
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ಇಂತಿದೆ. "ಸರ್ ಪರ್ಫೆಕ್ಟ್ ಲೈಫ ಪಾರ್ಟನರನ್ನು ಹುಡುಕೋದು ಹೇಗೆ? ಇದೇ ನನ್ನ ಲೈಫಿನ ದೊಡ್ಡ ಕನಫ್ಯುಜನಾಗಿದೆ. ಡಿಗ್ರಿ ಕಂಪ್ಲೀಟಾಗಿದೆ, ಜಾಬ ಕೂಡ ಸಿಕ್ಕಿದೆ ಬಟ ಮದುವೆಯಾಗಲು ಪರ್ಫೆಕ್ಟ್ ಹುಡುಗನನ್ನ ಹುಡುಕೋದು ಹೇಗೆ ಹೇಳಿ". ಈ ಪ್ರಶ್ನೆಯನ್ನು ಸಿಂಚನಾ ಕೇಳಿದ್ದಾರೆ. ಥ್ಯಾಂಕ್ಸ ಯು ಸಿಂಚನಾ ಪ್ರಶ್ನೆಯನ್ನು ಕೇಳಿದಕ್ಕೆ. ನಿಮಗೆ ನಾನು ಒಪನಾಗಿ ಒಂದು ಮಾತನ್ನು ಹೇಳಲು ಇಷ್ಟಪಡುವೆ. ಈ ಜಗತ್ತಿನಲ್ಲಿ ಪರ್ಫೆಕ್ಟ್ ವ್ಯಕ್ತಿ ಅಥವಾ ಪರ್ಫೆಕ್ಟ್ ಲೈಫ ಪಾರ್ಟನರ ಅಂತಾ ಯಾರು ಸಿಗಲ್ಲ. ಬಟ ನಾವು ಸರಿಯಾಗಿ ಆಯ್ಕೆ ಮಾಡಿದರೆ ಬೆಸ್ಟ ಲೈಫ ಪಾರ್ಟನರ ನಮಗೆ ಸಿಗುತ್ತಾರೆ. ಸೋ ಇವತ್ತಿನ ಎಪಿಸೋಡನಲ್ಲಿ ಬೆಸ್ಟ ಲೈಫ ಪಾರ್ಟನರನ್ನು ಸೆಲೆಕ್ಟ ಮಾಡೋದೇಗೆ? ಅಂತಾ ನೋಡೋಣಾ. ಬೆಸ್ಟ ಲೈಫ ಪಾರ್ಟನರನ್ನು ಸೆಲೆಕ್ಟ ಮಾಡಲು ಬೆಸ್ಟ ಟಿಪ್ಸಗಳು ಇಂತಿವೆ ;

1) ಮದುವೆಯಾಗಲು ಅರ್ಜೆಂಟ ಮಾಡಬೇಡಿ. ಮದುವೆ ನಿಮ್ಮ ಲೈಫಿನ ಅತಿದೊಡ್ಡ ನಿರ್ಧಾರವಾಗಿದೆ. ಮದುವೆಯಾದ ಮೇಲೆ ನೀವು ನಿಮ್ಮದೆಲ್ಲವನ್ನು ಬೇರೆ ವ್ಯಕ್ತಿಯೊಡನೆ ಶೇರ್ ಮಾಡುವವರಿದ್ದೀರಿ, ಜೀವನಪೂರ್ತಿ ಆ ವ್ಯಕ್ತಿಯೊಡನೆ ಬಾಳುವವರಿದ್ದೀರಿ. ಅದಕ್ಕಾಗಿ ಮದುವೆಯಾಗಲು ಅರ್ಜೆನ್ಸಿ ಮಾಡಬೇಡಿ. ಮೊದಲು ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿ. ಫೈನಾನ್ಸಿಯಲಿ ಇಂಡಿಪೆಂಡೆಂಟಾಗಿ. ಆನಂತರ ಮದುವೆಯ ಬಗ್ಗೆ ಯೋಚನೆ ಮಾಡಿ. ಆತುರದಲ್ಲಿ ಇಲ್ಲ ಮನೆಯವರ ಮಾತು ಕೇಳಿ ಬೇಗನೆ ಮದುವೆಯಾಗಿ ಆನಂತರ ಪಶ್ಚಾತ್ತಾಪ ಪಡಬೇಡಿ. ಹುಡುಗಿಯರು ಅಟಲಿಸ್ಟ 25 ವರ್ಷದ ತನಕ ವೇಟ ಮಾಡಿ & ಹುಡುಗರು ಅಟಲಿಸ್ಟ 28 ವರ್ಷದ ತನಕ ವೇಟ ಮಾಡಿ. ಅಷ್ಟರಲ್ಲಿ ನಿಮಗೆ ಲೈಫ ಅಂದ್ರೆ ಏನಂಥ ಅರ್ಥವಾಗಿರುತ್ತದೆ. ಆನಂತರ ಮದುವೆಯಾಗಿ.

2) ಲೈಫ ಪಾರ್ಟನರನ್ನು ಸೆಲೆಕ್ಟ ಮಾಡುವಾಗ ಸೌಂದರ್ಯ ಸಂಪತ್ತಿನ ಲೆಕ್ಕಚಾರದಲ್ಲಿ ಮೋಸ ಹೋಗಬೇಡಿ. ಹುಡುಗ ಸಕ್ಸೆಸಫುಲ್ಲಾಗಿರಬೇಕು, ಶ್ರೀಮಂತನಾಗಿರಬೇಕು & ಹುಡುಗಿ ಸುಂದರವಾಗಿರಬೇಕು. ಇಷ್ಟಾದ್ರೆ ಮುಗೀತು ಮನೆಯವರು ನಿಮ್ಮ ಮದುವೆ ಮಾಡಿಸಿ ಬಿಡುತ್ತಾರೆ. ಬಹಳಷ್ಟು ಯುವಕ ಯುವತಿಯರು ಕೂಡ ಬರೀ ಸೌಂದರ್ಯ ಸಂಪತ್ತನ್ನು ನೋಡಿಯೇ ಮದುವೆಯಾಗಿ ಆನಂತರ ಡೈವೋರ್ಸ ಪಡೆದುಕೊಂಡು ದೂರಾಗುತ್ತಿದ್ದಾರೆ. ನೀವು ಬರೀ ಬ್ಯೂಟಿ & ಪ್ರಾಪರ್ಟಿ ನೋಡಿ ಮದುವೆಯಾಗಬೇಡಿ. ಏಕೆಂದರೆ ಸೌಂದರ್ಯ & ಸಂಪತ್ತು ಎರಡು ಕೂಡ ಟೆಂಪರರಿಯಾಗಿವೆ. ಅದಕ್ಕಾಗಿ ಬರೀ ಬ್ಯೂಟಿ ನೋಡಿ ಮದುವೆಯಾಗಲು ತಯಾರಾಗಬೇಡಿ. ಬರೀ ಹಣ ಆಸ್ತಿ ಅಂತಸ್ತು ನೋಡಿ ಮದುವೆಯಾಗಲು ತಯಾರಾಗಬೇಡಿ. ಸೌಂದರ್ಯ & ಸಂಪತ್ತು ಎರಡೂ ಇಂಪಾರಟಂಟಾಗಿವೆ. ಬಟ ನೀವು ವ್ಯಕ್ತಿಯೊಂದಿಗೆ ಬದುಕಬೇಕಾಗಿದೆ. ವಸ್ತುಗಳೊಂದಿಗೆ ಅಲ್ಲ. ಅದಕ್ಕಾಗಿ ಮುಖ ನೋಡುವುದಕ್ಕಿಂತ ಮುಂಚೆ ಮನಸ್ಸು ನೋಡಿ, ಪರ್ಸ ನೋಡುವುದಕ್ಕಿಂತ ಮುಂಚೆ ಪರ್ಸನಾಲಿಟಿ ನೋಡಿ. ಕಾರ ನೋಡುವುದಕ್ಕಿಂತ ಮುಂಚೆ ಕ್ಯಾರೆಕ್ಟರ್ ನೋಡಿ, ಬ್ಯೂಟಿ ನೋಡುವುದಕ್ಕಿಂತ ಮುಂಚೆ ಹುಡುಗಿಯ ಬ್ರೇನ ನೋಡಿ.

3) ನೀವು ಮದುವೆಯಾಗಲು ಬಯಸುವ ಹುಡುಗನ ಅಥವಾ ಹುಡುಗಿಯ ಕಂಪ್ಯಾಟೇಬಿಲಿಟಿ ಎಷ್ಟಿದೆ ಎಂಬುದನ್ನು ಚೆಕ ಮಾಡಿ. ಹುಡುಗ ಎಷ್ಟು ಓದಿದಾನೆ? ಏನ ಕೆಲ್ಸ ಮಾಡ್ತಾನೆ? ಏನ ಬಿಜನೆಸ ಮಾಡ್ತಾನೆ? ಎಷ್ಟು ಟ್ರಾವೆಲ ಮಾಡ್ತಾನೆ? ನಿಮಗೇಷ್ಟು ಅವೇಲೆಬಲಾಗಿದ್ದಾನೆ? ಆತ ಎಷ್ಟರ ಮಟ್ಟಿಗೆ ನಿಮ್ಮೊಂದಿಗೆ ಕಾಂಪ್ರೋಮೈಸ ಮಾಡ್ತಾನೆ? ಎಷ್ಟು ಮ್ಯಾಚೂರ ಆಗಿದ್ದಾನೆ? ನಿಮಗೆಷ್ಟು ಸಪೋರ್ಟ್ ಮಾಡಬಹುದು? ಅವನ ಗುರಿಗಳೇನು? ಅವನ ಆಸೆ ಆಕಾಂಕ್ಷೆಗಳೇನು? ಅವನ ಲೈಫಸ್ಟೈಲ ಯಾವ ರೀತಿ ಇದೆ? ಅವನಿಗೆ ಏನಿಷ್ಟ? ಯಾವ ಫುಡ್ ಇಷ್ಟ? ಅವನ ಲಿವಿಂಗ್ ಸ್ಟ್ಯಾಂಡರ್ಡ್ ಯಾವ ರೀತಿ ಇದೆ? ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಂಡು ಅವುಗಳಲ್ಲಿ ನಿಮ್ಮೊಂದಿಗೆ ಯಾವುವು ಮ್ಯಾಚ ಆಗುತ್ತವೆ ಎಂಬುದನ್ನು ಲೆಕ್ಕ ಹಾಕಿ. ಅಲ್ಲಿ ಮಿಸಮ್ಯಾಚ್ ಆಗುವ ಸಂಗತಿಗಳೊಡನೆ ನೀವು ಅಡಜಸ್ಟ ಮಾಡಿಕೊಳ್ಳಲು ತಯಾರಾಗಿದ್ದರೆ ಮಾತ್ರ ಅವರನ್ನು ಮದುವೆಯಾಗಿ ಇಲ್ಲವಾದರೆ ಬೇರೆಯವರನ್ನು ನೋಡಿ.

4) ಮದುವೆಗೆ ಮುಂಚೆ ಒಪನಾಗಿ ಮಾತಾಡಿ ವ್ಯಕ್ತಿಯ ಅಸಲಿ ಸ್ವಭಾವವನ್ನು ತಿಳಿದುಕೊಳ್ಳಿ. ಯಾರು ಕೂಡ ಮೊದಲ ಭೇಟಿಯಲ್ಲಿ ಅಥವಾ ಎರಡನೇ ಭೇಟಿಯಲ್ಲಿ ತಮ್ಮ ಅಸಲಿ ಮುಖವನ್ನು ತೋರಿಸುವುದಿಲ್ಲ. ಸೋ ನೀವು ಮದುವೆಯಾಗುವ ವ್ಯಕ್ತಿಯೊಂದಿಗೆ ನಾಲ್ಕೈದು ಸಲ ಮಾತಾಡಿ. ಕ್ಲಿಯರಾಗಿ ಕೂತು ಮಾತಾಡಿ. ಅವರ ಅಸಲಿ ನೇಚರನ್ನು ಅರ್ಥಮಾಡಿಕೊಳ್ಳಿ. ನಾಲ್ಕೈದು ತಿಂಗಳು ವೇಟ ಮಾಡಿ. ಆನಂತರ ಮದುವೆಯ ಡಿಸಿಜನ ತೆಗೆದುಕೊಳ್ಳಿ.

5) ಯಾರು ನಿಮ್ಮ ವಿಕನೇಸಗಳನ್ನು ಅಥವಾ ಕೆಟ್ಟ ಗುಣಗಳನ್ನು ಸಹಿಸಿಕೊಳ್ಳಲು ತಯಾರಾಗುತ್ತಾರೋ ಅಂಥವರನ್ನು ಮದುವೆಯಾಗಿ. ಯಾರು ನಿಮ್ಮನ್ನು ನೀವಿದ್ದಂತೆಯೇ ಆ್ಯಕ್ಸೆಪ್ಟ ಮಾಡುತ್ತಾರೋ ಅಂಥವರನ್ನು ಮದುವೆಯಾಗಿ. ಈ ಜಗತ್ತಿನಲ್ಲಿ ಯಾರು ಕೂಡ 100% ಪರಫೆಕ್ಟಾಗಿಲ್ಲ. ಎಲ್ಲರಲ್ಲೂ ಏನಾದರೂ ಒಂದು ಕೊರತೆ ಇದ್ದೇ ಇರುತ್ತದೆ. ಎಲ್ಲರಲ್ಲೂ ಪ್ಲಸ ಮೈನಸಗಳಿರುತ್ತವೆ. ಯಾರು ನಿಮ್ಮ ಮೈನಸ ಪಾಯಿಂಟಗಳನ್ನು ಸಹಿಸಿಕೊಂಡು ನಿಮ್ಮೊಂದಿಗೆ ಅಡ್ಜಸ್ಟ ಮಾಡಿಕೊಳ್ಳಲು ಮುಂದಾಗುತ್ತಾರೋ ಅವರನ್ನು ಮದುವೆಯಾಗಿ. ನಿಮ್ಮ ಪ್ಲಸ ಪಾಯಿಂಟಗಳನ್ನು ನೋಡಿ ಯಾರು ಬೇಕಾದರೂ ನಿಮ್ಮನ್ನು ಮದುವೆಯಾಗುತ್ತಾರೆ. ನೀವು ಬ್ಯೂಟಿಫುಲ್ಲಾಗಿದ್ದರೆ, ಬ್ರಿಲಿಯಂಟಾಗಿದ್ದರೆ, ಸಕ್ಸೆಸಫುಲ್ಲಾಗಿದ್ದರೆ ಯಾರು ಬೇಕಾದರೂ ನಿಮ್ಮನ್ನು ಮದುವೆಯಾಗುತ್ತಾರೆ. ಬಟ ಯಾರು ನಿಮ್ಮ ವಿಕನೇಸಗಳನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಮಾತ್ರ ನಿಮ್ಮನ್ನು ಸುಖವಾಗಿ ನೋಡಿಕೊಳ್ಳುತ್ತಾರೆ. ಅಂಥವರನ್ನು ಮದುವೆಯಾಗಿ ನಿಮ್ಮ ಲೈಫ ಸೂಪರಾಗಿರುತ್ತದೆ.

6) ಯಾರು ನಿಮಗೆ ಪ್ರೀತಿಯಷ್ಟೇ ರೆಸ್ಪೆಕ್ಟನ್ನು ಕೊಡುತ್ತಾರೋ ಅಂಥವರನ್ನು ಮದುವೆಯಾಗಿ. ಯಾರು ನಿಮಗೆ ಇಂಪಾರಟನ್ಸನ್ನು ಕೊಡುತ್ತಾರೋ, ನಿಮ್ಮನ್ನು ಅಂಡರಸ್ಟ್ಯಾಂಡ ಮಾಡಿಕೊಳ್ಳುತ್ತಾರೋ, ನಿಮಗೆ ಸ್ಪೆಷಲ್ ಕೇರ ಮಾಡುತ್ತಾರೋ ಅಂಥವರನ್ನು ಮದುವೆಯಾಗಿ. ಯಾರು ನಿಮ್ಮ ಕನಸುಗಳಿಗೆ ಗುರಿಗಳಿಗೆ ಸಪೋರ್ಟ್ ಮಾಡುತ್ತಾರೋ ಅಂಥವರನ್ನು ಮದುವೆಯಾಗಿ. ಯಾರು ನಿಮ್ಮನ್ನು ಒಂದು ದೊಡ್ಡ ಲೆವೆಲನಲ್ಲಿ ಸಕ್ಸೆಸಫುಲ ವ್ಯಕ್ತಿಯಾಗಿ ನೋಡಲು ಬಯಸುತ್ತಾರೋ ಅಂಥವರನ್ನು ಮದುವೆಯಾಗಿ.

ಓಕೆ ಫೈನ ಇವೀಷ್ಟು ಟಿಪ್ಸಗಳು ಒಬ್ಬ ಬೆಸ್ಟ ಲೈಫ ಪಾರ್ಟನರನ್ನು ಸೆಲೆಕ್ಟ ಮಾಡಿಕೊಳ್ಳಲು ಸಾಕೆನ್ನುತ್ತವೆ. ನಿಮಗೆ ಗೊತ್ತಿರುವ ಟಿಪ್ಟಗಳನ್ನು ತಪ್ಪದೇ ಕಮೆಂಟ ಮಾಡಿ. ಇದರಿಂದ ಯಂಗ ಜನರೇಷನಗೆ ಒಂದು ಸರಿಯಾದ ಗೈಡನ್ಸ ಸಿಗುತ್ತದೆ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಇದನ್ನು ಶೇರ್ ಮಾಡಿ. ಧನ್ಯವಾದಗಳು.
