಡರ ಎಲ್ಲ. ನನ್ನಕ್ಕ ನನಗೆ ಯಾವಾಗಲೂ ಸೂಪರ ಹೀರೋನೇ. ಅವಳಂಥ ಅಕ್ಕಳನ್ನು ಪಡೆದ ನಾನು ಲಕ್ಕಿನೇ. ಥ್ಯಾಂಕ್ಸ ಭವಾನಿ ಅಕ್ಕ, ಆಕಾಂಕ್ಷಾ ಅಕ್ಕಾ & ಐ ಲವ ಯು ಸೋ ಮಚ್.... ಅದೇ ಈ ರೀತಿ ಈ ಜಗತ್ತಿನಲ್ಲಿರುವ ನನ್ನ ಎಲ್ಲ ಅಕ್ಕಂದಿರಿಗೆ ಎಲ್ಲ ತಮ್ಮಂದಿರ ಪರವಾಗಿ ದೊಡ್ಡ ಸೆಲ್ಯೂಟ... ಜಗತ್ತಿನ ಎಲ್ಲ ಅಕ್ಕಂದಿರಿಗೆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ, ಅಂತಸ್ತು ಕೊಟ್ಟು ಆರ್ಶಿವದಿಸಲಿ ಅಂತಾ ಪ್ರಾರ್ಥಿಸುವೆ... ಎಲ್ಲ ಅಕ್ಕಂದಿರಿಗೆ ಮತ್ತೊಮ್ಮೆ ಧನ್ಯವಾದಗಳು....
