ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

                                 ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

                          ಹಾಯ್ ಫ್ರೆಂಡ್ಸ, ಇವತ್ತಿನ ಮಂಡೇ ಮ್ಯಾಟರ್ ಅಂಕಣದಲ್ಲಿ ಸ್ವಲ್ಪ ಖಾರವಾದ ಅಭಿಪ್ರಾಯವಿದೆ. ಅದಕ್ಕೆ ಇದನ್ನು ಶಾಂತವಾಗಿ ಯಾಕೆ ಇದನ್ನು ಹೇಳ್ತಾಯಿರುವೆ ಅಂತಾ ಅರ್ಥಮಾಡಿಕೊಂಡು ಓದಿ‌. ಆನಂತರ ಇದನ್ನು ತಪ್ಪದೇ ಶೇರ್ ಮಾಡಿ. ಈ ಅಂಕಣದ ವಿಷಯ ಎಲ್ಲ ಗಂಡಸರಿಗೆ ಅಪ್ಲಾಯ ಆಗಲ್ಲ. ಹೆಣ್ಮಕ್ಕಳ ಕಡೆಗೆ ವಿಶೇಷವಾಗಿ ಅವರ ಎದೆಗೂಡಿನ ಕಡೆಗೆ ಕೆಟ್ಟದಾಗಿ ನೋಡುವ ಗಂಡಸರಿಗೆ ಮತ್ತೆ ಪೋಲಿ ಹುಡುಗರಿಗಷ್ಟೇ ಅಪ್ಲಾಯ ಆಗುತ್ತದೆ.

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

                                ಸಾಮಾನ್ಯವಾಗಿ ಮೇಜ್ಯಾರಿಟಿ ಆಫ್ ಹುಡುಗರು ಹೆಣ್ಮಕ್ಕಳ ಎದೆ ಕಡೆಗೆ ಗುರಾಯಿಸುತ್ತಾರೆ‌. ಅಂದರೆ ಕದ್ದುಮುಚ್ಚಿ ಅವರ ಸ್ನನಗಳನ್ನು ನೋಡುತ್ತಾರೆ. ಅವರ ಸ್ನನಗಳನ್ನು ತಿನ್ನೋ ತರಹ ನೋಡುತ್ತಿರುತ್ತಾರೆ. ಒಂದು Random ಸರ್ವೇ ಅನುಸಾರ ಬರೀ 20% ಪುರುಷರು ಮಾತ್ರ ಮಹಿಳೆಯರನ್ನ ಮೊದಲ ಸಲ ಮೀಟಾದಾಗ ಮೊದಲು ಅವರ ಮುಖ ನೋಡಿ ಮಾತನಾಡುತ್ತಾರೆ. ಮಿಕ್ಕ 80% ಜನ ಮೊದಲ ಸಲ ಹೆಣ್ಮಕ್ಕಳ ಜೊತೆಗೆ ಮಾತನಾಡುವಾಗ ಅವರ ಮುಖಕ್ಕಿಂತ ಮೊದಲು ಅವರ ಎದೆಯನ್ನು ನೋಡುತ್ತಾರೆ. ಬಹಳಷ್ಟು ಜನ ಹೆಣ್ಮಕ್ಕಳ ಎದೆಯನ್ನು ಗುರಾಯಿಸುತ್ತಲೇ ಇರುತ್ತಾರೆ. ಈಗಂತು ಪೋ* ವಿಡಿಯೋಗಳನ್ನು ನೋಡಿ ಹುಡುಗರ ಫ್ಯಾಂಟಸಿ ಬದಲಾಗಿದೆ. ಹೆಚ್ಚಿನ ಹುಡುಗರು ಹುಡುಗಿಯರನ್ನ ಬಿಟ್ಟು ಆಂಟಿಗಳ ಕಡೆಗೆ ಹೆಚ್ಚಿಗೆ ಅಟ್ರ್ಯಾಕ್ಟಾಗುತ್ತಿದ್ದಾರೆ. 

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

                         ಕೆಲವೊಂದಿಷ್ಟು ಪೋಲಿ ಹುಡುಗರು ಪಬ್ಲಿಕ ಪ್ಲೇಸಗಳಲ್ಲಿ, ಬಸ್ಸಲ್ಲಿ, ಮೆಟ್ರೋನಲ್ಲಿ, ಮಾರ್ಕೆಟನಲ್ಲಿ ಹೆಣ್ಮಕ್ಕಳ ಎದೆಯೆಡೆಗೆ ಕೆಟ್ಟ ದೃಷ್ಟಿಯಿಂದ ಗುರಾಯಿಸುವುದಲ್ಲದೆ ಕೆಟ್ಟದಾಗಿ ಕಾಮೆಂಟ ಮಾಡುತ್ತಿರುತ್ತಾರೆ. ಅವರು ಹಾಕಿಕೊಂಡಿರುವ ಬ್ರಾ ಕಲರ ಗುರ್ತಿಸುವಷ್ಟು ಈ ಪೋಲಿಗಳ ದೃಷ್ಟಿ ಹರಿತವಾಗಿರುತ್ತದೆ. ಗುಂಪಲ್ಲಿ ಕುಳಿತುಕೊಂಡು ಹೆಣ್ಮಕ್ಕಳ ಎದೆಗೂಡಿನ ಕಡೆಗೆ ನೋಡುತ್ತಾ "ಹಾಕಿಕೊಂಡಿರುವ ಬ್ರಾ ಕಲರ ಇದಿದೆ, ಬ್ರಾ ಕಾಣಿಸ್ತಿದೆ, ಎರಡು ಸ್ನನಗಳ ಗಾತ್ರ ಈಕ್ವಲಾಗಿಲ್ಲ, ಲೆಫ್ಟ ಬೂಬ ರೈಟ ಬೂಬಗಿಂತ ದೊಡ್ಡದಾಗಿದೆ, ಸ್ನನಗಳು ಚಿಕ್ಕದಾಗಿವೆ, ದೊಡ್ಡದಾಗಿವೆ, ಬ್ಲೌಜ ತುಂಬಾನೇ ಟೈಟಾಗಿದೆ..." ಎಂದೆಲ್ಲಾ ಡಿಸ್ಕಸ ಮಾಡುತ್ತಿರುತ್ತಾರೆ. ಅಂಥ ಪೋಲಿಗಳಿಗೆ ಸ್ವಲ್ಪ ಅವೇರನೆಸ ಮಾಡುವುದಕ್ಕಾಗಿ ನಾನೀ ಅಂಕಣವನ್ನು ಬರೆಯುತ್ತಿರುವೆ ಅಷ್ಟೇ ಬೇರೆ ಯಾವ ಉದ್ದೇಶವು ಇಲ್ಲ. ಕ್ರೈಮನ್ನು ತಡೆಗಟ್ಟಬೇಕೆಂದರೆ ಕ್ರಿಮಿನಲಗಳ ಕೆಟ್ಟ ಮಾನಸಿಕತೆಯನ್ನು ಬದಲಾಯಿಸುವುದು ಮುಖ್ಯವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ. 

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

ಹೆಣ್ಮಕ್ಕಳ ಎದೆಯನ್ನು ಕೆಟ್ಟದಾಗಿ ಗಮನಿಸುವವರಿಗೆ ನನ್ನ 3 ಖಾರವಾದ ಮಾತುಗಳು ಇಂತಿವೆ ; 

1) ಹೆಣ್ಮಕ್ಕಳ ಎದೆಯನ್ನು ಅಂದರೆ ಅವರ ಸ್ನನಗಳನ್ನು ಗುರಾಯಿಸುವ ಅವಶ್ಯಕತೆ ‌ಇಲ್ಲ. ಅಲ್ಲ್ಯಾವ ಗ್ರೇಟ ಸೆಕ್ರೆಟಿಲ್ಲ, ಸಂಪತ್ತಿನ ಖಜಾನೆಯಿಲ್ಲ. ಸೋ ಅದರಲ್ಲಿ ಅಷ್ಟೊಂದು ಕುತೂಹಲ ತೋರಿಸುವ ಅವಶ್ಯಕತೆ ಇಲ್ಲ. ಸ್ನನಗಳು ಮಾತೆಯರ ದೇಹದ ಗ್ರಂಥಿಗಳಾಗಿವೆ, ಬಾಡಿ ಪಾರ್ಟ್ಸಗಳಾಗಿವೆ‌. ಅವುಗಳಲ್ಲಿ ಉತ್ಪಾದನೆಯಾದ ಹಾಲಿನಿಂದಲೇ ಪ್ರತಿ ಮಗುವಿನ ಪೋಷಣೆಯಾಗುತ್ತದೆ. ಅವು ಅನ್ನಪೂರ್ಣೇಶ್ವರಿಯ ಪವಿತ್ರ ವಾಸಸ್ಥಾನವಿದ್ದಂತೆ. ಸೋ ಸ್ನನಗಳನ್ನು ಗುರಾಯಿಸುವುದು, ಅವುಗಳ ಬಗ್ಗೆ ಅಶ್ಲೀಲವಾಗಿ ಮಾತಾಡೋದು, ಕೆಟ್ಟದಾಗಿ ಕಾಮೆಂಟ ಮಾಡುವುದು ಸಭ್ಯರ ಲಕ್ಷಣವಲ್ಲ. ಅವುಗಳ ಕಡೆಗೆ ಅಷ್ಟೊಂದು ಅಟೆನಷನ ಕೊಡುವ ಅವಶ್ಯಕತೆ ಇಲ್ಲ. ಅವುಗಳನ್ನು ತಿನ್ನೋ ಥರಹ ನೋಡಿ ಮಾತೆಯರಿಗೆ ಮಾನಸಿಕ ಹಿಂಸೆ ಕೊಡುವುದು ಸರಿಯಲ್ಲ. ನಿಮ್ಮ ಈ ವರ್ತನೆಯಿಂದ ಮಾತೆಯರು ಸೋದರಿಯರು ಭಯಪಡುತ್ತಿದ್ದಾರೆ, ಎಲ್ಲೆಡೆಗೆ ಅನಸೇಫ ಫೀಲ ಮಾಡುತ್ತಿದ್ದಾರೆ. ಅವರನ್ನು ಗೌರವದಿಂದ ಕಾಣುವುದು ಅವರಿಗೆ ಸೇಫ ಫೀಲ ಮಾಡಿಸುವುದು ನಮ್ಮ ಕರ್ತವ್ಯವಾಗಿದೆ. ನೀವು ನಿಜವಾಗಿಯೂ ಗಂಡಸರಾಗಿದ್ದರೆ ಹೆಣ್ಮಕ್ಕಳ ಸ್ನನಗಳನ್ನು ಗುರಾಯಿಸುವುದನ್ನು ಬಿಟ್ಟು ಬಿಡಿ. 

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

2) ಪುರುಷರಂತೆ ಹೆಣ್ಣು ಕೂಡ ಮೂಳೆ ಮಾಂಸ ಮಲ ಮೂತ್ರ ಬೆವರುಗಳಿಂದ ಕೂಡಿದ ಚರ್ಮದ ಗೊಂಬೆಯಾಗಿದ್ದಾಳೆ‌. ಮಾಲಿನ್ಯತೆಯಿಂದಾದ ಚರ್ಮದ ಗೊಂಬೆ ಮೇಲೆ ಮೇಕಪ ಇದೆ ಅಷ್ಟೇ. ಹೀಗಿರುವಾಗ ಹೆಣ್ಮಕ್ಕಳನ್ನು ನೋಡಿ ಸುಮ್ಮನೆ ಅಟ್ರ್ಯಾಕ್ಟ ಆಗುವುದೇಕೆ? ಅವರ ಹಿಂದೆ ಜೊಲ್ಲು ಸುರಿಸುತ್ತಾ ನಾಯಿ ತರಹ ಅಲೆಯುವುದೇಕೆ? ಅಂತಾ ಸ್ವಲ್ಪ ಯೋಚನೆ ಮಾಡಿ‌. ಹೆಣ್ಣನ್ನು ನೋಡಿ ಜೊಲ್ಲು ಸುರಿಸುವುದಕ್ಕಿಂತ‌ ಮುಂಚೆ ಅವಳ ನೈಜತೆ ಅರ್ಥಮಾಡಿಕೊಳ್ಳಿ. ಅವಳು ‌ಕೂಡ ನಿಮ್ಮಂತೆಯೆ ಮಾಲಿನ್ಯದ ಗೊಂಬೆಯಾಗಿದ್ದಾಳೆ. ಇದನ್ನು ನೋಡಿ ಮೂರ್ಖರಾದರೆ ಖಂಡಿತ ನೀವು ಹಾಳಾಗುತ್ತೀರಿ. 

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

3) ಹೆಣ್ಣಿನ ಕೋಪ ಶಾಪ ತಾಪ ಒಳ್ಳೆಯದಲ್ಲ‌. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದವರೆಲ್ಲ ದುರಂತ ಅಂತ್ಯ ಕಂಡಿದ್ದಾರೆ. ಹೆಣ್ಣನ್ನು ಕೆಟ್ಟದಾಗಿ ನೋಡಿ ಉದ್ಧಾರವಾದವರು ಯಾರು ಇಲ್ಲ. ಅದಕ್ಕಾಗಿ ಹೆಣ್ಣಿನ ಸ್ನನಗಳನ್ನು ಕೆಟ್ಟದಾಗಿ ನೋಡಬೇಡಿ. ಹೆಣ್ಮಕ್ಕಳ ಎದೆ ನೋಡಿ ಹಾಳಾಗಬೇಡಿ. ನೀವು ಕೂಡ ತಾಯಿಯ ಎದೆಹಾಲನ್ನು ಕುಡಿದೇ ದೊಡ್ಡವರಾಗಿದ್ದೀರಾ. ನಿಮಗೆ ನಿಮ್ಮ ತಾಯಿಯ ಎದೆಹಾಲಿನ ಋಣ ಗೊತ್ತಿದ್ರೆ, ನಿಮ್ಮ ತಾಯಿ ಮೇಲೆ ನಿಮಗೆ ಗೌರವ ಇದ್ರೆ ಇವತ್ತಿನಿಂದಲೇ ಬೇರೆ ಹೆಣ್ಮಕ್ಕಳ ಸ್ನನಗಳನ್ನು ಗುರಾಯಿಸುವುದನ್ನ, ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ಬಿಟ್ಟು ಬಿಡಿ. ‌ಇಷ್ಟು ದಿನ ತಪ್ಪು ಮಾಡಿದ್ದರೂ ಸಹ ಅದನ್ನ ತಿದ್ದಿಕೊಳ್ಳಿ, ಎಲ್ಲ ಮರೆತು ಇನ್ಮುಂದೆ ಆದರೂ‌ ಸರಿ ದಾರಿಯಲ್ಲಿ ಸಾಗಿ. ಗ್ರೇಟ ಪುರುಷರಾಗಿ‌‌. ರಾತ್ರಿ 12ಕ್ಕೆ ನಿಮ್ಮೊಂದಿಗೆ ಬೇರೆ ಮನೆಯ ಮಗಳು, ಸೊಸೆಯಿದ್ರೂ ಸಹ ಅವರ ಮನೆಯವರು "ನಮ್ಮ ಮನೆಯ ಮಹಾಲಕ್ಷ್ಮಿ ಪುರುಷೋತ್ತಮನೊಂದಿಗೆ ಇದ್ದಾಳೆ, ಫುಲ್ಲಿ ಸೇಫಾಗಿದ್ದಾಳೆ, ಚಿಂತಿಸುವ ಅವಶ್ಯಕತೆ ಇಲ್ಲ ಅನಬೇಕು" ಆ ರೀತಿಯ ಗ್ರೇಟ ಪರ್ಸನಾಲಿಟಿ ನಿಮ್ಮದಾಗಿರಬೇಕು. 

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

                      ಓಕೆ ಫ್ರೆಂಡ್ಸ ಒಬ್ಬ ಮೆಂಟರರಾಗಿ, ರೈಟರಾಗಿ ನಾನು ಹೇಳಬೇಕಾದ ಹಿತೋಪದೇಶವನ್ನು ಹೇಳಿರುವೆ, ಇದನ್ನು ನಿಮ್ಮ ಹಿತಕ್ಕಾಗಿಯೇ ಹೇಳಿರುವೆ. ಸೋ ಪ್ಲೀಜ ನೀವು ಬದಲಾಗಿ ಮತ್ತು ಈ ಅಂಕಣವನ್ನು ಎಲ್ಲೆಡೆಗೆ ಶೇರ್ ಮಾಡಿ ಜಾಗೃತಿ ಮೂಡಿಸಿ‌. ಧನ್ಯವಾದಗಳು...

ಹೆಣ್ಮಕ್ಕಳ ಎದೆಯನ್ನು ಗುರಾಯಿಸುವ ಮುನ್ನ ಇದನ್ನು ತಿಳಿದುಕೊಳ್ಳಿ - Women Safety Awareness in Kannada

Blogger ನಿಂದ ಸಾಮರ್ಥ್ಯಹೊಂದಿದೆ.