1) ಎಷ್ಟೇ ಕೆಟ್ಟ ಪರಿಸ್ಥಿತಿ ಎದುರಾದರೂ ಯಾವಾಗಲೂ ಪೋಜಿಟಿವ ಆಗಿರಿ. ಕೆಟ್ಟ ದಿನಗಳು ಕಳೆದ ನಂತರ ಒಳ್ಳೇ ದಿನಗಳು ಬಂದೇ ಬರುತ್ತವೆ...

2) ಗೆಲುವು ಬಂದಾಗ ಸೋಲು ಸೋಲುತ್ತದೆ, ಬೆಳಕು ಬಂದಾಗ ಕತ್ತಲು ಕಾಣೆಯಾಗುತ್ತದೆ. ನಿಮಗೂ ಒಂದು ಒಳ್ಳೇ ಟೈಮ ಬಂದೇ ಬರುತ್ತದೆ...
3) ಕಷ್ಟದಿಂದಲೇ ನಿಮ್ಮ ಸುಖದ ದಿನಗಳ ಜನನವಾಗುತ್ತದೆ, ಸೋಲಿನಿಂದಲೇ ಗೆಲುವಿನ ಪಯಣ ಶುರುವಾಗುತ್ತದೆ. ಅದಕ್ಕಾಗಿ ಕಷ್ಟ ಸೋಲು ಎದುರಾದಾಗ ಅಳುವ ಬದಲು ಖುಷಿ ಪಡಿ...
4) ಒಳ್ಳೇ ಯೋಚನೆಗಳು ಒಳ್ಳೇ ಫಲಿತಾಂಶಗಳನ್ನು ಕೊಡುತ್ತವೆ. ಅದಕ್ಕಾಗಿ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ.
5) ನಿಮಗೆ ಎತ್ತರಕ್ಕೆ ಹಾರಬೇಕೆಂಬ ಆಸೆಯಿದ್ದರೆ ಈಗಲೇ ಅನಾವಶ್ಯಕ ಭಾರಗಳನ್ನು, ಭಾವನೆಗಳನ್ನು ನಿಮ್ಮ ಜೀವನದಿಂದ ಕಿತ್ತು ಬೀಸಾಕಿ...
6) ನೀವು ಯಾವುದರ ಮೇಲೆ ಜಾಸ್ತಿ ಫೋಕಸ ಮಾಡ್ತಿರೋ ಅದೇ ನಿಮಗೆ ಸಿಗುತ್ತದೆ. ಅದಕ್ಕಾಗಿ ನಿಮಗೆ ಏನು ಬೇಕೋ ಅದರ ಮೇಲಷ್ಟೇ ಫೋಕಸ ಮಾಡಿ.
7) ಎಲ್ಲವೂ ನಿಮ್ಮ ವಿರುದ್ಧವಾಗಿ ಹೊರಟಿದೆ ಅಂತನಿಸಿದಾಗ ವಿಮಾನ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ ಹಾಗೂ ಜೀವಂತವಾಗಿರುವ ಮೀನು ನೀರಿಗೆ ವಿರುದ್ಧವಾಗಿ ಈಜುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ...
8) ಹ್ಯಾಪಿನೆಸ ಹಾಗೂ ಸಕ್ಸೆಸ ಚಾನ್ಸ ಆಗಿಲ್ಲ, ಚಾಯ್ಸ ಆಗಿವೆ. ನಿಮಗವು ಬೇಕೆಂದರೆ ನೀವು ಅವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು...
9) ಪ್ರಯತ್ನಿಸದಿದ್ದರೆ ಫಲ ಸಿಗಲ್ಲ, ಕನಸನ್ನು ಕಾಣದಿದ್ದರೆ ಅದು ನಿಜವಾಗಲ್ಲ. ಅದಕ್ಕಾಗಿ ಕನಸು ಕಾಣಲು, ಪ್ರಯತ್ನ ಪಡಲು ಹಿಂಜರಿಯಬೇಡಿ...
10) ಇಷ್ಟಪಟ್ಟಿದ್ದು ಸಿಗದಿದ್ದರೆ ಸಿಕ್ಕಿದ್ದನ್ನು ಇಷ್ಟಪಡಬೇಕು. ಇಲ್ಲವಾದರೆ ಇದು ಕೂಡ ನಿಮ್ಮಿಂದ ದೂರ ಹೋಗುತ್ತದೆ...
11) ನಿಮ್ಮ ಕಂಟ್ರೋಲನಲ್ಲಿರದ ಸಂಗತಿಗಳಿಗೆ ಕೊರಗುವುದನ್ನು ನಿಲ್ಲಿಸಿ. ನಿಮ್ಮಿಂದ ಯಾವುದು ಸಾಧ್ಯವೋ ಅದನ್ನಷ್ಟೇ ಕರೆಕ್ಟಾಗಿ ಮಾಡಿ.
12) ನೀವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಲು ಗ್ರೇಟ ಆಗಿರಬೇಕು ಎಂಬ ನಿಯಮವೇನಿಲ್ಲ. ಆದರೆ ನೀವು ಕೆಲಸ ಪ್ರಾರಂಭಿಸಿದರೆ ಒಂದಲ್ಲ ಒಂದಿನ ಗ್ರೇಟ ಆಗುತ್ತೀರಿ...
13) ಈ ಜಗತ್ತಿನಲ್ಲಿ ಯಾರು ಕೂಡ ಫರಫೇಕ್ಟಾಗಿಲ್ಲ. ಸೋ ಫರಫೆಕ್ಟ ವ್ಯಕ್ತಿಗಳನ್ನು ವಸ್ತುಗಳನ್ನು ಹುಡುಕಾಡಿ ಟೈಮ ವೇಸ್ಟ ಮಾಡಬೇಡಿ. ಇರುವುದರಲ್ಲೇ ಬೆಸ್ಟ ವಸ್ತು ಹಾಗೂ ವ್ಯಕ್ತಿಗಳನ್ನು ಹುಡುಕಿ...
14) ಕೊರಗುವುದರಿಂದ ನಾಳೆಯ ಸಮಸ್ಯೆಗಳಿಗೆ ಸೋಲುಷನ ಸಿಗಲ್ಲ, ಇವತ್ತಿನ ನೆಮ್ಮದಿ ಹೋಗುತ್ತದೆ. ಅದಕ್ಕಾಗಿ ಕೊರಗುವುದನ್ನು ಬಿಟ್ಟು ಕೆಲಸ ಮಾಡಿ, ನಾಳೆ ಬೆಸ್ಟಾಗುತ್ತದೆ...
15) ಓವರ ಥಿಂಕಿಂಗ ಸೋಲು ಹಾಗೂ ದು:ಖಕ್ಕೆ ಮುಖ್ಯ ಕಾರಣವಾಗಿದೆ. ಓವರ ಥಿಂಕಿಂಗ ಬದಲಾಗಿ ಪೋಜಿಟಿವ ಥಿಂಕಿಂಗ ಮಾಡಿ...
16) ಬರೀ ಸ್ವೀಟ ತಿಂದರೂ ಕೂಡ ಬೋರಾಗುತ್ತದೆ. ಅದಕ್ಕೆ ಆವಾಗಾವಾಗ ಹುಳಿ, ಖಾರ ಹಾಗೂ ಕಹಿಯನ್ನು ಕೂಡ ತಿನ್ನಬೇಕು. ಇದೇ ರೀತಿ ಲೈಫಲ್ಲಿ ಬರುವ ಸೋಲು, ನೋವು, ಅವಮಾನಗಳನ್ನು ಸಿಹಿ ಕಹಿ ತರಹ ತೆಗೆದುಕೊಳ್ಳಬೇಕು.
17) ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನು ಯೋಚಿಸುವುದೇ ಪೋಜಿಟಿವಿಟಿಯಾಗಿದೆ...
18) ಒಳ್ಳೆಯ ಘಟನೆಗಳು ಹ್ಯಾಪಿನೆಸನ್ನು ಕೊಡುತ್ತವೆ, ಕೆಟ್ಟ ಘಟನೆಗಳು ಪಾಠ ಕಲಿಸುತ್ತವೆ. ಅದಕ್ಕಾಗಿ ಯಾವುದಕ್ಕೂ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಜಸ್ಟ ಬಂದಂತೆ ಮುಂದೆ ಸಾಗುತ್ತೀರಿ...
19) ನೆಗೆಟಿವಿಟಿ ನಿಮ್ಮನ್ನು ನಿಮ್ಮ ಗೋಲನಿಂದ ದೂರಾಗಿಸುತ್ತದೆ. ಅದಕ್ಕಾಗಿ ಪೋಜಿಟಿವಿಟಿಯಿಂದ ನೆಗೆಟಿವಿಟಿಯನ್ನು ಶಾಶ್ವತವಾಗಿ ಸಾಯಿಸಿ...
20) ಪೋಜಿಟಿವ ಆಗಿ ಯೋಚಿಸಿ ನಿಮಗೆ ಪೋಜಿಟಿವ ರಿಜಲ್ಟಗಳು ಸಿಗುತ್ತವೆ...
21) ನಿಮ್ಮಲ್ಲಿ ಕೆಲಸ ಮಾಡುವ ಇಚ್ಛೆಯಿದ್ದರೆ ನಿಮ್ಮೆಲ್ಲ ಕನಸುಗಳು ಖಂಡಿತಾ ನನಸಾಗುತ್ತವೆ. ಅದಕ್ಕಾಗಿ ಕೊರಗುವ ಬದಲು ಕೆಲಸ ಮಾಡಿ.
22) ಪ್ರತಿದಿನ ಹೊಸ ದಿನವಾಗಿದೆ. ಹಳೆಯದನ್ನು ಮರೆತು ಹೊಸದಾಗಿ ಕೆಲಸ ಪ್ರಾರಂಭಿಸಿ...
23) ಹ್ಯಾಪಿನೆಸ ಮೂಡಾಗಿದೆ, ಪೋಜಿಟಿವಿಟಿ ಮೈಂಡಸೆಟ್ಟಾಗಿದೆ. ಪೋಜಿಟಿವ ಮೈಂಡಸೆಟ ಬೆಳೆಸಿಕೊಳ್ಳಿ ಮತ್ತು ಲೈಫಲ್ಲಿ ಗೆಲ್ಲಿ...
24) ಒಳ್ಳೆಯದರಲ್ಲಿ ಕೆಟ್ಟದನ್ನು ಹುಡುಕುವ ಬದಲು ಕೆಟ್ಟದರಲ್ಲಿ ಒಳ್ಳೆಯದನ್ನು ಹುಡುಕಿ. ಆಗ ನೋಡಿ ನಿಮ್ಮ ಲೈಫ ಎಷ್ಟೊಂದು ಹ್ಯಾಪಿಯಾಗಿರುತ್ತೆ ಅಂತಾ...
25) ಗೆಲ್ಲುವುದರಿಂದ ಶಕ್ತಿ ಬರಲ್ಲ, ಸೋಲುವುದರಿಂದ ಶಕ್ತಿ ಬರುತ್ತದೆ. ನಗುವಿನಿಂದ ಕಾನ್ಫಿಡೆನ್ಸ್ ಬರಲ್ಲ, ನೋವಿನಿಂದ ಕಾನ್ಫಿಡೆನ್ಸ್ ಬರುತ್ತದೆ. ಅದಕ್ಕಾಗಿ ಸೋಲು ನೋವುಗಳನ್ನು ದ್ವೇಷಿಸಬೇಡಿ...
26) ನಿಮ್ಮ ಇವತ್ತಿನ ಸ್ಟ್ರಗಲ ನಾಳೆಯ ಸಕ್ಸೆಸಗೆ ಬುನಾದಿಯಾಗಿದೆ. ಈ ನೋವು ನಿಮಗೆ ಶಕ್ತಿ ಸಾಮರ್ಥ್ಯಗಳನ್ನು ಕೊಡುತ್ತದೆ...
27) ಬ್ಯೂಟಿಫುಲ್ ಪ್ಲೇಸನ್ನು ಹುಡುಕಬೇಡಿ, ಇರೋ ಪ್ಲೇಸನ್ನೇ ಬ್ಯೂಟಿಫುಲ್ ಮಾಡಿ...
28) ಆಶಾವಾದಿ ಪ್ರತಿ ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ. ಆದರೆ ನಿರಾಶಾವಾದಿ ಪ್ರತಿ ಅವಕಾಶದಲ್ಲಿ ಕಠಿಣತೆಯನ್ನು ಹುಡುಕುತ್ತಾನೆ. ನೀವು ಬಯಸಿದ್ದು ನಿಮಗೆ ಸಿಗಬೇಕೆಂದರೆ ನೀವು ಆಶಾವಾದಿಯಾಗಿ...
29) ಲೂಸರಗಳು ಬರೀ ಸಮಸ್ಯೆಯ ಮೇಲೆ ಫೋಕಸ ಮಾಡುತ್ತಾರೆ. ಆದರೆ ವಿನ್ನರಗಳು ಸೋಲುಷನ ಮೇಲೆ ಫೋಕಸ ಮಾಡುತ್ತಾರೆ. ವಿನ್ನರಗಳಾಗಿ...
30) ಅಪಾರ್ಚುನಿಟಿಗಾಗಿ ಕಾಯ್ತಾ ಕೂಡಬೇಡಿ, ಅದನ್ನ ಕ್ರಿಯೆಟ ಮಾಡಿಕೊಳ್ಳಿ...
31) ನಿಮ್ಮ ನಗುವಿಗೆ ಎಲ್ಲ ನೋವನ್ನು ಮರೆಸುವ ಶಕ್ತಿಯಿದೆ, ನಿಮ್ಮ ನಗುವಿಗೆ ಸಮಸ್ಯೆಯನ್ನು ಸಾಯಿಸುವ ತಾಕತ್ತಿದೆ. ಅದಕ್ಕಾಗಿ ಸದಾ ನಗ್ತಾಯಿರಿ...
32) ನಿಮ್ಮ ನಿನ್ನೆಯ ಕಹಿ ಘಟನೆಯ ನೆನಪಲ್ಲಿ ನಿಮ್ಮ ಸುಂದರ ನಾಳೆಗೆ ಮೋಸ ಮಾಡಬೇಡಿ. ನಿನ್ನೆ ಆಗಿ ಹೋಗಿರುವುದನ್ನು ಮರೆತು ಬಿಡಿ, ನಾಳೆಗಾಗಿ ಇವತ್ತು ಕೆಲಸ ಮಾಡಿ...
33) ನಿಮ್ಮ ನೋವನ್ನು ನಗುವಾಗಿ ಪರಿವರ್ತಿಸಿ, ಪೇನನ್ನು ಪವರಾಗಿ ಪ7ರಿವರ್ತಿಸಿ...
34) ಸಾವಿರ ಜನ ನಿಮ್ಮ ಕಾಲೆಳೆದು ಕೆಳಗೆ ಬೀಳಿಸಿದರೂ ಮತ್ತೆ ಮೇಲೆಳಲು ಒಂದು ಕಾರಣ ಹುಡುಕಿ ಸಾಕು...
35) ನಿಮ್ಮನ್ನು ನೀವು ನಂಬಿ, ನಿಮ್ಮನ್ನು ನೀವು ಗೆಲ್ಲಿ. ಆಮೇಲೆ ಎಲ್ಲವೂ ನಿಮ್ಮ ಕಾಲ ಕೆಳಗೆ ಬಿದ್ದಿರುತ್ತವೆ...