
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಅಕ್ರಮ ಸಂಬಂಧ ಬೆಳೆಸೋದು ಒಳ್ಳೆಯದಾ? ಕೆಟ್ಟದ್ದಾ? ಎಂಬ ಟಾಪಿಕನ ಬಗ್ಗೆ ಡಿಸ್ಕಸ ಮಾಡುವೆ. ಏಕೆಂದರೆ ನಿನ್ನೆ ನಾನೊಂದು ಸರ್ವೆ ಬಗ್ಗೆ ಓದ್ತಾಯಿದ್ದೆ. ಅದನ್ನ ಓದಿದ ನಂತರ ಈ ಟಾಪಿಕನ ಮೇಲೆ ಮಾತನಾಡಲೇಬೇಕು, ಯಂಗ ಜನರೇಷನಗೆ ಗೈಡ ಮಾಡಲೇಬೇಕು ಅಂತಾ ಅನಿಸಿತು. ಸೋ ಈ ಎಪಿಸೋಡ ಮಾಡ್ತಿರುವೆ. ಬೇರೆ ಯಾವುದೇ ಉದ್ದೇಶ ಇಲ್ಲ.

ಗ್ಲೀಡನ ಎಂಬ ಡೇಟಿಂಗ ಆ್ಯಪ ನಡೆಸಿದ ಒಂದು ಸರ್ವೆ ಅನುಸಾರ ಭಾರತದಲ್ಲಿ 55% ಜನ ತಮ್ಮ ಲೈಫ ಪಾರ್ಟನರಗಳಿಗೆ ಮೋಸ ಮಾಡುತ್ತಾರೆ, ಬೇರೆಯವರೊಂದಿಗೆ ಬೆಡ ಶೇರ್ ಮಾಡ್ತಾರೆ. ಅದರಲ್ಲಿ ಅಚ್ಚರಿ ಏನಪ್ಪಾ ಅಂದ್ರೆ ಜಾಸ್ತಿ ಎಜುಕೇಟೆಡ ಆಗಿರುವ, ಇಂಡಿಪೆಂಡೆಂಟಾಗಿರುವ, ಮದುವೆಯಾಗಿ ಮಕ್ಕಳಾಗಿರುವ ಹೆಣ್ಮಕ್ಕಳು ಹೆಚ್ಚಾಗಿ ಅಕ್ರಮ ಸಂಬಂಧಗಳನ್ನು ಬೆಳೆಸುತ್ತಿದ್ದಾರೆ. ಇನ್ನೊಂದು ಶಾಕಿಂಗ ವಿಚಾರ ಹೇಳಬೇಕೆಂದರೆ ಅಕ್ರಮ ಸಂಬಂಧಗಳನ್ನು ಬೆಳೆಸುವವರ ಸಂಖ್ಯೆಯಲ್ಲಿ ಬೆಂಗಳೂರು ನಂಬರ ಒನ ಸ್ಥಾನದಲ್ಲಿದೆ. ಬೆಂಗಳೂರಿಗರು ಅಕ್ರಮ ಸಂಬಂಧಗಳನ್ನು ಬೆಳೆಸುವುದರಲ್ಲಿ ನಂಬರ ಒನ ಆಗಿದ್ದಾರೆ.

ಸೆ*ಕ್ಸಿ*ನ ದುರಾಸೆ, ಹಣದ ಕೊರತೆ, ಒಂಟಿತನ ಈ ಅಕ್ರಮ ಸಂಬಂಧಗಳಿಗೆ ಮೂಲ ಕಾರಣಗಳಾಗಿವೆ. ನಮ್ಮ ಸುಪ್ರೀಂ ಕೋರ್ಟ ವಿವಾಹ ನಂತರದ ಅಕ್ರಮ ಸಂಬಂಧಗಳು ಅಪರಾಧವಲ್ಲ ಅಂತಾ ಘೋಷಿಸಿರುವುದರಿಂದ ಅಕ್ರಮ ಸಂಬಂಧಗಳು ಮತ್ತಷ್ಟು ಹೆಚ್ಚಾಗಿವೆ, ಸಂಸಾರಗಳಿಗೂ ಸೆನ್ಸಾರ ಮಂಡಳಿ ನೇಮಿಸುವ ಅವಶ್ಯಕತೆ ಬಂದಿದೆ. ಅಕ್ರಮ ಸಂಬಂಧ ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಬಟ ಅಕ್ರಮ ಸಂಬಂಧ ಆರೋಗ್ಯಕರವಲ್ಲ ಅಂತಾ ನಾನು ಧೈರ್ಯವಾಗಿ ಹೇಳುವೆ. ನಾನೀಗ ಅಕ್ರಮ ಸಂಬಂಧದಿಂದಾಗುವ ಸೈಡ ಎಫೆಕ್ಟ್ಸಗಳ ಬಗ್ಗೆ ಹೇಳುವೆ. ಅದನ್ನು ಗಮನಿಸಿ ನೀವು ನಿಮಗೆ ತೋಚಿದಂತೆ ಮಾಡಬಹುದು.

1) ನಿಮ್ಮ ಅಕ್ರಮ ಸಂಬಂಧದ ವಿಚಾರ ನಿಮ್ಮ ಲೈಫ ಪಾರ್ಟನರಗೆ ಗೊತ್ತಾದಾಗ ನಿಮ್ಮ ಸಂಸಾರ ಹಾಳಾಗುತ್ತದೆ. ನಿಮ್ಮ ಮಾನ ಮರ್ಯಾದೆ ಮಣ್ಣು ಪಾಲಾಗುತ್ತದೆ. ಸಮಾಜ ನಿಮ್ಮನ್ನು ಕ್ಯಾಕರಿಸಿ ಉಗಿಯುತ್ತೆ. ನಿಮ್ಮ ಮಕ್ಕಳಿಗೆ ನಿಮ್ಮನ್ನು "ಇವರು ನನ್ನ ತಂದೆ ಅಥವಾ ತಾಯಿ" ಎಂದು ಎದೆ ತಟ್ಟಿಕೊಂಡು ಹೇಳಲು ನಾಚಿಕೆಯಾಗುತ್ತದೆ.

2) ಯೌವ್ವನದಲ್ಲಿರುವಾಗ ನೀವು ಅಕ್ರಮ ಸಂಬಂಧಗಳಲ್ಲಿ ಸಿಲುಕಿಕೊಂಡರೆ ಖಂಡಿತವಾಗಿಯೂ ನಿಮ್ಮ ಲೈಫಿನ ಸೆಕೆಂಡ ಹಾಫ್ ನರಕವಾಗುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮತ್ರ ಸೌಂದರ್ಯ ಹಾಗೂ ಸಂಪತ್ತು ಇರುವ ತನಕ ಎಲ್ಲರೂ ನಿಮ್ಮನ್ನು ಬೇಕಾದಂತೆ ಬಳಸಿಕೊಳ್ಳುತ್ತಾರೆ. ನಿಮ್ಮ ಸೌಂದರ್ಯ ಮಾಸಿದ ನಂತರ ಸಂಪತ್ತು ಕರಗಿದ ನಂತರ ನಿಮ್ಮನ್ನು ಬೀಸಾಕಿ ದೂರ ಹೋಗುತ್ತಾರೆ. ಆಗ ನೀವು ಒಂಟಿತನ, ಡಿಪ್ರೆಶನ್ ಹಾಗೂ ಗಿಲ್ಟಗೆ ಒಳಗಾಗುತ್ತೀರಿ. ಜೊತೆಗೆ ಏ*ಡ್ಸ*ನಂಥ ವಾಸಿಯಾಗದ ಕಾಯಿಲೆಗಳು ನಿಮ್ಮನ್ನು ಕಾಡುತ್ತವೆ. ನೀವು ಮಾಡಿದ ದುಷ್ಕರ್ಮ ಪಾಪ ನಿಮ್ಮನ್ನು ಕೊರಗಿಸಿ ಕೊರಗಿಸಿ ಕಣ್ಣೀರಾಕಿಸಿ ನರಳಿಸಿ ನರಳಿಸಿ ಸಾಯಿಸುತ್ತದೆ.

3) ಅಕ್ರಮ ಸಂಬಂಧ ಬೆಳೆಸುವುದರಿಂದ ನಿಮ್ಮ ಲೈಫಂತು ಹಾಳಾಗಿಯೇ ಹಾಳಾಗುತ್ತದೆ. ಇಷ್ಟು ಸಾಲದಂತ ನಿಮ್ಮ ಮಕ್ಕಳ ಭವಿಷ್ಯ ಕೂಡ ಹಾಳಾಗುತ್ತದೆ. ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ನೀವು ಮಾಡಿದ ಹಲ್ಕಾ ಕೆಲಸಗಳಿಂದಾಗಿ ನಿಮ್ಮ ಮಕ್ಕಳು ನರಳಬೇಕಾಗುತ್ತದೆ.

4) ಅಕ್ರಮ ಸಂಬಂಧ ಬೆಳೆಸುವುದರಿಂದ ನೀವು ವೈ*ಷ್ಯಯರಿಗಿಂತಲೂ ಕಡೆಯಾಗುತ್ತೀರಿ. ಎಷ್ಟೋ ಜನ ಹುಡುಗಿಯರು, ಮದುವೆಯಾದ ಹೆಣ್ಮಕ್ಕಳು ಕ್ಷಣಿಕ ಸುಖಕ್ಕಾಗಿ ಅಕ್ರಮ ಸಂಬಂಧ ಬೆಳೆಸಿ ಹೋಟೆಲಗಳಲ್ಲಿ ಬೇರೆಯವರೊಂದಿಗೆ ಬೆ*ತ್ತ*ಲೆ ಮಲಗಿ ಇಂಟರ್ನೆಟಲ್ಲಿ ಬೆ*ತ್ತ*ಲಾಗಿದ್ದಾರೆ. ನಂತರ ಅವಮಾನವನ್ನು ಸಹಿಸಲಾಗದೆ ಸಾವಿರಾರು ಜನ ಸೂಸೈಡ ಮಾಡಿಕೊಂಡು ಸತ್ತಿದ್ದಾರೆ. ಆದರೂ ಸಹ ಅವರ ಸೆ*ಕ್ಸ ವೀಡಿಯೋಗಳು, ಬೆ*ತ್ತ*ಲೆ ಫೋಟೋಗಳು ಇಂದಿಗೂ ಇಂಟರನೆಟ್ಟಲ್ಲಿ, ಸೋಸಿಯಲ ಮೀಡಿಯಾಗಳಲ್ಲಿ ಬಿಂದಾಸಾಗಿ ಹರಿದಾಡುತ್ತಿವೆ.

ನೀವು ಒಬ್ಬರೊಂದಿಗೆ ಬೆಡಶೇರ ಮಾಡಿರುವ ವಿಚಾರ ಬೇರೆಯವರಿಗೆ ಗೊತ್ತಾದಾಗ ಎಲ್ಲರೂ ನಿಮ್ಮನ್ನು ಬ್ಲ್ಯಾಕ್ಮೇಲ ಮಾಡುತ್ತಾರೆ, ನಿಮ್ಮನ್ನು ಪುಕ್ಸಟ್ಟೆಯಾಗಿ ಬೇಕಾದಂತೆ ಬೇಕಾದಷ್ಟು ಸಲ ಬಳಸಿಕೊಳ್ಳುತ್ತಾರೆ. ನಿಮ್ಮನ್ನು ವೈ*ಷ್ಯಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಾರೆ. ವೈ*ಷ್ಯಯರಿಗೆ ಇಷ್ಟವಿಲ್ಲದಿರುವಾಗ ಮೈಯನ್ನು ಒಪ್ಪಿಸದೇ ಇರುವ ಸ್ವಾತಂತ್ರ್ಯನಾದ್ರೂ ಇರುತ್ತೆ, ಸ್ವಲ್ಪ ದುಡ್ಡಾದ್ರು ಸಿಗುತ್ತೆ. ಬಟ ನಿಮಗೆ ಎರಡು ಸಿಗಲ್ಲ. ನೀವು ಬ್ಲ್ಯಾಕಮೇಲಗೆ ಒಳಗಾಗಿ ವೈ*ಷ್ಯಗಿಂತಲೂ ಕೀಳಾಗುತ್ತೀರಾ.

5) ಅಕ್ರಮ ಸಂಬಂಧ ಬೆಳೆಸುವುದರಿಂದ ಸ್ರ್ತೀ ಪುರುಷರಿಬ್ಬರು ಮಾನಗೇಡಿಗಳಾಗುತ್ತಾರೆ. ಮಾಡಿದ ತಪ್ಪಿಗೆ ತಮ್ಮ ಲೈಫಿನ ಸೆಕೆಂಡ ಹಾಫಲ್ಲಿ ಸರಿಯಾದ ಶಿಕ್ಷೆಯನ್ನು ಅನುಭವಿಸುತ್ತಾರೆ ಅಂತಾ ನಿಮಗೆ ಗೊತ್ತಾಗಿದೆ. ಯಾವ ಪುರುಷ ಅಕ್ರಮ ಸಂಬಂಧ ಬೆಳೆಸುತ್ತಾನೋ ಅವನ ಸಂಪತ್ತು ಹಾಳಾಗಿ ಹೋಗುತ್ತದೆ. ಆತ ದಿವಾಳಿಯಾಗುತ್ತಾನೆ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ನರಳುತ್ತಾನೆ. ಅಕ್ರಮ ಸಂಬಂಧ ಬೆಳೆಸಿದವರು ಯಾವತ್ತೂ ಸುಖವಾಗಿರಲ್ಲ, ಯಾವಾಗಲೂ ಭಯದಲ್ಲೇ ಬದುಕುತ್ತಾರೆ, ರೋಗಗಳಿಂದ ನರಳುತ್ತಾರೆ.

ಇವೀಷ್ಟು ಅಕ್ರಮ ಸಂಬಂಧಗಳಿಂದಾಗುವ ಸೈಡ ಎಫೆಕ್ಟ್ಸಗಳು. ನಿಮ್ಮ ಲೈಫ ನಿಮ್ಮಿಷ್ಟ. ನನಗೇನು ಕಷ್ಟವೂ ಇಲ್ಲ ನಷ್ಟವೂ ಇಲ್ಲ. ನಾನು ಹೇಳೊದಿಷ್ಟೆ, ಸಾಸುವೆ ಕಾಳಿನ ಸುಖಕ್ಕಾಗಿ ಸಾಗರದಷ್ಟು ನೋವನ್ನು ಅನುಭವಿಸಬೇಡಿ ಅಂತಷ್ಟೇ. ಈ ಎಪಿಸೋಡ ನಿಮಗಿಷ್ಟವಾಗಿದ್ದರೆ ತಪ್ಪದೇ ಲೈಕ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ ಮಾಡಿ. ಫೇಸ್‌ಬುಕ್, ಇನಸ್ಟಾಗ್ರಾಮ & ಯುಟ್ಯೂಬನಲ್ಲಿ ನನ್ನ ಫಾಲೋ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...
