
ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ಸ್ಟೂಡೆಂಟ್ಸಗಳಿಂದ ಬಂದಿರುವ ಒಂದು ಇಂಪಾರಟಂಟ ಕ್ವೇಷನ ಮೇಲೆ ಡಿಸ್ಕಸ ಮಾಡುವೆ. ಆ ಕ್ವೇಷನ ಏನಪ್ಪಾ ಅಂದ್ರೆ "ನೈಟ ಸ್ಟಡಿ ಒಳ್ಳೆಯದಾ ಅಥವಾ ಮಾರ್ನಿಂಗ ಸ್ಟಡಿ ಒಳ್ಳೆಯದಾ?". ಓಕೆ ಬನ್ನಿ ಗೆಳೆಯರೇ ನೈಟ ಸ್ಟಡಿ ಮತ್ತು ಅರ್ಲಿ ಮಾರ್ನಿಂಗ್ ಸ್ಟಡಿಗಳಲ್ಲಿ ಯಾವುದು ಬೆಸ್ಟ ಅಂತಾ ನೋಡೋಣಾ.

ಗೆಳೆಯರೇ, ಸ್ಟಡಿ ಮಾಡಲು ಇಂಥದ್ದೇ ಟೈಮ ಅಂತಾ ಇಲ್ಲ. ಯಾವಾಗ ಬೇಕಾದ್ರೂ ಸ್ಟಡಿ ಮಾಡಿದ್ರೂ ಕೂಡ ಬೆಸ್ಟಾಗಿದೆ. ಸ್ಟಡಿ ಮಾಡಿದ್ರೆ ಸಾಕು. ಬಟ ನೈಟ ಸ್ಟಡಿ ಮಾಡೋದು ಅಷ್ಟೇನು ಬೆಸ್ಟಲ್ಲ ಎಂಬುದು ನನ್ನ ಪರ್ಸನಲ ಒಪಿನಿಯನ ಆಗಿದೆ. ಯಾಕೆ ಅನ್ನೋದಕ್ಕೆ ನಾನು ಸರಿಯಾದ ಕಾರಣಗಳನ್ನು ಕೊಡುವೆ, ಅದರ ಆಧಾರದ ಮೇಲೆ ನಿಮಗೆ ಯಾವಾಗ ಕನ್ವಿನೆಂಟಾಗುತ್ತೋ ಆವಾಗ ಸ್ಟಡಿ ಮಾಡಿ.

1) ಲೇಟ ನೈಟ ಸ್ಟಡಿ ಮಾಡುವುದರಿಂದ ನಿಮ್ಮ ಮೈಂಡ ಮೇಲೆ ನೆಗೆಟಿವ ಎಫೆಕ್ಟ ಆಗುತ್ತದೆ. ನಿಮ್ಮ ಫೋಕಸ ಹಾಗೂ ಮೆಮೊರಿ ಪವರ ಕಮ್ಮಿಯಾಗುತ್ತದೆ. ಸೋ ನೈಟ ನಿದ್ದೆಗೆಟ್ಟು ಸ್ಟಡಿ ಮಾಡುವ ಬದಲು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಬೆಳಿಗ್ಗೆ ಬೇಗನೆದ್ದು ಸ್ಟಡಿ ಮಾಡೋದು ಬೆಸ್ಟಾಗಿದೆ. ಇದರಿಂದ ನಿಮ್ಮ ಫೋಕಸ ಹಾಗೂ ಮೆಮೊರಿ ಪವರ ಹೆಚ್ಚಾಗುತ್ತದೆ. ಓದಿದ್ದೆಲ್ಲ ನೆನಪಲ್ಲಿ ಉಳಿಯುತ್ತದೆ.

2) ನೈಟ ಸ್ಟಡಿ ನೆಪದಲ್ಲಿ ನಿಸರ್ಗದ ವಿರುದ್ಧವಾಗಿ ವರ್ತಿಸುವುದು ಆರೋಗ್ಯಕರವಲ್ಲ. ರಾತ್ರಿ ಇರುವುದು ನಿದ್ದೆ ಮಾಡುವುದಕ್ಕಾಗಿ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದಷ್ಟು ನಮ್ಮ ಎನರ್ಜಿ ಹೆಚ್ಚಾಗುತ್ತದೆ. ನಮ್ಮ ಬಾಡಿ ಸರಿಯಾಗಿ ಹೀಲ ಆಗುತ್ತದೆ. ಅದಕ್ಕಾಗಿ ನೈಟ ಸ್ಟಡಿ ಅಷ್ಟೊಂದು ಬೆಸ್ಟಲ್ಲ. ದಿನ ತಡ ರಾತ್ರಿ ಎಚ್ಚರವಿರುವುದರಿಂದ ನೀವು ಡಿಪ್ರೆಶನಗೆ ತುತ್ತಾಗುವ ಚಾನ್ಸಸ ತುಂಬಾನೇ ಇದೆ.

3) ದಿನವೆಲ್ಲ ಕಾಲೇಜಿಗೋಗಿ ಅಲ್ಲಿಇಲ್ಲಿ ಸುಸ್ತಾಡಿ ನೀವು ಸುಸ್ತಾಗಿರ್ತಿರಾ. ನಿಮ್ಮ ಮೈಂಡ ವೆಜಿಟೇಬಲ್ ಮಾರ್ಕೆಟ ಆಗಿರುತ್ತದೆ. ಈಗ ನೀವು ನೈಟ ಸ್ಟಡಿ ಮಾಡಿದ್ರೆ ಓದಿದ್ದು ತಲೆಗೆ ಹತ್ತಲ್ಲ. ನೀವು ಬೋರಾಗಿ ಮೊಬೈಲನಲ್ಲಿ ಟೈಮಪಾಸ ಮಾಡ್ತಾ ಕೂಡ್ತಿರಿ ಅಷ್ಟೇ. ಅದಕ್ಕೆ ರಾತ್ರಿ ಗೂಬೆ ತರ ಎಚ್ಚರವಿರುವ ಬದಲು ಬೇಗನೆ ಮಲಗಿ ಬೇಗನೆ ಎದ್ದು ಫ್ರೆಶ ಮೈಂಡನೊಂದಿಗೆ ಹ್ಯಾಪಿಯಾಗಿ ಓದಿ. ಆನಂತರ ಸ್ವಲ್ಪ ಎಕ್ಸರಸೈಜ ಮಾಡಿದರೆ ನೀವು ಫುಲ್ ಡೇ ಫ್ರೆಶ & ಎನರ್ಜಿಟಿಕ್ಕಾಗಿರುತ್ತೀರಾ.

ಗೆಳೆಯರೇ ಈ ಮೂರು ಕಾರಣಗಳಿಂದಾಗಿ ನೈಟ ಸ್ಟಡಿಗಿಂತ ಅರ್ಲಿ ಮಾರ್ನಿಂಗ್ ಸ್ಟಡಿ ಬೆಸ್ಟಾಗಿದೆ. ರಾತ್ರಿ ಗೂಬೆಗಳಾಗುವ ಬದಲು ಅರ್ಲಿ ಮಾರ್ನಿಂಗ ಗುಬ್ಬಚ್ಚಿಗಳಾಗಿ. ನಿಮ್ಮ ಲೈಫ ಸೂಪರಾಗಿರುತ್ತದೆ. ಈ ಅಂಕಣಕ್ಕೆ ಲೈಕ ಮಾಡಿ ನಿಮ್ಮ ಒಪಿನಿಯನ ಕಮೆಂಟ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...
