
ಮದುವೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಕಮೆಂಟ ಮಾಡಿ...
ಮದುವೆ ಎಲ್ಲರ ಲೈಫಿನ ಒಂದು ಅತಿಮುಖ್ಯ ಘಟ್ಟವಾಗಿದೆ. ಭಾರತದಲ್ಲಿ ಬೇಗನೆ ಮದುವೆಯಾಗದಿದ್ದರೆ ಜನ ಟಾರ್ಚರ ಮಾಡಲು ಶುರು ಮಾಡುತ್ತಾರೆ. ಮದುವೆಯಾಗದವರು ಬೇಗನೆ ಮದುವೆಯಾದ್ರೆ ಸಾಕಪ್ಪ ಅಂತಾ ಬೇಡಿಕೊಂಡರೆ ಇನ್ನೂ ಮದುವೆಯಾದವರು ಯಾಕಾದರೂ ಮದುವೆಯಾದನೋ ಅಂತಾ ದಿನಾ ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಾರೆ...

ಮದುವೆಯಾಗದೆ ಸಾಧಿಸಿದವರು ಕೆಲವೇ ಕೆಲವು ಜನ ಇದಾರೆ, ಆದರೆ ಮದುವೆಯಾಗದೇ ಹಾಳಾದವರು, ದುಶ್ಚಟ ಅಂಟಿಸಿಕೊಂಡು ಬೇಗನೆ ಸತ್ತವರು ತುಂಬಾ ಜನ ಇದಾರೆ. ಇಂಥದರಲ್ಲಿ ಮದುವೆಯಾದವರ ರಂಪಾಟ ಸಂಕಟ ನೋಡಿದ ಯುವಕ ಯುವತಿಯರು ಮದುವೆಯಾಗಲು ಹೆದರುತ್ತಿದ್ದಾರೆ. ಪ್ರೀತಿಸಿ ಮದುವೆಯಾದವರೇ ಆರು ತಿಂಗಳಲ್ಲಿ ಡೈವರ್ಸ ತೆಗೆದುಕೊಂಡು ದೂರಾಗುತ್ತಿದ್ದಾರೆ, ಅಗ್ನಿ ಸಾಕ್ಷಿಯಾಗಿ ಮದುವೆಯಾದರೂ ಬೇರೆಯವರ ಜೊತೆ ಮಲಗಿ ಮೋಸ ಮಾಡುತ್ತಿದ್ದಾರೆ. ಇಂಥದರಲ್ಲಿ ನಾವು ಅರೇಂಜ ಮ್ಯಾರೇಜ ಆದರೆ ನಮ್ಮ ಗತಿಯೇನು ಅಂತಾ ಯುವಕರು ಮದುವೆಗೆ ಹೆದರುತ್ತಿದ್ದಾರೆ. ಒಳ್ಳೆ ಹೆಂಡತಿ ಸಿಗ್ತಾಳಾ? ನಂಜೊತೆ ನಿಯತ್ತಾಗಿ ಚೆನ್ನಾಗಿ ಸಂಸಾರ ಮಾಡ್ತಾಳಾ? ಅನ್ನೋ ಚಿಂತೆಯಲ್ಲಿದ್ದಾರೆ.

ಲವ್ ಮ್ಯಾರೇಜ ಮಾಡಿಕೊಂಡವರು ಏನಾದರೂ ಮಾಡಿಕೊಂಡು ಹಾಳಾಗೋಗ್ಲಿ, ಆದರೆ ಈಗ ಹಿರಿಯರು ನೋಡಿ ಮಾಡಿದ ಮದುವೆಗಳು ಕೂಡ ಹಾಳಾಗುತ್ತಿವೆ, ಜಾತಕ ಕೂಡಿದರೂ ಜಾತಿ ಬಿಟ್ಟರೂ ಸಂಸಾರದ ಬಂಡಿ ಸುಗಮವಾಗಿ ಸಾಗದಾಗಿದೆ. ಸೋ ಮದುವೆಯಾಗಲೋ ಅಥವಾ ಬೇಡ್ವೋ ಎಂಬ ಚಿಂತೆ ಎಲ್ಲ ಯುವಕ ಯುವತಿಯರಿಗೆ ಕಾಡುತ್ತಿದೆ. ಅಂಥವರ ಗ್ಯಾಂಗಲ್ಲಿ ನಾನು ಬರುವೆ. ಅದಕ್ಕೆ ಎಲ್ಲ ಯುವಕ ಯುವತಿಯರ ಪರವಾಗಿ ಈ ಒಂದು ದೊಡ್ಡ ಪ್ರಶ್ನೆಯನ್ನು ಎಲ್ಲ ಹಿರಿಯರಿಗೆ, ಮದುವೆಯಾದ ಅನುಭವ ಇರುವವರಿಗೆ ಕೇಳುತ್ತಿರುವೆ.

"ಮದುವೆಯಾಗುವುದು ಒಳ್ಳೆಯದಾ? ಅಥವಾ ಸಾಯೋತನಕ ಸಿಂಗಲಾಗಿದ್ದುಕೊಂಡು ತಮಗೆ ಬೇಕಾದಂತೆ ಲೈಫನ್ನು ಎಂಜಾಯ ಮಾಡುವುದು ಒಳ್ಳೆಯದಾ? ಅಥವಾ ಸಂನ್ಯಾಸ ದೀಕ್ಷೆ ತೆಗೆದುಕೊಂಡು ಮೊದಲಿನಂತೆ ಆಶ್ರಮದಲ್ಲಿ ಇರೋದು ಒಳ್ಳೆಯದಾ? ಹುಡುಗರು ಕಂಪಲಸರಿಯಾಗಿ ಮದುವೆ ಆಗಲೇಬೇಕಾ?"

ನನಗೆ ಪರ್ಸನಲ್ಲಾಗಿ ಪದೇಪದೇ ಈ ಸುಳ್ಳು ಸಮಾಜದಿಂದ ದೂರ ಓಡೋಗಿ ಸುಮ್ಮನೆ ನಮ್ಮ ಆಶ್ರಮದಲ್ಲಿ ಇರೋದು ವಾಸಿ ಅಂತಾ ಅನಿಸುತ್ತದೆ. ಈ ಮದುವೆ ಸಂಸಾರ ಮಕ್ಕಳು ನೋವು ಸಾವುಗಳಲ್ಲಿ ಅಂಥ ಮಹಾನ ಸುಖ ಏನಿಲ್ಲ ಅಂತಾ ಅನಿಸುತ್ತದೆ. ಸೋ ಮದುವೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಕಮೆಂಟ ಮಾಡಿ. ಅಭಿಪ್ರಾಯ ತಿಳಿಸುವವರಿಗೆ ಅಡವಾನ್ಸ ಥ್ಯಾಂಕ್ಸ....
