
ಹಾಯ್ ಗೆಳೆಯರೇ, ಬಹಳಷ್ಟು ಜನ ಯುವಕ ಯುವತಿಯರು "ನಿಜವಾದ ಪ್ರೀತಿ ಎಂದರೇನು? ನಿಜವಾದ ಪ್ರೀತಿ ಇರುತ್ತಾ? ನಿಜವಾದ ಪ್ರೀತಿ ಸಿಗುತ್ತಾ?" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಸೋ ಇವತ್ತಿನ ಅಂಕಣದಲ್ಲಿ ನಿಜವಾದ ಪ್ರೀತಿಯ ಸಂಕೇತಗಳನ್ನು ತಿಳಿದುಕೊಳ್ಳೋಣಾ. ಲೆಟ್ಸ ಬಿಗಿನ...
ನಿಜವಾದ ಪ್ರೀತಿಯ ಸಂಕೇತಗಳು ಇಂತಿವೆ.
1) ನಿಜವಾದ ಪ್ರೀತಿಯಲ್ಲಿ ಯಾವುದೇ ತೆರನಾದ ಟರ್ಮ್ಸ & ಕಂಡಿಷನ್ಸಗಳು ಇರುವುದಿಲ್ಲ. ಕೆಟ್ಟ ಉದ್ದೇಶಗಳು ಇರುವುದಿಲ್ಲ.
2) ನಿಜವಾದ ಪ್ರೀತಿಯಲ್ಲಿ ಮ್ಯುಚುವಲ ರೆಸ್ಪೆಕ್ಟ ಹಾಗೂ ಅಂಡರಸ್ಟ್ಯಾಂಡಿಂಗ ಇರುತ್ತದೆ. ಸಾಕಷ್ಟು ಫ್ರೀಡಂ ಇರುತ್ತದೆ. ಸ್ಟ್ರಾಂಗ್ ಎಮೋಷನಲ ಸಪೋರ್ಟ್ ಸಿಗುತ್ತದೆ. ಸ್ಟ್ರಾಂಗ್ ಎಮೋಷನಲ ಅಟ್ಯಾಚಮೆಂಟ ಬೆಳೆಯುತ್ತದೆ.
3) ನಿಜವಾದ ಪ್ರೀತಿಗೆ ಕಾಸ್ಟ್ಲಿ ಗಿಫ್ಟಗಳು, ಕಾರು ಬಂಗಲೆ ಬಂಗಾರಗಳು ಬೇಕಾಗುವುದಿಲ್ಲ. ನಿಜವಾದ ಪ್ರೀತಿಗೆ ಕ್ವಾಲಿಟಿ ಟೈಮ ಹಾಗೂ ಅಟೆನಷನಗಳು ಬೇಕಾಗುತ್ತವೆ.
4) ನಿಜವಾದ ಪ್ರೀತಿಯಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗುಣ ಇರುತ್ತದೆ. ತಾಳ್ಮೆ ಇರುತ್ತದೆ. 100% ನಂಬಿಕೆ ಇರುತ್ತದೆ.
5) ನಿಜವಾದ ಪ್ರೀತಿಯಲ್ಲಿ "ನೀನು ನನ್ನವಳು, ನಿನ್ನ ತನು ಮನಗಳು ನನಗಷ್ಟೇ ಸೀಮಿತವಾಗಿರಬೇಕು" ಎಂಬ ಸ್ವಾರ್ಥ ಬಿಟ್ಟರೆ ಬೇರೆ ಯಾವ ಸ್ವಾರ್ಥವೂ ಇರುವುದಿಲ್ಲ. ನಿಜವಾದ ಪ್ರೀತಿಯಲ್ಲಿ ಬೆನ್ನ ಹಿಂದೆ ಬೇರೆಯವರೊಂದಿಗೆ ಬೆ*ತ್ತ*ಲಾಗುವ ಮೋಸ ಇರಲ್ಲ. ತನು ಮನಗಳೆರಡು ತಮ್ಮ ಸಂಗಾತಿಗಷ್ಟೇ ಮೀಸಲಾಗಿರುತ್ತವೆ.

5) ನಿಜವಾದ ಪ್ರೇಯಸಿ ನಮ್ಮ ಪ್ರತಿ ಇಷ್ಟ ಕಷ್ಟ ನಷ್ಟ ಏಳು ಬೀಳು ನೋವು ನಲಿವು ಸೋಲು ಗೆಲುವುಗಳಲ್ಲಿ ಸಾಥ ಕೊಡುತ್ತಾಳೆ. ನಮ್ಮ ಪ್ರತಿ ಹೆಜ್ಜೆಗೆ ಅವಳು ಹೆಗಲು ಕೊಟ್ಟು ನಿಲ್ಲುತ್ತಾಳೆ. ನಮ್ಮ ಉಸಿರು ಮತ್ತು ಹೆಸರಲ್ಲಿ ಅರ್ಧ ಪಾಲನ್ನು ಕಿತ್ತುಕೊಂಡು ನಮ್ಮನ್ನು ಅರ್ಧನಾರಿಶ್ವರನಂತೆ ಬದಲಾಯಿಸುತ್ತಾಳೆ. ನಮ್ಮ ಅಪೂರ್ಣ ಒಂಟಿ ಜೀವನವನ್ನು ಪೂರ್ಣಗೊಳಿಸುತ್ತಾಳೆ.
6) ನೀನಿಲ್ಲದಿದ್ದರೆ ಸಾಯ್ತೀನಿ ಅನ್ನೋದು ನಿಜವಾದ ಪ್ರೀತಿಯಲ್ಲ, ಹೇಡಿತನ. ಎಷ್ಟೇ ಕಷ್ಟವಾದರೂ ನಿನ್ನೊಂದಿಗೆ ಬದುಕಕ್ತೀನಿ, ಜಗತ್ತೇ ಎದುರಾಗಿ ನಿಂತರೂ ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ತೀನಿ ಎನ್ನುವುದು ನಿಜವಾದ ಪ್ರೀತಿ.
7) ನಿಜವಾದ ಪ್ರೀತಿಯಲ್ಲಿ ಸಿಕ್ಕಾಪಟ್ಟೆ ಕಾಳಜಿಯ ಜೊತೆಗೆ ಕಣ್ಣಿಗೆ ಕಾಣಿಸದ ಸಣ್ಣಪುಟ್ಟ ತ್ಯಾಗಗಳಿರುತ್ತವೆ, ಅಡಜಸ್ಟಮೆಂಟಗಳಿರುತ್ತವೆ. ಫುಲ್ ಹ್ಯಾಪಿನೆಸನ ಜೊತೆಗೆ ಕಂಫರ್ಟೇಬಿಲಿಟಿ ಕೂಡ ಇರುತ್ತದೆ.
8) ನಿಜವಾದ ಪ್ರೀತಿಯಲ್ಲಿ ನೀವು ನೀವಾಗಿರುತ್ತೀರಿ. ನಿಮ್ಮಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ. ಮಾತುಗಳಿಗೆ, ಮುಖಕ್ಕೆ ಮೇಕಪ ಮಾಡಿಕೊಳ್ಳೊ ಅವಶ್ಯಕತೆ ಇರುವುದಿಲ್ಲ.
9) ನಿಜವಾದ ಪ್ರೀತಿ ಟೈಮದೊಂದಿಗೆ, ಹಣದೊಂದಿಗೆ, ವಯಸ್ಸಿನೊಂದಿಗೆ ಬದಲಾಗಲ್ಲ. ಯಾವತ್ತೂ ಕಮ್ಮಿಯಾಗಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ನೀವು ಮಡಿದರೂ ಅದು ಅಜರಾಮರವಾಗಿರುತ್ತದೆ.
10) ನಿಜವಾದ ಪ್ರೀತಿಯಲ್ಲಿ ನಾನು ನೀನು, ಇದು ನಂದು ಇದು ನಿಂದು ಎಂಬ ಅಹಂ ಇರಲ್ಲ. ಎಲ್ಲವೂ ನಮ್ದು ಅನ್ನೋ ಜಂಭವಿರುತ್ತದೆ.

11) ನಿಜವಾದ ಪ್ರೀತಿ ನಿಮ್ಮ ಲೈಫನ್ನು ಸ್ವರ್ಗ ಮಾಡುತ್ತೆ, ನೀವು ನಿಮ್ಮ ಲೈಫಲ್ಲಿ ಸಕ್ಸೆಸಫುಲ್ಲಾಗಲು, ಒಂದೊಳ್ಳೆ ಉನ್ನತ ಸ್ಥಾನಕ್ಕೇರಲು ಮೋಟಿವೇಟ ಮಾಡುತ್ತದೆ. ನಿಜವಾದ ಪ್ರೀತಿ ನಿಮ್ಮನ್ನು ಎಲ್ಲ ಕಷ್ಟಗಳಿಂದ ಉಳಿಸುತ್ತೆ, ಮುಗಿಲೆತ್ತರಕ್ಕೆ ಬೆಳೆಸುತ್ತದೆ.
12) ನಿಜವಾದ ಪ್ರೀತಿಯಲ್ಲೇ ಜಾಸ್ತಿ ಕೋಪ ತಾಪ ಮುನಿಸು ಇರುತ್ತದೆ. ಬಟ ಅದು ರಾತ್ರಿಯಾಗುವಷ್ಟರಲ್ಲಿ ಶಾಂತವಾಗುತ್ತದೆ. ಕಹಿ ಮಾತುಗಳಿಂದಾದ ಮಿಸ್ಟೇಕಗಳು ರಾತ್ರಿ ಸಿಹಿ ಮುತ್ತುಗಳಿಂದ ಸರಿ ಹೋಗುತ್ತವೆ...
ಗೆಳೆಯರೇ, ನನ್ನ ಅನುಭವದ ಆಧಾರದ ಮೇಲೆ ಇವೀಷ್ಟು ನಿಜವಾದ ಪ್ರೀತಿಯ ಸಂಕೇತಗಳು. ಈಗಲೂ ನಿಜವಾದ ಪ್ರೀತಿ ಇದೆ. ನೀವು ನಿಯತ್ತಾಗಿದ್ದರೆ ನಿಮಗೆ ನಿಜವಾದ ಪ್ರೀತಿ ಸಿಕ್ಕೇ ಸಿಗುತ್ತದೆ. ನಾನು ನಿಯತ್ತಾಗಿರುವುದರಿಂದ ನನಗೆ ಗ್ರೇಟ ಸ್ನೇಹಿತೆ ಸಿಕ್ಕಳು, ಈಗ ನನಗೆ ಅವಳೇ ಗ್ರೇಟ ಪ್ರೇಯಸಿಯಾಗಿದ್ದಾಳೆ. ಇನ್ನೇನು ಸ್ವಲ್ಪ ದಿನಗಳಲ್ಲೇ ಗ್ರೇಟ ಮಡದಿಯಾಗಿ ನನ್ನ ಲೈಫಿಗೆ ಬಂದು ನನಗೊಂದು ಶಾಶ್ವತ ನೆಲೆಯನ್ನು ಕೊಡ್ತಾಳೆ. ಈ ಅನಾಥನ ಬಾಳಿಗೆ ಬೆಳಕಾಗುತ್ತಾಳೆ. ನಾನು ನಿಯತ್ತಾಗಿರುವುದರಿಂದ ನನಗೆ ರಾಣಿಯ ಸ್ನೇಹ ಪ್ರೀತಿಗಳೆರಡು ಸಿಕ್ಕಿವೆ. ನೀವು ಸಹ ನಿಯತ್ತಾಗಿದ್ದರೆ ನಿಮಗೂ ನಿಜವಾದ ಪ್ರೀತಿ ಸಿಕ್ಕೇ ಸಿಗುತ್ತದೆ. ಈ ಅಂಕಣ ಇಷ್ಟವಾಗಿದ್ದರೆ ಇದಕ್ಕೆ ಲೈಕ ಮಾಡಿ ಮತ್ತು ನನ್ನ ಪೇಜನ್ನು ಫಾಲೋ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು.....
