ಹಾಯ್ ಗೆಳೆಯರೇ, ಇವತ್ತಿನ ಮಂಡೇ ಮ್ಯಾಟರ ಅಂಕಣ ಪ್ರೀತಿ ಪ್ರೀತಿ ಅಂತಾ ಪರದೇಶಿಯಾಗೋ ಬರಿಗೈ ಫಕೀರರ ಭ್ರಮೆಯನ್ನು ಬಿಡಿಸುತ್ತದೆ. ಡಬ್ಬಾ ಸಿನಿಮಾಗಳನ್ನು ನೋಡಿ ಲವ್ ಲವ್ ಅಂತಾ ಸಾಯೋರಿಗೆ ಒಂದು ಪಾಠ ಕಲಿಸುತ್ತದೆ. ಹುಡುಗಿಯರು ಹುಡುಗರಲ್ಲಿ ಏನ ನೋಡ್ತಾರೆ? ಯಾವ ಕ್ವಾಲಿಟಿ ನೋಡಿ ಲವ್ ಮಾಡ್ತಾರೆ ಅಥವಾ ಮದುವೆಯಾಗ್ತಾರೆ? ಎಂಬುದು ಈ ದೇವದಾಸಗಳಿಗೆ ಗೊತ್ತೇ ಆಗಲ್ಲ. ಅದಕ್ಕೆ ಅವು ಸುಳ್ಳು ಪ್ರೀತಿಯನ್ನು ನಿಜ ಅಂತಾ ವಾದಿಸಿ ಹುಚ್ಚರಾಗಿ ಬಾರ್ ಪಾಲಾಗುತ್ತವೆ ಅಷ್ಟೇ. ಅದಕ್ಕಾಗಿ ಇವತ್ತಿನ ಈ ಅಂಕಣದಲ್ಲಿ "ಹುಡುಗಿಯರು ಹುಡುಗರಲ್ಲಿ ಏನು ನೋಡಿ ಲವ್ ಮಾಡುತ್ತಾರೆ? ಅಥವಾ ಮದುವೆಯಾಗುತ್ತಾರೆ?" ಎಂಬುದರ ಬಗ್ಗೆ ಡಿಸ್ಕಸ ಮಾಡೋಣಾ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ...
ನಾನು ಬಹಳಷ್ಟು ಹುಡುಗಿಯರಿಗೆ ಡೈರೆಕ್ಟಾಗಿ "ನಿಮಗೆ ಎಂಥ ಹುಡುಗ ಬೇಕು? ನೀವು ಹುಡುಗರಲ್ಲಿ ಯಾವ ಕ್ವಾಲಿಟಿ ನೋಡಿ ಲವ್ ಮಾಡ್ತಿರಿ? ಏನ ನೋಡಿ ಮದುವೆಯಾಗಲು ರೆಡಿಯಾಗ್ತಿರಿ?" ಅಂತಾ ಕೇಳಿರುವೆ. ಆಗ ಎಲ್ಲ ಹುಡುಗಿಯರು "ನನಗೆ ಫನ್ನಿ ಹುಡುಗ ಬೇಕು, ಜೋಕ ಮಾಡಿ ನಗಿಸಬೇಕು, ನನ್ನನ್ನು ಪ್ರೀತಿಸಬೇಕು, ಅವನಲ್ಲಿ ಒಳ್ಳೆ ಕ್ಯಾರೆಕ್ಟರ್ ಇರಬೇಕು, ಹಾನೆಸ್ಟಾಗಿರಬೇಕು, ಹ್ಯಾಂಡಸಮ್ಮಾಗಿರಬೇಕು, ಸಿಕ್ಸ ಪ್ಯಾಕ್ಸ ಇರಬೇಕು...." ಅಂತೆಲ್ಲ ಹೇಳಿದರು. ಆದರೆ ಅವರು ಮದುವೆಯಾಗುವಾಗ ಮಾತ್ರ ಯಾವುದೇ ಜೋಕರನನ್ನು ಮದುವೆಯಾಗಲಿಲ್ಲ. ಅವರು ಅವತ್ತು ನನಗೆ ಹೇಳಿದ ಒಂದು ಗುಣವೂ ಅವರ ಗಂಡಂದಿರಲ್ಲಿ ಇಲ್ಲ. ಆಗ ನಾನು ಅವರಿಗೆ "ನೀವು ಬಯಸಿದ ಗುಣಗಳು ನಿಮ್ಮ ಗಂಡಂದಿರಲ್ಲಿ ಇಲ್ಲ, ಹೇಗೆ ಮದುವೆಯಾದ್ರಿ?" ಅಂತಾ ಕೇಳಿದೆ. ಅವರಲ್ಲಿ ಯಾರು ಉತ್ತರ ಕೊಡಲಿಲ್ಲ, ಏನೇನೋ ನೆಪ ಹೇಳಿ ಜಾರಿಕೊಂಡರು. ಆದರೆ ಒಬ್ಬಳು ಮಾತ್ರ ನಿಜ ಹೇಳಿದಳು. ಅದನ್ನೇ ನಾನು ನಿಮ್ಮೊಂದಿಗೆ as it is ಶೇರ್ ಮಾಡುತ್ತಿರುವೆ. ಬಟ್ ಸ್ವಲ್ಪ ಡೈಲಾಗ್ ಇಂಪ್ರೂವ ಮಾಡಿರುವೆ...
"ನೋಡು ರಾಜಾ ಮದುವೆ ಪ್ರತಿ ಹುಡುಗಿಯ ದೊಡ್ಡ ಕನಸಾಗಿರುತ್ತದೆ. ನಮಗೆ ಮ್ಯಾಚುರಿಟಿ ಬರೋಕ್ಕಿಂತ ಮುಂಚೆ ನಾವು ನಮ್ಮ ಹುಡುಗ ಹ್ಯಾಂಡಸಮ್ಮಾಗಿರಬೇಕು, ಕಾಮಿಡಿಯಾಗಿರಬೇಕು, ಸಿನಿಮಾ ಹೀರೋ ತರಹ ಇರಬೇಕು ಎಂದೆಲ್ಲ ಕನಸ ಕಾಣ್ತಿವಿ. ಆದರೆ ನಮಗೆ ಮ್ಯಾಚುರಿಟಿ ಬಂದಾಗ, ಲೈಫಿನ ಬಗ್ಗೆ ಗೊತ್ತಾದಾಗ ನಮ್ಮ ಕನಸುಗಳು ಕಮರಿ ಹೋಗಿ ಅಸಲಿ ಲೈಫ ಅರ್ಥವಾಗುತ್ತದೆ. ಆಗ ನಮ್ಮ ಯೋಚನೆಗಳು ಬದಲಾಗುತ್ತವೆ. ಈ ಸಮಾಜದ ಬಗ್ಗೆ ಗೊತ್ತಾದಾಗ ನಮಗೆ ಬುದ್ಧಿ ಬರುತ್ತದೆ. ನಾವು ಕನಸು ಕಾಣೊ ಸಿನಿಮಾ ಹೀರೋಗಳು ಕಟ್ಕೊಂಡ ಹೆಂಡತಿಯರನ್ನ ಹೊಡೆದು ಬಡೆದು ಪೀಡಿಸಿ ಡೈವರ್ಸ ಕೊಡೊದನ್ನ, ನಾಲ್ಕೈದು ಮದುವೆಯಾಗೋದನ್ನ ನೋಡಿದಾಗ ನಮಗೆ ಅಸಲಿ ಜೀವನ ಗೊತ್ತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಎಷ್ಟೋ ಹುಡುಗಿಯರು ಹ್ಯಾಂಡಸಮ ಹುಡುಗರನ್ನ ಪ್ರೀತಿಸಿ ಮನೆ ಬಿಟ್ಟು ಓಡೋಗಿ ಮದುವೆಯಾಗುತ್ತಾರೆ, ಆನಂತರ ಲೈಫಲಾಂಗ ಕಣ್ಣೀರಾಗುತ್ತಾರೆ. ಏಕೆಂದರೆ ಆತ ಹೆಚ್ಚಿನ ಟೈಮನ್ನು ಬಾಡಿ ಮೇಲೆ ವೇಸ್ಟ ಮಾಡಿರತ್ತಾನೆ, ಬ್ರೇನ ಮೇಲೆ ಅಲ್ಲ. ಬದುಕು ಸಾಗಿಸಲು ಸಾಕಷ್ಟು ಹಣ ಗಳಿಸಿರಲ್ಲ. ಅವರ ಜೀವನ ಸಂಕಷ್ಟಕ್ಕೆ ಸಿಲುಕಿ ಸಾಯುತ್ತದೆ. ಇನ್ನೂ ಕೆಲ ಹುಡುಗಿಯರು ಪ್ರೀತಿ ಪ್ರೀತಿ ಅಂತಾ ಬೆನ್ನಿಂದೆ ಸುತ್ತೋ ಹುಡುಗರನ್ನು ಮದುವೆಯಾಗಿ ಜೀವಂತ ಶವದಂತೆ ಬದುಕುತ್ತಾರೆ. ಏಕೆಂದರೆ ಸಿನಿಮಾ ನೋಡಿ ಪ್ರೀತಿ ಪ್ರೀತಿ ಅಂತಾ ಸಾಯೋ ಹುಡುಗರಿಗೆ ಅಸಲಿ ಜೀವನ ಗೊತ್ತಿರಲ್ಲ, ಬರೀ ಪ್ರೀತಿಯಿಂದ ಹೊಟ್ಟೆ ತುಂಬಲ್ಲ, ಹ್ಯಾಂಡಸಮ್ಮಾಗಿದ್ರೆ ಹೊಟ್ಟೆ ತುಂಬಲ್ಲ. ಹೊಟ್ಟೆ ತುಂಬಬೇಕು, ಜೀವನ ಸಾಗಬೇಕು ಅಂದ್ರೆ ಹಣ ಬೇಕು, ಈ ಹುಡುಗರು ಹಣ ಗಳಿಸಿರಲ್ಲ. ಬರೀ ಕುರುಡು ಕನಸು ಕಾಣುತ್ತಾ ಕರಿಯರ ಬಿಲ್ಡಿಂಗ್ ಟೈಮಲ್ಲಿ ಟೈಮ ಪಾಸ ಮಾಡುತ್ತಾರೆ, ನಂತರ ಜೀವನವೇ ಜೋಕ ಆಗುತ್ತದೆ. ಸಂಸಾರ ಹರಿದ ಚಡ್ಡಿಗಿಂತಲೂ ಕಡೆಯಾಗುತ್ತದೆ. ಈ ವಿಷಯ ಬುದ್ಧಿ ಬಂದಿರೋ ಪ್ರತಿ ಹುಡುಗಿಗೆ ಗೊತ್ತಾಗುತ್ತದೆ, ಸೀನಿಯರ ಹುಡುಗಿಯರು ಇದರ ಬಗ್ಗೆ ಡೆಮೋ ಕೊಟ್ಟು ಹೇಳಿರುತ್ತಾರೆ. ಅದಕ್ಕೆ ನಾವು ಫೈನಾನ್ಸಿಯಲಿ ಸ್ಟೇಬಲ ಆಗಿರುವ, ಸಕ್ಸೆಸಫುಲ್ಲಾಗಿರುವ, ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿರುವ ಹುಡುಗನನ್ನು ಮದುವೆಯಾಗೋಕೆ ಇಷ್ಟಪಡ್ತಿವಿ. ಏಕೆಂದರೆ ಬರೀ ಪ್ರೀತಿಯಿಂದ, ಕಾಮಿಡಿಯಿಂದ, ಹ್ಯಾಂಡಸಮನೆಸನಿಂದ ಹೊಟ್ಟೆ ತುಂಬಲ್ಲ. ಮನೆ ನಡೆಸೋಕೆ ಹಣ ಬೇಕು, ಹೊಟ್ಟೆಬಟ್ಟೆಗೆ ಹಣ ಬೇಕು, ಏನಾದರೂ ಆದ್ರೆ ಹಾಸ್ಪಿಟಲ್ ಖರ್ಚಿಗೆ ಹಣ ಬೇಕು, ಎಲ್ಲದಕ್ಕೂ ಹಣ ಬೇಕು, ಇರೋದಕ್ಕೆ ಮನೆ ಬೇಕು, ಎಲ್ಲ ಬೇಕು. ಇದನ್ನ ನಾವು ಹುಡುಗಿಯರು ಬಾಯ್ಬಿಚ್ಚಿ ಹೇಳಿದರೆ ಹುಡುಗರತ್ರ ಇದನ್ನ ಅರ್ಥಾ ಮಾಡಿಕೊಳ್ಳುವಷ್ಟು ತಾಳ್ಮೆ ಇರಲ್ಲ. ಅವರು ಲೈಫಲ್ಲಿ ಸೆಟ್ಲಾಗಿರಲ್ಲ, ಹಣ ಮಾಡಿರಲ್ಲ, ಅವರ ಈಗೋ ಹರ್ಟಾಗುತ್ತದೆ. ಆಗವರು ನಮಗೆ ಗೋಲ್ಡ್ ಡಿಗ್ಗರ, ಚೀಟರ್ ಅಂತೆಲ್ಲ ಕರೆಯುತ್ತಾರೆ. ಅದಕ್ಕೆ ನಾವು ಹುಡುಗರಿಗೆ ಎಂಥ ಹುಡುಗ ಬೇಕು ಅಂತಾ ನಿಜ ಹೇಳಲ್ಲ. ನಾವು ಸೈಲೆಂಟಾಗಿ ಲೈಫಲ್ಲಿ ವೆಲ್ ಸೆಟಲ ಆಗಿರುವ, ಫೈನಾನ್ಸಿಯಲಿ ಸ್ಟೇಬಲಾಗಿರುವ ಹುಡುಗನನ್ನು ಮದುವೆಯಾಗ್ತಿವಿ. ತನ್ನ ಲೈಫಲ್ಲಿ ಸ್ಟೇಬಲಾಗಿರದ ಹುಡುಗ ನಮ್ಮನ್ನು ಸಂತೋಷವಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ. ಹಣ ಇರದವನನ್ನು ಕಟ್ಟಿಕೊಂಡರೆ ಹೆಣದಂತೆ ಬದುಕಬೇಕಾಗುತ್ತದೆ. ಇವರಿಗೆ ನಾವು ಎಷ್ಟೇ ಹೇಳಿದರೂ ಇಂಥವರು ನಮ್ಮ ಮಾತು ಕೇಳಲ್ಲ, ಲೈಫಲ್ಲಿ ಮುಂದೆ ಬರೋಕೆ ಟ್ರಾಯ ಮಾಡಲ್ಲ. ಬರೀ ಮೂರವೊತ್ತು ಚಿಲ್ಲರೆ ಕೆಲಸ ಚಿಲ್ಲರೆ ಮಾತು ಅಷ್ಟೇ. ತನ್ನ ಸ್ವಂತ ಲೈಫಲ್ಲಿ ಸೆಟ್ಲಾಗದವನು ನಮ್ಮನೇನು ಸುಖವಾಗಿ ನೋಡಿಕೊಳ್ತಾನೆ? ದಿನಾ ಸೆರಗಿಗೆ ಕೈಹಾಕಿ ತಾನು ಸುಖವಾಗಿರ್ತಾನೆ, ಆದರೆ ನಮ್ಮ ಸುಖದ ಬಗ್ಗೆ ಕಾಳಜಿ ಮಾಡಲ್ಲ. ಅದಕ್ಕೆ ನಾವು ಗೊಳ್ಳು ಪ್ರೀತಿ ಪ್ರೇಮ ಬಿಟ್ಟು ಲೈಫಲ್ಲಿ ಸೆಟ್ಲಾಗಿರುವ ಹುಡುಗ ಹೇಂಗೆ ಇದ್ರೂ ಅವನನ್ನು ಕಣ್ಮುಚ್ಚಿ ಮದುವೆಯಾಗ್ತಿವಿ ಅಷ್ಟೇ " ಅಂತೆಲ್ಲ ಹೇಳಿದಳು.
ನನಗೆ ಅವಳ ಮಾತುಗಳನ್ನು ಕೇಳಿ ಸರಿ ಅಂತಾ ಅನಿಸಿತು. ನಾನು ಸ್ವಲ್ಪ ಯೋಚಿಸ್ತಾ ಇದ್ದೆ. ಆಗವಳು "ನಿನಗೇನ ಬಿಡು, ಚೆನ್ನಾಗೆ ಸೆಟ್ಲಾಗಿದಿಯಾ, ಹುಡುಗಿಯರು ಲೈನಲ್ಲಿ ನಿಂತು ಮದುವೆಯಾಗ್ತಾರೆ, ಈಗ ರಾಣಿ ಸಿಕ್ಕಿದಾಳಲ್ಲ ಯಾಕೆ ಈ ಯೋಚನೆ?" ಎಂದಳು. ನಾನಾಗ ಅವಳಿಗೆ "ಅಂದರೆ ಹುಡುಗರ ಪ್ರೀತಿ, ಕ್ಯಾರೆಕ್ಟರ್ ನೋಡಲ್ವಾ ಹುಡುಗಿಯರು?" ಅಂತಾ ಕೇಳಿದೆ. ಆಗವಳು "ಹಾಗಲ್ವೋ ಕ್ಯಾರೆಕ್ಟರ್ ನೋಡ್ತಿವಿ. ಆದ್ರೆ ಬರೀ ಪ್ರೀತಿ ತಗೊಂಡು ಏನ ಮಾಡಬೇಕು ನಾವು? ಲೈಫಲ್ಲಿ ಏನು ಮಾಡದೇ ಬರೀ ಪ್ರೀತಿಯಿದೆ ಪ್ರೀತಿಸು ಅಂದ್ರೆ ಏನ ಮಾಡಬೇಕು ನಾವು ಹುಡುಗಿಯರು? ಇವರ ಪ್ರೀತಿ ಫಸ್ಟ*ನೈಟ ತನಕ ಅಷ್ಟೇ ಇರುತ್ತದೆ. ಮುಂದೆ ಮಕ್ಕಳಾದಾಗ ಅವುಗಳನ್ನು ಸಾಕಬೇಕಲ್ವಾ? ಅವುಗಳ ಪೋಷಣೆ ಮಾಡಬೇಕು, ಸ್ಕೂಲ ಫೀಜ, ಬಟ್ಟೆ ಬರೆ ಎಲ್ಲ ಖರ್ಚುಗಳಿರುತ್ತವೆ, ನಾವು ಇವೆಲ್ಲ ಜವಾಬ್ದಾರಿಗಳ ಬಗ್ಗೆ ಯೋಚನೆ ಮಾಡ್ತಿವಿ. ಏಕೆಂದರೆ ನಾವು ಮನೆ ನಡೆಸಬೇಕಾಗುತ್ತದೆ. ಪ್ರೀತಿ ತಗೊಂಡು ಏನ ಉಪ್ಪಿನಕಾಯಿ ಹಾಕೋಕ್ಕಾಗತ್ತಾ? ನಾವು ಯಾರನ್ನು ಮದುವೆಯಾದರೂ ಮನೆಗೆಲಸ ಮಾಡಬೇಕು, ಮಕ್ಕಳನ್ನು ಹೆರಲೇಬೇಕು. ಹಾಗಂತ ಸಿಕ್ಕಸಿಕ್ಕವರ ಜೊತೆಗೆ ಸಂಸಾರ ಮಾಡೋಕ್ಕಾಗುತ್ತಾ?" ಎಂದಳು. ನಾನಾಗ "ನೀನೇಳೆದು ಕರೆಕ್ಟಾಗಿದೆ, ಲೈಫಲ್ಲಿ ಹ್ಯಾಪಿಯಾಗಿರಬೇಕೆಂದರೆ ಹಣ ಬೇಕೇ ಬೇಕು" ಎಂದೆ. ಆಗವಳು "ನೀನು ನಿಮ್ಮಕ್ಕನ ಮದುವೆ ಮಾಡೋವಾಗ ಅವಳಿಗೆ ಎಂಥ ಹುಡುಗನನ್ನು ಹುಡುಕುತ್ತಿಯಾ? ಲೈಫಲ್ಲಿ ಅಚೀವ ಮಾಡಿರೋ ಒಳ್ಳೆ ವೆಲ ಸೆಟಲ ಹುಡುಗನನ್ನಾ ತಾನೇ? ನಿಮ್ಮಕ್ಕ ರಾಜಕುಮಾರಿ ತರಹ ಅಲ್ಲ ನಿಜವಾಗಿಯೂ ರಾಜಕುಮಾರಿ ಆಗಿದ್ದಾಳೆ, ಅವಳನ್ನ ನೀನು ಬೀದಿ ಭೀಕಾರಿಗೆ ಕೊಡ್ತಿಯಾ? ಇಲ್ಲಾ ತಾನೇ? ಒಳ್ಳೆ ರಾಜಕುಮಾರನಿಗೆ ಕೊಟ್ಟು ಮದುವೆ ಮಾಡ್ತಿಯಾ ತಾನೇ? ಅದೇ ರೀತಿ ಪ್ರತಿ ಹುಡುಗಿಯೂ ರಾಜಕುಮಾರಿಯೇ ಕಣೋ, ಅವಳ ಆಸೆಗಳನ್ನು ಈಡೇರಿಸುವ ಸಾಮರ್ಥ್ಯ ಇರೋನನ್ನ ಮದುವೆಯಾದ್ರೆ ಮಾತ್ರ ಅವಳು ಖುಷಿಯಾಗಿರ್ತಾಳೆ. ಅದನ್ನ ಬಿಟ್ಟು ಪ್ರೀತಿ ಫಿಲಾಸಫಿ ಹಿಂದೆ ಬಿದ್ರೆ ಅಷ್ಟೇ ಎರಡು ಮಕ್ಕಳನ್ನು ಮಾಡಿಕೊಂಡು ಜೀವನಪೂರ್ತಿ ಪಾತ್ರೆ ಉಜ್ಜುತ್ತಾ ಬಿದ್ದಿರುತ್ತಾಳೆ ಅಷ್ಟೇ" ಅಂದಳು. ನಾನು ಅವಳಿಗೆ "ಹುಡುಗಿಯರ ಮನದಾಳ" ಹೇಳಿದಕ್ಕೆ ಥ್ಯಾಂಕ್ಸ ಹೇಳಿದೆ. ಆಗವಳು "ಯಾಕೋ ಇದನ್ನೆಲ್ಲ ಕೇಳ್ತಿದಿಯಾ? ರಾಣಿ ಏನಾದರೂ ಅಂದ್ಲಾ? ಹಾಗೇನಾದರೂ ಇದ್ರೆ ಹೇಳು ನಾನು ಇನ್ನೂ ವೇಟಿಂಗ ಲಿಸ್ಟಲ್ಲಿರುವೆ, ನಿನ್ನ ಮಿಸ ಮಾಡಿಕೊಂಡಿದಕ್ಕೆ ನನಗೆ ಈಗಲೂ ರಿಗ್ರೇಟ ಇದೆ. ನಿನ್ನ ಲೈಫಲ್ಲಿ ರಾಣಿನಾ ಬಿಟ್ಟು ಬೇರೆ ಯಾವುದೇ ಹುಡುಗಿ ಇದ್ರೂ ನಾನಿನ್ನ ಹಾರಿಸಿಕೊಂಡು ಹೋಗಿ ಮದ್ವೆಯಾಗ್ತಿದ್ದೆ. ನಿನ್ನ ರಾಣಿಗಿಂತ ಚೆನ್ನಾಗಿ ನೋಡಿಕೊಳ್ಳೊಕೆ ಬೇರೆ ಯಾವಳಿಗೂ ಆಗಲ್ಲ..." ಅಂತೆಲ್ಲ ಹೇಳುತ್ತಿದ್ದಳು. ಅಷ್ಟರಲ್ಲಿ ರಾಣಿ ಬಂದಾಗ ನಮ್ಮಿಬ್ಬರ ಡಿಸ್ಕಷನ ಎಂಡಾಯ್ತು. ನನಗೆ "ಹುಡುಗಿಯರು ಹುಡುಗರಲ್ಲಿ ಏನ ನೋಡ್ತಾರೆ?" ಎಂಬುದರ ಬಗ್ಗೆ ಫುಲ್ ಕ್ಲ್ಯಾರಿಫಿಕೇಷನ ಸಿಕ್ಕಿತು.
ನೋಡಿ ಫ್ರೆಂಡ್ಸ, ಬರೀ ನಮ್ಮಕ್ಕ ಮಾತ್ರ ಅಲ್ಲಾ ಪ್ರತಿಯೊಬ್ಬ ಹುಡುಗಿ ರಾಜಕುಮಾರಿನೇ. ನಾವು ನಮ್ಮ ಸ್ವಂತ ಅಕ್ಕಂದಿರ ಮದುವೆ ಮಾಡುವಾಗ ವೆಲ್ ಸೆಟಲ ಆಗಿರುವ ಸಕ್ಸೆಸಫುಲ್ಲಾಗಿರುವ ಹುಡುಗನನ್ನು ನೋಡ್ತಿವಿ ಅಂದ್ರೆ ಹುಡುಗಿಯರು ಫೈನಾನ್ಸಿಯಲಿ ಸ್ಟೇಬಲಾಗಿರುವ ಹುಡುಗನನ್ನು ಲವ್ ಮಾಡೋದ್ರಲ್ಲಿ ತಪ್ಪೇನಿಲ್ಲ. ಏಕೆಂದರೆ ಬರೀ ಪ್ರೀತಿಯಿಂದ, ಸಿಕ್ಸ ಪ್ಯಾಕನಿಂದ, ಬಾಡಿಯಿಂದ ಹೊಟ್ಟೆ ತುಂಬಲ್ಲ. ಲೈಫಲ್ಲಿ ಖುಷಿಯಾಗಿ ಬದುಕಬೇಕು ಅಂದರೆ ಸಾಕಷ್ಟು ಹಣ ಬೇಕೆ ಬೇಕು. ಸೋ ಈ ಹುಚ್ಚು ಪ್ರೀತಿ ಪ್ರೇಮ ಡ್ರಾಮಾಗಳನ್ನು ಬಿಟ್ಟು ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿ ಸಾಕು, ಸುಂದರವಾಗಿರುವ ಹುಡುಗಿ ಸಿಕ್ಕೇ ಸಿಗ್ತಾಳೆ. ಹುಡುಗಿಯರನ್ನ ಬ್ಲೇಮ ಮಾಡುವ ಬದಲು ನಾವು ನಮ್ಮ ಯೋಗ್ಯತೆಯನ್ನು ಹೆಚ್ಚಿಸಿಕೊಂಡರೆ ಸಾಕು ಸರಿಯಾದ ಟೈಮಿಗೆ ಸುಲಭವಾಗಿ ಮದುವೆಯಾಗುತ್ತದೆ. ಹುಡುಗಿಯರು ಹುಡುಗರಲ್ಲಿ ಸ್ಟೇಬಲಾಗಿರುವ ಲೈಫನ್ನಷ್ಟೇ ನೋಡುತ್ತಾರೆ. ಸೋ ಕೆಲಸಕ್ಕೆ ಬಾರದ ಗೊಳ್ಳು ಲವ್ ಬಿಡಿ ಗ್ರೇಟ ಕರಿಯರನ್ನು ಬಿಲ್ಡ ಮಾಡಿ. ಆಮೇಲೆ ಸುಂದರಿಯರು ನಿಮ್ಮ ಮನೆ ಮುಂದೆ ಮದುವೆಯಾಗಲು ಕಾಯುತ್ತಾರೆ. ಈಗ ಸತ್ಯ ಅರ್ಥವಾಗಿದೆ ಅನ್ಕೋತಿನಿ. ಹುಡುಗಿಯರ ಹಿಂದೆ ನಾಯಿ ತರಹ ಅಲೆಯೋದನ್ನ ಬಿಟ್ಟು ರಾಯಲ ಲೈಫನ್ನು ಬಿಲ್ಡ ಮಾಡಲು ಕೆಲಸ ಮಾಡಲು ಸ್ಟಾರ್ಟ ಮಾಡಿ. ಆಲ ದ ಬೆಸ್ಟ್...