Business Lesson 26
ಹಾಯ್ ಗೆಳೆಯರೇ, ಇವತ್ತಿನ ಲೆಸನನಲ್ಲಿ ನಾವು ಬಾರಗೇನ ಮಾಡುವುದು ಹೇಗೆ ಎಂಬುದನ್ನು ಕಲಿಯೋಣಾ ಅಂದರೆ ನೆಗೋಷಿಯೆಷನ ಸ್ಕಿಲ್ಸಗಳನ್ನು ಕಲಿಯೋಣಾ. ರಿಚ್ ಪಾರ್ಟಿ ಕಾಣಿಸಿದರೆ ಸಾಕು ಬಹಳಷ್ಟು ಮರ್ಚಂಟ್ಸಗಳು ದೋಚಲು ಮುಂದಾಗುತ್ತಾರೆ, ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಿ ನಮಗೆ ಮೋಸ ಮಾಡಲು ಟ್ರಾಯ ಮಾಡ್ತಾರೆ. ಹೀಗಾಗಿ ನಾವು ಬಾರಗೇನ ಮಾಡುವುದನ್ನು ಕಲಿತುಕೊಳ್ಳಬೇಕು. ಇನ್ನೂ ಕೆಲವು ಶಾಪ ಓನರಗಳು ಜನ ಬಾರಗೇನ ಮಾಡ್ತಾರೆ ಅಂತಾನೆ ರೇಟ ಜಾಸ್ತಿ ಹೇಳ್ತಾರೆ, ಆ ಟೈಮಲ್ಲಿ ನಾವು ಅವರು ಹೇಳಿದ ರೇಟಗೆ ಪ್ರೊಡಕ್ಟ ಪರಚೇಸ ಮಾಡಿದ್ರೆ ನಮ್ಮಿಂದ ಜಾಸ್ತಿ ಹಣ ಹೋಗುತ್ತೆ. ಸೋ ನಾವು ಏನೇ ಪರಚೇಸ ಮಾಡಿದ್ರೂ ಕೂಡ ಸ್ವಲ್ಪನಾದ್ರೂ ನೆಗೋಷಿಯೇಷನ ಮಾಡಲೇಬೇಕು. ಇಲ್ಲವಾದರೆ ನಮಗೆ ಲಾಸಾಗುತ್ತದೆ. ಬಾರಗೇನ ಮಾಡಲು ಬೆಸ್ಟ ಟಿಪ್ಸ ಇಲ್ಲಿವೆ ;
1) ಮಾರ್ಕೆಟಗೆ ಹೋಗುವುದಕ್ಕಿಂತ ಮುಂಚೆ ಸ್ವಲ್ಪ ರಿಸರ್ಚ ಮಾಡಿಕೊಂಡು ಹೋಗಿ. ನಿಮಗೆ ಯಾವ ಪ್ರೊಡಕ್ಟ ಬೇಕಾಗಿದೆಯೋ ಅದರ ರೇಟನ್ನು ಒಂದ್ಸರ್ತಿ ಇಂಟರನೆಟಲ್ಲಿ ನೋಡಿಕೊಂಡು ಆಮೇಲೆ ಮಾರ್ಕೆಟಗೆ ಹೋಗಿ. ಪ್ರೋಡಕ್ಟನ ಬಗ್ಗೆ ಸರಿಯಾಗಿ ಗೊತ್ತಿಲ್ಲದೆ ಏನೇನೋ ಹೇಳಬೇಡಿ. ಲಾಜಿಕ್ಕಿಲ್ಲದೆ ಬಾರಗೇನ ಮಾಡಬೇಡಿ. ನಿಮಗೆ ಓವರಚಾರ್ಜ ಮಾಡ್ತಿದಾರೆ, ಆ ಪ್ರೋಡಕ್ಟನ ಬೆಲೆ ಜಾಸ್ತಿಯಿಲ್ಲ ಅಂತನಿಸಿದರೆ ಮಾತ್ರ ಬಾರಗೇನ ಮಾಡಿ, ಇಲ್ಲವಾದರೆ ಬಾರಗೇನ ಮಾಡಬೇಡಿ. ಏಕೆಂದರೆ ಅಂಗಡಿಯವರಿಗೂ ಹೆಂಡತಿ ಮಕ್ಕಳು ಇರ್ತಾರೆ. ಒಂದು ವೇಳೆ ಓವರಚಾರ್ಜ ಮಾಡ್ತಿದಾರೆ ಅಂತನಿಸಿದರೆ ಬಿಡಬೇಡಿ, ಕಂಪಲ್ಸರಿಯಾಗಿ ಬಾರಗೇನ ಮಾಡಿ. ತುಂಬಾ ಲೋ ರೇಟಿಗೆ ಕೇಳಬೇಡಿ. ಯಾಕೆ ರೇಟ ಹೆಚ್ಚಿದೆ ಎಂಬುದಕ್ಕೆ ಜಸ್ಟಿಫಿಕೇಷನ ಕೇಳಿ. ನಂತರ ಒಂದು ರಿಜನೇಬಲ ರೇಟ ಕೊಡಿ. ರೈಟ ಬೆಲೆಗೆ ರೈಟ ಪ್ರೊಡಕ್ಟ ಪರಚೇಸ ಮಾಡಿ.
2) ಜೋರಾಗಿ ಕಿರುಚಾಡಿ ಡಿಸ್ಕೌಂಟ ಕೇಳಬೇಡಿ, ಗುಂಪಲ್ಲಿ ಡಿಸ್ಕೌಂಟ ಕೇಳಬೇಡಿ. ಸಾವಕಾಶವಾಗಿ ಪರ್ಸನಲ್ಲಾಗಿ ಡಿಸ್ಕೌಂಟ ಕೇಳಿ. ಬೇರೆ ಕಸ್ಟಮರಗಳ ಎದುರು ಜೋರಾಗಿ ಡಿಸ್ಕೌಂಟ ಕೇಳಿದರೆ ಅಂಗಡಿಯಾತ ಸತ್ರೂ ರೇಟ ಕಮ್ಮಿ ಮಾಡಲ್ಲ. ಏಕೆಂದರೆ ನಿಮಗೊಬ್ಬರಿಗೆ ಡಿಸ್ಕೌಂಟ ಕೊಟ್ರೆ ಅಲ್ಲಿರೋ ಎಲ್ಲ ಕಸ್ಟಮರಗಳಿಗೆ ಡಿಸ್ಕೌಂಟ ಕೊಡಬೇಕಾಗುತ್ತದೆ. ಸೋ ಸೈಲೆಂಟಾಗಿ ಡಿಸ್ಕೌಂಟ ಕೇಳಿ, ಪ್ರೀತಿಯಿಂದ ಕೇಳಿ, ಸಾವಕಾಶವಾಗಿ ಕೇಳಿ, ಪಾಯಿಂಟ ಟು ಪಾಯಿಂಟ ಮಾತಾಡಿ ಕೇಳಿ, ಪರ್ಸನಲ್ಲಾಗಿ ಕೇಳಿ. ಅಂದಾಗಲೇ ನಿಮಗೆ ಈಜಿಯಾಗಿ ಡಿಸ್ಕೌಂಟ ಸಿಗುತ್ತದೆ. ಅದನ್ನು ಬಿಟ್ಟು ಕಿರುಚಾಡಬೇಡಿ. ಆರ್ಡರ ಮಾಡಬೇಡಿ, ರಿಕ್ವೇಸ್ಟ ಮಾಡಿಕೊಳ್ಳಿ. ಫೈಟ ಮಾಡಬೇಡಿ, ಫ್ರೆಂಡ್ಲಿಯಾಗಿ ಕೇಳಿ. ಯಾಕೆ ರೇಟ ಕಮ್ಮಿ ಮಾಡಬೇಕು ಎಂಬುದಕ್ಕೆ ಪ್ರಾಪರ ರಿಜನ ಕೊಡಿ.
3) ನಿಮಗೆ ಪ್ರೋಡಕ್ಟನ್ನು ತೆಗೆದುಕೊಳ್ಳುವ ಇಂಟರೆಸ್ಟಿದೆ. ಆದರೆ ರೇಟ ಹೆಚ್ಚಾಗಿದೆ, ನಿಮ್ಮತ್ರ ಕಡಿಮೆ ಬಜೆಟ್ಟಿದೆ ಎಂಬಂತೆ ಬಿಹೇವ ಮಾಡಿ. ಇಷ್ಟು ಮಾಡಿ ಸ್ವಲ್ಪ ಸೈಲೆಂಟಾಗಿ. ನಿಮ್ಮ ಸೈಲೆನ್ಸ್ ಈ ಸಂದರ್ಭದಲ್ಲಿ ಬಹಳಷ್ಟು ಇಂಪಾರಟಂಟ ರೋಲ ಪ್ಲೇ ಮಾಡುತ್ತದೆ. ಆಗ ಮರ್ಚಂಟ ಕಸ್ಟಮರ ಕೈಬಿಟ್ಟು ಹೋಗ್ತಾನೆ ಅಂತಾ ಡಿಸ್ಕೌಂಟ ಕೊಟ್ಟೆ ಕೊಡ್ತಾನೆ. ಆಗಲೂ ಆತ ಡಿಸ್ಕೌಂಟ ಕೊಡದಿದ್ದರೆ ನೀವು ಅವರಿಗೆ ರೆಗ್ಯುಲರ ಕಸ್ಟಮರ ಆಗುತ್ತೀರಿ, ಮತ್ತೆ ಅವರ ಅಂಗಡಿಗೆ ಬರುತ್ತೀರಿ, ಮತ್ತೊಮ್ಮೆ ಅವರತ್ರಾನೆ ಖರೀದಿ ಮಾಡ್ತಿರಿ ಅಂತಾ ಭರವಸೆ ಮೂಡಿಸಿ. ಆಗ ಅಂಗಡಿಯಾತ ಡಿಸ್ಕೌಂಟ ಕೊಟ್ಟೆ ಕೊಡ್ತಾನೆ. ಈಗಲೂ ಆತ ಡಿಸ್ಕೌಂಟ ಕೊಡದಿದ್ದರೆ ಆತ ಪುಸ್ಕಟ್ಟೆ ಕೊಟ್ಟರೂ ಅವನತ್ರ ಪರಚೇಸ ಮಾಡಬೇಡಿ. ಮುಂದಿನ ಅಂಗಡಿಗೆ ಹೋಗಿ. ಏಕೆಂದರೆ ಅವನಿಗೆ ಬಿಜನೆಸ ಎಥಿಕ್ಸ ಗೊತ್ತಿಲ್ಲ ಅಂತರ್ಥ. ಅವನಿಗೆ ಕಸ್ಟಮರ ಮೇಲೆ ಕಾಳಜಿ ಇಲ್ಲ ಅಂತರ್ಥ. ಅಂಥವನ ಬಳಿ ಮತ್ತೊಮ್ಮೆ ಹೋಗುವುದು ಸಹ ಸರಿಯಲ್ಲ.
4) ಬಾರಗೇನ ಮಾಡಲು ನಾಚಬೇಡಿ, ಡಿಸ್ಕೌಂಟ ಕೇಳಲು ಹೆದರಬೇಡಿ. ಅದರಲ್ಲಿ ತಪ್ಪೇನಿಲ್ಲ. ಅದು ನಿಮ್ಮ ಹಕ್ಕು. ಹಣ ಕೊಡುತ್ತೀರಿ ಅಂದರೆ ಪ್ರೋಡಕ್ಟನ ಯೋಗ್ಯತೆ ಎಷ್ಟಿದಿಯೋ ಅಷ್ಟೇ ಹಣ ಕೊಡಬೇಕು. ಸೋ ಬಾರಗೇನ ಮಾಡಲು ನಾಚಬೇಡಿ. ನಾವು ಬೆವರು ಸುರಿಸಿ ಸಂಪಾದಿಸಿದನ್ನು ಹರಾಮಿಗೆ ಕೊಡೊದ್ಯಾಕೆ? ಅವೇಲೆಬಿಲಿಟಿ ತುಂಬಾನೆ ಇದೆ, ರೈಟ ಪ್ರೈಜಗೆ ಪ್ರೊಡಕ್ಟ ತೆಗೆದುಕೊಳ್ಳಿ. ಓಪನ ಮೈಂಡೆಡ ಡಿಸ್ಕಶನ ಮಾಡಿ.ನಗುನಗುತ್ತಾ ಮಾತಾಡಿ. ನೋ ಹೇಳಲು ನಾಚಬೇಡಿ. Dare to go away.
5) ನಿಮಗೆ ಅರ್ಜೆನ್ಸಿಯಿದೆ, ಅರ್ಜೆಂಟಾಗಿ ವಸ್ತು ಬೇಕಾಗಿದೆ ಎಂಬುದನ್ನು ನೀವು ಅಂಗಡಿಯನಿಗೆ ಬಿಟ್ಟು ಕೊಟ್ಟರೆ ಅಥವಾ ಅವನಿಗೆ ಗೊತ್ತಾದರೆ ಆತ ಈ ಚಾನ್ಸನ್ನು ಮಿಸಯುಜ ಮಾಡಿಕೊಂಡು ನಿಮಗೆ ಓವರಚಾರ್ಜ ಮಾಡುತ್ತಾನೆ. ಏಕೆಂದರೆ ಅವನಿಗೆ "ಈ ಕಸ್ಟಮರ ಏನಾದರೂ ಪ್ರಾಡಕ್ಟ್ ತೆಗೆದುಕೊಂಡೆ ತೆಗೆದುಕೊಳ್ಳುತ್ತಾನೆ" ಎಂಬುದು ಕನಫರ್ಮಾಗಿರುತ್ತದೆ. ನೀವೆ ಲೀಕ ಮಾಡಿರುತ್ತೀರಿ. ಸೋ ಗುಟ್ಟನ್ನು ಬಿಟ್ಟು ಕೊಡಬೇಡಿ. ನಿಮ್ಮತ್ರ ಬೇರೆ ಆಪ್ಷನ್ಸಗಳಿವೆ ಎಂಬಂತೆ ಬಿಲ್ಡಪ್ ಕೊಡಿ.
ಉದಾಹರಣೆಗೆ ; ನೀವು ಮನೆ ಪರಚೇಸ ಮಾಡಲು ಹೋಗಿದ್ದಿರಿ ಅಂತಾ ಅನ್ಕೊಳ್ಳಿ. ಆಗ ಮನೆ ಇಷ್ಟವಾದರೂ ಇಷ್ಟವಾಗಿಲ್ಲ ಅನ್ನೋ ತರಹ ಬಿಹೇವ ಮಾಡಿ. ಜಾಸ್ತಿ ಇಂಟರೆಸ್ಟ ತೋರಿಸಬೇಡಿ. ನಿಮಗೆ ಮನೆ ಇಷ್ಟವಾಗಿದೆ ಇಲ್ಲ ನಿಮಗೆ ಸದ್ಯಕ್ಕೆ ಮನೆ ಬೇಕೇ ಬೇಕಾಗಿದೆ, ಅರ್ಜೆನ್ಸಿ ಇದೆ ಎಂಬುದನ್ನು ಬಿಟ್ಟು ಕೊಡಬೇಡಿ. ಕ್ಯಾಜುವಲ್ಲಾಗಿ ಮಾತಾಡಿ ಆಗ ಸರಿಯಾದ ಬೆಲೆಗೆ ನಿಮಗೆ ಮನೆ ಸಿಗುತ್ತದೆ.
6) 50% to 60% ಡಿಸ್ಕೌಂಟನೊಂದಿಗೆ ಬಾರಗೇನ ಮಾಡಲು ಸ್ಟಾರ್ಟ ಮಾಡಿ. ಉದಾಹರಣೆಗೆ ; ಅಂಗಡಿಯಾತ ವಸ್ತುವಿನ ಬೆಲೆ 1000 ರೂ ಅಂತಾ ಹೇಳಿದ್ದರೆ ನೀವು 400 ರೂಪಾಯಿಯಿಂದ ಬಾರಗೇನ ಸ್ಟಾರ್ಟ ಮಾಡಿ. ನಿಮಗೆ ಆ ವಸ್ತುವಿನ ಎಗ್ಜಾಕ್ಟ ರೇಟ ಎಷ್ಟಿದೆ ಅಂತಾ ಗೊತ್ತಿದ್ದರೆ ಅಥವಾ ನಿಮ್ಮತ್ರ ರೈಟ ಡಾಟಾ ಇದ್ರೆ ನೀವಾಗೆ ಪ್ರೈಜ ಆಫರ ಮಾಡಬೇಡಿ. ರೇಟ ಗೊತ್ತಿಲ್ಲದಿದ್ದರೆ 50% to 60% ಡಿಸ್ಕೌಂಟನಿಂದ ಬಾರಗೇನ ಸ್ಟಾರ್ಟ ಮಾಡಿ. ಎಗ್ಜಾಕ್ಟ ಅಥವಾ ಅಂದಾಜು ರೇಟ ಗೊತ್ತಿದ್ರೆ ನೀವಾಗೆ ಮೊದಲು ರೇಟ ಕೇಳಬೇಡಿ. ಜಸ್ಟ ಡಿಸ್ಕೌಂಟ ಕೇಳಿ. ಆಗ ಅಂಗಡಿಯಾತ ಸ್ವಲ್ಪ ರೇಟ ಕಮ್ಮಿ ಮಾಡ್ತಾನೆ. ಆಗ ನೀವು ಎಗ್ಜಾಕ್ಟ ರೇಟಿಗೆ ಕೇಳಿ ಆತ ಕೊಡ್ತಾನೆ, ಪ್ರೋಡಕ್ಟ ತೆಗೆದುಕೊಂಡು ಮನೆಗೆ ಬನ್ನಿ. ರೈಟ ಡಾಟಾದೊಂದಿಗೆ ಬಾರಗೇನ ಮಾಡಿ. ಮಾರ್ಕೆಟಗೆ ಹೋಗೋ ಮುನ್ನ ಸ್ವಲ್ಪ ರಿಸರ್ಚ ಮಾಡಿಕೊಂಡು ಹೋಗಿ. ಫಾಸ್ಟಾಗಿ ಶಾಪಿಂಗ ಮಾಡಿಕೊಂಡು ಮನೆಗೆ ಬನ್ನಿ. ಅದನ್ನು ಬಿಟ್ಟು ಗಂಟೆಗಟ್ಟಲೆ ಬಾರಗೇನ ಮಾಡ್ತಾ ಕೂಡಬೇಡಿ.
7) ನೀವು ಡಿಸ್ಕೌಂಟ ಕೇಳಿದಾಗ ಅಂಗಡಿಯಾತ ನೂರಾರು ಪ್ರಾಬ್ಲಮ್ಸ ಹೇಳ್ತಾನೆ. ರಾ ಮಟರಿಯಲ ಕಾಸ್ಟ ಹೆಚ್ಚಿದೆ, ವರ್ಕರಗಳ ಸ್ಯಾಲರಿ ಹೆಚ್ಚಿದೆ, GST ಬಂದಿದೆ ಅಂತೆಲ್ಲ ಕಥೆ ಹೊಡಿತಾನೆ. ಆಗ ನೀವು ಆತ ಹೇಳಿದಕ್ಕೆಲ್ಲ ಯೆಸ್ ಅನ್ನಿ, ಆತ ಹೇಳಿದ ಪ್ರಾಬ್ಲಲ್ಸಗೆ ಸ್ಯಾಡ ಫೀಲ ಮಾಡಿ. ಬಟ ನಿಮ್ಮ ಬಜೆಟ್ಟನೊಂದಿಗೆ ಸ್ಟೀಕ ಆನಾಗಿ. ಆತ ಎಷ್ಟೇ ಬಕ್ವಾಸ ಹೇಳಲಿ, ಅವನೊಂದಿಗೆ ಆ್ಯಗ್ರಿ ಮಾಡಿ, ಆಗ್ರ್ಯುಮೆಂಟ ಮಾಡಬೇಡಿ. "ನೀವು ಹೇಳೊದೆಲ್ಲ ಸರಿಯಾಗಿದೆ. ಬಟ ನನ್ನ ಬಜೆಟ ಇಷ್ಟೇ ಇದೆ, ಇಷ್ಟಕ್ಕೆ ಕೊಡ್ತಿದ್ರೆ ಕೊಡಿ ಇಲ್ಲವಾದರೆ ಬಿಡಿ" ಅಂತೇಳಿ ನಿಮ್ಮ ಬಜೆಟಗೆ ಸ್ಕೀಕ ಆನಾಗಿ. ಇಲ್ಲವಾದರೆ ಆತ ಏನೇನೋ ಕಾರಣ ಹೇಳಿ ನಿಮ್ಮಿಂದ ಜಾಸ್ತಿ ಹಣ ಕಿತ್ತುಕೊಳ್ಳುತ್ತಾನೆ.
ನಾನು ಇಷ್ಟೆಲ್ಲ ಟಿಪ್ಸ ಕೊಟ್ರು ಕೆಲವರಿಗೆ ಬಾರಗೇನ ಮಾಡಲು ಬರಲ್ಲ. ಎಸ್ಪೆಶ್ಲಿ ನಮ್ಮ ಹುಡುಗರಿಗೆ. ಹುಡುಗಿಯರು ಬಾರಗೇನ ಮಾಡುವುದರಲ್ಲಿ ಎಕ್ಸಪರ್ಟ ಆಗಿರುತ್ತಾರೆ. ಒಂದು ಸ್ಮೈಲ ಮಾಡಿ "ಭೈಯ್ಯಾ ದೋನಾ" ಅಂದ್ರೆ ಸಾಕು ಅಂಗಡಿಯಾತ ಡಿಸ್ಕೌಂಟ ಕೊಡ್ತಾನೆ. ಬಟ ನಾವು ಹುಡುಗರು ಎಷ್ಟೇ ಸರ್ಕಸ ಮಾಡಿದರೂ ಕೇರ ಮಾಡಲ್ಲ. ಸೋ ಬಾರಗೇನ ಮಾಡಲು ಬರದ ಹುಡುಗರಿಗೆ ಸ್ಪೆಷಲ್ ಟಿಪ್ಸ ಇಂತಿದೆ.
8) ಒಂದು ವೇಳೆ ನಿಮಗೆ ಬಾರಗೇನ ಮಾಡಲು ಬರದಿದ್ದರೆ ನೀವು ಈ ಟಿಪನ್ನು ಫಾಲೋ ಮಾಡಿ. ಅಂಗಡಿಗೆ ಹೋಗಿ ರೇಟ ಎಷ್ಟಂತಾ ಕೇಳಿ. ನಂತರ ಏನು ಮಾತಾಡದೇ ಸುಮ್ಮನೆ ಒಂದೆರಡು ಹೆಜ್ಜೆ ಮುಂದೆ ಹೋಗಿ. ಆಗ ಅಂಗಡಿಯಾತ ತಾನಾಗಿಯೇ ನಿಮ್ಮನ್ನು ಕರೆದು ಸ್ವಲ್ಪ ಡಿಸ್ಕೌಂಟ ಕೊಡುತ್ತಾನೆ. ಈ ಟೆಕ್ನಿಕ ವರ್ಕಾಗದಿದ್ದರೆ ನೀವು ಸೀದಾ ಫಿಕ್ಸಕ್ಡ ರೇಟ ಇರೋ ಅಂಗಡಿಗಳಿಂದಲೇ ಶಾಪಿಂಗ್ ಮಾಡಿ. ಕಸ್ಟಮರಗಳು ಬಾರಗೇನ ಮಾಡೇ ಮಾಡ್ತಾರೆ ಅಂತಾನೆ ಅಂಗಡಿಯವರು 100 ರಿಂದ 500 ರೂಪಾಯಿ ಜಾಸ್ತಿ ರೇಟ ಹೇಳ್ತಾರೆ.
ಓಕೆ ಗೆಳೆಯರೇ, ಇವೀಷ್ಟು ಟಿಪ್ಸಗಳನ್ನು ಫಾಲೋ ಮಾಡಿ ಶಾಪಿಂಗ್ ಮಾಡಿ. ನೀವು ಪ್ರ್ಯಾಕ್ಟೀಸ್ ಆದಂತೆ ಬಾರಗೇನ ಮಾಡುವಲ್ಲಿ ಎಕ್ಸಪರ್ಟ ಆಗುತ್ತೀರಾ. ಈ ಅಂಕಣ ಯುಜಫುಲ್ಲಾಗಿದ್ರೆ ಈ ಅಂಕಣಕ್ಕೆ ಲೈಕ ಮಾಡಿ, ನಿಮ್ಮ ಬಾರಗೇನ ಟೆಕ್ನಿಕನ್ನ ಕಮೆಂಟ ಮಾಡಿ, ಬೇರೆಯವರಿಗೂ ಯುಜಾಗುತ್ತೆ. ಜೊತೆಗೆ ನನ್ನ ಫೇಸ್ಬುಕ್ ಪೇಜಗೆ ಫಾಲೋ ಮಾಡಿ. ಆಲ ದ ಬೆಸ್ಟ...