
"ನಿನ್ನ ಕಣ್ಣ ಮಿಂಚಲ್ಲಿ ನನ್ನೆದೆಯನ್ನು ಕದಿಯುವ ಸಂಚಿದೆ...
ನಿನ್ನ ನಗೆಗೆ ನನ್ನ ನೋವನ್ನೆಲ್ಲ ಮರೆಸುವ ಶಕ್ತಿಯಿದೆ...
ನಿನ್ನ ಮಾತಿನಲ್ಲಿ ನನ್ನ ಮರುಳಾಗಿಸುವ ಮಾದಕತೆಯಿದೆ..."
ಎಂದೆಲ್ಲ ನಿನ್ನ ನೋಡಿದಾಗ ಬರೆಯಬೇಕು ಅಂತಾ ನನಗೆ ಯಾವತ್ತೂ ಅನಿಸಿಲ್ಲ, ಅನ್ನಿಸೋದು ಇಲ್ಲ.
ನಿನ್ನನ್ನು ನೋಡಿದಾಗ ಮನಸ್ಸಲ್ಲಿ ಕೆಟ್ಟ ಭಾವನೆಯ ಬದಲಾಗಿ ಗೌರವ ಹುಟ್ಟುತ್ತದೆ, ನಿರ್ಮಲ ಸ್ವಚ್ಛ ಪ್ರೀತಿ ಹುಟ್ಟುತ್ತದೆ, ವ್ಯಾಮೋಹದ ಬದಲಾಗಿ ಕಾಳಜಿ ಹುಟ್ಟುತ್ತದೆ. ಆದರೆ ಅದನ್ನೆಲ್ಲ ನಿನಗೆ ಹೇಳಿದರೆ ನೀನದನ್ನ ನಂಬಲ್ಲ. ಯಾಕಂತಾ ನಿನಗೂ ಕಾರಣ ಗೊತ್ತಿಲ್ಲ...

ವ್ಯಾಲೆಂಟಿನ ಡೇ ದಿನ ಸಿಲ್ಲಿ ಗಿಫ್ಟ ಕೊಟ್ಟು ಸುಖಿಸಿ ಕೈಕೊಟ್ಟು ಹೋಗುವವನ ಮೇಲಿರೋ ನಂಬಿಕೆ ನಿಯತ್ತಾಗಿರೋ ನನ್ನ ಮೇಲೆ ಯಾಕೀಲ್ಲ...?
ಸಾವಿರಾರು ಸುಳ್ಳು ಹೇಳಿ ಮದುವೆಯಾಗುವವನ ಮೇಲಿರೋ ನಂಬಿಕೆ ಒಂದು ಸತ್ಯ ಹೇಳಿದ ನನ್ನ ಮೇಲೆ ಯಾಕೀಲ್ಲ...?
ಲಕ್ಷ ಸಂಬಳ ತೆಗೆದುಕೊಳ್ಳೋ ಸರ್ಕಾರಿ ಗುಲಾಮನ ಮೇಲಿರೋ ನಂಬಿಕೆ ನೂರಾರು ಜನರಿಗೆ ಲಕ್ಷಗಟ್ಟಲೆ ಸಂಬಳ ಕೊಡುವ ಬಿಜನೆಸಮ್ಯಾನನ ಮೇಲೆ ಯಾಕೀಲ್ಲ...?
ನಿನ್ನನ್ನು ಬರೀ ಮನೆಗೆಲಸಕ್ಕಾಗಿ, ರಾತ್ರಿ ಹಾಸಿಗೆ ಸುಖಕ್ಕಾಗಿ ಮದುವೆಯಾಗುತ್ತಿರುವವನ ಮೇಲಿರೋ ನಂಬಿಕೆ ನಿನ್ನ ಸಂತೋಷಕ್ಕಾಗಿ ಸರ್ವಸ್ವ ತ್ಯಾಗ ಮಾಡಲು ಸಿದ್ಧನಿರುವವನ ಮೇಲೆ ಯಾಕೀಲ್ಲ...?

ನಿನಗೆ ಮತ್ತಷ್ಟು ಪ್ರಶ್ನೆ ಕೇಳಿ ನಿನ್ನನ್ನು ನೋಯಿಸುವ ಆಸೆ ನನಗಿಲ್ಲ... ಕೊನೆಯದಾಗಿ ಒಂದು ಪ್ರಶ್ನೆ ಕೇಳುವೆ, ನೀನೇ ಉತ್ತರಿಸಿ ಬಿಡು, ಇನ್ಮೇಲೆ ಯಾವತ್ತೂ ನಿನ್ನ ಕಣ್ಣಿಗಷ್ಟೇ ಅಲ್ಲ ಯಾರ ಕಣ್ಣಿಗೂ ಕಾಣಿಸಿಕೊಳ್ಳಲ್ಲ... ಸತ್ತ ಮೇಲೆ ಪ್ರೇತವಾಗಿ ಈ ಪ್ರಶ್ನೆಗೆ ಉತ್ತರ ಹುಡುಕುವ ಹುಚ್ಚು ಪ್ರಯತ್ನ ಮಾಡಲ್ಲ...
"ನಿಜವಾಗಿಯೂ ಪ್ರೀತಿಸಿದವರಿಗೆ ಸಿಗೋದು ಬರೀ ನೋವು ಕೊನೆಗೆ ಸಾವು ಅಷ್ಟೇ ಅನಿಸುತ್ತದೆ, ಅಲ್ವಾ?
ಹೇಳು ಸುಂದರಿ ನೀ ಯಾಕೀಷ್ಟು ಕ್ರೂರಿ....?"
