
ಹಾಯ್ ಗೆಳೆಯರೇ, ಇವತ್ತಿನ ಅಂಕಣ ಸ್ವಲ್ಪ ನಿಮಗೆ ಬೋರಿಂಗ ಆಗಬಹುದು. ಆಗಲಿ ಪರವಾಗಿಲ್ಲ, ಉಪದೇಶ ಯಾವಾಗಲೂ ಅಹಿತವಾಗಿಯೇ ಇರುತ್ತದೆ, ಔಷಧಿ ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಗೆಳೆಯರೇ, ನೀವು ನಿಮ್ಮ ಲೈಫಲ್ಲಿ ಯಾವಾಗಲೂ ಹ್ಯಾಪಿಯಾಗಿರಬೇಕೆಂದರೆ ಸಕ್ಸೆಸಫುಲ್ಲಾಗಿರಬೇಕೆಂದರೆ ನೀವು ಈ ನಾಲ್ಕು ಕೋಟಗಳಿಂದ ಸಾಧ್ಯವಾದಷ್ಟು ದೂರದಲ್ಲಿರಬೇಕು, ಅವುಗಳ ಜೊತೆಗೆ ಯಾವುದೇ ದುಶ್ಮನಿ ಮಾಡಬಾರದು. ಆ ನಾಲ್ಕು ಕೋಟ ಯಾವುದಪ್ಪ ಅಂದರೆ ವೈಟ ಕೋಟ, ಬ್ಲ್ಯಾಕ್ ಕೋಟ, ಖಾಕಿ ಕೋಟ & ದಿ ಲಾಸ್ಟ ಪೇಟಿಕೋಟ...!!!

ಇದು ನನ್ನ ಉಪದೇಶವಲ್ಲ. ನನ್ನ ಬಿಜನೆಸ ಮೆಂಟರಗಳಲ್ಲಿ ಒಬ್ಬರಾದ ಅನುರಾಗ ಸರ ಫೇವರೇಟ ಕೋಟ ಇದು. ಇದು ನನಗೂ ಫೇವರೆಟ ಕೋಟ ಆಗಿದೆ. ನಾನು ಬಿಜನೆಸ ಟ್ರೇನಿಂಗಲ್ಲಿರುವಾಗ ಅವರು ಈ ಮಾತನ್ನು ನಮಗೆ ಪದೇಪದೇ ಹೇಳುತ್ತಿದ್ದರು. ಅದನ್ನೇ ನಾನಿವತ್ತು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ. ನಾವು ಈ ನಾಲ್ಕು ಕೋಟಗಳಿಂದ ನಮ್ಮನ್ನು ನಾವು ಸೇಫ ಮಾಡಿಕೊಳ್ಳಬೇಕು.

No - 1 : ವೈಟ ಕೋಟನ ಸಹವಾಸವನ್ನು ಮಾಡಲೇಬಾರದೆಂದರೆ ನಾವು ದಿನಾಲು ಬೆಳಿಗ್ಗೆ ಬೇಗನೆದ್ದು ಒಂದು ಗಂಟೆ ಚೆನ್ನಾಗಿ ವರ್ಕೌಟ ಮಾಡಬೇಕು. ಹೆಲ್ದಿ ಫುಡ ಸೇವಿಸಬೇಕು, ಚೆನ್ನಾಗಿ ನಿದ್ದೆ ಮಾಡಬೇಕು. ಅಂದಾಗಲೇ ನಾವು ವೈಟ ಕೋಟನಿಂದ ಸೇಫಾಗಿರುತ್ತೇವೆ, ಅಂದರೆ ನಮಗೆ ಡಾಕ್ಟರಗಳತ್ರ ಹೋಗುವ ಅವಶ್ಯಕತೆ ಬೀಳಲ್ಲ.

No - 2 : ಎರಡನೇ ಕೋಟನಿಂದ ಅಂದರೆ ಬ್ಲ್ಯಾಕ್ ಕೋಟನಿಂದ ಅಂದರೆ ಸುಳ್ಳೇಳುವ ಲಾಯರಗಳಿಂದ ನಾವು ಸೇಫಾಗಿರಬೇಕೆಂದರೆ ನಾವು ಯಾವುದೇ ತರಹದ ಬ್ಲ್ಯಾಕ ಬಿಜನೆಸಗಳನ್ನು ಮಾಡಬಾರದು. ನಾವು ವೈಟಾಗಿರಬೇಕು, ನಮ್ಮ ಬಿಜನೆಸ ಕೂಡ ವೈಟಾಗಿರಬೇಕು.

No - 3 :ಇನ್ನೂ ಮೂರನೇಯದು ಖಾಕಿ ಕೋಟ ಅಂದ್ರೆ ಪೋಲಿಸರು. ಇವರ ಕಣ್ಣು ನಮ್ಮ ಮೇಲೆ ಬೀಳಬಾರದೆಂದರೆ ನಾವು ಕಾನೂನನ್ನು ಪಾಲಿಸಿದರೆ ಸಾಕು. ನಾವು ನಿಯತ್ತಾಗಿ ಬಿಜನೆಸ ಮಾಡಿ ಶ್ರೀಮಂತರಾದರೆ ಸಾಕು ಈ ಖಾಕಿ ಕೋಟನವರು ನಮಗೆ ಸಲಾಮ ಹೊಡೆಯುತ್ತಾರೆ. ನಮಗೆ ಸೆಕ್ಯುರಿಟಿ ಕೊಡುತ್ತಾರೆ.

ಈ ಮೂರು ಕೋಟಗಳಿಂದ ನಾವು ಸೇಫಾದರೆ ಬಿಂದಾಸಾಗಿ ಬದುಕಬಹುದು. ಆದರೆ ಈ ಟೈಮಲ್ಲಿ ನಾವು ಪೇಟಿಕೋಟಗಳ ಸಮೀಪಕ್ಕೆ ಹೋಗಬಾರದು. ಮಹಾನ ಋಷಿಮುನಿಗಳು, ವೀರಾಧಿವೀರಶೂರ ರಾಜರು, ದೊಡ್ಡ ದೊಡ್ಡ ಸಾಧಕರು, ಬಿಲೆನಿಯರ ಬಿಜನೆಸಮ್ಯಾನಗಳು, ಸೆಲೆಬ್ರಿಟಿಗಳು ಹಾಳಾಗಿದ್ದು ಪೇಟಿಕೋಟಗಳ ಸಹವಾಸ ಮಾಡಿಯೇ. ನಾವು ಸ್ಕರ್ಟ ಚೇಜರ ಆದರೆ ಸೋಲು ನಮ್ಮನ್ನು ಚೇಜ ಮಾಡಿಕೊಂಡು ಸಕ್ಸೆಸಿನ ಶಿಖರದಿಂದ ಕೆಳತಳ್ಳಿ ಹೋಗುತ್ತದೆ. ಅದಕ್ಕಾಗಿ ನಾವು ಪೇಟಿಕೋಟಗಳಿಂದ ಸಾಧ್ಯವಾದಷ್ಟು ದೂರವಿರಬೇಕು, ಸ್ಕರ್ಟ ಚೇಜರ ಆಗಬಾರದು ಅಂತಾ ನಮ್ಮ ಅನುರಾಗ ಸರ್ ಪದೇಪದೇ ಹೇಳ್ತಾಯಿದ್ರು. ಅದನ್ನೇ ನಾನಿವತ್ತು ನಿಮ್ಮೊಂದಿಗೆ ಶೇರ ಮಾಡಿರುವೆ.

ನಾನು ನಿಮಗೆ ಲವ್ ಮಾಡಬೇಡಿ, ಮದುವೆಯಾಗಬೇಡಿ ಅಂತಾ ಹೇಳ್ತಿಲ್ಲ. ಲೈಫಲ್ಲಿ ಸರಿಯಾಗಿ ಸೆಟ್ಲಾಗುವ ತನಕ ಮೇನಕೆಯರಿಂದ ದೂರವಿರಿ, ಮದುವೆಯಾದ ಮೇಲೆ ಶೂರ್ಪನಖಿಯರಿಂದ ದೂರವಿರಿ ಎಂದಷ್ಟೇ ನಾನು ಹೇಳ್ತಾಯಿರೋದು. ಮದುವೆಗೂ ಮುಂಚೆ ಹನುಮಂತನಂತೆ ಇರಿ, ಮದುವೆಯಾದ ಮೇಲೆ ಶ್ರೀರಾಮನಂತೆ ಇರಿ. ಬರೀ ಒಬ್ಬಳಿಗೆ ಮಾತ್ರ ನಿಮ್ಮ ಸರ್ವಸ್ವವನ್ನು ಮೀಸಲಾಗಿಡಿ. ಶಾರ್ಟಟೈಮ ಸುಖಕ್ಕಾಗಿ ಪೇಟಿಕೋಟಗಳನ್ನು ಫಾಲೋ ಮಾಡಿ ಜೀವನಪೂರ್ತಿ ಕಷ್ಟಪಟ್ಟು ಸಂಪಾದಿಸಿದ ಒಳ್ಳೆ ಹೆಸರನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬೇಡಿ, ಮುಂದೆ ನಿಮ್ಮದು ಒಂದು ಸಿಡಿ ರೀಲಿಸ ಆಗೋ ತರ ಮಾಡಿಕೊಳ್ಳಬೇಡಿ. ಓಕೆ ನಿಮ್ಮ ಲೈಫ ನಿಮ್ಮಿಷ್ಟ. ಯಾವಾಗಲೂ ಹ್ಯಾಪಿ & ಸಕ್ಸೆಸಫುಲ್ಲಾಗಿರಬೇಕೆಂದರೆ ಈ ನಾಲ್ಕು ಕೋಟಗಳಿಂದ ದೂರವಿರಿ, ಮೊಸ್ಟ ಇಂಪಾರಟಂಟ್ಲಿ ಪೇಟಿಕೋಟನಿಂದ ದೂರವಿರಿ. ಆಲ ದ ಬೆಸ್ಟ & ಥ್ಯಾಂಕ್ಸ ಯು....
