ಶ್ರೀ ಹನುಮಾನ ಚಾಲೀಸಾವನ್ನು ಗೋಸ್ವಾಮಿ ತುಲಸಿದಾಸರು ರಚಿಸಿದ್ದಾರೆ. ಪ್ರತಿದಿನ ಸ್ನಾನವಾದ ನಂತರ ಸ್ವಚ್ಛ ಮನಸ್ಸಿನಿಂದ ಈ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ನಿಮ್ಮೆಲ್ಲ ನೋವು ಸಂಕಟ ರೋಗಗಳು ದೂರಾಗುತ್ತವೆ. ಭೂತ ಪ್ರೇತ ಪಿಶಾಚಿಗಳು ನಿಮ್ಮತ್ರ ಸುಳಿಯುವುದಿಲ್ಲ. ಜೊತೆಗೆ ನಿಮ್ಮ ವಿರೋಧಿಗಳು ಶತ್ರುಗಳು ಸರ್ವನಾಶವಾಗುತ್ತಾರೆ. ಅರ್ಥ ಸಹಿತವಾಗಿ ಹನುಮಾನ ಚಾಲೀಸಾ ಇಂತಿದೆ ;
ಶ್ರೀ ಹನುಮಾನ ಚಾಲೀಸಾ ಅರ್ಥಸಹಿತ : Hanuman Chalisa in Kannada
"ಶ್ರೀ ಗುರು ಚರನ ಸರೋಜ ರಜ ನಿಜ ಮನು ಮುಕುರ ಸುಧಾರಿ |
ಬರನೂ ರಘುಬರ ಬಿಮಲ ಜಸು ಜೋ ದಾಯಕು ಫಲಚಾರಿ ||
(ಶ್ರೀ ಗುರುವಿನ ಪಾದಕಮಲಗಳ ಧೂಳಿನಿಂದ ನನ್ನ ಮನಸ್ಸೆಂಬ ಕನ್ನಡಿಯನ್ನು ಬೆಳಗಿ, ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ನೀಡುವ ಶ್ರೀ ರಘುರಾಮನ ವಿಮಲ ಚರಿತ್ರೆಯನ್ನು ವರ್ಣಿಸುವೆನು)
ಬುದ್ಧಿಹೀನ ತನು ಜಾನಿಕೆ, ಸುಮಿರೌ ಪವನ ಕುಮಾರ |
ಬಲಬುದ್ಧಿ ವಿದ್ಯಾ ದೇಹು ಮೋಹಿ, ಹರಹು ಕಲೆಸ ಬಿಕಾರ ||
(ಪವನಕುಮಾರನೇ ನನ್ನನ್ನು ಬುದ್ಧಿಹೀನನೆಂದು ತಿಳಿದು ನನಗೆ ಬಲ ಬುದ್ಧಿ ವಿದ್ಯೆಗಳನ್ನು ನೀಡಿ ನನ್ನಲ್ಲಿರುವ ದೋಷಗಳನ್ನು ಕಷ್ಟಗಳನ್ನು ಪರಿಹರಿಸು)
ಜಯ ಹನುಮಾನ ಜ್ಞಾನ ಗುಣ ಸಾಗರ |
ಜಯ ಕಪೀಸ ತಿಹುಂ ಲೋಕ ಉಜಾಗರ ||
(ಜ್ಞಾನ ಗುಣಸಾಗರನಾದ ಹನುಮಂತನೇ ನಿನಗೆ ಜಯವಾಗಲಿ, ಮೂರು ಲೋಕಗಳನ್ನು ಜ್ಞಾನದಿಂದ ಬೆಳಗುವ ನಿನಗೆ ಜಯವಾಗಲಿ)
ರಾಮದೂತ ಅತುಲಿತ ಬಲಧಾಮಾ |
ಅಂಜನಿಪುತ್ರ ಪವನ ಸುತ ನಾಮಾ ||
(ರಾಮದೂತನೇ ಅಪರಿಮಿತ ಬಲವುಳ್ಳವನೇ ಅಂಜನಿದೇವಿಯ ಪುತ್ರನೇ ಪವನಸುತನೇ)
ಮಹಾಬೀರ ಬಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೆ ಸಂಗೀ ||
(ಮಹಾವೀರನೇ, ವಿಕ್ರಮನೇ ವಜ್ರಾಂಗನೇ, ನೀನು ದುರ್ಬುದ್ಧಿಯನ್ನು ಹೋಗಲಾಡಿಸಿ ಸುಬುದ್ಧಿಯನ್ನು ಕೊಡುವವನು)
ಕಂಚನ ಬರನ ಬಿರಾಜ ಸುಬೇಸಾ |
ಕಾನನ ಕುಂಡಲ ಕುಂಚಿತ ಕೇಸಾ ||
(ನೀನು ಚಿನ್ನದಂತಹ ಮೈಬಣ್ಣವುಳ್ಳವನು, ನಿನ್ನ ಕಿವಿಯಲ್ಲಿ ಕುಂಡಲಗಳು, ನಿನ್ನದು ಗುಂಗುರು ಕೂದಲು, ಉತ್ತಮ ವೇಷ ಧರಿಸಿ ಶೋಭಿಸುತ್ತಿರುವೆ)
ಹಾಥ ಬಜ್ರ ಔ ಧ್ವಜಾ ಬಿರಾಜೈ |
ಕಾಂಧೇ ಮುಂಜಿ ಜನೇಹೂ ಸಾಜೈ ||
(ನಿನ್ನ ಕೈಯಲ್ಲಿ ವಜ್ರಾಯುಧ ಮತ್ತು ಧ್ವಜವು ರಾರಾಜಿಸುತ್ತಿದೆ. ಹೆಗಲಿಂದ ಕೆಳಗೆ ಮೂಂಜಿ ಹಾಗೂ ಜನಿವಾರಗಳಿವೆ)
ಸಂಕರ ಸುವನ ಕೇಸರಿ ನಂದನ |
ತೇಜ ಪ್ರತಾಪ ಮಹಾ ಜಗ ಬಂಧನ ||
(ನೀನು ರುದ್ರಾಂಶ ಸಂಭೂತ ಹಾಗೂ ವಾನರರಸ ಕೇಸರಿಯ ಮಗನು, ತೇಜೋವಂತನಾಗಿ ಪ್ರತಾಪಿಯಾಗಿ ಇಡೀ ಜಗತ್ತಿನಿಂದ ವಂದ್ಯನು)
ವಿದ್ಯಾವಾನ ಗುನೀ ಅತಿ ಚಾತುರ |
ರಾಮ ಕಾಜ ಕರಿಬೇಕೋ ಆತುರ ||
(ನೀನು ಗುಣವಂತನು, ವಿದ್ಯಾವಂತನು ಅತ್ಯಂತ ಚತುರನು, ರಾಮ ಕಾರ್ಯವನ್ನು ಮಾಡಿ ಮುಗಿಸಲು ಸದಾ ಆತುರ ಪಡುವವನು)
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ |
ರಾಮಲಖನ ಸೀತಾ ಮನ ಬಸಿಯಾ ||
(ಶ್ರೀರಾಮಚಂದ್ರನ ಚರಿತೆಯನ್ನು ಆಲಿಸುವುದರಲ್ಲಿ ನಿನಗೆ ಆನಂದ. ಶ್ರೀರಾಮ, ಲಕ್ಷ್ಮಣ, ಸೀತೆ ನಿನ್ನ ಮನಸ್ಸಿನಲ್ಲಿ ನೆಲಸಿ ಬಿಟ್ಟಿದ್ದಾರೆ)
ಸೂಕ್ಷ್ಮ ರೂಪ ಧರೀ ಸಿಯಹಿಂ ದಿಖಾವಾ |
ಬಿಕಟ ರೂಪ ಧರಿ ಲಂಕ ಜರಾವಾ ||
(ನೀನು ಸೂಕ್ಷ್ಮ ರೂಪ ಧರಿಸಿಕೊಂಡು ಸೀತೆಗೆ ಕಾಣಿಸಿಕೊಂಡೆ ಅದೇ ಭಯಂಕರ ರೂಪವನ್ನು ಧಾರಣ ಮಾಡಿಕೊಂಡು ಲಂಕೆಯನ್ನು ಸುಟ್ಟೆ)
ಭೀಮರೂಪ ಧರಿ ಅಸುರ ಸಂಹಾರೇ |
ರಾಮಚಂದ್ರ ಕೆ ಕಾಜ ಸಂವಾರೆ ||
(ನೀನು ಬೃಹದಾಕಾರ ಧರಿಸಿ ಅಸುರರನ್ನು ಸಂಹರಿಸಿದೆ, ಶ್ರೀರಾಮ ಚಂದ್ರನ ಕಾರ್ಯವನ್ನು ಸಾಂಗಗೊಳಿಸಿದೆ)
ಲಾಯ್ ಸಜೀವನ ಲಖನ ಜಿಯಾಯೇ |
ಶ್ರೀ ರಘುವೀರ ಹರಷಿ ಉರ ಲಾಯೇ ||
(ಸಂಜೀವಿನಿಯನ್ನು ತಂದು ಲಕ್ಷ್ಮಣನನ್ನು ಬದುಕಿಸಿಕೊಂಡೆ. ಶ್ರೀ ರಘುನಾಥನು ಸಂತಸದಿಂದ ನಿನ್ನನ್ನು ಆಲಂಗಿಸಿಕೊಂಡನು)
ರಘುಪತಿ ಕೀನ್ಹೀ ಬಹುತ ಬಡಾಈ |
ತಾಮ ಮಮ ಪ್ರಿಯ ಭರತ ಹಿ ಸಮ ಭಾಈ ||
(ನೀನು ನನ್ನ ಸೋದರ ಭರತನಷ್ಟೇ ನನಗೆ ಪ್ರಿಯನು ಎಂದು ಶ್ರೀ ರಾಮಚಂದ್ರನು ನಿನ್ನನ್ನು ಬಹುವಾಗಿ ಹೊಗಳಿದ್ದಾನೆ)
ಸಹಸ ಬದನ ತುಮ್ಹರೋ ಜಸಗಾವೈಂ
ಅಸ ಕಹಿ ಶ್ರೀಪತಿ ಕಂಠ ಲಗಾವೈಂ
(ಆದಿಶೇಷನು ಸಹಸ್ರ ಮುಖಗಳಿಂದ ನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಾನೆ ಎನ್ನುತ್ತಾ ಶ್ರೀಪತಿಯ ನಿನ್ನನ್ನು ಆಲಂಗಿಸಿಕೊಳ್ಳುತ್ತಾನೆ)
ಸನಕಾದಿಕ ಬ್ರಹ್ಮಾದಿ ಮುನೀಸಾ |
ನಾರದ ಸಾರದ ಸಹಿತ ಅಹೀಸಾ ||
(ಸನಕಾದಿ ಋಷಿವರ್ಯರು, ಬ್ರಹ್ಮಾದಿಗಳು, ನಾರದರು, ಸರಸ್ವತಿಯೂ ಆದಿಶೇಷನು)
ಜಮ ಕುಬೇರ ದಿಗಪಾಲು ಜಹಾಂತೇ |
ಕಬಿ ಕೋಬಿದ ಕಹಿ ಸಕೆ ಕಹಾಂತೇ ||
(ಯಮನು ಕುಬೇರನು ದಿಕ್ಪಾಲರು ಕವಿಕೋವಿದರು ನಿನ್ನ ಮಹಿಮೆಯನ್ನು ಎಷ್ಟೊಂದು ವರ್ಣಸಿಯರು)
ತುಮ ಉಪಕಾರ ಸುಗ್ರೀವಹೀಂ ಕೀನ್ಹಾ |
ರಾಮ ಮಿಲಾಯ್ ರಾಜಪದ ದೀನ್ಹಾ ||
(ನೀನು ಸುಗ್ರೀವನಿಗೆ ಉಪಕಾರವನ್ನು ಮಾಡಿದೆ. ರಾಮನ ಸಖ್ಯ ಮಾಡಿಸಿ ಅವನಿಗೆ ರಾಜ್ಯ ಪದವಿ ಸಿಗುವಂತೆ ಮಾಡಿದೆ)
ತುಮ್ಹರೋ ಮಂತ್ರ ವಿಭೀಷನ ಮಾನಾ |
ಲಂಕೇಶ್ವರ ಭವ ಸಬಜಗ ಜಾನಾ ||
(ನೀನು ಕೊಟ್ಟ ಸಲಹೆಯನ್ನು ವಿಭೀಷಣನು ಪಾಲಿಸಿದನು. ಆದರಿಂದಲೇ ಅವನು ಲಂಕಾಧಿಪತಿಯಾದನೆಂಬುದನ್ನು ಇಡೀ ಜಗತ್ತೇ ಬಲ್ಲದು)
ಜುಗ ಸಹಸ್ರ ಜೋಜನ ಪರ್ ಭಾನು |
ಲೀಲ್ಯೋ ತಾಹಿ ಮಧುರ ಫಲ ಜಾನೂ ||
(ಎರಡು ಸಹಸ್ರ ಯೋಜನ ದೂರವಿದ್ದ ಸೂರ್ಯವನ್ನು ಮಧುರ ಫಲವೆಂದು ತಿಳಿದು ಅವನೆಡೆಗೆ ಹಾರಿದೆ)
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ |
ಜಲಧಿ ಲಾಂಘಿ ಗಯೆ ಆಚರಜ್ ನಾಹೀಂ ||
(ಶ್ರೀರಾಮಚಂದ್ರನಿತ್ತ ಮುದ್ರಿಕೆಯನ್ನು ಬಾಯಲ್ಲಿಟ್ಟು ನೀನು ಸಮುದ್ರದ ಮೇಲೆ ಹಾರುತ್ತಾ ಅದನ್ನು ದಾಟಿದೆ ಅಂದರೆ ಇದರಲ್ಲಿ ಏನೂ ಅಶ್ಚರ್ಯವಿಲ್ಲ)
ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ ||
(ಪ್ರಪಂಚದಲ್ಲಿ ದುರ್ಗಮ ಎನಿಸುವ ಎಷ್ಟೆಲ್ಲಾ ಕಾರ್ಯಗಳು ಇವೆಯೋ ಅವೆಲ್ಲ ನಿನ್ನ ಅನುಗ್ರಹವಾದ ಕಾರಣ ಸುಲಭವೆನಿಸುತ್ತವೆ)
ರಾಮ ದುಆರೇ ತುಮ ರಖವಾರೇ |
ಹೋತನ ಆಜ್ಞಾ ಬಿನು ಪೈಸಾರೇ ||
(ನೀನು ರಾಮನ ಮನೆಯ ಬಾಗಿಲನ್ನು ಕಾಯುವವನು ನಿನ್ನ ಅನುಮತಿಯಿಲ್ಲದೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ)
ಸಬ್ ಸುಖ ಲಹೈ ತುಮ್ಹಾರೀ ಸರನಾ |
ತುಮ ರಚ್ಛಕ್ ಕಾಹೂ ಕೋ ಡರ್ ನಾ ||
(ನಿನ್ನಲ್ಲಿ ಶರಣು ಬಂದವರಿಗೆ ಸಕಲ ಸುಖಗಳು ಲಭಿಸುತ್ತವೆ. ನೀನೇ ರಕ್ಷಕನಾದರೆ ಯಾರಿಗೂ ಭಯ ಪಡಬೇಕಾದುದಿಲ್ಲ)
ಆಪನ ತೇಜ ಸಮ್ಹಾರೋ ಆಪೈ |
ತೀನೋಂ ಲೋಕ ಹಾಂಕ್ ತೇಂ ಕಾಂಪೈ ||
(ನಿನ್ನ ತೇಜಸ್ಸನ್ನು ನೀನೇ ನಿಗ್ರಹಿಸಿಕೋ ನಿನ್ನ ಒಂದು ಗರ್ಜನೆಯಿಂದ ಮೂರು ಲೋಕಗಳು ನಡುಗುತ್ತವೆ)
ಭೂತ ಪಿಶಾಚ ನಿಕಟ ನಹೀಂ ಆವೈ |
ಮಹಾಬೀರ ಜಬ ನಾಮ್ ಸುನಾವೈ ||
(ನಿನ್ನನ್ನು ಸ್ಮರಿಸಿದ ಮಾತ್ರದಿಂದ ಭೂತ ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ)
ನಾಸೈ ರೋಗ ಹರೈ ಸಬ ಪೀರಾ |
ಜಹತ ನಿರಂತರ ಹನುಮತ ಬೀರಾ ||
(ವೀರನಾದ ಹನುಮಂತನೇ ನಿನ್ನ ನಾಮವನ್ನು ನಿರಂತರ ಜಪಿಸುವುದರಿಂದ ಸಕಲ ರೋಗಗಳು ದೂರಾಗುತ್ತವೆ, ಎಲ್ಲ ಕಷ್ಟಗಳು ಕಳೆಯುತ್ತವೆ.)
ಸಂಕಟ ತೇಂ ಹನುಮಾನ ಛುಡಾವೈ |
ಮನಕ್ರಮ ಬಚನ ಧ್ಯಾನ ಜೋ ಲಾವೈ ||
(ಮನಸಾ ವಾಚಾ ಕರ್ಮಣಾ ಯಾರು ಹನುಮಂತನನ್ನು ಸ್ಮರಿಸುತ್ತಾರೋ ಅವರ ಸಂಕಷ್ಟಗಳನ್ನು ದೂರ ಮಾಡುತ್ತಾನೆ)
ಸಬ ಪರ ರಾಮ ತಪಸ್ವೀ ರಾಜಾ |
ತಿನ ಕೇ ಕಾಜ್ ಸಕಲ ತುಮ ಸಾಜಾ ||
(ಯಾರೇ ಆಗಲಿ ರಾಮನ ಭಕ್ತರಾದರೆ ಅವರ ಕಾರ್ಯಗಳನ್ನು ನೀನೇ ಸಾಂಗಗೊಳಿಸುತ್ತಿಯೇ)
ಔರ ಮನೋರಥ ಜೋ ಕೋಈ ಲಾವೈ |
ಸೋಈ ಅಮಿತ ಜೀವನ ಫಲ ಪಾವೈ ||
(ಇನ್ಯಾವುದೇ ಮನೋರಥವನ್ನು ಹನುಮಂತನಲ್ಲಿ ಹೇಳಿಕೊಂಡರೆ ಅವರಿಗೆ ಜೀವನದ ಎಲ್ಲ ಫಲಗಳು ದೊರಕುತ್ತವೆ)
ಚಾರೋ ಜುಗ ಪರತಾಪ ತುಮ್ಹಾರಾ |
ಹೈ ಪರಸಿದ್ಧ ಜಗ ಉಜಿಯಾರಾ ||
(ನಿನ್ನ ಪ್ರತಾಪವು ಚತುರ್ಯುಗಗಳಲ್ಲಿ ಹರಡಿದೆ. ನಿನ್ನ ಯಶೋ ಕೀರ್ತಿಯು ಜಗತ್ಪ್ರಸಿದ್ಧವಾದುದು)
ಸಾಧು ಸಂತ ಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ ||
(ನೀನು ಸಾಧು ಸಂತರ ರಕ್ಷಕನು, ರಾಕ್ಷಸರನ್ನು ಸಂಹರಿಸಿದ ರಾಮ ಪ್ರಿಯನು)
ಅಷ್ಟಸಿದ್ಧಿ ನೌ ನಿಧಿ ಕೇ ದಾತಾ |
ಅಸ ಬರ ದೀನ ಜಾನಕೀ ಮಾತಾ ||
(ಜಾನಕಿಮಾತೆಯು ನೀನು ಅಷ್ಟ ಸಿದ್ಧಿಗಳನ್ನು ನವನಿಧಿಗಳನ್ನು ಕೊಡುವವನಾಗು ಎಂದು ವರವನ್ನು ನೀಡಿದಳು)
ರಾಮ ರಸಾಯನ ತುಮ್ಹಾರೆ ಪಾಸಾ |
ಸದಾ ರಹೋ ರಘುಪತಿ ಕೆ ದಾಸಾ ||
(ರಾಮಭಕ್ತಿ ಎಂಬ ರಸಾಯನ ನಿನ್ನ ಬಳಿಯಿದೆ. ನೀನು ಸದಾ ಕಾಲ ರಘುನಾಥನ ದಾಸನಾಗಿರು)
ತುಮ್ಹಾರೆ ಭಜನ ರಾಮ ಕೋ ಪಾವೈ |
ಜನಮ ಜನಮ ಕೆ ದು:ಖ ಬಿಸರಾವೈ ||
(ನಿನ್ನ ಸ್ಮರಣೆ ಮಾಡಿದರೆ ಶ್ರೀರಾಮನೇ ನಮಗೆ ಲಭ್ಯವಾಗುತ್ತಾನೆ. ಜನ್ಮ ಜನ್ಮಾಂತರಗಳ ದು:ಖವನ್ನು ಮರೆಸುತ್ತಾನೆ)
ಅಂತಕಾಲ ರಘುಬರ ಪುರ ಜಾಈ |
ಜಹಾಂ ಜನ್ಮ ಹರಿ ಭಕ್ತ ಕಹಾಈ ||
(ಅಂತ್ಯಕಾಲ ಬಂದಾಗ ರಘುನಾಥನ ನಗರಿಯಲ್ಲಿ ಜನ್ಮಿಸಿ ಹರಿಭಕ್ತನೆಂಬ ಕೀರ್ತಿಯನ್ನು ಪಡೆಯುತ್ತಾನೆ)
ಔರ ದೇವತಾ ಚಿತ್ತ ನ ಧರ ಈ |
ಹನುಮತ ಸೇಈ ಸರ್ಬ ಸುಖ ಕರ ಈ ||
(ಉಳಿದ್ಯಾವ ದೇವತೆಗಳನ್ನು ಮನಸ್ಸಿಗೆ ತಾರದೆ, ಹನುಮಂತನನ್ನು ಸೇವಿಸಿ ಸಕಲ ಸುಖಗಳನ್ನು ಪಡೆಯುತ್ತಾರೆ)
ಸಂಕಟ ಕಟೈ ಮಿಟೈ ಸಬಪೀರಾ |
ಜೋ ಸುಮಿರೈ ಹನುಮತ ಬಲಬೀರಾ ||
(ಮಹಾವೀರನಾದ ಹನುಮಂತನನ್ನು ಸ್ಮರಿಸುವುದರಿಂದ ಎಲ್ಲ ಸಂಕಷ್ಟಗಳು ನೋವುಗಳು ಪರಿಹಾರವಾಗುತ್ತವೆ)
ಜೈ ಜೈ ಜೈ ಹನುಮಾನ ಗೋಸಾಈ |
ಕೃಪಾಕರಹು ಗುರುದೇವ ಕಿ ನಾಈಂ ||
(ಹನುಮಂತ ದೇವರೇ ನಿನಗೆ ಜಯವಾಗಲಿ. ಗುರುದೇವನಂತೆ ನಮ್ಮಲ್ಲಿ ಕೃಪೆಯಿಡು)
ಜೋ ಸತ ಬಾರ ಪಾಠ ಕರ ಕೋಈ |
ಛೂಟ ಬಂದಿ ಮಹಾ ಸುಖ ಹೋಈ ||
(ಇದನ್ನು ಯಾರು ನೂರು ಬಾರಿ ಪಠಣ ಮಾಡುವರೋ ಅವರು ಭವ ಬಂಧನಗಳಿಂದ ಬಿಡುಗಡೆ ಹೊಂದಿ ಮಹಾ ಸುಖವನ್ನು ಪಡೆಯುವರು)
ಜೋ ಯಹ ಪಢೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಸಾ ||
(ಈ ಸ್ತೋತ್ರ ಹನುಮಾನ ಚಾಲೀಸಾವನ್ನು ಯಾರು ಪಠಣ ಮಾಡುತ್ತಾರೋ ಅವರಿಗೆ ಸಕಲ ಸಿದ್ಧಿಗಳು ಲಭಿಸುತ್ತವೆ ಎಂಬುದಕ್ಕೆ ಶಂಕರನೇ ಸಾಕ್ಷಿ)
ತುಲಸಿದಾಸ ಹರಿ ಚೇರಾ |
ಕೀಜೈ ನಾಥ್ ಹ್ರದಯ ಮಹಂ ಡೇರಾ ||
(ಈ ಹನುಮಾನ ಚಾಲೀಸಾವನ್ನು ರಚಿಸಿದ ಹರಿಯ ದಾಸರಾದ ತುಲಸಿದಾಸರು ಎಲೈ ಸ್ವಾಮಿಯೇ ಸದಾ ನನ್ನ ಹ್ರದಯದಲ್ಲಿ ನೆಲಸು ಎಂದು ಪ್ರಾರ್ಥಿಸುತ್ತಾರೆ)
ಪವನತನಯ ಸಂಕಟ ಹರನ ಮಂಗಲ ಮೂರುತಿ ರೂಪ |
ರಾಮ ಲಖನ ಸೀತಾ ಸಹಿತ ಹ್ರದಯ ಬಸಹು ಸುರ ಭೂಪ ||
(ವಾಯುಪುತ್ರನೇ ಸಂಕಟ ಮೋಚಕನೆ ಮಂಗಳಮಯ ರೂಪ ಹೊಂದಿದ ಮೂರ್ತಿಯೇ ರಾಮಲಕ್ಷಣ ಸಮೇತನಾಗಿ ನನ್ನ ಹ್ರದಯದಲ್ಲಿ ನೆಲಸು)"
ಮಂಗಳಂ