ಇವತ್ತು ಜೂನ್ ಇಪ್ಪತ್ತು. ಫಾದರ್ಸ ಡೇ ಬದಲು ಪೇರೆಂಟ್ಸ ಡೇ ಅಂತಿದಾನೆ ಅಂತಾ ಕನಫ್ಯುಜ ಆಗಬೇಡಿ. ನಮ ಪೇರೆಂಟ್ಸ ಯಾವಾಗಲೂ ಕೂಡೇ ಇರುತ್ತಾರೆ. ಅರ್ಧನಾರೀಶ್ವರ ಅವರು...
ನಾನು ಸ್ಕೂಲ & ಕಾಲೇಜಿನಲ್ಲಿರುವಾಗ ಕೆಲ ಟೀಚರ್ಸಗಳು ಕ್ಲಾಸಮೇಟ್ಸಗಳು ಎಲ್ಲ ಗೊತ್ತಿದ್ದರೂ ಬೇಕಂತಲೆ ಕಿಂಡಲ ಮಾಡುವುದಕ್ಕಾಗಿ "ಎಲ್ಲೋ ನಿಮ್ ಮನೆಯವರು ಬಂದಿಲ್ಲ? ಏನ ಮಾಡ್ತಾರೆ ನಿನ್ ಪೇರೆಂಟ್ಸ?...." ಅಂತೆಲ್ಲ ಕೇಳಿ ಸಿಕ್ಕಾಪಟ್ಟೆ ಹರ್ಟ ಮಾಡ್ತಿದ್ರು. ಅವತ್ತು ಅವರ ಕೊಂಕು ಪ್ರಶ್ನೆಗಳಿಗೆ ಉತ್ತರಿಸುವಷ್ಟು ಮ್ಯಾಚುರಿಟಿ ನನಗಿರಲಿಲ್ಲ. ಆದರೆ ಈಗಿದೆ.
ಆವತ್ತು ಇಲ್ಲದ ಕೊಂಕು ಪ್ರಶ್ನೆಗಳನ್ನು ಕೇಳಿ ಕಣ್ಣೀರಾಕಿಸಿದವರೆ ಕೇಳಿ "ನನ ಪೇರೆಂಟ್ಸ ಜಗತ್ತಿಗೆ ಓನರ ಆಗಿದ್ದಾರೆ, ಜಗತ್ತಿನ ಸಕಲ ಜೀವಿಗಳು ಅವರ ಆರ್ಶಿವಾದದಿಂದ ಸಂತೋಷವಾಗಿರುತ್ತವೆ. ಅವರ ಕೃಪೆ ಇರುವವರ ಕಡೆಗೆ ಕೆಟ್ಟ ಕಣ್ಣಿನಿಂದ ನೋಡುವ ಧೈರ್ಯ ಯಮನಿಗೂ ಇಲ್ಲ. ಅವರು ಎಲ್ಲ ಪೇರೆಂಟ್ಸಗಳಂತೆ ಗವರ್ನಮೆಂಟ್ ಜಾಬ್ ಮಾಡಲ್ಲ. ಜಗತ್ತಿನ ಕಲ್ಯಾಣಕ್ಕಾಗಿ ಕೆಲಸ ಮಾಡ್ತಿದಾರೆ. ಅವರು ನಿಮ್ಮಂತೆ ಮಾರ್ಕ್ಸ ನೋಡಲ್ಲ, ಮನುಷತ್ವ ನೋಡ್ತಾರೆ, ಜಾತಿ ಕೇಳಲ್ಲ ಪ್ರೀತಿ ಕೊಡ್ತಾರೆ, ಮನೆತನ ನೋಡಲ್ಲ ಮನತನ ನೋಡ್ತಾರೆ. ನೀವೆಲ್ಲರೂ ಈಗ ನಮ್ಮಪ್ಪನ ಬಾಡಿಗೆ ಮನೆ ಭೂಮಿಯಲ್ಲಿದ್ದೀರಿ, ಸತ್ತ ಮೇಲೆ ಅವರ ಬೇಸಿಗೆ ಮನೆ ಸುಡುಗಾಡಿಗೆ ಹೋಗುತ್ತಿರಿ. ಅಲ್ಲಿ ನಿಮ್ಮ ಪುಣ್ಯ ಕೌಂಟಾದರೆ ನಮ್ಮಪ್ಪನ ಪರ್ಮನೆಂಟ ಮನೆ ಸ್ವರ್ಗಕ್ಕೆ ಬರುತ್ತೀರಿ. ಇನ್ನೂ ಏನಾದರೂ ಇನ್ಫಾರ್ಮೇಶನ್ ಬೇಕಿದ್ರೆ ದಿನಕ್ಕೆ 108 ಸರ್ತಿ ಓಂ ನಮ: ಶಿವಾಯ ಅಂತಾ ಭಕ್ತಿಯಿಂದ ಪಠಿಸಿ ನಿಮಗೆ ದರ್ಶನ ಕೊಟ್ಟು ಆರ್ಶಿವಾದ ಮಾಡ್ತಾರೆ. ಜೈ ತುಳಜಾಭವಾನಿ ಜೈ ಮಹಾಕಾಲೇಶ್ವರ...".