
ಹಾಯ್ ಫ್ರೆಂಡ್ಸ, ಎಲ್ಲವನ್ನೂ ಡಿಟೇಲಾಗಿ ಪಬ್ಲಿಕಲಿ ಬಿಡಿಸಿ ಹೇಳಲು ಸಾಧ್ಯವಿಲ್ಲ. ನಾನು ಯಾರ ಬಗ್ಗೆ ಹೇಳುತ್ತಿರುವೆ ಎನ್ನುವುದಕ್ಕಿಂತ ಸಮಸ್ಯೆಗೆ ಸೋಲುಷನ ಸಿಗುವುದು ಮುಖ್ಯವಾಗಿದೆ. ಅದಕ್ಕಾಗಿ ಈ ಟಾಪಿಕನ ಮೇಲೆ ಪರ್ಸನಲ್ ಪ್ರಶ್ನೆ ಕೇಳಬೇಡಿ. ಇದನ್ನೊಂದು ಕಾಲ್ಪನಿಕ ಕಥೆ ಎಂಬಂತೆ ನೋಡಿ ಮತ್ತು ಸೋಲುಷನ ಗೊತ್ತಿದ್ರೆ ಕಮೆಂಟ ಮಾಡಿ...

ಒಬ್ಬ ಮಹತ್ವಾಕಾಂಕ್ಷೆಯುಳ್ಳ ಹುಡುಗ ಇದ್ದ. ಆದರೆ ಅವನಿಗೆ ಅವನ ಮನೆಯವರು ಸಪೋರ್ಟ್ ಮಾಡುತ್ತಿರಲಿಲ್ಲ. ಓದಿಗೆ ಸಪೋರ್ಟ್ ಮಾಡುತ್ತಿರಲಿಲ್ಲ, ಬೇಕಾದ ವಸ್ತು ಕೊಡಿಸುತ್ತಿರಲಿಲ್ಲ, ಹಬ್ಬ ಬಂದರೂ ಹೊಸ ಬಟ್ಟೆ ಕೊಡಿಸುತ್ತಿರಲಿಲ್ಲ. ಆ ಹುಡುಗ ಯಾಕೆ ನನ್ನ ಮನೆಯವರು ನನ್ನ ಮೇಲೆ ಮಲತಾಯಿ ವರ್ತನೆ ಮಾಡ್ತಿದಾರೆ? ಅಂತಾ ಯೋಚಿಸಿ ಮುಂಗೋಪಿಯಾದ.

ನಂತರ ಬಾಲ್ಯದಲ್ಲಿಯೇ ಓದಿಗಾಗಿ ಕೆಲಸ ಮಾಡಲು ಶುರು ಮಾಡಿದ. ಅವನು ಓದಿನಲ್ಲಿ ಪ್ರತಿಭಾವಂತ ಅಂತಾ ಅವನ ಟೀಚರ ಅವನನ್ನು ಗವರ್ನಮೆಂಟ್ ಹಾಸ್ಟೆಲ್ ಸೇರಿಸಿದರು. ಬಟ ಅಲ್ಲಿದ್ದ ವಾತಾವರಣ ಅವನಿಗೆ ಹಿಡಿಸಲಿಲ್ಲ. ಸೊ ಆತ ಹಾಸ್ಟೇಲ ಬಿಟ್ಟು ಆಶ್ರಮ ಸೇರಿದ, ಅಲ್ಲಿಂದಲೇ ಓದು ಮುಂದುವರೆಸಿದ. ನಂತರ ಕಾಲೇಜು ಸೇರಿದ, ಗುರುಕುಲದ ಆಚಾರದ ಜೊತೆಗೆ ಮಾಡರ್ನ ಜಗತ್ತನ್ನು ಕೂಡ ಅರ್ಥ ಮಾಡಿಕೊಂಡ. ಓದಿನ ಜೊತೆಗೆ ಪಾರ್ಟಟೈಮ ಜಾಬ ಮಾಡುತ್ತಾ ಬೇರೆಬೇರೆ ಸ್ಕೀಲ್ಸ ಬೆಳೆಸಿಕೊಂಡು ಓದು ಮುಗಿಸಿ ಬಿಜನೆಸ ಶುರು ಮಾಡಿದ. ಮೂರು ವರ್ಷಗಳಲ್ಲಿ ಬಿಜನೆಸ ಸೆಟಲಾಯ್ತು, ಮಾಡಿಕೊಂಡ ಸಾಲ ತೀರಿತು. ಒಂದುವರೆ ಕೋಟಿ ಹಣ ಕೂಡ ಸೇವ ಆಯ್ತು. ಅವನಿಗೆ ವಯಸ್ಸು 25 ಆಯ್ತು, ಒಂಟಿತನ ಸಾಕಾಯ್ತು. ಅದಕ್ಕೆ ಆತ ಮನೆಯವರಿಗೆ ಹೇಳಿ ಮುಂದಿನ ಲೈಫನ ತಯಾರಿಯಲ್ಲಿ ತೊಡಗಿದನು.

ಆಶ್ರಮ ಸಂಸ್ಕ್ರತಿಯಿಂದ ಬಂದಿದ್ದ ಆ ಹುಡುಗನಿಗೆ ಎಲ್ಲರ ಮೇಲೆ ಪ್ರೀತಿಯಿತ್ತು. ಆತ ಎಲ್ಲರನ್ನು ಸೋದರಿಯರಂತೆ ನೋಡುತ್ತಿದ್ದನು. ಅವನ ಬಳಿ ಹಣ ಬಂದಾಗ ಆತ ಅವನ ಮನೆಗೆ ಮರಳಿ ಹೋದನು. ಏನು ಬದಲಾಗಿರಲಿಲ್ಲ, ಅವನ ಮನೆಯವರು ಅವನ ಮೇಲೆ ಮೊದಲಿನಂತೆ ತಾತ್ಸಾರ ತೋರಿದರು. ದುಡ್ಡಿನ ದರ್ಪ ತೋರಿದರು. ಆ ಹುಡುಗ ಮನೆಯವರ ಸಹವಾಸವೇ ಬೇಡವೆಂದು ಆಶ್ರಮಕ್ಕೆ ಬಂದನು. ಆದರೆ ಗುರುಗಳು "ಎಲ್ಲರೂ ಸಂನ್ಯಾಸಿ ಆಗುವ ಅವಶ್ಯಕತೆ ಇಲ್ಲ. ನೀನು ಸಮಾಜಮುಖಿಯಾಗಿ ಬದುಕು, ರಾಮನಂತೆ ಗ್ರಹಸ್ಥ ಬ್ರಹ್ಮಚಾರಿಯಾಗಿ ಸಮಾಜಕ್ಕಾಗಿ ಬದುಕು, ನಿನ್ನ ಸೇವೆ ದೇಶಕ್ಕೆ ಬೇಕಿದೆ" ಅಂತಾ ಆಶ್ರಮದಿಂದ ಕಳುಹಿಸಿದರು. ಆ ಹುಡುಗ ಬಾಡಿಗೆ ಮನೆ ತೆಗೆದುಕೊಂಡು ಇರಲು ಶುರು ಮಾಡಿದನು.

ಮುಂದೊಂದಿನ ಆತ ತನ್ನ ಕಂಪನಿಗೆ ಮ್ಯಾನೇಜರ ಪೋಸ್ಟಗಾಗಿ ಒಬ್ಬಳು ಹುಡುಗಿಯನ್ನು ಅಪಾಯಂಟ ಮಾಡಿಕೊಂಡನು. ಅವಳು ಬ್ರದರ ಅನ್ನೊದಕ್ಕಿಂತ ಮುಂಚೆ ಅವನೇ ಅವಳಿಗೆ ಅಕ್ಕಾ ಅಂದನು. ಆಕೆ ಅವನಿಗೆ ತಮ್ಮನ ಪ್ರೀತಿ ತೋರಿಸುತ್ತಾ ತನ್ನದೇ ಕಂಪನಿ ಎಂಬಂತೆ ಕೆಲಸ ಮಾಡಿದಳು. ಅವನ ಬಿಜನೆಸ ಮತ್ತಷ್ಟು ಗ್ರೋ ಆಯ್ತು.

ಆ ಹುಡುಗನ ಒಂಟಿತನ ಅವನನ್ನು ಸುಡುತ್ತಿತ್ತು. ಅಷ್ಟರಲ್ಲಿ ಅವನಿಗೆ ಕೆಲ ಮೂಲಗಳಿಂದ "ನನ್ನ ಮನೆಯವರು ನಿಜವಾದ ಮನೆಯವರಲ್ಲ, ನನ್ನ ನಿಜವಾದ ತಂದೆತಾಯಿಗಳು ನಾನು ನಾಲ್ಕು ವರ್ಷದವನಿದ್ದಾಗ ಆಕ್ಸಿಡೆಂಟಲ್ಲಿ ತೀರಿಕೊಂಡಿದ್ದಾರೆ, ನಾನು ಇಷ್ಟು ದಿನ ತಂದೆತಾಯಿ ಎಂದುಕೊಂಡಿದ್ದವರು ನಿಜವಾದ ತಂದೆತಾಯಿಗಳಲ್ಲ, ಅವರು ತನ್ನ ನಿಜವಾದ ತಂದೆಯ ಗೆಳೆಯರು, ನನ್ನ ತಂದೆ ಸಾಯೋವಾಗ ಮಗನನ್ನು ನೋಡಿಕೊಳ್ಳುವೆ ಅಂತಾ ಹೇಳಿ ಪೂರ್ತಿ ಆಸ್ತಿ ಹೊಡೆದ ವಂಚಕರು, ನನ್ನ ನಕಲಿ ಮನೆಯವರು ನನ್ನ ತಂದೆತಾಯಿಯ ಆಸ್ತಿಯಲ್ಲೇ ಮೋಜು ಮಾಡುತ್ತಿದ್ದಾರೆ, ನಾನು ನಿಜ ಗೊತ್ತಾಗಿ ಆಸ್ತಿ ಕೇಳ್ತಿನಿ ಅಂತಾ ನನ್ನ ಮನೆಯಿಂದ ಆಚೆ ಕಳಿಸಿದ್ದಾರೆ" ಅಂತಾ ಅವನಿಗೆ ಗೊತ್ತಾಯಿತು. ಆದರೆ ಅವನಿಗೆ ಆಸ್ತಿ ಬೇಕಿರಲಿಲ್ಲ. ಬದುಕು ಕಟ್ಟಿ ಕೊಳ್ಳೊಕೆ ಒಂದು ಆಸರೆ ಬೇಕಿತ್ತು.

ಆತ ಬೇಜಾರಲ್ಲಿ ಕಾರಲ್ಲಿ ಅಳುತ್ತಾ ಕುಳಿತ್ತಿದ್ದನು. ಅವನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬಳು ಯಂಗ ಹುಡುಗಿ ಅವನನ್ನು ಗಮನಿಸಿದಳು. ಅವನನ್ನು ಸಮಾಧಾನ ಮಾಡಿದಳು. ಅಲ್ಲಿಂದ ಅವರ ಫ್ರೆಂಡಶೀಪ ಶುರುವಾಯಿತು. ಮೊದಲು ಬಾಸ, ಸರ್ ಅಂತಿದ್ದ ಹುಡುಗಿ ಈಗ ಅವನನ್ನು ಹೆಸರಿಟ್ಟು ಕರೆಯಲು ಶುರು ಮಾಡಿದಳು. ಆ ಹುಡುಗಿ ಮೂರು ತಿಂಗಳ ನಂತರ ಅವನಿಗೆ ಲವ್ ಪ್ರಪೋಜ ಮಾಡಿದಳು. ತನ್ನ ಮನೆಯವರಿಗೆ ಕೂಡ ಹೇಳಿದಳು. ಆತ ತನ್ನ ಮ್ಯಾನೇಜರನ್ನೇ ಅಕ್ಕಾ ಅಂತಾ ಆ ಹುಡುಗಿಯ ಮನೆಯವರಿಗೆ ಪರಿಚಯಿಸಿದನು. ಅವರು "ಹುಡುಗ ಸ್ವಂತ ಬಿಜನೆಸ ಮಾಡ್ತಿದಾನೆ, ಕೋಟಿ ಸಂಪಾದಿಸಿದ್ದಾನೆ, ಮುಂದೆ ಫ್ಯುಚರ ಚೆನ್ನಾಗಿದೆ" ಅಂತಾ ಹೊಗಳಿ ಮದುವೆಗೆ ಅನುಮತಿ ಕೊಟ್ಟರು. ಬಟ ಆ ಹುಡುಗನಿಗೆ ತನ್ನ ಲೈಫನ ಸತ್ಯ ಮುಚ್ಚಿಟ್ಟು ಮದುವೆಯಾಗುವುದು ತಪ್ಪು ಅಂತೆನಿಸಿತು. ಸೋ ಆತ ತನ್ನ ಹುಡುಗಿಗೆ ಅವತ್ತೇ ಸಂಜೆ ಡಿನ್ನರಗೆ ಕರೆದು ತನ್ನ ಲೈಫಿನ ಸತ್ಯವನ್ನೆಲ್ಲ ಹೇಳಿದನು. ಆಗ ಆ ಹುಡುಗಿ ಅವನ ಕ್ಯಾರೆಕ್ಟರ್ ಮೇಲೆ ಸಂದೇಹ ಪಟ್ಟಳು. ನಂತರ ತನ್ನ ಮನೆಗೆ ಹೋಗಿ ಇರೋ ವಿಷಯ ತಿಳಿಸಿದಳು. ಆಗ ಅವಳ ಮನೆಯವರು "ಬಿಜನೆಸ ಯಾವಾಗ ಬೀಳುತ್ತೆ ಅಂತಾ ಗೊತ್ತಿಲ್ಲ, ಸೋ ನಾವು ನಮ್ಮ ಮಗಳನ್ನು ಗವರ್ನಮೆಂಟ್ ಜಾಬನ ಹುಡುಗನಿಗೆ ಕೊಡ್ತಿವಿ" ಅಂತೇಳಿ ಮದುವೆ ಕ್ಯಾನ್ಸಲ ಮಾಡಿದರು.

ಆಗ ಆ ಹುಡುಗ ನೇರವಾಗಿ ಹುಡುಗಿಯ ಮನೆಯವರತ್ರ ಏನಾಯ್ತು ಹೇಳಿ ಅಂತಾ ಕೇಳಿದನು. ಆಗವರು ಅವನಿಗೆ "ಹಿಂದು ಮುಂದು ಇಲ್ಲದವರಿಗೆ ಮಗಳನ್ನ ಕೊಡಲ್ಲ, ಅನಾಥ ಮಕ್ಕಳು ಯಾರಿಗೆ ಹುಟ್ಟಿರುತ್ತಾರೆ ಯಾವನಿಗೊತ್ತು? ಅವರಲ್ಲಿ ಯಾವ ಸಂಸ್ಕಾರ ಇರುತ್ತದೆ? ಸಂಬಂಧಗಳ ಬೆಲೆ ಅವರಿಗೇನು ಗೊತ್ತು? ಪರದೇಶಿಗಳು..." ಅಂತೆಲ್ಲ ಹೇಳಿ ಇನಡೈರೆಕ್ಟಾಗಿ ಅವಮಾನ ಮಾಡಿ ಕಳುಹಿಸಿದರು. ಇದು ಅವನ ಮ್ಯಾನೇಜರ ಅಕ್ಕಳಿಗೆ ಗೊತ್ತಾಗಿ ಆಕೆ ಅವನನ್ನು ಸಮಾಧಾನ ಮಾಡಿ ಅವನಿಗೆ ಬೇರೆ ಕಡೆ ಹುಡುಗಿ ಹುಡುಕಲು ಸ್ಟಾರ್ಟ ಮಾಡಿದಳು. ಆದರೆ ಎಲ್ಲ ಕಡೆಗೆ "ಆತ ಅನಾಥ ಅಂತಾನೇ ಯಾರು ಹೆಣ್ಣು ಕೊಡಲು ಮುಂದಾಗುತ್ತಿಲ್ಲ, ಎಲ್ಲರೂ ಗವರ್ನಮೆಂಟ ಜಾಬ ಇಲ್ಲ" ಅನ್ನೋ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಆ ಹುಡುಗನ ನಿಜವಾದ ತಂದೆತಾಯಿಗಳು ಬದುಕಿಲ್ಲ, ಅವರದ್ದು ಶ್ರೇಷ್ಠ ರಕ್ತ, ಶ್ರೀಮಂತ ರಾಜಕುಟುಂಬದ ರಕ್ತ ಅಂತಾ ಅವನಿಗೆ ಗೊತ್ತು. ಆದರೆ ಜನರಿಗೆ ಆತ ಅನಾಥ ಅನ್ನೊದಷ್ಟೆ ಗೊತ್ತು. ಆ ಹುಡುಗನ ಕೈಕೆಳಗೆ 20 ಜನ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವನಿಗೆ ಗವರ್ನಮೆಂಟ್ ಜಾಬ ಮಾಡುವ ಅವಶ್ಯಕತೆ ಏನಿದೆ? ಅವನಿಗೆ ಸೌಂದರ್ಯ ಸುಗುಣ ಸಂಪತ್ತು ಎಲ್ಲವೂ ಇದೆ. ಫ್ಯಾಮಿಲಿ ಒಂದನ್ನು ಬಿಟ್ಟು. ಆತ ತಕ್ಕಮಟ್ಟಿಗೆ ಏನು ಬೇಕಾದರೂ ಖರೀದಿಸಬಲ್ಲ, ಫ್ಯಾಮಿಲಿ ಒಂದನ್ನು ಬಿಟ್ಟು.

ಅವನ ಹಣ, ಫೇಮ ನೋಡಿ ಬಹಳಷ್ಟು ಹುಡುಗಿಯರು ಅವನಿಗೆ ಲವ್ ಪ್ರಪೋಜ ಮಾಡಿದ್ದಾರೆ. ಅವನಾಗೇ ಯಾರಿಗು ನೋ ಅಂದಿಲ್ಲ. ಆದರೆ ಆತ ಇರೋ ನಿಜ ಹೇಳಿದಾಗ ಎಲ್ಲರೂ ನೆಪ ಹೇಳಿ ದೂರ ಓಡಿದ್ದಾರೆ. ಅವನ ಮ್ಯಾನೇಜರ ಅಕ್ಕ ಕೂಡ ನಾಲ್ಕೈದು ಸಲ ಹುಡುಗಿ ಹುಡುಕಲು ಟ್ರಾಯ ಮಾಡಿ ಕೈಬಿಟ್ಟಿದ್ದಾಳೆ.

ಆತ ಮ್ಯಾರೇಜ ಬ್ರೋಕರ ಮೂಲಕ ಹುಡುಗಿ ಹುಡುಕಲು ಹೋದರೆ ಖಂಡಿತ ಅವನಿಗೆ "ಹಣ ದೋಚುವ ಸೂ... ಸಿಗುತ್ತಾಳೆ, ಒಳ್ಳೆ ಹೆಂಡತಿ ಸಿಗಲ್ಲ". ಸೋಸಿಯಲ ಮೀಡಿಯಾದಲ್ಲಿ ಹುಡುಕಿದರೆ ಅಲ್ಲಿಯೂ ಅಂಥವಳೆ ಸಿಗುತ್ತಾಳೆ. ಇನ್ನೂ ಅವನನ್ನು ಇಷ್ಟಪಟ್ಟು ಪ್ರೀತಿಸಲು ಬಂದ ಹುಡುಗಿಗೆ ಆತ ನಿಜ ಹೇಳಿದರೆ ಅದರಲ್ಲಿ ಆಲ ಮೊಸ್ಟ ಆಲ ಹುಡುಗಿಯರು ದೂರ ಓಡುತ್ತಾರೆ. ಒಬ್ಬಳು ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಬಟ ಒಂದು ವಾರದ ನಂತರ ಐಫೋನ ತೆಗೆದುಕೊಂಡು ಮನೆಯಲ್ಲಿ ಒಪ್ಪುತ್ತಿಲ್ಲ ಅಂತೇಳಿ ಮಾಯವಾದಳು.

ಅವನನ್ನು ನಿಜವಾಗಿಯೂ ಪ್ರೀತಿಸಿದ ಹುಡುಗಿ ಅವನನ್ನು ಮದುವೆಯಾಗಲು ತಯಾರಾದರೆ ಅವರ ಮನೆಯವರು ಒಪ್ಪಲ್ಲ. ಹಾಗಂತ ಪ್ರೀತಿ ಹೆಸರಲ್ಲಿ ಬಂದವರನ್ನ ಮದುವೆಯಾಗಲು ಹೋದ್ರೆ ಅವರ ಹೆಂಡತಿ ಆಗಲು ಯೋಗ್ಯರಲ್ಲ ಅಂತಾ ಮೊದಲೆ ಗೊತ್ತಾಗುತ್ತದೆ. ಲಾಕಡೌನನಲ್ಲಿ ಆ ಹುಡುಗನಿಗೆ ಮನೆ ಖಾಲಿ ಮಾಡಬೇಕಾದ ಸಿಚ್ಯುವೇಷನ ಬಂತು. ಆತ ಪಿಜಿಯಲ್ಲಿ ಹೇಗೋ ಅಡಜಸ್ಟ ಮಾಡಿಕೊಂಡ. ಬಟ ಅಲ್ಲಿ ಸೂಸೈಡ ಅಟೆಂಪ್ಟ ಮಾಡಲು ಯೋಚನೆ ಮಾಡ್ತಿದ್ದ. ಅಷ್ಟರಲ್ಲಿ ಅವನ ಆಶ್ರಮದ ಗುರುಗಳು ಅವನಿಗೆ ಮದುವೆ ಮಾಡಿಸುವೆ ಎಲ್ಲ ಸರಿ ಮಾಡುವೆ ಅಂತಾ ಹೇಳಿದರು. ಅವರು ಟ್ರಾಯ ಮಾಡಿದರು. ಬಟ ಆ ಹುಡುಗ ಅನಾಥ ಅವನಿಗೆ ಯಾರು ಇಲ್ಲ ಅಂತಾ ಕುಟುಂಬಸ್ಥರು ಅವನಿಗೆ ಹೆಣ್ಣು ಕೊಡ್ತಿಲ್ಲ. ಅದಕ್ಕೆ ಗುರುಗಳು ಕೂಡ ಕೈಬಿಟ್ಟರು. ಅದಕ್ಕೆ ಸದ್ಯಕ್ಕೆ ಆ ಹುಡುಗ ಕೆಲವು ಸರ್ತಿ ಮದುವೆಯಾಗಲೋ ಬೇಡ್ವೊ ಅಂತಾ ಯೋಚಿಸಿದರೆ ಕೆಲವು ಸರ್ತಿ ಸುಸೈಡ್ ತಯಾರಿ ಮಾಡುತ್ತಾನೆ.

ಅವನನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಆತ ಆಶ್ರಮ ಹುಡುಕುತ್ತಿದ್ದಾನೆ. ಆದರೆ ಆಶ್ರಮದಲ್ಲಿ ದೊಡ್ಡ ಹುಡುಗರನ್ನು ಸೇರಿಸಲ್ಲ. ಹೊರಗಡೆ ಬ್ಯಾಚರಲ ಅಂತಾ ಒಳ್ಳೆ ಮನೆ ಸಿಗ್ತಿಲ್ಲ. ಅದಕ್ಕೆ ಆತ ಸಾಯಲು ಡಿಸೈಡ ಮಾಡಿದ್ದಾನೆ. ಅವನದ್ದು ಈಗ ಸೋಲುಷನ ಸಿಗದ ಸಮಸ್ಯೆ ಆಗಿದೆ. ಅದಕ್ಕೆ ನಾನು ಸ್ವಲ್ಪ ಅಪಸೆಟ ಆಗಿದ್ದು.
ಆ ಹುಡುಗ ಮುಂದೆ ನಮ್ಮ ದೇಶದ ಆಸ್ತಿಯಾಗಬಲ್ಲ, ಅವನಲ್ಲಿ ಆ ತಾಕತ್ತಿದೆ. ಆದರೆ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳಲು ಒಂದು ಪರ್ಮನೆಂಟ ಜೀವ ಜೊತೆಗಿರದಿದ್ದರೆ ಬದುಕುವ ಆಸೆ ಹೊರಟು ಹೋಗುತ್ತದೆ. ಪ್ರೀತಿ ಹೆಸರಲ್ಲಿ ಬಂದು ಹಣ ದೋಚಿಕೊಂಡು ಹೋಗುವವರ ಹಿಂದೆ ಟೈಮಪಾಸ ಮಾಡುವ ಬದಲು ಯಾರಾದರೂ ಒಳ್ಳೆ ಮನೆಯ ಹುಡುಗಿ ಜೊತೆಗೆ ಅವನ ಮದುವೆಯಾದರೆ ಅವನಿಗೂ ಒಂದು ಫ್ಯಾಮಿಲಿ ಸಿಗುತ್ತದೆ, ಹೆಂಡತಿಯ ತಂದೆತಾಯಿಗಳು ಅವನಿಗೂ ತಂದೆತಾಯಿಯಾಗುತ್ತಾರೆ. ಅವನಿಗೂ ಒಂದು ಆಸರೆ ಸಿಗುತ್ತದೆ. ಆದರೆ ಆತ ಅನಾಥ ಅವನಿಗೆ ಯಾರಿಲ್ಲ ಅಂತಾ ಯಾರು ಅವನಿಗೆ ಹೆಣ್ಣು ಕೊಡಲು ತಯಾರಾಗುತ್ತಿಲ್ಲ. ಇನ್ನೂ ಅವನನ್ನು ಹುಡುಕಿಕೊಂಡು ಬರೋ ಡ್ರಾಮಾ ಕ್ವೀನಗಳನ್ನು ಮದುವೆಯಾಗಲು ಆತ ರೆಡಿಯಿಲ್ಲ. ಆತ ಜಸ್ಟ ಒಬ್ಬಳು ಸಿಂಪಲ್ ಎಜುಕೇಟೆಡ ಹಾನೆಸ್ಟ ಹಂಬಲ ಹುಡುಗಿಯನ್ನು ಹುಡುಕುತ್ತಿದ್ದಾನೆ ಅಷ್ಟೇ. ಅವನಿಗೆ ಸಾಥ ಕೊಡುತ್ತಾ ಬಿಜನೆಸಗೂ ಹೆಲ್ಪ ಮಾಡುವ ಹುಡುಗಿಯನ್ನ ಆತ ಬಯಸುತ್ತಿದ್ದಾನೆ.

ನಾನೇನಾದರೂ ಹುಡುಗಿಯಾಗಿದ್ದರೆ ಕಣ್ಮುಚ್ಚಿ ಅವನನ್ನು ಮದುವೆಯಾಗುತ್ತಿದ್ದೆ. ಬಟ ನಾನು ಹುಡುಗಿಯಾಗಿಲ್ಲ. ಇಲ್ಲಿ ತನಕ ನಾನು ಬಹಳಷ್ಟು ಜನರ ಪರ್ಸನಲ್ ಪ್ರಾಬ್ಲಮ ಸಾಲ್ವ ಮಾಡಿರುವೆ. ಬಟ ಮೊದಲ ಸರ್ತಿ ನಾನೇ ಸಮಸ್ಯೆಗೆ ಸೋತಿರುವೆ, ಮನಸ್ಸು ಬೇಜಾರಲ್ಲಿದೆ, ಏಕೆಂದರೆ ಇದು ಹಣದಿಂದ ಸಾಲ್ವಾಗುವ ಸಮಸ್ಯೆಯಿಲ್ಲ. ಮದುವೆಯಾದ ಹುಡುಗಿಯೊಂದಿಗೆ ಆತ ನಿಯತ್ತಾಗಿ ಇರ್ತಾನೆ ಅನ್ನೋದಕ್ಕೆ ನಾನು ಗ್ಯಾರಂಟಿ ಕೊಡುವೆ. ಆದರೆ ಅವನನ್ನು ಮದುವೆಯಾದವಳು ನಿಯತ್ತಾಗಿ ಇರ್ತಾಳಾ? ಅನ್ನೋದಕ್ಕೆ ಗ್ಯಾರಂಟಿ ಇಲ್ಲ. ಏಕೆಂದರೆ ಈಗ ಕೆಲ ಹುಡುಗಿಯರು ಬೇಕಂತಲೆ ಬಿಜನೆಸಮ್ಯಾನಗಳನ್ನು ಮದುವೆಯಾಗುತ್ತಾರೆ, ನಂತರ ಒಂದು ವರ್ಷದೊಳಗೆ ಡೈವರ್ಸ ತೆಗೆದುಕೊಂಡು ಅರ್ಧ ಆಸ್ತಿ ಲಪಟಾಯಿಸಿಕೊಂಡು ನಾಲ್ಕೈದು ಬಾಯಫ್ರೆಂಡಗಳನ್ನು ಮಾಡಿಕೊಂಡು ಸೂ..ಗಾರಿಕೆ ಮಾಡುತ್ತಾ ಮತ್ತೆ ಬೇರೆಯವರನ್ನು ಮದುವೆಯಾಗಿ ಮತ್ತೆ ಡೈವರ್ಸ ಗೇಮ ಆಡ್ತಿದಾರೆ. ಇಂಥವರಿಂದಲೇ ಅವನಿಗೆ ಪ್ರೀತಿ ಅಂತಾ ಬರೋ ಸುಂದರಿಯರ ಭಯ ಶುರುವಾಗಿದೆ.

ಇರಲಿ ದೇವರಿದ್ದಾನೆ, ಯಾರದ್ಯಾರದ್ದೋ ಸಂಸಾರ ಸರಿ ಮಾಡಲು, ಎಷ್ಟೋ ಸೋದರಿಯರನ್ನು ಮತ್ತೆ ಮನೆ ಸೇರಿಸಲು ಸತ್ತು ಬದುಕಿರುವೆ, ಇದಕ್ಕೂ ಒಂದು ಸಲ ಬೇರೆಯವರನ್ನು ಬೇಡಿಕೊಳ್ಳುವೆ. ಅನಾಥರ ಕಷ್ಟ ನೋವು ನನ್ನಂಥ ಅನಾಥನಿಗೆ ಗೊತ್ತಾಗದೇ ಬೇರೆ ಇನ್ಯಾರಿಗೆ ಗೊತ್ತಾಗುತ್ತದೆ? ಟ್ರಾಯ ಮಾಡುವೆ, ಸಕ್ಸೆಸ ಆದರೆ ಸಂತೋಷ, ಆಗದಿದ್ದರೆ ಅವನ ಜೊತೆಗೆ ನನ್ನದು ಸಾವಿನ ಸವಾರಿ. ಗೆಳೆತನ ಅಂದ್ರೆ ಜೊತೆಗೆ ನಗಬೇಕು ಜೊತೆಗೆ ಅಳಬೇಕು ಜೊತೆಗೇನೆ ಸಾಯಬೇಕು....
