ಹಾಯ್ ಫ್ರೆಂಡ್ಸ್, ಇವತ್ತಿನ ಅಂಕಣದಲ್ಲಿ "ಬೆಸ್ಟ ಪೇರೆಂಟಿಂಗ ಟಿಪ್ಸಗಳ" ಬಗ್ಗೆ ಡಿಸ್ಕಸ ಮಾಡುವೆ. "ನಮಗೆ ಮಕ್ಕಳ ಮಾಡೋದು ಗೊತ್ತು, ಬೆಳೆಸೋದು ಗೊತ್ತು, ನೀ ನಿನ್ನ ಕೆಲಸ ಮಾಡು" ಅಂತಾ ನೀವ ಬೈಯ್ಯಬಹುದು, ನೋ ಪ್ರಾಬ್ಲಮ. ಮಕ್ಕಳನ್ನು ಹೆತ್ತು ಬಿಟ್ಟರೆ ಜವಾಬ್ದಾರಿ ಮುಗೀತು ಅಂತಲ್ಲ. ಮಕ್ಕಳನ್ನು ಸರಿಯಾಗಿ ಪೋಷಿಸಿ ಅವರಿಗೆ ಸಂಸ್ಕಾರ ಕೊಟ್ಟು ಸರಿಯಾಗಿ ಬೆಳೆಸಿ ಅವರನ್ನು ಸತ್ಪ್ರಜೆಯಾಗಿಸುವುದು ಪ್ರತಿ ಪಾಲಕರ ಕರ್ತವ್ಯವಾಗಿದೆ. ಮಕ್ಕಳನ್ನು ಸಾಕುವುದಕ್ಕೂ, ಪೋಷಣೆ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾಯಿಗಳು ಮಕ್ಕಳನ್ನು ಸಾಕುತ್ತವೆ, ಸಿಂಹಗಳು ಮಕ್ಕಳನ್ನು ಪೋಷಣೆ ಮಾಡುತ್ತವೆ. ಸೋ ನಿಮ್ಮ ಮಕ್ಕಳನ್ನು ಸಿಂಹಗಳಂತೆ ಪೋಷಣೆ ಮಾಡಿ. ಅದಕ್ಕಾಗಿ ಕೆಲವೊಂದಿಷ್ಟು ಪೇರೆಂಟಿಂಗ ಟಿಪ್ಸಗಳು ಇಂತಿವೆ ;

1) Let them Try and Learn. ನಿಮ್ಮ ಮಕ್ಕಳನ್ನು ಕಟ್ಟಿ ಹಾಕಬೇಡಿ. ಎಲ್ಲದಕ್ಕೂ ನಿಮ್ಮನ್ನೇ ಕೇಳುವಂತೆ ಮಾಡಬೇಡಿ. ಅವರಿಗೆ ಟ್ರಾಯ ಮಾಡುವ ಅವಕಾಶ ಕೊಡಿ. ಮಿಸ್ಟೇಕ ಮಾಡಿ ಕಲಿಯುವ ಚಾನ್ಸ ಕೊಡಿ. ಅವರಿಗೆ ಎಲ್ಲವನ್ನೂ ರೆಡಿಮೇಡಾಗಿ ಕೊಡಬೇಡಿ, ಅವರಿಗೂ ಎಫರ್ಟ ಹಾಕುವುದನ್ನ ಕಲಿಸಿ. ನಿಮ್ಮ ಮಕ್ಕಳಿಗೆ ಸ್ವಲ್ಪ ಸ್ಟ್ರಗಲ ಮಾಡಿಸಿ. ಅಂದಾಗಲೇ ಅವರು ಇಂಡಿಪೆಂಡೆಂಟ್ ಆಗುತ್ತಾರೆ. ಇಲ್ಲವಾದರೆ ಪಪ್ಪು ಆಗುತ್ತಾರೆ. ಅದಕ್ಕೆ ನಿಮ್ಮ ಮಕ್ಕಳಿಗೆ ಎಲ್ಲವನ್ನೂ ಟ್ರಾಯ ಮಾಡಿ ಕಲಿತುಕೊಳ್ಳುವ ಚಾನ್ಸ ಕೊಡಿ.

2) Give them Financial knowledge. ನಿಮ್ಮ ಮಕ್ಕಳಿಗೆ ಫೈನಾನ್ಸಿಯಲ್ ನಾಲೇಜನ್ನು ಕೊಡಿ. ಹಣ ಹೇಗೆ ಹುಟ್ಟುತ್ತದೆ? ಹಣದ ಮಹತ್ವವೇನು? ಹಣದ ಸೆಕ್ರೆಟ್ಸ ಏನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿ ಕೊಡಿ. ರೀಚ್ ಡ್ಯಾಡ ಪೂವರ ಡ್ಯಾಡಗಳಂಥ ಮನಿ ಮೇಕಿಂಗ ಬುಕ್ಸಗಳನ್ನು ಓದಲು ಕೊಡಿ. ನಿಮ್ಮ ಮಕ್ಕಳಿಗೆ ಪ್ರ್ಯಾಕ್ಟಿಕಲ್ಲಾಗಿ ಫೈನಾನ್ಸಿಯಲ್ ನಾಲೇಜ ಕೊಡಿ. ಮಾರ್ಕೆಟಗೆ ಹೋದಾಗ ಮಕ್ಕಳ ಕೈಗೆ ಹಣ ಕೊಟ್ಟು ಬಾರಗೇನ ಮಾಡುವುದನ್ನ ಕಲಿಸಿ, ಬಸ್ಸಲ್ಲಿ ಟ್ರಾವೆಲ ಮಾಡುವಾಗ ಅವರ ಕಡೆಯಿಂದ ಟಿಕೆಟ ತೆಗೆಸಿ. ಇದರಿಂದ ಅವರಿಗೆ ಫೈನಾನ್ಸಿಯಲ್ ನಾಲೇಜ ಸಿಗುತ್ತದೆ, ಜೊತೆಗೆ ಅವರ ಕಾನ್ಫಿಡೆನ್ಸ್ ಕೂಡ ಹೆಚ್ಚಾಗುತ್ತದೆ.

3) Don't try to fulfill your dreams through your kids. Let them fly for their dreams. ನಿಮ್ಮ ಮಕ್ಕಳ ಮೂಲಕ ನಿಮ್ಮ ಕನಸುಗಳನ್ನು ನನಸಾಗಿಸಲು ಟ್ರಾಯ ಮಾಡಬೇಡಿ. ನಿಮಗೆ IAS ಆಗಲು ಆಗಲಿಲ್ಲ ಅಂತೇಳಿ ನಿಮ್ಮ ಮಕ್ಕಳನ್ನು IAS ಮಾಡಲು ಹೋಗಿ ಅವರ ಕನಸುಗಳ ಕೊಲೆ ಮಾಡಬೇಡಿ. ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಕಲೆಯನ್ನು ಕನಸುಗಳನ್ನು ಕೊಲೆ ಮಾಡಬೇಡಿ. ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ, ನಿಮ್ಮ ಮಕ್ಕಳಿಗೂ ಜವಾಬ್ದಾರಿಗಳ ಮಹತ್ವ ತಿಳಿಸಿ.

4) Don't compare your kids with others. Boost their self confidence. ನಿಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಕಂಪೇರ ಮಾಡಬೇಡಿ. ಇದರಿಂದ ಅವರ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ. ಸಿಲ್ಲಿ ಮಾರ್ಕ್ಸಗಳಿಗೋಸ್ಕರ ನಿಮ್ಮ ಮಕ್ಕಳನ್ನು ಯಾರಯಾರಗೋ ಕಂಪೇರ್ ಮಾಡಿ ಅವರ ಕನಸುಗಳನ್ನು ಕೊಲೆ ಮಾಡಬೇಡಿ. ನಿಮ್ಮ ಮಕ್ಕಳು ನಿಮ್ಮನ್ನು ಬೇರೆ ಪೇರೆಂಟ್ಸಗಳೊಂದಿಗೆ ಕಂಪೇರ್ ಮಾಡಿದರೆ ಹೇಗಾಗುತ್ತೆ? ಬೇರೆಯವರ ಪೇರೆಂಟ್ಸ ಕೋಟ್ಯಾಧಿಪತಿ ಆಗಿದ್ದಾರೆ ನೀವೇನು ಮಾಡಿದ್ದೀರಿ? ಅಂದ್ರೆ ನಿಮಗೆ ಹೇಗಾಗುತ್ತದೆ? ಸೋ ನಿಮ್ಮ ಮಕ್ಕಳನ್ನು ಫಸ್ಟ ಬೆಂಚ್ ಗೂಬೆಗಳೊಂದಿಗೆ ಕಂಪೇರ್ ಮಾಡಬೇಡಿ. ಪ್ರತಿ ಮಗುವಿನಲ್ಲಿ ಒಂದು ಸ್ಪೆಷಲ್ ಟ್ಯಾಲೆಂಟ್ ಇರುತ್ತದೆ. ನಿಮ್ಮ ಮಗುವಿನಲ್ಲಿ ಯಾವ ಟ್ಯಾಲೆಂಟ್ ಇದೆ ಅಂತಾ ಪತ್ತೆ ಹಚ್ಚಿ ಮತ್ತು ಅದಕ್ಕೆ ಫುಲ್ ಸಪೋರ್ಟ್ ಮಾಡಿ. ನಿಮ್ಮ ಮಕ್ಕಳನ್ನು ಆರ್ಡಿನರಿ ಜಾಬಗೆ ತಯಾರಿ ಮಾಡಿಸಬೇಡಿ, ಬೇರೆಯವರಿಗೆ ಜಾಬ್ ಕೊಡೋ ಲೆವಲಗೆ ಬೆಳೆಸಲು ಟ್ರಾಯ ಮಾಡಿ.

5) Teach your kids Honesty & Morals. ನಿಮ್ಮ ಮಕ್ಕಳಿಗೆ ಪ್ರಾಮಾಣಿಕತೆ ಹಾಗೂ ಮಾರಲ್ಸಗಳನ್ನ ಕಲಿಸಿರಿ. ನಿಮ್ಮ ಮಕ್ಕಳಿಗೆ ಬೈಕ ಕೊಡಿಸುವುದಕ್ಕಿಂತ ಮುಂಚೆ ಹೇಗೆ ಬೀಹೇವ ಮಾಡಬೇಕು ಅಂತಾ ಕಲಿಸಿ. ಕಾರ ಕೊಡಿಸುವುದಕ್ಕಿಂತ ಮುಂಚೆ ಸಂಸ್ಕಾರಗಳನ್ನು ಕೊಡಿ. ಇಲ್ಲವಾದರೆ ಅವರ ಅಂತ್ಯಸಂಸ್ಕಾರಕ್ಕೆ ಬಾಡಿ ಕೂಡ ಸಿಗುವುದು ಕಠಿಣವಾಗುತ್ತದೆ. ನಿಮ್ಮ ಮಕ್ಕಳನ್ನು ರಿಯಲ್ ಹೀರೋಗಳನ್ನಾಗಿ ಮಾಡಿ. ಸಮಾಜದಲ್ಲಿ ಅವರಿಗೆ ಗೌರವ ಘನತೆ ಸಾಕಷ್ಟು ಹಣ ಆಸ್ತಿ ಅಂತಸ್ತು ಸಿಗುವಂತೆ ಬೆಳೆಸಿ.

6) ನಿಮ್ಮ ಮಕ್ಕಳೊಂದಿಗೆ ಬೆಸ್ಟ ಫ್ರೆಂಡ್ಸಾಗಿರಿ. ಅವರಿಗೆ ಕ್ವಾಲಿಟಿ ಟೈಮ & ಅಟೆನಷನ ಕೊಡಿ. ನೀವು ಮೊದಲು ಸರಿಯಾಗಿರಿ. ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ನೀವು ರೋಲ ಮಾಡೆಲ ಆಗಿ, ನಿಮ್ಮ ಮಕ್ಕಳು ತಾನಾಗಿಯೇ ಐಡಿಯಲ್ ಆಗುತ್ತಾರೆ. ಹೇಳುವುದಕ್ಕಿಂತ ಮಾಡಿ ತೋರಿಸಿ. ನಿಮ್ಮ ಮಕ್ಕಳಿಗೆ ಬೆಸ್ಟ್ ಫ್ರೆಂಡ್ಸಾಗಿರಿ. ಅವರು ನಿಮ್ಮೊಂದಿಗೆ ಅವರ ಕ್ಲಾಸ ಕ್ರಷ್ ಬಗ್ಗೆ ಮಾತಾಡೋವಷ್ಟು ಕ್ಲೋಜ ಆಗಿ. ಅವರ ಲವ್ ಮ್ಯಾಟರ ಊರಿಗಿಂತ ಮುಂಚೆ ನಿಮಗೆ ಮೊದಲು ಗೊತ್ತಾಗುವಷ್ಟು ಕ್ಲೋಜ ಆಗಿ. ಭಯದಿಂದ ಬೆಳೆಸಬೇಡಿ. ಪ್ರೀತಿಯ ಬಂಧನದಿಂದ ಬೆಳೆಸಿ.

ಓಕೆ ಗೆಳೆಯರೇ, ಫೈನ ಇವೀಷ್ಟು ನನ್ನ ಪ್ರಕಾರ ಬೆಸ್ಟ ಪೇರೆಂಟಿಂಗ ಟಿಪ್ಸಗಳಾಗಿವೆ. ಇಷ್ಟ ಆದ್ರೆ ಫಾಲೋ ಮಾಡಿ ಕಷ್ಟ ಆದ್ರೆ ನೆಗ್ಲೆಕ್ಟ ಮಾಡಿ. ಆಲ್ ದ ಬೆಸ್ಟ....
