ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

                                  Business Lesson 25

ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

                 ಹಾಯ್ ಗೆಳೆಯರೇ, ಸದ್ಯಕ್ಕೆ ಈ ಜಗತ್ತಿನಲ್ಲಿ ಪ್ರತಿಯೊಬ್ಬರು ಸೇಲ್ಸಮ್ಯಾನಗಳಾಗಿದ್ದಾರೆ. ಬಿಜಿನೆಸಮ್ಯಾನಗಳು ಪ್ರೋಡಕ್ಟ ಇಲ್ಲವೇ ಸರ್ವಿಸನ್ನು ಸೇಲ್ ಮಾಡಿದರೆ ಪೋಲಿಟಿಷಿಯನಗಳು ದೇಶಸೇವೆಯ ಹೆಸರಲ್ಲಿ ಸುಳ್ಳುಗಳನ್ನು ಮಾರುತ್ತಿದ್ದಾರೆ. ರೈಟರಗಳು ತಮ್ಮ ಥಾಟ್ಸಗಳನ್ನು ಮಾರಿದರೆ, ಮೋಟಿವೇಷನಲ ಸ್ಪೀಕರಗಳು ಮಾತುಗಳನ್ನು ಮಾರುತ್ತಿದ್ದಾರೆ.‌‌ ಇನ್ನೂ ಕಾಮನ ಮ್ಯಾನಗಳು ಸ್ನೇಹ ಪ್ರೀತಿ ಸಂಬಂಧಗಳನ್ನು ಮಾರಾಟ ಮಾಡಿ ತಮ್ಮ ಸ್ವಾರ್ಥಗಳನ್ನು ಸಾಧಿಸುತ್ತಿದ್ದಾರೆ. ಈ ರೀತಿ ಎಲ್ಲರೂ ಏನಾದರೂ ಒಂದನ್ನು ಸೇಲ್ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಸಕ್ಸೆಸಫುಲ ವ್ಯಕ್ತಿಗೆ ತನ್ನ ಪ್ರೋಡಕ್ಟಗಳನ್ನು ಹೇಗೆ ಸೇಲ್ ಮಾಡಬೇಕು, ತನ್ನನ್ನು ತಾನು ಹೇಗೆ ಮಾರ್ಕೆಟಿಂಗ ಮಾಡಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಅನಲಿಮಿಟೆಡ್ ಹಣ ಗಳಿಸಲು ಒಂದೇ ಒಂದು ಬೆಸ್ಟ ಸ್ಕೀಲ ಇದೆ, ಅದು ಸೇಲ್ಸ. ಸೇಲ್ಸ ಅನಲಿಮಿಟೆಡ್ ಹಣ ಗಳಿಸಲು ಬೆಸ್ಟ ಜಾಬ್ ಆಗಿದೆ. ನಿಮಗೆ ವಸ್ತುಗಳನ್ನು, ಸರ್ವಿಸಗಳನ್ನು ಮಾರಲು ಬಂದ್ರೆ ನೀವು ಬೇಕಾದಷ್ಟು ಹಣವನ್ನು ಗಳಿಸಬಹುದು‌. ಸೇಲ್ಸ ಟೀಮ ಪ್ರತಿ ಕಂಪನಿಯ ಬ್ಲಡ್ ಸಪ್ಲಾಯ ಯುನಿಟಾಗಿದೆ‌. ಸೋ ಸೇಲ್ಸ ಮ್ಯಾನಗಳಿಗೆ ಹೈ ಡಿಮ್ಯಾಂಡಿದೆ. ಬಹಳಷ್ಟು ಕಂಪನಿಗಳು ಯಾವಾಗಲೂ ಒಳ್ಳೆ ಸೇಲ್ಸಮ್ಯಾನಗಳ ಹುಡುಕಾಟದಲ್ಲಿರುತ್ತವೆ, ಕೆಲವೊಂದಿಷ್ಟು ಕಂಪನಿಗಳು ತಮ್ಮ ‌ಪ್ರೋಡಕ್ಟಗಳನ್ನು ಮಾರಾಟ ಮಾಡಲು ಬೇರೆ ಮಾರ್ಕೆಟಿಂಗ ಕಂಪನಿಗಳನ್ನು ಹಾಯರ ಮಾಡುತ್ತವೆ. ಸೇಲ್ಸ ಅಂತು ಮೊಸ್ಟ ಡಿಮ್ಯಾಂಡೆಡ ಸ್ಕೀಲ ಆಗಿದೆ. ನೀವೊಬ್ಬ ಬಿಜನೆಸಮ್ಯಾನಾಗಿದ್ದರೆ ನೀವು ಸೇಲ್ಸ & ಮಾರ್ಕೆಟಿಂಗ್ ಸ್ಕೀಲಗಳನ್ನು ಕಂಪಲ್ಸರಿಯಾಗಿ ಬೆಳೆಸಿಕೊಳ್ಳಲೇಬೇಕು‌. ಅದಕ್ಕಾಗಿ ಕೆಲವೊಂದಿಷ್ಟು ಟಿಪ್ಸಗಳು ಇಂತಿವೆ ; 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 1 : ಸ್ಮೈಲನೊಂದಿಗೆ ಸೇಲ ಮಾಡಿ : Sell with Smile

                      ನೀವು ಏನಾದರೂ ಒಂದನ್ನು ಸೇಲ್ ಮಾಡಲು ಹೋದಾಗ ಸ್ಮೈಲಿಂಗ ಫೇಸನೊಂದಿಗೆ ಹೋಗಿ. ಬೋರಿಂಗ ಫೇಸನೊಂದಿಗೆ ಸೇಲ್ ಮಾಡಬೇಡಿ. ಸಪ್ಪೆ ಮೋರೆ ಹಾಕಿಕೊಂಡು ಸೇಲ್ ಮಾಡಬೇಡಿ. ಸಿಕ್ಕಾಪಟ್ಟೆ ಹ್ಯಾಪಿನೆಸ, ಸ್ಮೈಲ, ಎನರ್ಜಿ, ಎಂಥುಜಿಯಾಸಮ ಹಾಗೂ ಎಕ್ಸೈಟಮೆಂಟನೊಂದಿಗೆ ಸೇಲ್ ಮಾಡಿ. ಉತ್ಸಾಹದೊಂದಿಗೆ ಸೇಲ್ ಮಾಡಿ. ನೀವು ನಿಮ್ಮ ಕಸ್ಟಮರನೊಂದಿಗೆ ಹ್ಯಾಂಡಶೇಕ್ ಮಾಡಿದರೆ ಪವರ್ ಟ್ರಾನ್ಸಫರ ಆಗಬೇಕು ಅಷ್ಟೊಂದು ಉತ್ಸಾಹ ನಿಮ್ಮಲ್ಲಿರಬೇಕು‌‌. ನಿಮ್ಮ ಮೇಲೆ ನಿಮ್ಮ ಪ್ರೋಡಕ್ಟ ಮೇಲೆ ನಂಬಿಕೆ ‌ಇಟ್ಟು ಕಾನ್ಫಿಡೆಂಟಾಗಿ ಸೇಲ್ ಮಾಡಿ. ಪೋಜಿಟಿವ ಆ್ಯಟಿಟ್ಯೂಡನೊಂದಿಗೆ ಸೇಲ್ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 2 : ನಿಮ್ಮ ಕಮ್ಯುನಿಕೇಷನ್ ಸ್ಕೀಲನ್ನು ಇಂಪ್ರೂವ ಮಾಡಿಕೊಳ್ಳಿ : Improve your Communication Skills 

                          ನಿಮ್ಮ ಕಮ್ಯುನಿಕೇಷನ್ ಸ್ಕೀಲನ್ನು‌ ಇಂಪ್ರೂವ ಮಾಡಿಕೊಳ್ಳಿ. ಕ್ಲೀನ, ಕ್ಲಿಯರ್ & ಕಾನ್ಫಿಡೆಂಟಾಗಿ ಮಾತನಾಡುವುದನ್ನು ಕಲಿತುಕೊಳ್ಳಿ. ಸೇಲ್ ಪಿಚ್ ಮಾಡುವುದಕ್ಕಿಂತ ಮೊದಲು ನಿಮ್ಮ‌ ಪ್ರೋಡಕ್ಟನ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ. ಸಾಧ್ಯವಾದಷ್ಟು ಸಿಂಪಲ್ ವರ್ಡ್ಸಗಳಲ್ಲಿ ಸೇಲ್ಸ ಪಿಚ್ ಮಾಡಿ. ಅನಾವಶ್ಯಕವಾಗಿ ನಿಮ್ಮ ಇಂಗ್ಲೀಷ್ ನಾಲೇಜನ್ನು ಕಸ್ಟಮರಗಳ ಮೇಲೆ ಉಗುಳಬೇಡಿ‌.‌ 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 3 : ಕಸ್ಟಮರಗಳೊಂದಿಗೆ ಕನೇಕ್ಟಾಗಿ : Connect with customers

                                  ಸೇಲ್ಸ ಪಿಚ್ ಮಾಡುವುದಕ್ಕಿಂತ ಮುಂಚೆ ಹೇಗಾದರೂ ಮಾಡಿ ಕಸ್ಟಮರಗಳೊಂದಿಗೆ ಕನೇಕ್ಟಾಗಿ. ಫಸ್ಟ ಇಂಪ್ರೆಷನಲ್ಲೇ ಅವರ ಭಾಷೆ, ಅವರ ಊರು, ಇಲ್ಲವೇ ಅವರ ಇಂಟರೆಸ್ಟನ್ನು ಪತ್ತೆ ಹಚ್ಚಿ ಅವರೊಂದಿಗೆ ಕನೇಕ್ಟಾಗಿ. ಮೀಟಾಗುತ್ತಿದ್ದಂತೆಯೇ ಡೈರೆಕ್ಟಾಗಿ ಸೇಲ್ಸ ಪಿಚ್ ಮಾಡಬೇಡಿ. ಮೊದಲಿಗೆ ಅವರ ಬಗ್ಗೆ ತಿಳಿದುಕೊಳ್ಳಿ‌. ಅವರ ಊರು, ಭಾಷೆ ಇಲ್ಲವೇ ಇಂಟರೆಸ್ಟ ಬಗ್ಗೆ ಕ್ಲೂ ಸಿಕ್ರೆ ಅದನ್ನಿಟ್ಟುಕೊಂಡು ಅವರೊಂದಿಗೆ ಕನೇಕ್ಟಾಗಿ. ಸಿಗದಿದ್ದರೆ ಸದ್ಯದ ಯಾವುದಾದರೂ ಒಂದು ಸಿಚುವೇಷನ ಇಟ್ಟುಕೊಂಡು ಅವರೊಂದಿಗೆ ‌ಕನೇಕ್ಟಾಗಿ. 

ಉದಾಹರಣೆಗೆ ; ನಿಮ್ಮ ಕಸ್ಟಮರ ಪಂಜಾಬಿಯಾಗಿದ್ದರೆ ಪಂಜಾಬಿಯಲ್ಲಿ ಏನಾದರೂ ಒಂದು ಲೈನ ಮಾತಾಡಿ, ಇಲ್ಲ ಪಂಜಾಬಿ ಬಗ್ಗೆ ಒಂದು ಲೈನ ಹೊಗಳಿ ಮಾತಾಡಿ. ಈ ರೀತಿ ಮಾಡಿ ಕಸ್ಟಮರನೊಂದಿಗೆ ಎಮೋಷನಲಿ ಕನೇಕ್ಟಾಗಿ ಆನಂತರ ಸೇಲ ಮಾಡಿ. ಕಸ್ಟಮರ ಬಗ್ಗೆ ಕ್ಲೂ ಸಿಗದಿದ್ದರೆ ಟ್ರಾಫಿಕ್ ಬಗ್ಗೆ ಮಾತಾಡಿ, ಇಲ್ಲ ಜಾಸ್ತಿ ಬಿಸಿಲಿದೆ, ಚಳಿಯಿದೆ ಅಂತಾ ಮಾತು ಬೆಳೆಸಿ ಅವರೊಂದಿಗೆ ಕನೇಕ್ಟಾಗಿ ಆನಂತರ ಸೇಲ್ಸ ಪಿಚ್ ಮಾಡಿ. ಕಸ್ಟಮರನೊಂದಿಗೆ ಕನೆಕ್ಟಾಗದೆ ಸೇಲ್ಸ ಪಿಚ್ ಮಾಡಬೇಡಿ.‌

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 4 : ಕಸ್ಟಮರ ಏನೇಳುತ್ತಿದ್ದಾನೆ ಅಂತಾ ಕೇರಫುಲ್ಲಾಗಿ ಕೇಳಿ : Listen to your Customer carefully 

                 ಸೇಲ್ ಮಾಡುವುದಕ್ಕಿಂತ ಮುಂಚೆ ಕಸ್ಟಮರ ಏನೇಳುತ್ತಿದ್ದಾನೆ ಅಂತಾ ಕೇರಫುಲ್ಲಾಗಿ ಕೇಳಿ. ನಿಮ್ಮ ಲಿಸಲಿಂಗ ಸ್ಕೀಲನ್ನು ಇಂಪ್ರೂವ ಮಾಡಿಕೊಳ್ಳಿ. ಕಸ್ಟಮರ ಮಾತಾಡುತ್ತಾ ಏನಾದರೂ ಒಂದು ಹಿಂಟ ಕೊಟ್ಟೆ ಕೊಡ್ತಾನೆ, ಅದನ್ನ ಕರೆಕ್ಟಾಗಿ ಕ್ಯಾಚ ಮಾಡಿಕೊಳ್ಳಿ. ಅವನಿಗೆ ಎಜ್ಗಾಕ್ಟಾಗಿ ಏನು ಬೇಕಾಗಿದೆ ಎಂಬುದನ್ನು ಅರ್ಥಮಾಡಿಕೊಂಡು ಅವನೊಂದಿಗೆ ಮೈಂಡಗೇಮ ಆಡಿ ನಿಮ್ಮ ಪ್ರೋಡಕ್ಟ ಸೇಲ್ ಮಾಡಿ. ಅವನ ನೀಡ್ಸಗಳನ್ನು ಅರ್ಥ ಮಾಡಿಕೊಂಡು ಅವನ ಮೈಂಡಸೆಟಗೆ ತಕ್ಕಂತೆ ಮಾತಾಡಿ ನಿಮ್ಮ ಕೆಲಸ ಸಾಧಿಸಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 5 : ಕಸ್ಟಮರ ಸೈಡನಿಂದಲೂ ಸ್ವಲ್ಪ ಯೋಚಿಸಿ : Think from Customer side also

                  ಸೇಲ್ ಮಾಡುವುದಕ್ಕಿಂತ ಮುಂಚೆ ಕಸ್ಟಮರ ಸೈಡನಿಂದಲೂ ಸ್ವಲ್ಪ ಯೋಚಿಸಿ. ಕಸ್ಟಮರಗೆ ಯಾವ ಪ್ರಾಬ್ಲಮಿದೆ, ಅವನ ಪ್ರಾಬ್ಲಮನ್ನು ನಿಮ್ಮ ‌ಪ್ರೋಡಕ್ಟ ಅಥವಾ ಸರ್ವಿಸ್ ಹೇಗೆ ಸಾಲ್ವ ಮಾಡುತ್ತೆ ಅಂತಾ ಕರೆಕ್ಟಾಗಿ ಎಕ್ಸಪ್ಲೇನ ಮಾಡಿ. ಒಂದ್ಸರ್ತಿ ಕಸ್ಟಮರ ಜಾಗದಲ್ಲಿ ನಿಮ್ಮನ್ನು ನೀವು ಇಮ್ಯಾಜೀನ ಮಾಡಿಕೊಳ್ಳಿ. ಆನಂತರ ಸೇಲ್ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 6 : ರೈಟ ಕಸ್ಟಮರಗಳನ್ನು ಟಾರ್ಗೆಟ್ ಮಾಡಿ : Target Right Customers 

                         ರೈಟ ಕಸ್ಟಮರಗಳನ್ನು ಟಾರ್ಗೆಟ ಮಾಡಿ. ರೈಟ ಮಾರ್ಕೆಟನಲ್ಲಿ ಅಡ್ವಟೈಜ ಮಾಡಿ. ರೈಟ ಕಸ್ಟಮರಗಳನ್ನಷ್ಟೇ ಟಾರ್ಗೆಟ್ ಮಾಡಿ. ಭಾರತದಲ್ಲಿ 130 ಕೋಟಿ ಜನ ಇದಾರಂತಾ ಎಲ್ಲರೂ ನಿಮ್ಮ‌ ಪ್ರೋಡಕ್ಟ ತೆಗೆದುಕೊಳ್ಳುತ್ತಾರೆ ಅಂತಾ ಭಾವಿಸಿ ಎಲ್ಲರಿಗೂ ಆ್ಯಡ ತೋರಿಸಬೇಡಿ, ಎಲ್ಲರಿಗೂ ಸೇಲ್ಸ ಪಿಚ್ ಮಾಡಬೇಡಿ. ಎಲ್ಲರೂ ನಿಮ್ಮ ಕಸ್ಟಮರ್ಸಗಳಲ್ಲ. ನಿಮ್ಮ ರೈಟ ಕಸ್ಟಮರಗಳನ್ನಷ್ಟೇ ಟಾರ್ಗೆಟ್ ಮಾಡಿ, ಅವರಿಗಷ್ಟೇ ಸೇಲ್‌ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 7 : ಸೇಲ ಮಾಡುವಾಗ ಕಸ್ಟಮರಗಳ ಮೇಲೆ ಅಟ್ಯಾಕ ಮಾಡಬೇಡಿ : Don't attack on Customers 

              ಸೇಲ ಮಾಡುವಾಗ ಕಸ್ಟಮರಗಳ ಮೇಲೆ ಅಟ್ಯಾಕ ಮಾಡಬೇಡಿ. ಕೂಲಾಗಿ ಕಾಮಾಗಿ ಸೇಲ್ ಮಾಡಿ. ಆತುರ ಮಾಡಿ ಕಸ್ಟಮರಗಳ ‌ಮೇಲೆ ಎಮೋಷನಲ‌ ಅಟ್ಯಾಕ ಮಾಡಬೇಡಿ. ಅವಶ್ಯಕತೆ ಇಲ್ಲದಿದ್ದರೂ ನಿಮ್ಮ ಪ್ರೋಡಕ್ಟನ್ನು ತೆಗೆದುಕೊಳ್ಳಲು ಫೋರ್ಸ ಮಾಡಬೇಡಿ.‌ ಕಸ್ಟಮರಗಳಿಗೆ ಮೆಂಟಲಿ ಹ್ಯಾರಸ ಮಾಡಬೇಡಿ. ಅವಶ್ಯಕತೆ ಇದ್ರೆ ಮಾತ್ರ ಸೇಲ್ ಮಾಡಿ. ಅನಾವಶ್ಯಕವಾಗಿ ವಸ್ತುವನ್ನು ತೆಗೆದುಕೊಳ್ಳಲು ಫೋರ್ಸ ಮಾಡಬೇಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 8 : ಮೊದಲು ನಿಮ್ಮ ಕಸ್ಟಮರಗಳನ್ನು ಎಜುಕೇಟ ಮಾಡಿ : Educate your customers 

                   ಮೊದಲು ನಿಮ್ಮ ಕಸ್ಟಮರಗಳನ್ನು ಎಜುಕೇಟ ಮಾಡಿ, ಅವೇರ ಮಾಡಿ.‌ ನಿಮ್ಮ‌ ಪ್ರೋಡಕ್ಟ ಬಗ್ಗೆ ಕಸ್ಟಮರಗಳಲ್ಲಿ ಒಂದು ಅವೇರನೇಸ್ಸನ್ನು ಕ್ರಿಯೆಟ ಮಾಡಿ. ಅವರಿಗೆ ನಿಮ್ಮ ಪ್ರೋಡಕ್ಟನ ಬಗ್ಗೆ ಸಾಕಷ್ಟು ಇನ್ಫಾರ್ಮೇಶನ್ ಕೊಡಿ.‌ ಅವರಿಗಿರುವ ಎಲ್ಲ ಡೌಟ್ಸಗಳನ್ನ‌ ಕ್ಲಿಯರ ಮಾಡಿ. ಅವರಿಗೆ ಪ್ರೋಡಕ್ಟನ ಡೆಮೋ ತೋರಿಸಿ, ಟೆಸ್ಟಿಮೋನಿಯಲ್ ತೋರಿಸಿ ಅವರ ಟ್ರಸ್ಟನ್ನು ಗೇನ ಮಾಡಿ. ಟ್ರಸ್ಟ ಗೇನಾದಾಗ ಕಸ್ಟಮರ ತಾನಾಗಿಯೇ ‌ನಿಮ್ಮ‌ ಪ್ರೋಡಕ್ಟನ್ನು ಪರಚೇಸ ಮಾಡುತ್ತಾನೆ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 9 : ಡಿಸಿಜನ ಮೇಕರಗಳ ಮೇಲೆ ಫೋಕಸ ಮಾಡಿ : Focus on decision makers                      

                    ಡಿಸಿಜನ ಮೇಕರಗಳ ಮೇಲೆ ಫೋಕಸ ಮಾಡಿ. ಡಿಸಿಜನ ಮೇಕರ್ಸಗಳಿಗೆ ಸೇಲ ಪಿಚ್ ಮಾಡಿ. ಕೀ ಡಿಸಿಜನ ಮೇಕರ ಯಾರು ಅಂತಾ ಪತ್ತೆ ಹಚ್ಚಿ ಡೈರೆಕ್ಟಾಗಿ ಅವರಿಗೇನೆ ಸೇಲ್ ಪಿಚ್ ಮಾಡಿ. ಉದಾಹರಣೆಗೆ : ನಿಮ್ಮ ಅಂಗಡಿಗೆ ಗಂಡ ಹೆಂಡತಿ ಫ್ರೀಜ ತೆಗೆದುಕೊಳ್ಳಲು ಬಂದಿದಾರೆ ಅಂತಾ ಅನ್ಕೋಳಿ. ಆಗ ಗಂಡನಿಗೆ ಜಾಸ್ತಿ‌ ಇಂಪಾರಟನ್ಸ ಕೊಡಬೇಡಿ. ಹೆಂಡತಿಗೆ ಜಾಸ್ತಿ ಇಂಪಾರಟನ್ಸ ಕೊಡಿ. ಅವಳಿಗೆ ಫ್ರೀಜ ಬಗ್ಗೆ ಫುಲ್‌ ಇನಫಾರ್ಮೆಷನ‌ ಕೊಡಿ, ಅವಳನ್ನು ಇಂಪ್ರೆಸ ಮಾಡಿ ಸಾಕು ಫ್ರೀಜ ಅಟೋಮ್ಯಾಟಿಕ್ಕಾಗಿ ಸೇಲ್ ಆಗುತ್ತದೆ. ಅದನ್ನು ಬಿಟ್ಟು ನೀವು ಗಂಡನಿಗೆ ಪಿಚ್ ಮಾಡಿದರೆ ಸೇಲ ಆಗಲ್ಲ. ಯಾರು ಕೀ ಡಿಸಿಜನ ಮೇಕರ್ಸ ಇದಾರೆ ಅವರ ಮೇಲೆ‌ ಜಾಸ್ತಿ ಫೋಕಸ ಮಾಡಿ. ಸಿಂಪಲಾಗಿ ಹೇಳಬೇಕೆಂದರೆ ಯಾರತ್ರ ಹಣದ ಕೀಲಿ ಕೈ ಇದೆಯೋ ಅವರ ಮೇಲೆ‌ ಫೋಕಸ ಮಾಡಿ. ಬಾಸದು ನಡೆಯುತ್ತಾ ಅಥವಾ PAದು ನಡೆಯುತ್ತಾ ಅಂತಾ ತಿಳಿದುಕೊಂಡು ಸೇಲ್ ಪಿಚ್ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 10 : ಬರೀ ಹಣಗಳಿಸುವ ಉದ್ದೇಶದಿಂದ ಸೇಲ್ ಮಾಡಬೇಡಿ : Don't sell for money only

              ನಿಮ್ಮ ಸೇಲ್ ಇಂಟೆನಷನ ಬರೀ ಹಣ ಗಳಿಸುವುದ್ದಾಗಿದ್ದರೆ ಅದನ್ನು ಚೇಂಜ್ ಮಾಡಿಕೊಳ್ಳಿ. ಬರೀ ಹಣಗಳಿಸುವ ಉದ್ದೇಶದಿಂದ ಬಿಜನೆಸ ಮಾಡಿದರೆ ನೀವು ಜಾಸ್ತಿ ದಿನ ಮಾರ್ಕೆಟನಲ್ಲಿ ಉಳಿಯಲ್ಲ. ಬರೀ ಹಣಕ್ಕಾಗಿ ವಸ್ತುಗಳನ್ನು ಸೇಲ ಮಾಡಬೇಡಿ, ಕಸ್ಟಮರಗಳ ಪ್ರಾಬ್ಲಮ ಸಾಲ್ವ ಮಾಡುವುದಕ್ಕೆ, ಅವರಿಗೆ ವ್ಯಾಲೂ ಆ್ಯಡ ಮಾಡುವುದಕ್ಕೆ ಸೇಲ್‌ ಮಾಡಿ. ಕಸ್ಟಮರಗಳ ಟೆನ್ಶನ ಕಮ್ಮಿ ಮಾಡುವುದಕ್ಕೆ ಬಿಜನೆಸ ಮಾಡಿ, ಜಾಸ್ತಿ ಮಾಡುವುದಕ್ಕೆ ಅಲ್ಲ‌.

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 11 : ಅಟಲಿಸ್ಟ 5 ಸೇಲ್ಸ ಅಟೆಂಪ್ಟಗಳನ್ನ ಮಾಡಿ : At least make 5 sells attempts 

                         ಅಟಲಿಸ್ಟ 5 ಸೇಲ್ಸ ಅಟೆಂಪ್ಟಗಳನ್ನ ಮಾಡಿ. ಮೊದಲ ಅಟೆಂಪ್ಟನಲ್ಲಿ ಹುಡುಗಿ ಲವ ಪ್ರಪೋಜಲನ್ನು ಒಪ್ಪಿಕೊಳ್ಳಲ್ಲ. ಅದೇ ರೀತಿ ಮೊದಲ ಅಟೆಂಪ್ಟಲ್ಲಿ ಪ್ರೋಡಕ್ಟ ಸೇಲ್ ಆಗಲ್ಲ. ಫಸ್ಟ ಪಿಚ್ ಕೇಳಿದ ನಂತರ ಯಾರು ಪ್ರೋಡಕ್ಟ ಪರಚೇಸ ಮಾಡಲ್ಲ. ಅದಕ್ಕಾಗಿ ಕಸ್ಟಮರಗಳನ್ನು ಫಾಲೋ ಅಪ ಮಾಡಿ. ಅಟಲಿಸ್ಟ 5 ಸೇಲ್ಸ್ ಟ್ರಾಯಗಳನ್ನು ಮಾಡಿ. ಸೇಲ್ಸ ಗೋಲ್ಸಗಳನ್ನ ಸೆಟ ಮಾಡಿ. ಟಾರ್ಗೆಟ್ ‌ಸೆಟ ಮಾಡದೇ ಸೇಲ್ ಮಾಡಬೇಡಿ. ಟಾರ್ಗೆಟ್ ಸೆಟ ಮಾಡಿ. ಡೆಡಿಕೇಷನನೊಂದಿಗೆ ಸೇಲ್ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 12 : ಪ್ರಾಬ್ಲಮ ಸಾಲ್ವಿಂಗ ಪ್ರೋಡಕ್ಟನ್ನು ಡೆವಲಪ ಮಾಡಿ : Develop the problem solving product 

                ಮೊದಲು ಪ್ರಾಬ್ಲಮ ಸಾಲ್ವಿಂಗ ಪ್ರೋಡಕ್ಟನ್ನು ಡೆವಲಪ ಮಾಡಿ. ಕ್ವಾಲಿಟಿ ಪ್ರೋಡಕ್ಟನ್ನು ಡೆವಲಪ ಮಾಡಿ. ವ್ಯಾಲು ಆ್ಯಡಿಂಗ ಪ್ರೋಡಕ್ಟನ್ನು ಡೆವಲಪ ಮಾಡಿ‌. ನಿಮ್ಮ ಪ್ರೋಡಕ್ಟನಲ್ಲಿ ಧಮ ಇರದಿದ್ದರೆ ಯಾರು ಅದನ್ನ ಪರಚೇಜ ಮಾಡಲ್ಲ. ಸೋ ಪ್ರಾಬ್ಲಮ ಸಾಲ್ವಿಂಗ ಪ್ರೋಡಕ್ಟನ್ನು ರೆಡಿ ಮಾಡಿ. ಆಟೋಮ್ಯಾಟಿಕ್ಕಾಗಿ ಸೇಲ ಆಗುತ್ತದೆ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 13 : ಕಸ್ಟಮರಗಳಿಂದ ಸಿಗುವ ರಿಜೆಕ್ಷನನ್ನು ಮೋಟಿವೇಷನಾಗಿ ತೆಗೆದುಕೊಳ್ಳಿ : Take rejection as motivation

                          ಕಸ್ಟಮರಗಳಿಂದ ಸಿಗುವ ರಿಜೆಕ್ಷನನ್ನು ಮೋಟಿವೇಷನಾಗಿ ತೆಗೆದುಕೊಳ್ಳಿ. ಮತ್ತೊಮ್ಮೆ ಸೇಲ್ಸ ಪಿಚ್ ಮಾಡಿ. ಮೊದಲಿಗೆ ಕಸ್ಟಮರ್ಸ "ಯೋಚನೆ ಮಾಡಿ ಆಮೇಲೆ ಹೇಳ್ತಿನಿ..." ಅಂತಾ ಹೇಳ್ತಾರೆ. ಬಟ ಹೇಳಲ್ಲ. ಆವಾಗ ನೀವು ಮತ್ತೆ ಅವರನ್ನು ಫಾಲೋ ಅಪ ಮಾಡಿ. "ಏನಾಯ್ತು?" ಅಂತಾ ಕೇಳಿ. ಆವಾಗ ಅವರು "ನೋ" ಅಂತಾ ಹೇಳ್ತಾರೆ. ಅವರಿಗೆ ರಿಜನ ಕೇಳಿ, ಯಾಕೆ ಪರಚೇಜ ಮಾಡ್ತಿಲ್ಲಾ ಅಂತಾ ಕೇಳಿ. ಕಸ್ಟಮರಗಳಿಂದ ಫಿಡಬ್ಯಾಕನ್ನು ತೆಗೆದುಕೊಳ್ಳಿ. ರೆಗ್ಯುಲರಲಾಗಿ ನಿಮ್ಮ ಪ್ರೋಡಕ್ಟನ್ನು ಇಂಪ್ರೂವ ಮಾಡಿ.

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 14 : ಕಸ್ಟಮರಗಳನ್ನು ಬೇಕೂಫ ಮಾಡಲು ಟ್ರಾಯ ಮಾಡಬೇಡಿ : Don't try to cheat customers

                          ಕಸ್ಟಮರಗಳನ್ನು ಬೇಕೂಫ ಮಾಡಲು ಟ್ರಾಯ ಮಾಡಬೇಡಿ. ‌ಅವರಿಗೆ ಮೋಸ ಮಾಡಬೇಡಿ. ಕೆಲವೊಂದಿಷ್ಟು ವ್ಯಾಲ್ಯೂಸಗಳೊಂದಿಗೆ ಬಿಜನೆಸ ಮಾಡಿ. ನೀವು ಒಬ್ಬ ಕಸ್ಟಮರಗೆ ಮೋಸ ಮಾಡಿದರೆ, ಖರಾಬ ಪ್ರೋಡಕ್ಟ ಅಥವಾ ಸರ್ವಿಸನ್ನು ಕೊಟ್ಟರೆ ಆತ 100 ಜನರಿಗೆ ಇದರ ಬಗ್ಗೆ ಹೇಳುತ್ತಾನೆ. ನಿಮ್ಮ ಬಿಜನೆಸ ಡೌನಾಗುತ್ತದೆ. ಸೋ ಕಸ್ಟಮರಗಳಿಗೆ ಚೀಟ ಮಾಡಬೇಡಿ. ನೀವು ಖರೀದಿಸಲು ಇಷ್ಟಪಡದ ವಸ್ತುಗಳನ್ನು ಮಾರಬೇಡಿ‌. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 15 : ಕಂಜುಮರ ಬಿಹೇವಿಯರನ್ನ ಸ್ಟಡಿ ಮಾಡಿ : Study the consumer behavior 

                   ಕಸ್ಟಮರಗೆ ಫಸ್ಟ ಇಂಪ್ರೆಶನನಲ್ಲೇ ಪ್ರೋಡಕ್ಟನ್ನು ಸೆಲ್ ಮಾಡಲು ಟ್ರಾಯ ಮಾಡಬೇಡಿ. ಮೊದಲು ಅವರಿಗೆ ನಿಮ್ಮ ಪ್ರೊಡಕ್ಟನ ಅವಶ್ಯಕತೆ ಇದೆಯಾ ಅಥವಾ ಇಲ್ವಾ ಎಂಬುದನ್ನು ‌ತಿಳಿದುಕೊಳ್ಳಿ. ಫಸ್ಟ ‌ನೀಡ್ ಅನಾಲೈಸಿಸ ಮಾಡಿ. ಕಂಜುಮರ ಬಿಹೇವಿಯರನ್ನ ಸ್ಟಡಿ ಮಾಡಿ. ಕಸ್ಟಮರಗಳಿಗೆ ರೈಟ ಕ್ವೇಷನನ್ನ ಕೇಳಿ. ಆಗವರು ತಮ್ಮ ನೀಡ್ಸಗಳ ಬಗ್ಗೆ ಪ್ರಾಬ್ಲಮಗಳ ಬಗ್ಗೆ ಹಿಂಟ ಕೊಡುತ್ತಾರೆ. ಆ ಹಿಂಟಗಳನ್ನು ಸರಿಯಾಗಿ ಕ್ಯಾಚ ಮಾಡಿಕೊಂಡು ಹೇಗೆ ನಿಮ್ಮ ಪ್ರೋಡಕ್ಟ ಅವರ ಪ್ರಾಬ್ಲಮನ್ನ ಸಾಲ್ವ ‌ಮಾಡುತ್ತೆ ಎಂಬುದನ್ನು ಎಕ್ಸಪ್ಲೇನ ಮಾಡಿ. ಕಸ್ಟಮರನ ಸದ್ಯದ‌ ಸೀಚುವೆಷನ ಏನಿದೆ? ಅವನ ಬಾಯಿಂಗ ಕ್ಯಾಪ್ಯಾಸಿಟಿ ಎಷ್ಟಿದೆ? ಎಂಬುದನ್ನು ಅರ್ಥ ಮಾಡಿಕೊಳ್ಳಲು ಟ್ರಾಯ ಮಾಡಿ. ಕಸ್ಟಮರಗಳ ಮೇಲೆ ಒಂದು ಸಣ್ಣ ರಿಸರ್ಚ ಮಾಡಿ ಅವರನ್ನು ತಿಳಿದುಕೊಳ್ಳಿ. ಅವರಿಗೆ ಕಂಪೇಲಿಂಗ ಸ್ಟೋರಿಗಳನ್ನು ಹೇಳಿ. ನಿಮ್ಮ ಪ್ರೋಡಕ್ಟ ಹೇಗೆ ಅವರಿಗೆ ಲಾಭ ಮಾಡುತ್ತೆ ಎಂಬುದನ್ನು ಹೇಳಿ. ಜೊತೆಗೆ ನಿಮ್ಮ ಪ್ರೋಡಕ್ಟನ್ನು ಖರೀದಿಸದಿದ್ದರೆ ಅವರಿಗೆ ಎಷ್ಟು ನಷ್ಟವಾಗುತ್ತದೆ ಎಂಬುದನ್ನು ವಿವರಿಸಿ.

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 16 : ಕಸ್ಟಮರಗಳಲ್ಲಿ ಡಿಸೈರ್ ಕ್ರಿಯೆಟ ಮಾಡಿ : Create desire in customers 

                      ಕಸ್ಟಮರಗಳಲ್ಲಿ ಡಿಸೈರ್ ಕ್ರಿಯೆಟ ಮಾಡಿ. ನಿಮ್ಮ ಪ್ರೋಡಕ್ಟ ಬಗ್ಗೆ ಕೇಳುತ್ತಿದ್ದಂತೆಯೇ ಕಸ್ಟಮರಗಳ ಕಿವಿ ನೆಟ್ಟಗಾಗಬೇಕು. ಆ ರೀತಿ ಡಿಸೈರ ಕ್ರಿಯೆಟ ಮಾಡಿ. ಉದಾಹರಣೆಗೆ ; ಐಫೋನ ಮೊಬೈಲ್ ಹೆಸರು ಕೇಳಿದ್ರೆ ಸಾಕು ತಗೋಬೇಕು ಅನಿಸುತ್ತದೆ. ಈ ರೀತಿ ನೀವು ಸಹ ನಿಮ್ಮ ಪ್ರೋಡಕ್ಟಗೆ ಡಿಮ್ಯಾಂಡ ಕ್ರಿಯೆಟ ಮಾಡಿ. 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Tip - 17 : ಕಸ್ಟಮರಗಳಿಗೆ ಕ್ರಾಸ ಸೇಲ್ ಮಾಡಿ, ಅಪಸೇಲ ಮಾಡಿ ನಿಮ್ಮ ರೆವೆನ್ಯೂ ಡಬಲ್ ಮಾಡಿ. 

ಉದಾಹರಣೆಗೆ ; ಕ್ಯಾಮರಾ ಜೊತೆಗೆ ಕ್ಯಾಮರಾ ಬ್ಯಾಗ, ಮೆಮೊರಿ ‌ಕಾರ್ಡ, ಎಕ್ಸಟ್ರಾ ಬ್ಯಾಟರಿ ಇತ್ಯಾದಿಗಳನ್ನು ‌ಮಾರಾಟ ಮಾಡಿ. ಬೈಕ್ ‌ಜೊತೆಗೆ ಹೆಲ್ಮೇಟ ಮಾರಾಟ ಮಾಡಿ. ಶೂ ಜೊತೆಗೆ ಸಾಕ್ಸ ಮಾರಿ. ಮೊಬೈಲ್ ಜೊತೆಗೆ ಇಯರ ಫೋನ, ಬ್ಯಾಕ ಕವರ ಮಾರಿ. ಈ ರೀತಿ ಕ್ರಾಸ ಸೇಲ್ ಅಪಸೇಲ ಮಾಡಿ. ಕಸ್ಟಮರಗೆ ಮಲ್ಟಿಪಲ್ ಆಪ್ಷನ್ಸ ಕೊಡಿ, ಅವನ ಕ್ವೇರಿಗಳಿಗೆ ಕ್ವೀಕ್ಕಾಗಿ ರೆಸ್ಪಾನ್ಸ ಮಾಡಿ. ಕಸ್ಟಮರ ಒಂದು ಪ್ರೋಡಕ್ಟನ್ನು ತೆಗೆದುಕೊಳ್ಳಲು ಬಂದಾಗ ಅವನಿಗೆ ನಾಲ್ಕು ಪ್ರೋಡಕ್ಟ ಸೇಲ ಮಾಡಿ ಕಳುಹಿಸಿ.

                                       ನೀವೊಬ್ಬ ಬಿಜನೆಸಮ್ಯಾನಾಗಿದ್ದರೆ ನೀವು ಈ ಸೇಲ್ಸ & ಮಾರ್ಕೆಟಿಂಗ್ ಸ್ಕೀಲಗಳನ್ನು ಕಂಪಲ್ಸರಿಯಾಗಿ ಬೆಳೆಸಿಕೊಳ್ಳಲೇಬೇಕು‌. ಅಂದಾಗಲೇ ನಿಮ್ಮ ಬಿಜನೆಸ್ ಬೇಗನೆ ಗ್ರೋ ಆಗೋದು. ಆಲ್ ದ್ ಬೆಸ್ಟ್... 

Business Lesson 25 : ಸೇಲ್ಸ & ಮಾರ್ಕೆಟಿಂಗ್ ಸ್ಕೀಲ್ಸ - Sales & Marketing Skills in Kannada

Blogger ನಿಂದ ಸಾಮರ್ಥ್ಯಹೊಂದಿದೆ.