
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಕೆಲವೊಂದಿಷ್ಟು ಸಿನಿಮಾಗಳು ನಮಗೆ ಎಂಟರಟೇನ ಮಾಡುವುದರ ಜೊತೆಗೆ ಎಜುಕೇಟ ಕೂಡ ಮಾಡುತ್ತವೆ, ಮೋಟಿವೇಟ ಕೂಡ ಮಾಡುತ್ತವೆ. ನಾವು ಇಂಥ ಸಿನಿಮಾಗಳು ಹೆಚ್ಚಾಗಿ ನೋಡಿದರೆ ನಮಗೆ ನಾಲೇಜ ಸಿಗುತ್ತದೆ. ನಾಲೇಜ ಸಿಕ್ಕರೆ ಸಕ್ಸೆಸಫುಲ ಆಗೋಕೆ ಒಂದು ವೆಪನ ಸಿಕ್ಕಂತೆ. ನಾನು ಇವತ್ತಿನ ಎಪಿಸೋಡನಲ್ಲಿ ನನ್ನ ಫೇವರೆಟ ಸಿನಿಮಾಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ. ನೀವು ನೋಡಲೇಬೇಕಾದ 5 ಸಿನಿಮಾಗಳು ಇಂತಿವೆ ;

1) The Social Network
ದ ಸೋಸಿಯಲ ನೆಟವರ್ಕ ಸಿನಿಮಾ ಮಾರ್ಕ ಝುಕರಬರ್ಗ ಹಾಗೂ ಫೇಸ್‌ಬುಕನ ಉಗಮದ ಮೇಲೆ ಆಧಾರಿತವಾಗಿದೆ. ಫೇಸ್‌ಬುಕನ ಜನನ ಹಾಗೂ ಮಾರ್ಕ ಝುಕರಬರ್ಗರ ಸ್ಟ್ರಗಲನ್ನು ಈ ಸಿನಿಮಾ ಎಳೆಎಳೆಯಾಗಿ ನಮಗೆ ತೋರಿಸುತ್ತದೆ. ಹೇಗೆ ತನ್ನ ಎಕ್ಸ ಗರ್ಲಫ್ರೆಂಡಳ ಸೇಡು ತೀರಿಸಿಕೊಳ್ಳಲು ಮುಂದಾದ ಒಬ್ಬ ಹುಡುಗ ಜಗತ್ತಿನ ಅತಿದೊಡ್ಡ ಸೋಸಿಯಲ ಮೀಡಿಯಾ ಫೇಸ್‌ಬುಕ್ಕನ್ನು ಕ್ರಿಯೆಟ ಮಾಡ್ತಾನೆ ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಬ್ರೇಕಪ ಆದ ನಂತರ ಲೈಫಲ್ಲಿ ಕಮಬ್ಯಾಕ ಮಾಡಲು ಈ ಸಿನಿಮಾ ಮೋಟಿವೇಟ ಮಾಡುತ್ತದೆ. ನಿಮಗೆ ಬಿಜನೆಸಮ್ಯಾನ ಆಗಬೇಕೆಂಬ ಆಸೆಯಿದ್ದರೆ ನೀವೊಮ್ಮೆ ಈ ಸಿನಿಮಾವನ್ನು ಮಿಸ ಮಾಡದೇ ನೋಡಲೇಬೇಕು. ಲಿಂಕ ಇಂತಿದೆ ;
Watch Now On Amazon Prime :- Link Click Here

2) Steve Jobs
ಹೆಸರೇ ಹೇಳುವಂತೆ ಈ ಸಿನಿಮಾ ಆ್ಯಪಲ ಕಂಪನಿಯ ಮಾಲೀಕರಾದ ಸ್ಟೀವ ಜಾಬ್ಸರ ಜೀವನದ ಮೇಲೆ ಆಧಾರಿತವಾಗಿದೆ. ಕಾಲೇಜಿನಲ್ಲಿದ್ದಾಗ ಇರೋಕೆ ಸರಿಯಾದ ಮನೆಯಿಲ್ಲದೆ ಫ್ರೆಂಡ್ಸಗಳ ರೂಮಲ್ಲಿ ನೆಲದ ಮೇಲೆ ಮಲಗುತ್ತಿದ್ದ ಹುಡುಗ, ವಾರದಲ್ಲಿ ಒಂದಿನವಾದರೂ ಹೊಟ್ಟೆ ತುಂಬ ಊಟ ಸಿಗುತ್ತೆ ಅಂತಾ ಹತ್ತಾರು ಮೈಲಿ ಬರಿಗಾಲಲ್ಲಿ ನಡೆಯುತ್ತಿದ್ದ ಹುಡುಗ, ಪಾಕೆಟ ಮನಿಗಾಗಿ ಬೀದಿಯಲ್ಲಿ ಬಿದ್ದ ಕೋಕ ಬಾಟಲಗಳನ್ನು ಆಯ್ದು ಮಾರುತ್ತಿದ್ದ ಹುಡುಗ, ಯೌವ್ವನದಲ್ಲಿ ಡೈವರ್ಟಾದ ಹುಡುಗ ಭಾರತಕ್ಕೆ ಬಂದು ವಾಪಸ ಹೋದ ನಂತರ ತಂದೆಯ ಗ್ಯಾರೇಜಿನಿಂದ ಆ್ಯಪಲ ಕಂಪ್ಯುಟರ್ಸ ಕಂಪನಿಯನ್ನು ಸ್ಟಾರ್ಟ ಮಾಡಿ ಸಕ್ಸೆಸಫುಲ ಆದನು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ನಿಮಗೆ ನಿಮ್ಮ ಲೈಫಲ್ಲಿ ಸಕ್ಸೆಸಫುಲ ಆಗಬೇಕು, ಗ್ರೇಟ ಬಿಜನೆಸಮ್ಯಾನ ಆಗಬೇಕು ಎಂಬಾಸೆಯಿದ್ದರೆ ನೀವೊಂದು ಸಲ ಸ್ಟೀವ ಜಾಬ್ಸ ಸಿನಿಮಾವನ್ನು ನೋಡಲೇಬೇಕು. ಲಿಂಕ ಇಂತಿದೆ ;

3) Guru
ಈ ಗುರು ಸಿನಿಮಾ ಹಿಂದಿಯಲ್ಲಿದೆ. ಇದು ಧೀರೂಭಾಯಿ ಅಂಬಾನಿಯವರ ಲೈಫದಿಂದ ಸ್ವಲ್ಪ ಇನಸ್ಪಾಯರಾಗಿ ರೆಡಿಯಾದ ಸಿನಿಮಾವಾಗಿದೆ. ಯಾವ ರೀತಿ ಒಬ್ಬ ಮಿಡಲ ಕ್ಲಾಸ ಹುಡುಗ ಹಟ ಮಾಡಿ ಯೆಮನಗೆ ಹೋಗಿ ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡಿ ಮತ್ತೆ ಭಾರತಕ್ಕೆ ಬಂದು ದೈತ್ಯ ಬಿಜನೆಸಮ್ಯಾನ ಆಗ್ತಾನೆ ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಒಬ್ಬ ಬಿಜನೆಸಮ್ಯಾನಗೆ ಇರಲೇಬೇಕಾದ ತುಡಿಟ ಹಾಗೂ ಚಾಲಾಕಿತನವನ್ನು ನಾವು ಈ ಸಿನಿಮಾ ನೋಡಿ ಕಲಿಯಬಹುದು. ನಿಮಗೆ ಬಿಜನೆಸ ಮೆಂಟ್ಯಾಲಿಟಿಯ ಜೊತೆಗೆ ಲೆಸನಗಳನ್ನು ಕಲಿಯುವ ಆಸೆಯಿದ್ದರೆ ಒಂದ್ಸಲ ಗುರು ಸಿನಿಮಾ ನೋಡಿ. ಲಿಂಕ ಇಲ್ಲಿದೆ ; Link Click Here

4) Titanic
ಹೆಸರೇ ಹೇಳುವಂತೆ ಇದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ ದೈತ್ಯ ಐಷಾರಾಮಿ ಹಡಗು ಟೈಟಾನಿಕನ ಕಥೆಯಾಗಿದೆ. ನೀವು ಟೈಟಾನಿಕ ಸಿನಿಮಾವನ್ನು ನೋಡಿಲ್ಲದಿದ್ದರೆ ನೀವು ನಿಮ್ಮ ಲೈಫಲ್ಲಿ ಏನನ್ನು ನೋಡಿಲ್ಲವೆಂದರ್ಥ. ಟೈಟಾನಿಕ ಸಿನಿಮಾವನ್ನು ಜೇಮ್ಸ್ ಕ್ಯಾಮರಾನ ಡೈರೆಕ್ಟ ಮಾಡಿದ್ದಾರೆ. ಇದು ನನ್ನ ಮೋಸ್ಟ ಫೇವರೆಟ ಸಿನಿಮಾವಾಗಿದೆ. ಶ್ರೀಮಂತರು ಬಡವರನ್ನು ಯಾವ ರೀತಿ ನೋಡುತ್ತಾರೆ, ಯಾವ ರೀತಿ ತುಳಿಯುತ್ತಾರೆ, ನಿಜವಾದ ಪ್ರೀತಿ ಹೇಗಾಗುತ್ತೆ? ನಿಜವಾದ ಪ್ರೀತಿ ಯಾವ ರೀತಿ ಇರುತ್ತದೆ? ಅತಿಯಾದ ಆತ್ಮವಿಶ್ವಾಸ ಹಾಗೂ ಸಣ್ಣ ಬೇಜಾವಬ್ದಾರಿತನ ಹೇಗೆ ಒಂದು ದೊಡ್ಡ ಹಡುಗನ್ನು ಮುಳುಗಿಸುತ್ತದೆ, ಸುಮಾರು 1500 ಜನರ ಪ್ರಾಣವನ್ನು ತೆಗೆಯುತ್ತದೆ ಎಂಬುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಈ ಸಿನಿಮಾಗಿದೆ. ಇದು ಜಬರದಸ್ಟ ಸ್ಟೋರಿ, ಗ್ರೇಟ ಸಿನಿಮ್ಯಾಟಿಕ ಮೇಕಿಂಗನಿಂದ ಜಗತ್ತಿನ ದಿ ಬೆಸ್ಟ ಸಿನಿಮಾವಾಗಿದೆ. ಏನಾದರೂ ನೀವಿದನ್ನ ಒಂದ್ಸರ್ತಿ ನೋಡಲೇಬೇಕು. ಲಿಂಕ ಇಲ್ಲಿದೆ ; Link Click Here

5) Avatar
ಅವತಾರ ಜೇಮ್ಸ್ ಕ್ಯಾಮರಾನರ ಮತ್ತೊಂದು ಗ್ರೇಟ ಸಿನಿಮಾವಾಗಿದೆ. ಈ ಸಿನಿಮಾವನ್ನು ಕೂಡ ನೀವು ಹೇಗೆ ಸಿನಿಮಾ ಮಾಡೋದಂತ ನೋಡಲು ಕಲಿಯಬಹುದು. ಗ್ರೇಟ VFX, 3D ಟೆಕ್ನಾಲಜಿಯ ಜೊತೆಗೆ ಜೇಮ್ಸ ಕ್ಯಾಮರಾನ ಸೇರಿಕೊಂಡರೆ ಮುಗೀತು ಜಗತ್ತಿನ ಅದ್ಭುತಗಳೆಲ್ಲ ಸ್ಕ್ರೀನ ಮೇಲೆ ಕಾಣಿಸುತ್ತವೆ. ಅದನ್ನ ನಾವು ಟೈಟಾನಿಕ್ ನಂತರ ಅವತಾರದಲ್ಲಿ ನೋಡಬಹುದು. ಮನುಷ್ಯನ ದುರಾಸೆ ಎಷ್ಟರ ಮಟ್ಟಿಗಿದೆ ಎಂಬುದನ್ನು ತೋರಿಸುವುದರ ಜೊತೆಗೆ ಈ ಸಿನಿಮಾ ನಿಮಗೆ ಬೇರೆ ಲೋಕವನ್ನು ಪರಿಚಯಿಸುತ್ತದೆ. ಈ ಸಿನಿಮಾವನ್ನು ನೋಡಿ. ಜೊತೆಗೆ ಈ ವರ್ಷದ ಅಂತ್ಯಕ್ಕೆ ಅವಾತಾರ 2 ಬರ್ತಾಯಿದೆ. ಅದನ್ನು ಮಿಸ ಮಾಡದೇ ನೋಡಿ. ಲಿಂಕ : Link Click Here

ಓಕೆ ಗೆಳೆಯರೇ ಫೈನ ಈ 5 ಸಿನಿಮಾಗಳನ್ನು ನೋಡಿ, ಖಂಡಿತವಾಗಿಯೂ ನಿಮಗೆ ನಾಲೇಜ ಸಿಗುತ್ತದೆ ಮತ್ತೆ ನಿಮ್ಮ ಸಿನಿಮಾ ನೋಡುವ ಟೆಸ್ಟ ಬದಲಾಗುತ್ತದೆ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಆಫೀಸಿಯಲ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು...