ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ನಾನು ವಿದುರ ನೀತಿಗಳ ಬಗ್ಗೆ ಡಿಸ್ಕಸ ಮಾಡುವೆ. ನಿಮಗೆಲ್ಲ ವಿದುರನ ಬಗ್ಗೆ ಗೊತ್ತಿದೆ ಅನ್ಕೊತ್ತೀನಿ. ಗೊತ್ತಿಲ್ಲದಿದ್ದರೂ ನೋ ಪ್ರಾಬ್ಲಮ್, ನಾನೇ ಶಾರ್ಟಾಗಿ ಹೇಳುವೆ. ವಿದುರ ಕೌರವ ಹಾಗೂ ಪಾಂಡವರಿಗೆ ಚಿಕ್ಕಪ್ಪನಾಗಿದ್ದನು. ಕುರು ಸಾಮ್ರಾಜ್ಯಕ್ಕೆ ಪ್ರಧಾನಮಂತ್ರಿಯಾಗಿದ್ದರೂ ಕೂಡ ಧರ್ಮದ ಪರವಾಗಿದ್ದನು. ಕೌರವರ ಪಕ್ಷದಲ್ಲಿದ್ದುಕೊಂಡೇ ದುರ್ಯೋಧನನ ತಪ್ಪುಗಳನ್ನು ಖಂಡಿಸಿದ್ದನು. ದ್ರೌಪದಿಯ ವಸ್ತ್ರಾಪರಣವನ್ನು ಖಂಡಿಸಿದ್ದನು. ಯುಧಿಷ್ಟರನಿಗೆ ಪಗಡೆಯಾಡದಂತೆ ಹೇಳಿದ್ದನು. ಪಾಂಡವರಿಗೆ ಒಳ್ಳೇ ಸಲಹೆಗಳನ್ನು ಕೊಡುತ್ತಿದ್ದನು. ಈ ರೀತಿ ವಿದುರ ಧರ್ಮಿಷ್ಟನಾಗಿದ್ದನು. ಯಾವಾಗಲೂ ಸತ್ಯ ಹಾಗೂ ನ್ಯಾಯದ ಪರವಾಗಿದ್ದನು. ಜಗತ್ತಿನ ಬುದ್ಧಿವಂತರ ಹೆಸರು ಬರುವಾಗ ವಿದುರನ ಹೆಸರು ಕೂಡ ತಪ್ಪದೇ ಬರುತ್ತದೆ. ವಿದುರ ಎಂದರೆ ಹೆಸರೆ ಹೇಳುವಂತೆ ಜಾಣ ಬುದ್ಧಿವಂತ ಅಂತರ್ಥ. ಸೋ ಬನ್ನಿ ಗೆಳೆಯರೇ ಇವತ್ತಿನ ಎಪಿಸೋಡನಲ್ಲಿ ವಿದುರ ನೀತಿಗಳನ್ನು ನೋಡೋಣಾ...

1) ಒಂದು ವೇಳೆ ಹಣ ಗಳಿಸುವುದಕ್ಕಾಗಿ ನಮ್ಮ ಮನಸ್ಸು ಹಾಗೂ ಶರೀರ ಹಾಳಾಗುತ್ತಿದ್ದರೆ, ಧರ್ಮದ ಉಲ್ಲಂಘನೆ ಆಗುತ್ತಿದ್ದರೆ, ಶತ್ರುವಿನ ಎದುರು ತಲೆ ತಗ್ಗಿಸುವ ಸ್ಥಿತಿ ಬಂದರೆ ನಾವು ಆ ರೀತಿಯಲ್ಲಿ ಹಣ ಗಳಿಸುವುದನ್ನು ತ್ಯಜಿಸುವುದು ಒಳ್ಳೆಯದ್ದಾಗಿದೆ.
2) ಕಾಮ ಕ್ರೋಧ ಹಾಗೂ ಲೋಭಗಳಿಂದ ನಮಲ್ಲಿ ಪರಸ್ತ್ರೀಯರ ಸ್ಪರ್ಶದ ಆಸೆ ಹಾಗೂ ಪರಧನದ ವ್ಯಾಮೋಹ ಹುಟ್ಟಿಕೊಳ್ಳುತ್ತದೆ. ಕಾಮ ಕ್ರೋಧ ಲೋಭಗಳು ನರಕದ ಮಾರ್ಗಗಳಾಗಿವೆ. ಇವು ಆತ್ಮನಾಶಕಗಳಾಗಿವೆ. ಅದಕ್ಕಾಗಿ ನಾವು ಇವುಗಳಿಂದ ದೂರವಿರಬೇಕು.
3) ಬೇರೆಯವರ ಮೇಲೆ ಹೊಟ್ಟೆ ಕಿಚ್ಚು ಪಡುವ ವ್ಯಕ್ತಿ, ಬೇರೆಯವರನ್ನು ದ್ವೇಷಿಸುವ ವ್ಯಕ್ತಿ, ಅನುಮಾನ ಪಡುವ ವ್ಯಕ್ತಿ, ನಿಂದಿಸುವ ವ್ಯಕ್ತಿ, ಅಸಂತುಷ್ಟ ವ್ಯಕ್ತಿ, ಪರಾಶ್ರಿತ ವ್ಯಕ್ತಿ ಯಾವಾಗಲೂ ದು:ಖಿಯಾಗಿರುತ್ತಾನೆ.
4) ಶಕ್ತಿಶಾಲಿಯಾಗಿದ್ದರೂ ಕ್ಷಮೆ ನೀಡುವ ಹಾಗೂ ನಿರ್ಧನನಾದರೂ ದಾನ ಮಾಡುವ ಪುರುಷರು ಸ್ವರ್ಗಕ್ಕಿಂತಲೂ ಉಚ್ಛ ಸ್ಥಾನವನ್ನು ಅಲಂಕರಿಸುತ್ತಾರೆ.
5) ಯಾರು ಯಾವಾಗಲೂ ಸಿಹಿ ಮಾತುಗಳನ್ನಾಡುತ್ತಾರೋ ಅವರ ಮೇಲೆ ಸರಸ್ವತಿ ಹಾಗೂ ಲಕ್ಷ್ಮೀಯ ಕೃಪೆ ಸದಾ ಇರುತ್ತದೆ. ನಾಲಿಗೆ ಸರಸ್ವತಿಯ ವಾಸಸ್ಥಾನವಾಗಿದೆ. ಅದಕ್ಕಾಗಿ ನಾವು ಸದಾ ಸಿಹಿ ಮಾತುಗಳನ್ನಾಡಬೇಕು.

6) ಜ್ಞಾನವೆಂಬ ಧನವನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಜ್ಞಾನ ಅತಿದೊಡ್ಡ ಸಂಪತ್ತಾಗಿದೆ, ತಾಕತ್ತಾಗಿದೆ. ಸಂಕಷ್ಟ ಕಾಲದಲ್ಲಿ ಜ್ಞಾನ ನಮ್ಮನ್ನು ಸಂರಕ್ಷಿಸುತ್ತದೆ. ಜ್ಞಾನವೇ ದೊಡ್ಡ ಸಾಧನವಾಗಿದೆ.
7) ಪ್ರತಿ ಪುರುಷನ ಯಶಸ್ಸಿನ ಹಿಂದೆ ಓರ್ವ ಸ್ತ್ರೀ ಇರುತ್ತಾಳೆ. ಆಕೆ ಬಯಸಿದರೆ ಅವನ ಜೀವನವನ್ನು ಸ್ವರ್ಗವಾಗಿಸಬಹುದು ಇಲ್ಲ ನರಕವಾಗಿಸಬಹುದು. ಜೀವನವನ್ನು ಸ್ವರ್ಗವಾಗಿಸುವ ಸ್ತ್ರೀ ಸಿಕ್ಕರೆ ಅವರಿಗಿಂತ ಅದೃಷ್ಟವಂತರು ಬೇರಾರಿಲ್ಲ.
8) ಅಧರ್ಮಿ, ಆಲಸಿ ಹಾಗೂ ಪಾಪಿಯ ಕೈಗೆ ಯಾವುದೇ ಕಾರಣಕ್ಕೂ ಹಣ ಕೊಡಬಾರದು. ಏಕೆಂದರೆ ಅವರು ಅದನ್ನು ನಿಶ್ಚಿತವಾಗಿ ಹಾಳು ಮಾಡುತ್ತಾರೆ.
9) ಯಾರು ನಂಬಿಕೆಗೆ ಅರ್ಹರಲ್ಲವೋ ಅವರನ್ನು ನಂಬಬಾರದು. ಯಾರು ನಂಬಿಕೆಗೆ ಅರ್ಹರೋ ಅವರನ್ನು ಜಾಸ್ತಿ ನಂಬಬಾರದು. ಅತಿ ನಂಬಿಕೆ ನಾಶಕಾರಿಯಾಗಿದೆ.
ಈ ವಿದುರ ನೀತಿಗಳು ನಿಮಗಿಷ್ಟವಾಗಿದ್ದರೆ ತಪ್ಪದೇ ಈ ಅಂಕಣಕ್ಕೆ ಲೈಕ ಮಾಡಿ ಶೇರ ಮಾಡಿ. ಧನ್ಯವಾದಗಳು.....
