ಹಾಯ್ ಗೆಳೆಯರೇ, ಹಣವನ್ನು ಇನ್ವೇಸ್ಟ ಮಾಡೋದು, ಟ್ರೇಡಿಂಗ್ ಮಾಡೋದು ಒಂದು ಟ್ಯಾಲೆಂಟ ಆಗಿದೆ. ಬಟ ನಮ್ಮ ಯುವಕರು ಹುಡುಗಿಯರನ್ನ ಪಟಾಯಿಸಲು ವೇಸ್ಟ ಮಾಡುವ ಹಣವನ್ನು ಶೇರ್ ಮಾರ್ಕೆಟನಲ್ಲಿ ಇನ್ವೆಸ್ಟ ಮಾಡಿದ್ರೆ ಖಂಡಿತ ಕೋಟ್ಯಾಧಿಪತಿಯಾಗುತ್ತಾರೆ. ಆದರೆ ಅವರಿಗೆ ಅಷ್ಟೊಂದು ಬುದ್ಧಿಯಿಲ್ಲ. ಅವರು ಏನಾದರೂ ಮಾಡ್ಕೊಂಡು ಹೋಗಲಿ ಬಿಡಿ. ನೀವಾದರೂ ಟ್ರೇಡಿಂಗನ್ನು ಕಲಿಯಿರಿ, ಸಿಕ್ಕಾಪಟ್ಟೆ ಹಣ ಗಳಿಸಿ ಲೈಫಲ್ಲಿ ಹ್ಯಾಪಿಯಾಗಿರಿ. ಬೆಸ್ಟ ಟ್ರೇಡಿಂಗ್ ಟಿಪ್ಸಗಳು ಇಂತಿವೆ ;
1) ಮೊದಲು ಶೇರ್ ಮಾರ್ಕೆಟ ಯಾವ ರೀತಿ ವರ್ಕಾಗುತ್ತದೆ ಎಂಬುದನ್ನ ತಿಳಿದುಕೊಳ್ಳಿ. ಶೇರ್ ಮಾರ್ಕೆಟನ ಬಗ್ಗೆ ಕಂಪ್ಲೀಟ ನಾಲೇಜನ್ನು ಗೇನ ಮಾಡಿ. ಶೇರ್ ಮಾರ್ಕೆಟನ ಸರಿಯಾದ ನಾಲೇಜ ಇಲ್ಲದೆ ಟ್ರೇಡಿಂಗ್ ಮಾಡಬೇಡಿ. ಯಾರದೋ ಮಾತು ಕೇಳಿ ಯಾವುದ್ಯಾವುದೋ ಶೇರಗಳಲ್ಲಿ ಹಣ ಹಾಕಿ ಮಣ್ಣು ತಿನ್ನಬೇಡಿ. ನಿಮಗೆ ಗೊತ್ತಿಲ್ಲದ ಬಿಜನೆಸ್ಸಲ್ಲಿ ಹಣ ಹಾಕೋದು ಸೇಫಲ್ಲ. ಸೋ ಮೊದಲು ಶೇರ್ ಮಾರ್ಕೆಟನ್ನು ಅರ್ಥ ಮಾಡಿಕೊಳ್ಳಿ, ಆನಂತರ ಟ್ರೇಡಿಂಗ್ ಸ್ಟಾರ್ಟ ಮಾಡಿ.
2) ನಿಮ್ಮದೇ ಆದ ಒಂದು ಇನ್ವೆಸ್ಟಮೆಂಟ ಸ್ಟ್ರ್ಯಾಟರ್ಜಿ ರೆಡಿ ಮಾಡಿಕೊಳ್ಳಿ. ನೀವು ಎಷ್ಟು ವರ್ಷದಲ್ಲಿ ಎಷ್ಟು ಗಳಿಸಬೇಕು ಎಂಬುದರ ಬೇಸ ಮೇಲೆ ಸ್ಟ್ರ್ಯಾಟರ್ಜಿ ರೆಡಿ ಮಾಡಿ. ಇದರ ಬೇಸ ಮೇಲೆ ಯಾವ ಶೇರಗಳಲ್ಲಿ ಹಣ ಹಾಕಬೇಕು ಎಂಬುದನ್ನು ಡಿಸೈಡ ಮಾಡಿ. ರೈಟ ಬ್ರೋಕರನ್ನು ಮತ್ತು ರೈಟ ಶೇರನ್ನು ಸೆಲೆಕ್ಟ ಮಾಡಿಕೊಳ್ಳಿ.
3) ಸ್ಟಾರ್ಟಿಂಗಲ್ಲಿ ಸಣ್ಣಪುಟ್ಟ ಇನ್ವೆಸ್ಟಮೆಂಟಗಳನ್ನ ಮಾಡಿ ನಾಲೇಜ ಹಾಗೂ ಎಕ್ಸಪೀರಿಯನ್ಸನ್ನ ಗೇನ ಮಾಡಿ. ಅದನ್ನ ಬಿಟ್ಟು ಸ್ಟಾರ್ಟಿಂಗಲ್ಲಿ ದೊಡ್ಡ ರಿಸ್ಕ ತೆಗೆದುಕೊಳ್ಳಬೇಡಿ. ನಡೆಯಲು ಬರದ ಟೈಮಲ್ಲಿ ಓಡಲು ಹೋಗಿ ಮುಖದ ಮೇಲೆ ಬೀಳಬೇಡಿ. ಸ್ಮಾಲ ಅಮೌಂಟದೊಂದಿಗೆ ಸ್ಮಾಲ ಸ್ಟೆಪ್ ಇಡುತ್ತಾ ದೊಡ್ಡ ಸಕ್ಸೆಸನ ತನಕ ರೀಚ ಆಗಿ.
4) ಮಾರ್ಕೆಟನಲ್ಲಿ ಎಲ್ಲರೂ ಗ್ರಿಡಿಯಾದಾಗ ನೀವು ಸೈಲೆಂಟಾಗಿರಿ. ನ್ಯೂಸ ನೋಡಿ ಬಕ್ರಾ ಆಗಬೇಡಿ. ಹೈಫ ನ್ಯೂಸಗಳೆಲ್ಲ ಆಲಮೊಸ್ಟ ಫೇಕ ಆಗಿರುತ್ತವೆ. ಸೋ ಎಲ್ಲರೂ ಗ್ರಿಡಿಯಾದಾಗ ನೀವು ಸುಮ್ಮನಿರಿ. ಎಲ್ಲರೂ ಹೆದರಿ ಸುಮ್ಮನಿದ್ದಾಗ ನೀವು ಗ್ರಿಡಿಯಾಗಿ. ಒಳ್ಳೆ ಕಂಪನಿಗಳ ಶೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಆನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜಾಸ್ತಿ ಹಣ ಗಳಿಸಿ.
5) ವ್ಯಾಲೂ ಇನ್ವೆಸ್ಟಮೆಂಟ ಮೇಲೆ ಜಾಸ್ತಿ ಫೋಕಸ ಮಾಡಿ. ಶಾರ್ಟಟರ್ಮಗಿಂತ ಲಾಂಗ ಟರ್ಮ ಇನ್ವೆಸ್ಟಮೆಂಟ ಮೇಲೆ ಜಾಸ್ತಿ ಫೋಕಸ ಮಾಡಿ. ಶೇರ್ ಪ್ರೈಜಿಗೂ ಹಾಗೂ ಶೇರ್ ವ್ಯಾಲೂಗೂ ಇರುವ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ವ್ಯಾಲೂ ಇನ್ವೆಸ್ಟಮೆಂಟ ಮಾಡಿ. ಲಾಂಗಟರ್ಮ ಇನ್ವೆಸ್ಟಮೆಂಟ ಮಾಡಿ.
6) ನಿಮ್ಮ ಎಲ್ಲ ಹಣವನ್ನು ಒಂದೇ ಕಂಪನಿಯ ಶೇರುಗಳಲ್ಲಿ ಇನ್ವೆಸ್ಟ ಮಾಡಬೇಡಿ. ಸಪೋಜ ಆ ಕಂಪನಿ ಲಾಸಿಗೆ ಹೋದ್ರೆ ನೀವು ಬೀದಿಗೆ ಬರುತ್ತೀರಿ. ಅದಕ್ಕಾಗಿ ನಿಮ್ಮ ಹಣವನ್ನು ಈಕ್ವಲ ಅಮೌಂಟಲ್ಲಿ ಡಿವೈಡ ಮಾಡಿ, ಆನಂತರ ಬೇರೆ ಬೇರೆ ಸೆಕ್ಟರನ ಬೆಸ್ಟ ಕಂಪನಿಯ ಶೇರುಗಳಲ್ಲಿ ಇನ್ವೆಸ್ಟ ಮಾಡಿ. ಇವುಗಳಲ್ಲಿ ಎಲ್ಲ ಕಂಪನಿಗಳು ಲಾಸಿಗೆ ಹೋದ್ರೂ ಯಾವುದಾದರೂ ಒಂದು ಕಂಪನಿ ಚೆನ್ನಾಗಿ ಪರಫಾರ್ಮ ಮಾಡಿದರೂ ಅಟಲಿಸ್ಟ ನೀವು ಹಾಕಿದ ಹಣವಾದ್ರೂ ನಿಮಗೆ ರಿಟರ್ನ್ ಬರುತ್ತದೆ. ಅದಕ್ಕಾಗಿ ನಿಮ್ಮ ಹಣವನ್ನು ಒಂದೇ ಕಡೆ ಇನ್ವೆಸ್ಟ ಮಾಡಬೇಡಿ.
ಓಕೆ ಗೆಳೆಯರೇ, ಇವೀಷ್ಟು ಟಿಪ್ಸಗಳು ನಿಮಗೆ ಅರ್ಥವಾಗಿವೆ ಅಂತಾ ಅಂದುಕೊಳ್ತಿನಿ. ಈ ಅಂಕಣಕ್ಕೆ ಲೈಕ ಮಾಡಿ, ಏನಾದರೂ ಡೌಟಿದ್ರೆ ಕಮೆಂಟ ಮಾಡಿ. ಕೇರಫುಲ್ಲಾಗಿ ಟ್ರೇಡಿಂಗ ಮಾಡಿ ಲೈಫನ್ನು ಕಲರಫುಲ್ಲಾಗಿ ಎಂಜಾಯ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...