
ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು "ದಿ ಸೆಕ್ರೆಟ" ಬುಕನಿಂದ ಕಲಿತ ಕೆಲವೊಂದಿಷ್ಟು ವಿಷಯಗಳನ್ನು ನಿಮ್ಮೊಂದಿಗೆ ಶೇರ್ ಮಾಡ್ತಾ ಇರುವೆ. ನಾನು ಈ ಬುಕ್ಕನ್ನು ಓದಿರುವೆ, ಇದೀಗ ಕನ್ನಡದಲ್ಲೂ ಅವೇಲೇಬಲಾಗಿದೆ. ಅದರ ಲಿಂಕ ಇಂತಿದೆ ;
ದಿ ಸೆಕ್ರೆಟ - The Secret Book - Kannada Version - Book Link Click Here
ದಿ ಸೆಕ್ರೆಟ ಬುಕ್ಕಲ್ಲಿರೋ ಕೆಲವೊಂದಿಷ್ಟು ಇಂಪಾರಟಂಟ ವಿಷಯಗಳು ಇಂತಿವೆ ;
1) ಸದ್ಯಕ್ಕೆ ನಮ್ಮ ಲೈಫಲ್ಲಿರೋದೆಲ್ಲ ನಮಗೆ ಅಟೋಮ್ಯಾಟಿಕ್ಕಾಗಿ ಸಿಕ್ಕಿಲ್ಲ. ನಾವದನ್ನ ನಮ್ಮ ಯೋಚನೆಗಳ ಮೂಲಕ ಅಟ್ರ್ಯಾಕ್ಟ ಮಾಡಿದ್ದೇವೆ. ನಾವು ಅಂದುಕೊಂಡಿದ್ದನ್ನೆಲ್ಲ ಯುನಿವರ್ಸ ನಮ್ಮತ್ರ ಕಳುಹಿಸುತ್ತದೆ. ನಾವೇನೆಂದುಕೊಳ್ಳುತ್ತೇವೆಯೋ ಅದೆಲ್ಲ ಅಟ್ರ್ಯಾಕ್ಟಾಗಿ ನಮ್ಮತ್ರ ಬರುತ್ತವೆ. ಇದಕ್ಕೆ ನಾವು ಲಾ ಆಫ್ ಅಟ್ರ್ಯಾಕ್ಷನ ಎನ್ನುತ್ತೇವೆ.

2) ಲಾ ಆಫ್ ಅಟ್ರ್ಯಾಕ್ಷನಗೆ ನಮ್ಮ ಥಾಟ್ಸಗಳನ್ನು ರಿಯಾಲಿಟಿಯಾಗಿ ಬದಲಿಸುವ ಶಕ್ತಿಯಿದೆ. ನಮ್ಮ ಲೈಫನ್ನು ಬದಲಿಸುವ ತಾಕತ್ತಿದೆ. ನಮ್ಮ ಸಂಪತ್ತನ್ನು, ಆರೋಗ್ಯವನ್ನು, ಸಂಬಂಧಗಳನ್ನು ಇಂಪ್ರೂವ ಮಾಡುವ ಪವರಿದೆ.

3) ಲಾ ಆಫ್ ಅಟ್ರ್ಯಾಕ್ಷನ ಏನ ಹೇಳುತ್ತೆ ಅಂದರೆ ನಿಮಗೇನು ಬೇಕೋ ಅದನ್ನ ಇಮ್ಯಾಜಿನೇಷನ್ ಮಾಡಿ. ಅದು ಸಿಕ್ಕಂತೆ ಫೀಲ ಮಾಡಿ. ಅದು ಈಗ ನಿಮಗೆ ಸಿಕ್ಕಿದೆ ಎಂದುಕೊಂಡು ಖುಷಿನಾ ಸೆಲೆಬ್ರೆಟ ಮಾಡಿ. ನಿಮಗೇನು ಬೇಕೋ ಅದರ ಮೇಲಷ್ಟೇ ಫೋಕಸ ಮಾಡಿ. ಅದನ್ನು ಮೆಂಟಲಿ ವಿಜುವಲಿ ಅಟ್ರ್ಯಾಕ್ಟ ಮಾಡಿ. ಆಗ ಯುನಿವರ್ಸ ನಿಮಗದನ್ನ ಕೊಟ್ಟೆ ಕೊಡುತ್ತದೆ.
ಉದಾಹರಣೆಗೆ : ನಿಮಗೆ ಕಾರ ಬೇಕಿದ್ದರೆ ಕಾರನ್ನು ವಿಜುವಲೈಜ ಮಾಡಿ, ನಿಮಗೆ ಕಾರ ಸಿಕ್ಕಂತೆ ಫೀಲ ಮಾಡಿ. ಅದು ಬಂದಾಗ ಯಾವ ರೀತಿ ಡ್ರೈವ ಮಾಡ್ತೀರಿ ಅನ್ನೋದನ್ನ ಇಮ್ಯಾಜಿನೇಷನ್ ಮಾಡಿ. ಆನಂತರ ನಿಮಗೆ ಕಾರ ಸಿಗುತ್ತದೆ.

ನಿಮ್ಮ ಹೆಲ್ತ ಸರಿಯಿರದಿದ್ರೆ ನಿಮ್ಮ ಹೆಲ್ತ ಈಗ ಸರಿಯಾಗಿದೆ ಎಂಬಂತೆ ಗುಡ ಫೀಲ ಮಾಡಿ, ಪೋಜಿಟಿವ ಫೀಲ ಮಾಡಿ, ಯುನಿವರ್ಸಗೆ ಥ್ಯಾಂಕ್ಸ ಹೇಳಿ. ನಿಮ್ಮ ಹೆಲ್ತ ಸರಿಯಾಗುತ್ತದೆ.
ನಿಮಗೆ ಹಣದ ಕೊರತೆಯಿದ್ರೆ ಹಣವಿಲ್ಲ ಅಂತಾ ಕೊರಗಬೇಡಿ. ನಿಮ್ಮತ್ರ ಸಾಕಷ್ಟು ಹಣ ಹರಿದು ಬರುವಂತೆ ಇಮ್ಯಾಜಿನ ಮಾಡಿ. ಹಣ ಬರುತ್ತದೆ.
ನೀವು ಯಾವುದಾದರೂ ಪ್ರಾಬ್ಲಮನಲ್ಲಿ ಸಿಲುಕಾಕಿಕೊಂಡರೆ ಪ್ರಾಬ್ಲಮ ಸಾಲ್ವಾದಂತೆ ಇಮ್ಯಾಜಿನ ಮಾಡಿ ಪ್ರಾಬ್ಲಮ ಸಾಲ್ವಾಗುತ್ತದೆ.
ಸಿಂಪಲಾಗಿ ಹೇಳಬೇಕೆಂದರೆ ನಿಮಗೇನು ಬೇಕೋ ಅದನ್ನ ಇಮ್ಯಾಜಿನ ಮಾಡಿ, ವಿಜುವಲೈಜ ಮಾಡಿ, ಅದು ಸಿಕ್ಕಂತೆ ಫೀಲ ಮಾಡಿ, ಪೋಜಿಟಿವ ಅಫರ್ಮೇಷನ ಕ್ರಿಯೆಟ ಮಾಡಿ, ಗ್ರ್ಯಾಟಿಟ್ಯುಡ ಫೀಲ ಮಾಡಿ ನೀವು ಬಯಸಿದ್ದು ನಿಮಗೆ ಸಿಕ್ಕೇ ಸಿಗುತ್ತದೆ.

4) ನೀವು ಪೋಜಿಟಿವ ಆಗಿ ಥಿಂಕ ಮಾಡಿದಾಗ ಮಾತ್ರ ಲಾ ಆಫ್ ಅಟ್ರ್ಯಾಕ್ಷನ ವರ್ಕಾಗುತ್ತದೆ. ನೆಗೆಟಿವ ಥಿಂಕ ಮಾಡಿದ್ರೆ, ಡೌಟ ಪಟ್ಟರೆ, ಕ್ರಿಟಿಸೈಜ ಮಾಡಿದ್ರೆ, ಬರೀ ಬೇಡದಿರುವುದನ್ನೇ ಇಮ್ಯಾಜಿನ ಮಾಡಿದ್ರೆ ನಿಮ್ಮ ಕೇಸಲ್ಲಿ ಲಾ ಆಫ್ ಅಟ್ರ್ಯಾಕ್ಷನ ಕೆಲಸ ಮಾಡಲ್ಲ. ನಿಮ್ಮ ಕೇಸಲ್ಲಿ ಲಾ ಆಫ್ ಅಟ್ರ್ಯಾಕ್ಷನ ಕೆಲಸ ಮಾಡಬೇಕೆಂದರೆ ಮೊದಲು ನೀವು ನಿಮ್ಮ ನೆಗೆಟಿವ ಫಿಲಿಂಗ್ಸಗಳನ್ನು ರಿಮೂವ ಮಾಡಬೇಕು, ಪೋಜಿಟಿವ ಅಫರ್ಮಮೇಷನ ಕ್ರಿಯೆಟ ಮಾಡಬೇಕು, ಯುನಿವರ್ಸಗೆ ಥ್ಯಾಂಕಫುಲ್ಲಾಗಿರಬೇಕು, ನಿಮಗೆ ಬೇಕಾಗಿರುವುದನ್ನು ದಿನಾಲು ವಿಜುವಲೈಜ ಮಾಡಬೇಕು.

ಓಕೆ ಗೆಳೆಯರೇ, ಇದೀಷ್ಟು ವಿಷಯಗಳನ್ನು ನಾನು ದಿ ಸೆಕ್ರೆಟ ಬುಕನಿಂದ ಕಲಿತಿರುವೆ. ನಿಮಗಿದು ಇಷ್ಟವಾಗಿದ್ದರೆ ತಪ್ಪದೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಡೈರೆಕ್ಟರ್ ಸತೀಶಕುಮಾರ ಫೇಸ್‌ಬುಕ್ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು....
ದಿ ಸೆಕ್ರೆಟ - The Secret Book - Kannada Version - Book Link Click Here