
ಹಾಯ್ ಗೆಳೆಯರೇ, ಹಣ ಗಳಿಸುವುದು ಎಷ್ಟು ಮುಖ್ಯವೋ ಗಳಿಸಿದ ಹಣವನ್ನು ಉಳಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಖರ್ಚಿನ ಮೇಲೆ ಕಂಟ್ರೋಲ ಇರದಿದ್ರೆ ಕೋಟಿ ಗಳಿಸಿದರೂ ಕೂಡ ಸಾಕಾಗಲ್ಲ. ಸೋ ಹಣವನ್ನು ಸೇವಿಂಗ ಮಾಡುವುದು ಬಹಳಷ್ಟು ಇಂಪಾರಟಂಟಾಗುತ್ತದೆ. ಹಣವನ್ನು ಸೇವ ಮಾಡಲು 7 ಬೆಸ್ಟ ಟಿಪ್ಸಗಳು ಇಂತಿವೆ ;

1) ನಿಮ್ಮ ನೀಡ್ಸ ಮತ್ತು ವಾಂಟ್ಸಗಳ ಮಧ್ಯೆ ಕ್ಲಿಯರ್ ಕಟ ಡಿಫರೆನ್ಸಿಯೆಷನನ್ನು ಮಾಡಿ. ಅಂದರೆ ನಿಮ್ಮ ಅವಶ್ಯಕತೆಗಳು ಮತ್ತು ಬೇಡಿಕೆಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಯಾವ ವಸ್ತುಗಳು ನಿಮಗೆ ಅತ್ಯವಶ್ಯಕವಾಗಿವೆಯೋ ಅವುಗಳನ್ನಷ್ಟೇ ಖರೀದಿಸಿ. ಅದನ್ನ ಬಿಟ್ಟು ಪಕ್ಕದ ಮನೆಯವರ ಸ್ನೇಹಿತರ ಸಂಬಂಧಿಕರ ಹೊಟ್ಟೆ ಉರಿಸುವುದಕ್ಕಾಗಿ ಶೋಕಿ ಮಾಡಬೇಡಿ. ಅನಾವಶ್ಯಕ ಐಷಾರಾಮಿ ವಸ್ತುಗಳನ್ನು ತರಬೇಡಿ.

2) ಸಾಧ್ಯವಾದಷ್ಟು ಕಮ್ಮಿ ಸಾಲ ಮಾಡಿ. ಅವಶ್ಯಕತೆ ಇರದಿದ್ರೆ ಸಾಲ ಮಾಡಲೇಬೇಡಿ. ಏನಾದರೂ ಎಮರ್ಜೆನ್ಸಿ ಇದ್ರೆ ಮಾತ್ರ ಸಾಲ ಮಾಡಿ. ಶೋಕಿ ಮಾಡಲು ಸಾಲ ಮಾಡಬೇಡಿ.

3) ಸ್ವಲ್ಪ ನಿಮ್ಮ ನಾಲೇಜನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸ್ಕೀಲಗಳನ್ನು ಇಂಪ್ರೂವ ಮಾಡಿಕೊಳ್ಳಿ. ಮನೆಗೆಲಸದವರ ಮೇಲೆ, ಫೂಡ ಡೆಲಿವರಿ ಆ್ಯಪಗಳ ಮೇಲೆ, ನೆಟಫ್ಲಿಕ್ಸ ಅಮೆಜಾನ ಪ್ರೈಮಗಳ ಮೇಲೆ ಅನಾವಶ್ಯಕವಾಗಿ ಹಣ ಸುರಿಯಬೇಡಿ. ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ. ಆಗ ಸಾಕಷ್ಟು ಹಣ ಸೇವ ಆಗುತ್ತದೆ.

4) ಖರ್ಚಿನ ಮೇಲೆ ನಿಗಾ ಇಡಿ. ಟ್ರ್ಯಾಕ್ ರೆಕಾರ್ಡ್ ಇಡಿ. ಒಂದೊಂದು ರುಪಾಯಿಗೂ ಲೆಕ್ಕ ಇಡಿ. ಖರ್ಚು ಮಾಡಿದ ನಂತರ ಅದನ್ನ ಬರೆದಿಡಿ. ಇದರಿಂದ ನಿಮಗೆ ಎಲ್ಲಿ ನಿಮ್ಮ ಹಣ ಅನಾವಶ್ಯಕವಾಗಿ ವೇಸ್ಟಾಗುತ್ತಿದೆ ಎಂಬುದು ಗೊತ್ತಾಗುತ್ತದೆ.

5) ನಿಮ್ಮ ಬ್ಯಾಡ ಹೆಲ್ತನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳೋ ಚಾನ್ಸ ಇರುತ್ತದೆ. ಸೋ ಹೆಲ್ತಿನ ಕಡೆಗೆ ಹೆಚ್ಚಿನ ಗಮನ ಹರಿಸಿ. ರೋಗ ಬರುವುದಕ್ಕಿಂತ ಮುಂಚೆಯೇ ಯೋಗ ಮಾಡಿ. ಯಾವಾಗಲೂ ಫಿಟ & ಹೆಲ್ದಿಯಾಗಿರಿ.

6) ಬೇರೆಯವರು ಕಷ್ಟದಲ್ಲಿರುವಾಗ ನೀವು ಅವರಿಗೆ ಫ್ರಿಯಾಗಿ ಹೆಲ್ಪ ಮಾಡಿ. ಅವರ ಕೆಲಸದಲ್ಲಿ ಕೈಜೋಡಿಸಿ. ಮುಂದೆ ನಿಮಗೆ ಕಷ್ಟ ಬಂದಾಗ ಅವರು ಹೆಲ್ಪ ಮಾಡ್ತಾರೆ. ಇದರಿಂದ ಇಬ್ಬರ ಹಣ ಕೂಡ ಉಳಿಯುತ್ತದೆ.

7) Win Win ಡೀಲಗಳನ್ನ ಮಾಡಿಕೊಳ್ಳಿ. ಎಲ್ಲರೊಂದಿಗೆ ಒಳ್ಳೇ ಫ್ರೆಂಡಶೀಪಗಳನ್ನ ಮಾಡಿ. ನೀವು ಅವರ ಕೆಲಸಗಳನ್ನು ಫ್ರಿಯಾಗಿ ಮಾಡಿಕೊಡಿ, ಅವರು ನಿಮ್ಮ ಕೆಲಸಗಳನ್ನು ಫ್ರಿಯಾಗಿ ಮಾಡಿಕೊಡ್ತಾರೆ.
ಉದಾಹರಣೆಗೆ : ನನ್ನ ಫ್ರೆಂಡ್ಸ ಸರ್ಕಲನಲ್ಲಿ ಒಬ್ಬ ಮೆಕ್ಯಾನಿಕನಿಂದ ಹಿಡಿದು IAS ಆಫೀಸರ ತನಕ ಅಷ್ಟೇ ಅಲ್ಲ ಪೋಲಿಟಿಷಿಯನ ಫ್ರೆಂಡ್ಸಗಳು ಇದಾರೆ. ಡಾಕ್ಟರ, ಇಂಜಿನಿಯರ, ಸಿಎ, ಅಡ್ವೊಕೇಟ, ಬಿಜನೆಸಮ್ಯಾನ, ಸ್ಪೋರ್ಟ್ಸ್ ಪರ್ಸನ್ಸ , ರಿಯಲ್ ಎಸ್ಟೇಟ ಏಜೆಂಟ್ಸ, ಎಲ್ರೂ ಇದಾರೆ. ಅವರು ನನಗೆ ಎಲ್ಲ ಕೆಲಸಗಳನ್ನು ಫ್ರಿಯಾಗಿ ಮಾಡಿ ಕೊಡ್ತಾರೆ. ಅದರ ಬದಲಾಗಿ ನಾನು ಅವರ ಕೆಲಸಗಳನ್ನು ಮಾಡಿ ಕೊಡ್ತಿನಿ. ಅವರ ಬಿಜನೆಸ್ಸನ್ನು ನಾನೇ ನನ್ನ ಬಿಜನೆಸ ಎಂಬಂತೆ ಅಡ್ವಟೈಜ ಮಾಡ್ತಿನಿ, ಪ್ರೊಮೊಟ ಮಾಡ್ತಿನಿ. ಹೀಗಾಗಿ ನನ್ನ ಹಣ ಸಿಕ್ಕಾಪಟ್ಟೆ ಸೇವಾಗುತ್ತದೆ. ಜೊತೆಗೆ ನನ್ನತ್ರ ಹೈಯ್ಲಿ ಸಕ್ಸೆಸಫುಲ ದೊಡ್ಡ ಫ್ರೆಂಡ್ಸ್ ಗ್ಯಾಂಗ ಇದೆ ಅಂತಾ ಶತ್ರುಗಳು ಸಮೀಪಕ್ಕೆ ಬರಲ್ಲ. ನೀವು ಈ ರೀತಿ Win Win ಡೀಲ ಮಾಡಿ, ದೊಡ್ಡ ಫ್ರೆಂಡ್ಸ್ ನೆಟವರ್ಕ್ ಬೆಳೆಸಿ.

ಇವೀಷ್ಟು ಟಿಪ್ಸಗಳು ಹಣ ಸೇವ ಮಾಡಲು ಬೆಸ್ಟಾಗಿವೆ. ಇವುಗಳನ್ನು ಫಾಲೋ ಮಾಡಿ ಮತ್ತು ಸಿಕ್ಕಾಪಟ್ಟೆ ಹಣ ಸೇವ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಮೆಂಟ ಮಾಡಿ. ಜೊತೆಗೆ ನನ್ನ ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮ ಪೇಜನ್ನು ಫಾಲೋ ಮಾಡಿ.
