Hi Friends, ಈ ಜಗತ್ತಿನಲ್ಲಿ 800 ಕೋಟಿ+ ಜನ ಇದಾರೆ. ಆದರೆ ಯಾರು ನಮ್ಮವರಲ್ಲ. ಎಲ್ಲರೂ ನಮ್ಮಿಂದ ಏನ ಸಿಗುತ್ತೋ ಅದನ್ನ ದೋಚಿಕೊಂಡು ದೂರಾಗುತ್ತಾರೆ. ಎಲ್ಲರೂ ಬಿಟ್ಟಿ ಸಲಹೆ ಕೊಡುತ್ತಾರೆ, ಆದರೆ ಸಂಕಷ್ಟದಲ್ಲಿರುವಾಗ ಸಹಾಯ ಮಾಡಲು ಬರಲ್ಲ. ಫ್ರೆಂಡ್ಸಗಳು, ಫ್ಯಾನ್ಸಗಳು ದೊಡ್ಡ ಸುಳ್ಳುಗಳು. ಎಲ್ಲಾ ಬರೀ ಡ್ರಾಮಾ... ಯಾರಾದರೂ ಸೂಸೈಡ ಮಾಡಿಕೊಂಡು ಸತ್ತ ಮೇಲೆ ಜನ ಸಾವಿರ ಮಾತಾಡ್ತಾರೆ, ಆದರೆ ಅವರು ಬದುಕಿರುವಾಗ ಮಾತಾಡಿದ್ರೆ ಇಲ್ಲ ಸಂಕಷ್ಟದಲ್ಲಿರುವಾಗ ಸ್ವಲ್ಪ ಸಾಥ ಕೊಟ್ಟರೆ ಅವರು ಇನ್ನೂ ಸ್ವಲ್ಪ ದಿನ ಬದುಕುತ್ತಾರೆ. ಆದರೆ ಬೇರೆಯವರು ಸುಖವಾಗಿ ಬದುಕಲಿ, ಸಾಕಷ್ಟು ಸಂಪತ್ತಿನೊಂದಿಗೆ ಬೆಳೆಯಲಿ ಅಂತಾ ಯಾರು ಬಯಸಲ್ಲ. ಅದಕ್ಕೆ ಎಲ್ಲರೂ ಬರೀ ಮಾತಾಡ್ತಾರೆ ಬಟ್ ಸಹಾಯ ಮಾಡಲ್ಲ, ಸಾಥ ಕೊಡಲ್ಲ. ಬರೀ ಲಿಪ್ ಸಿಂಪಥಿ ತೊರಿಸ್ತಾರೆ ಅಷ್ಟೇ. ಈ ಸುಳ್ಳು ಜನರ ಗೊಳ್ಳು ಲಿಪ್ ಸಿಂಪಥಿಯನ್ನು ನಿಜವಂತ ನಂಬಿದರೆ ನಿಮ್ಮ ಕಥೆ ಮುಗಿಯುತ್ತದೆ ಅಷ್ಟೇ. ಸೋ ಫ್ರೆಂಡ್ಸ ಯಾರನ್ನೂ ಕೂಡ ನಂಬಬೇಡಿ. ಕಣ್ಮುಚ್ಚಿ ಯಾರನ್ನೂ ನಂಬಬೇಡಿ. ಎಲ್ಲರನ್ನೂ ಹಾಗೂ ಎಲ್ಲವನ್ನೂ ಟೆಸ್ಟ ಮಾಡಿಯೇ ನಿರ್ಧಾರ ತೆಗೆದುಕೊಳ್ಳಿ.
ಭರವಸೆಯಿಲ್ಲದ ಈ ಬದುಕಲ್ಲಿ ಯಾರ ಮೇಲೂ ಭರವಸೆ ಇಡಬೇಡಿ. ಎಲ್ಲರೊಂದಿಗೆ ನಗನಗುತಾ ಮಾತನಾಡಿ, ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳಿ. ಕೊನೆಗೆ ನಿಮ್ಮ ಮನಸ್ಸು ಹೇಳಿದಂತೆ ಮಾಡಿ. ನಾವು ಯಾರನ್ನು ಅತಿಯಾಗಿ ನಂಬುತ್ತೇವೆಯೋ ಅವರೇ ನಮಗೆ ಬೇಗನೆ ಮೋಸ ಮಾಡುತ್ತಾರೆ. ಯಾರಾದರೂ ನಿಮ್ಮ ಬೆನ್ನಿಗೆ ಚೂರಿ ಹಾಕಿದಾಗ ತಿರುಗಿ ನೋಡಬೇಡಿ, ಏಕೆಂದರೆ ನಿಮ್ಮವರೇ ನಿಮಗೆ ಮೋಸ ಮಾಡಿರುತ್ತಾರೆ. ಸೋ ಯಾರನ್ನೂ ಕೂಡ ಕಣ್ಮುಚ್ಚಿ ನಂಬಬೇಡಿ.
ಯಾರಿಗಾದರೂ ಏನಾದರೂ ಕೊಡುವಾಗ ಅವರ ಯೋಗ್ಯತೆಯನ್ನು ಟೆಸ್ಟ ಮಾಡಿ. ಬೇರೆಯವರಿಗೆ ಸ್ನೇಹ ಪ್ರೀತಿ ಸಂಪತ್ತು ಸಹಾಯ ಏನೇ ಕೊಡುವುದಿದ್ದರೂ ಕೊಡುವುದಕ್ಕಿಂತ ಮುಂಚೆ ತೆಗೆದುಕೊಳ್ಳುವವರ ಯೋಗ್ಯತೆಯನ್ನು ಟೆಸ್ಟ ಮಾಡಿ. ಈಗ ಸ್ನೇಹ ಪ್ರೀತಿ ಸಂಬಂಧಗಳೆಲ್ಲ ಕಲೆಬೆರಕೆಯಾಗಿವೆ, ಅನುಕೂಲಕ್ಕೆ ತಕ್ಕಂತೆ ಮಾಡುವ ಪಾರ್ಟಟೈಮ ಜಾಬಗಳಾಗಿವೆ. ಸ್ನೇಹಿತರು ಪಾರ್ಟಿ ಅಂತಾ ದೋಚುತ್ತಾರೆ, ಹುಡುಗಿಯರು ಪ್ರೀತಿ ಅಂತಾ ದೋಚುತ್ತಾರೆ, ಸಂಬಂಧಿಕರು ಸಹಾಯ ಅಂತಾ ದೋಚುತ್ತಾರೆ, ಹೀಗೆ ಈಡೀ ಜಗತ್ತು ನಿಮ್ಮನ್ನು ದೋಚುತ್ತದೆ. ಎಲ್ಲರೂ ನಿಮ್ಮನ್ನು ದೋಚಲು ಕಾಯುತ್ತಿದ್ದಾರೆ. ಎಲ್ಲರೂ ನಿಮ್ಮತ್ರ ಇರುವುದನ್ನೆಲ್ಲ ದೋಚಿಕೊಂಡು ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳಲು ಕಾಯುತ್ತಿದ್ದಾರೆ. ನಿಮ್ಮಿಂದ ಸ್ನೇಹಾ ಪ್ರೀತಿ ಸೌಂದರ್ಯ ಸಂಪತ್ತು ಸೆ**ಕ್ಸ ಸಹಾಯ ಎಲ್ಲವನ್ನೂ ದೋಚಿಕೊಂಡು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಅದಕ್ಕಾಗಿ ಬಹಳಷ್ಟು ಕೇರಫುಲ್ಲಾಗಿರಿ. ಈ ಕಲರಫುಲ್ ಜಗತ್ತಲ್ಲಿ ಎಲ್ಲರಿಗೂ ಎರಡೆರಡು ಮುಖಗಳಿವೆ. ಅದಕ್ಕಾಗಿ ಯಾರನ್ನೂ ಕೂಡ ಅತಿಯಾಗಿ ನಂಬಬೇಡಿ. ನಿಮ್ಮಷ್ಟಕ್ಕೆ ನೀವು ಗ್ರೋ ಆಗಿ, ಊರ ಉಸಾಬರಿ ಮಾಡಿ ಸಾಯಬೇಡಿ. ಯಾರನ್ನು ನಂಬಬೇಡಿ, ನಿಮ್ಮೆಲ್ಲ ಸಂಗತಿಗಳನ್ನು ಸೆಕ್ರೆಟಾಗಿಡಿ, ಸಕ್ಸೆಸಫುಲ್ಲಾಗಿರಿ. ಆಲ ದ ಬೆಸ್ಟ್...