ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ "ಕ್ರೆಡಿಟ್ ಕಾರ್ಡ ಬಳಸೋದು ಒಳ್ಳೆಯದಾ? ಕೆಟ್ಟದಾ?" ಎಂಬ ಟಾಪಿಕನ ಮೇಲೆ ಡಿಸ್ಕಸ ಮಾಡುವೆ. ಕ್ರೆಡಿಟ್ ಕಾರ್ಡ ಒಂದು ಫೈನಾನ್ಸ್ ಟೂಲ ಆಗಿದೆ. ಇದನ್ನು ನಾವು ಹೇಗೆ ಯುಜ ಮಾಡುತ್ತೇವೆ ಎಂಬುದರ ಆಧಾರದ ಮೇಲೆ ಇದು ನಮಗೆ ಲಾಭ ಮಾಡುತ್ತಾ ಅಥವಾ ಲಾಸ ಮಾಡುತ್ತಾ ಎಂಬುದು ಡಿಸೈಡ ಆಗುತ್ತದೆ. ಈಗಾಗಲೇ ಕ್ರೆಡಿಟ್ ಕಾರ್ಡ ಬಗ್ಗೆ ಬಹಳಷ್ಟು ವದಂತಿಗಳಿವೆ. ಅವುಗಳಲ್ಲಿ ಬಹಳಷ್ಟು ನಿಜ ಕೂಡ ಆಗಿವೆ. ಕ್ರೆಡಿಟ್ ಕಾರ್ಡ ಒಂದು ಲೋನ ಕಾರ್ಡ ಆಗಿದೆ. ಯೆಸ್ ಕ್ರೆಡಿಟ್ ಕಾರ್ಡ ಒಂದು ಲೋನ ಕಾರ್ಡ ಆಗಿದೆ. ಸೋ ಇದನ್ನು ಅವಶ್ಯಕತೆ ಇದ್ದರೆ ಮಾತ್ರ ಬಳಸೋದು ಬೆಟರ ಆಗಿದೆ. ಅದನ್ನ ಬಿಟ್ಟು ನೀವು ಶೋಕಿಗಾಗಿ ಇದನ್ನ ಬಳಸಿ ಸಾಲ ಮಾಡಿಕೊಂಡರೆ ಬಡ್ಡಿ ಕಟ್ಟಿ ಸಾಯುತ್ತೀರಿ. ನಾನು ನಿಮಗೆ ಕ್ರೆಡಿಟ್ ಕಾರ್ಡನ ಲಾಭ ಮತ್ತು ಹಾನಿ ಎರಡನ್ನೂ ಹೇಳುವೆ. ಆಗ ನಿಮಗೆ ಇದನ್ನ ಬಳಸಬೇಕಾ ಅಥವಾ ಬೇಡ್ವಾ ಎಂಬುದು ಕ್ಲಿಯರ ಆಗುತ್ತದೆ.
ಕ್ರೆಡಿಟ್ ಕಾರ್ಡನ ಲಾಭಗಳು : Advantages of Credit Card
1) ಕ್ರೆಡಿಟ್ ಕಾರ್ಡ್ ನಿಮಗೆ ಎಮರ್ಜೆನ್ಸಿ ಟೈಮಲ್ಲಿ ಒಂಥರಾ ಲೋನ ಕಾರ್ಡ ಆಗಿ ಉಪಯೋಗಕ್ಕೆ ಬರುತ್ತದೆ. ಕ್ರೆಡಿಟ್ ಕಾರ್ಡ ನಿಮಗೆ ಝೀರೋ ಇಂಟರೆಸ್ಟನಲ್ಲಿ ಒಂದು ತಿಂಗಳ ತನಕ ಫ್ರೀ ಲೋನ ಕೊಡುತ್ತದೆ. ನಿಮ್ಮ ಸ್ಯಾಲರಿ ಬರಲು ಲೇಟಾದರೆ ಆ ಟೈಮಲ್ಲಿ ನೀವು ಕ್ರೆಡಿಟ್ ಕಾರ್ಡ ಯುಜ ಮಾಡಿ ನಿಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಿ ಆನಂತರ ಸ್ಯಾಲರಿ ಬಂದಾಗ ಕ್ರೆಡಿಟ್ ಕಾರ್ಡ ಅಮೌಂಟ ಪೇ ಮಾಡಿದರೆ ಮುಗೀತು. ಕ್ರೆಡಿಟ ಕಾರ್ಡ ನಿಮಗೆ ಎಮರಜೇನ್ಸಿ ಟೈಮಲ್ಲಿ ತುಂಬಾನೆ ಪ್ರಯೋಜನಕ್ಕೆ ಬರುತ್ತದೆ. ನಿಮ್ಮತ್ರ ಹಣವಿಲ್ಲದಿದ್ದರೂ ಕ್ರೆಡಿಟ್ ಕಾರ್ಡ ಮೂಲಕ ನೀವು ಎಮರ್ಜೆನ್ಸಿ ಅವಶ್ಯಕತೆಗಳನ್ನು ನಿಭಾಯಿಸಬಹುದು. ಕ್ರೆಡಿಟ್ ಕಾರ್ಡ ಒಂಥರಾ ಲೋನ ಕಾರ್ಡ ಆಗಿದೆ, ನಿಮಗೆ ಶಾರ್ಟ ಟೈಮಿಗೆ ಝೀರೋ ಇಂಟರೆಸ್ಟನಲ್ಲಿ ಫ್ರಿ ಲೋನ ಸಿಗುತ್ತದೆ. ಆನಂತರ ಹಣ ಪೇ ಮಾಡಲು ನಿಮಗೆ 20 ದಿನ ಗ್ರೇಸ ಪೀರಿಯಡ ಕೂಡ ಸಿಗುತ್ತದೆ. ಟೊಟಲಾಗಿ ನಿಮಗೆ 50 ದಿನಗಳ ತನಕ ಫ್ರೀ ಲೋನ ಸಿಗುತ್ತದೆ.
2) ಡೆಬಿಟ್ ಕಾರ್ಡಗೆ ಕಂಪೇರ ಮಾಡಿದರೆ ಕ್ರೆಡಿಟ್ ಕಾರ್ಡ ಜಾಸ್ತಿ ಕನ್ವಿನೆಂಟಾಗಿದೆ. ಜಾಸ್ತಿ ಯುಜಫುಲ್ಲಾಗಿದೆ. ಜೊತೆಗೆ ಇದು ಅನಅಥರೈಜ್ಡ ಚಾರ್ಜ್ಸಗಳಿಂದ ನಿಮಗೆ ಪ್ರೊಟೆಕ್ಷನ ನೀಡುತ್ತದೆ. ಇಂಟರ್ನ್ಯಾಷನಲ್ ಪೇಮೆಂಟಗಳನ್ನು ಮಾಡುವಾಗ ಕ್ರೆಡಿಟ್ ಕಾರ್ಡ ಬೇಕೇ ಬೇಕಾಗುತ್ತದೆ. ಜಾಸ್ತಿ ಕಡೆ ಡೆಬಿಟ್ ಕಾರ್ಡ ನಡೆಯಲ್ಲ, ಕ್ರೆಡಿಟ್ ಕಾರ್ಡೇ ಬೇಕಾಗುತ್ತದೆ.
3) ಕ್ರೆಡಿಟ್ ಕಾರ್ಡನ್ನು ಯುಜ ಮಾಡುವುದರಿಂದ ಮತ್ತೇ ಅಮೌಂಟನ್ನು ಇನಟೈಮಲ್ಲಿ ಪೇ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಸಿಬಿಲ ಸ್ಕೋರ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಈಜಿಯಾಗಿ ಬ್ಯಾಂಕಲೋನ ಸಿಗುತ್ತದೆ.
4) ನೀವು ಕ್ರೆಡಿಟ್ ಕಾರ್ಡನ್ನು ಯುಜ ಮಾಡಿ ಪೇಮೆಂಟ ಮಾಡಿದಾಗ ಪ್ರತಿ ಸಲವೂ ನಿಮಗೆ ಕ್ರೆಡಿಟ್ ಪಾಯಿಂಟ್ಸ ಸಿಗುತ್ತವೆ. ಈ ಪಾಯಿಂಟ್ಸಗಳು ಒಂಥರಾ ಕ್ಯಾಷ ಇದ್ದಂತೇಯೇ. ಇವುಗಳನ್ನು ಬಳಸಿಕೊಂಡು ನೀವು ಟ್ರಾವೆಲ ಟಿಕೆಟ ಬುಕ ಮಾಡಬಹುದು, ಅಮೆಜಾನ ಗಿಫ್ಟ್ಸ ಕಾರ್ಡ್ಸ ಪರಚೇಸ ಮಾಡಬಹುದು, ದೊಡ್ಡ ದೊಡ್ಡ ಹೊಟೆಲ್ ಹಾಗೂ ರೆಸ್ಟೋರೆಂಟಗಳ ಬಿಲ ಪೇ ಮಾಡಬಹುದು.
ಕ್ರೆಡಿಟ್ ಕಾರ್ಡನ ಹಾನಿಗಳು : Disadvantages of Credit Card
1) ನಾನು ಸ್ಟಾರ್ಟಿಂಗಲ್ಲೇ ಹೇಳಿದಂತೆ ಕ್ರೆಡಿಟ್ ಕಾರ್ಡ ಲೋನ ಕಾರ್ಡ ಆಗಿದೆ. ನಿಮ್ಮತ್ರ ಹಣ ಇಲ್ಲದಿರುವಾಗ ನೀವು ಅನಾವಶ್ಯಕ ಶೋಕಿ ಮಾಡಲು ಇದನ್ನು ಯುಜ ಮಾಡಿದರೆ, ಆನಂತರ ಇನಟೈಮಲ್ಲಿ ಬಿಲ ಪೇ ಮಾಡದಿದ್ದರೆ ನಿಮ್ಮ ಪರಿಸ್ಥಿತಿ ಗಂಭೀರವಾಗುತ್ತದೆ. ನೀವು ಮಾಡಿಕೊಂಡ ಸಾಲವೇ ನಿಮಗೆ ಶೂಲವಾಗುತ್ತದೆ. ನೀವು ಬಡ್ಡಿ ಕಟ್ಟಿ ಸಾಯಬೇಕಾಗುತ್ತದೆ.
2) ನೀವು ಕ್ರೆಡಿಟ್ ಕಾರ್ಡನ್ನು ಸ್ಮಾರ್ಟಾಗಿ ಸರಿಯಾಗಿ ಯುಜ ಮಾಡದಿದ್ದರೆ ಖಂಡಿತವಾಗಿಯೂ ನೀವು ದಿವಾಳಿಯಾಗುತ್ತೀರಿ. ಏಕೆಂದರೆ ನೀವು 20 ದಿನಗಳ ಗ್ರೇಸ ಪೀರಿಯಡನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ ಬಿಲ್ಲನ್ನು ಫುಲ್ಲಿ ಪೇ ಮಾಡದಿದ್ದರೆ ನಿಮಗೆ ಹೆವ್ವಿ ಇಂಟರೆಸ್ಟನ್ನು ಕಟ್ಟಬೇಕಾಗುತ್ತದೆ. ಈ ಇಂಟರೆಸ್ಟ 35% ದಿಂದ 40% ತನಕ ಹೋಗುತ್ತದೆ. ಅದಕ್ಕಾಗಿ ಕ್ರೆಡಿಟ್ ಕಾರ್ಡನ್ನು ಯುಜ ಮಾಡಿದಾಗ ಇನಟೈಮಲ್ಲಿ ಫುಲ ಪೇಮೆಂಟ ಮಾಡಿ, ಮಿನಿಮಮ ಡ್ಯೂಗಳ ಟ್ರ್ಯಾಪಿನೊಳಗೆ ಬಿದ್ದು ಬಡ್ಡಿ ಕಟ್ಟಿ ಸಾಯಬೇಡಿ.
3) ಸಾಲ ಯಾವತ್ತಿದ್ರೂ ಶೂಲವೇ. ಸಾಲ ಒಳ್ಳೆಯದಲ್ಲ. ಅಲ್ಲದೇ ಕ್ರೆಡಿಟ ಕಾರ್ಡನ ಇಂಟರೆಸ್ಟ ಕೂಡ ಜಾಸ್ತಿ ಇರುತ್ತದೆ. ಸೋ ಅವಶ್ಯಕತೆ ಇದ್ರೆ, ಖರ್ಚು ಮಾಡಿದ ಹಣವನ್ನು ಇನಟೈಮಲ್ಲಿ ಪೇ ಮಾಡುವ ಕ್ಯಾಪ್ಯಾಸಿಟಿ ಇದ್ರೆ ಮಾತ್ರ ಕ್ರೆಡಿಟ್ ಕಾರ್ಡನ್ನು ಬಳಸೋದು ಒಳ್ಳೆಯದು. ಅಲ್ಲದೇ ಕ್ರೆಡಿಟ್ ಕಾರ್ಡ ನಿಮಗೆ ಓವರ ಸ್ಪೆಡಿಂಗನ ಕೆಟ್ಟ ಚಟವನ್ನು ಕಲಿಸಿ ನಿಮ್ಮ ಸೇವಿಂಗಗೆ ಕತ್ತರಿ ಹಾಕುತ್ತದೆ.
ಓಕೆ ಗೆಳೆಯರೇ, ಇದೀಷ್ಟು ಕ್ರೆಡಿಟ್ ಕಾರ್ಡನ + & - ಪಾಯಿಂಟ್ಸಗಳು. ನೀವು ಕ್ರೆಡಿಟ್ ಕಾರ್ಡನಿಂದ ಪೇಮೆಂಟ ಮಾಡಿದಾಗ ಸ್ಟೇಟಮೆಂಟ ಯಾವಾಗ ಜನರೇಟ ಆಗುತ್ತೆ ಅಂತಾ ನೋಡಿ ಗ್ರೇಸ ಪೀರಿಯಡನ ಒಳಗಡೆನೇ ಫುಲ ಪೇಮೆಂಟ ಮಾಡಿದರೆ ನೀವು ಯಾವುದೇ ತರಹದ ಬಡ್ಡಿ ಕಟ್ಟಬೇಕಾಗಿಲ್ಲ. ನಿಮಗೆ ಫ್ರೀ ಲೋನ ಸಿಕ್ಕಂತಾಗುತ್ತದೆ. ನೀವು ಈ ರೀತಿ ಸ್ಮಾರ್ಟಾಗಿ ಕ್ರೆಡಿಟ್ ಕಾರ್ಡನ್ನು ಯುಜ ಮಾಡಿದರೆ ಅದು ನಿಮಗೆ ಒಳ್ಳೆಯದಾಗಿದೆ, ವರವಾಗಿದೆ. ಅದನ್ನು ಬಿಟ್ಟು ನೀವು ಶೋಕಿಗಾಗಿ ಕ್ರೆಡಿಟ್ ಕಾರ್ಡ ಯುಜ ಮಾಡಿ ಆನಂತರ ಬಿಲ ಪೇ ಮಾಡಕ್ಕಾಗದೇ ಮಿನಿಮಮ ಡ್ಯೂ ಸೆಲೆಕ್ಟ ಮಾಡಿ EMI ಹಾಗೂ ಬಡ್ಡಿ ಕಟ್ಟಲು ಶುರು ಮಾಡಿದರೆ ಮುಗೀತು ನೀವು ಸತ್ತಂತೆ, ನೀವು ಬಡವರಾಗುತ್ತಾ ಹೋಗುತ್ತೀರಿ. ಈ ಸಂದರ್ಭದಲ್ಲಿ ನಿಮಗೆ ಕ್ರೆಡಿಟ್ ಕಾರ್ಡ ಕೆಟ್ಟದಾಗುತ್ತದೆ, ಶಾಪವಾಗುತ್ತದೆ. ಕ್ರೆಡಿಟ್ ಕಾರ್ಡಂತು ಒಳ್ಳೆಯದಾಗಿದೆ, ಯುಜಫುಲ್ಲಾಗಿದೆ, ಇದನ್ನು ವರ ಮಾಡಿಕೊಳ್ಳುವುದು ಇಲ್ಲ ಶಾಪ ಮಾಡಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ. ಕ್ರೆಡಿಟ್ ಕಾರ್ಡ ಬಗ್ಗೆ ನಿಮಗಿದ್ದ ಡೌಟ ಕ್ಲಿಯರಾಗಿದೆ ಅಂತಾ ಅಂದುಕೊಳ್ಳುವೆ. ಇನ್ನೂ ಏನಾದರೂ ಡೌಟಿದ್ರೆ ಕಮೆಂಟ ಮಾಡಿ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಆಫೀಸಿಯಲ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು...