ಹಾಯ್, ನನಗೆ ದಿನಾ ಸಾವಿರಾರು ಜನ ಸೋದರಿಯರು "ಬ್ರದರ ನಾನು ಪ್ರೀತಿಯಲ್ಲಿ ಮೋಸ ಹೋಗಿರುವೆ, ಬೇರೆಯವರನ್ನ ನಂಬಿ ಮೋಸ ಹೋಗಿರುವೆ, ನನಗೆ ಇದರಿಂದ ಹೊರಬರಲು ಹೆಲ್ಪ ಮಾಡು" ಅಂತಾ ಕೇಳಿಕೊಳ್ಳುತ್ತಲೆ ಇರುತ್ತಾರೆ. ಇನ್ಮುಂದೆ ಯಾವ ಸೋದರಿ ಕೂಡ ಈಜಿಯಾಗಿ ಮೋಸ ಹೋಗಬಾರದು ಅನ್ನೋ ಕಾರಣಕ್ಕೆ ಮಾತ್ರ ಈ ಅಂಕಣವನ್ನು ಬರೆಯುತ್ತಿರುವೆ. ಇದನ್ನು ಓದಿ ಯಾರಿಗಾದರೂ ಹರ್ಟ ಆದರೆ ಕ್ಷಮಿಸಿ. ನನ್ನ ಪ್ರಕಾರ ಈ 3 ಕಾರಣಗಳಿಂದಾಗಿ ಹುಡುಗಿಯರು ಬೇಗನೆ ಮೋಸ ಹೋಗುತ್ತಾರೆ ;
1) ಹೊಗಳಿಕೆಯ ಹಸಿವು :
ಹುಡುಗಿಯರಿಗೆ ಸಾಮಾನ್ಯವಾಗಿ ಸುಂದರವಾಗಿ ಕಾಣಿಸಿಕೊಳ್ಳುವ ಹುಚ್ಚಿರುತ್ತದೆ, ಜೊತೆಗೆ ಹೊಗಳಿಕೆಯ ಹಸಿವಿರುತ್ತದೆ. ಅದು ತಪ್ಪು ಅಂತಾ ನಾನು ಹೇಳ್ತಿಲ್ಲ. ಬಟ ಅದು ಹೆಚ್ಚಾದರೆ ನಿಮ್ಮನ್ನು ಹಾಳು ಮಾಡುತ್ತದೆ ಎಂದಷ್ಟೇ ನಾನು ಹೇಳುತ್ತಿರುವುದು. ಈ ಹೊಗಳಿಕೆಯ ಹಸಿವಿನಲ್ಲಿ ಹುಡುಗಿಯರು ಅವಶ್ಯಕತೆಗಿಂತ ಅಧಿಕವಾಗಿ ಮೇಕಪ ಫ್ಯಾಷನ್ ಮಾಡುತ್ತಾರೆ. ಜಾಸ್ತಿ ಹೊಗಳಿಕೆಗಾಗಿ ಏನೇನೋ ಸೌಂದರ್ಯದ ಸರ್ಕಸ ಮಾಡುತ್ತಾರೆ. ಆದರೆ ಮುಂದೊಂದು ದಿನ ಅವರ ಸೌಂದರ್ಯವೇ ಅವರಿಗೆ ಶಾಪವಾಗುತ್ತದೆ. ಅವರ ಸೌಂದರ್ಯವನ್ನು ನೋಡಿ ಆಕರ್ಷಿತನಾಗಿ ಯಾರೋ ಒಬ್ಬ ಬಂದು ಅವರನ್ನು ಸಿಕ್ಕಾಪಟ್ಟೆ ಹೊಗಳಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾನೆ. ಹೊಗಳಿಕೆ ಕಿವಿಗೆ ಬಿದ್ದಾಗ ಹೆಣ್ಮಕ್ಕಳು ಸ್ವಲ್ಪ ಮೈಮರೆಯುತ್ತಾರೆ. ಅಷ್ಟರಲ್ಲೇ ಕಿಲಾಡಿ ಹುಡುಗರು ಅವರನ್ನು ಪಟಾಯಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಸೌಂದರ್ಯ ನೋಡಿ ಪ್ರೀತಿಸಿದ ಹುಡುಗ ಅವರನ್ನು ಬಹಳ ದಿನ ಚೆನ್ನಾಗಿ ನೋಡಿಕೊಳ್ಳಲ್ಲ ಎಂಬುದು ಅವರಿಗೆ ಹೊಗಳಿಕೆಯ ಗುಂಗಲ್ಲಿ ಅರ್ಥವಾಗಲ್ಲ. ಸೋ ಸೋದರಿಯರೇ ಹೊಗಳಿಕೆಗಳು ಬಂದಾಗ ಸ್ವಲ್ಪ ಹುಷಾರಾಗಿರಿ. ನಿಮ್ಮ ಸೌಂದರ್ಯಕ್ಕೆ ಜೊಲ್ಲು ಸುರಿಸಿ ಹಿಂದೆ ಬಿದ್ದವರನ್ನು ಮದುವೆಯಾಗಿ ಜೀವನಪೂರ್ತಿ ಕಣ್ಣೀರಲ್ಲಿ ಕೈತೊಳೆಯಬೇಡಿ.
2) ಸಮಾಜದ ಅಸಲಿ ಜ್ಞಾನದ ಕೊರತೆ :
ನಮ್ಮ ಸೋದರಿಯರಿಗೆ ಈ ಜಗತ್ತು ಅವರಷ್ಟು ಸುಂದರವಾಗಿಲ್ಲ ಎಂಬ ಕಟು ಸತ್ಯ ಕೆಟ್ಟು ಮೋಸ ಹೋಗುವ ತನಕ ಗೊತ್ತಾಗಲ್ಲ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದನ್ನು ಗುರ್ತಿಸದ ಮುಗ್ಧತೆ ಹಾಗೂ ಮಗುವಿನಂಥ ಮೃದು ಮನಸ್ಸು ಅವರಲ್ಲಿರುತ್ತದೆ. ಅದಕ್ಕಾಗಿ ಅವರಿಗೆ ಎಲ್ಲರೂ ಬೇಗನೆ ಮೋಸ ಮಾಡುತ್ತಾರೆ. ತಮ್ಮ ಅವಶ್ಯಕತೆಗೆ ತಕ್ಕಂತೆ ಅವರನ್ನು ಬಳಸಿಕೊಂಡು ದೂರ ತಳ್ಳುತ್ತಾರೆ. ಯಾರಾದರೂ ಬಂದು ಸ್ವಲ್ಪ ಪ್ರೀತಿಯಿಂದ ಮಾತಾಡಿ ಏನಾದರೂ ಹೇಳಿದರೆ ಅದನ್ನೇ ನಿಜವೆಂದು ಅವರು ಬೇಗನೆ ನಂಬಿ ಬಿಡುತ್ತಾರೆ. ಮತ್ತೆ ಅದನ್ನ ಹೇಳಿದವರ ಸಲಹೆಗಳನ್ನು ಕಣ್ಮುಚ್ಚಿ ಫಾಲೋ ಮಾಡುತ್ತಾರೆ. ಸೋ ಸೋದರಿಯರೇ ನೀವು ಸ್ವಲ್ಪ ಪ್ರ್ಯಾಕ್ಟಿಕಲ್ಲಾಗಿ ಥಿಂಕ ಮಾಡಿ. ಮಾನಸಿಕವಾಗಿ ದೈಹಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಬಲಿಷ್ಟರಾಗಿ. ಸ್ವಲ್ಪ ನೀವು ಧೈರ್ಯಶಾಲಿಗಳಾಗಿ, ಎಲ್ಲವನ್ನೂ ನಂಬಿ ಮೋಸ ಹೋಗಬೇಡಿ. ಯಾವುದನ್ನು ಪ್ರಶ್ನೆ ಕೇಳದೇ ಒಪ್ಪಿಕೊಳ್ಳಬೇಡಿ. ಸಮಾಜದ ಅಸಲಿ ಮುಖವನ್ನು ಮೋಸ ಹೋಗುವ ಮೊದಲೇ ಗುರ್ತಿಸಿ ಸೇಫಾಗಿರಿ.
3) ಸ್ಟೂಪಿಡ ಸಾಫ್ಟ ಕಾರ್ನರ
ನಮ್ಮ ಸೋದರಿಯರಲ್ಲಿ ಒಂದು ಸ್ಟೂಪಿಡ ಸಾಫ್ಟ ಕಾರ್ನರ ಇರುತ್ತದೆ. ಯಾರಾದರೂ ಅವರಿಗೆ ಖುಷಿ ಕೊಡುವ ನಾಲ್ಕು ಮಾತಾಡಿದರೆ ಸಾಕು ಅವರೊಂದಿಗೆ ಅವರು ಬೇಗನೆ ಎಮೋಷನಲಿ ಕನೇಕ್ಟಾಗುತ್ತಾರೆ. ಯಾರು ಅವರಿಗೆ ಎಮೋಷನಲ ಸಪೋರ್ಟ್ ಕೊಡುತ್ತಾರೋ, ಅವರ ಮನಸ್ಸಿಗೆ ಖುಷಿ ಕೊಡುವ ರೀತಿಯಲ್ಲಿ ವರ್ತಿಸುತ್ತಾರೋ, ಅವರನ್ನು ಮಾನಸಿಕವಾಗಿ ಖುಷಿಪಡಿಸುತ್ತಾರೋ ಅವರನ್ನು ಇವರು ಬೇಗನೆ ದೈಹಿಕವಾಗಿ ಖುಷಿಪಡಿಸಲು ಮುಂದಾಗುತ್ತಾರೆ. ಅಂದರೆ ಅವರೊಂದಿಗೆ ಬೇಗನೆ ತಮ್ಮ ದೇಹ ಹಂಚಿಕೊಳ್ಳಲು ಮುಂದಾಗುತ್ತಾರೆ. ಇದು ಹುಡುಗಿಯರಲ್ಲಿರುವ ಒಂದು ದೊಡ್ಡ ಸ್ಟೂಪಿಡ ಸಾಫ್ಟ್ ಕಾರ್ನರ ಆಗಿದೆ. ಇದು ಅವರ ದೊಡ್ಡ ವಿಕನೇಸ ಆಗಿದೆ. ಎಲ್ಲರೂ ಮಾತೆಯರನ್ನು ಮಾತಲ್ಲೇ ಮರುಳು ಮಾಡಿ ತಮ್ಮ ಆಸೆ ಈಡೇರಿಸಿಕೊಂಡು ಮಾಯವಾಗುತ್ತಾರೆ. ಅವರ ಬಾಯಫ್ರೆಂಡಗಳು ಅವರಿಗೆ ಸಿಲ್ಲಿಸಿಲ್ಲಿ ಗಿಫ್ಟ್ಸ ನೀಡಿ ಅವರನ್ನು ಮಾನಸಿಕವಾಗಿ ಖುಷಿಪಡಿಸುತ್ತಾರೆ, ನಂತರ ಹುಡುಗಿಯರು ಬೇಗನೆ ಅವರನ್ನು ದೈಹಿಕವಾಗಿ ಖುಷಿಪಡಿಸಿ ಮೋಸ ಹೋಗುತ್ತಾರೆ. ಮುಂದೆ ಮದುವೆಯಾದಾಗಲೂ ಅಷ್ಟೇ ಗಂಡ ತನಗೆ ಬೇಕಾದಾಗ ಇವರನ್ನು ನೈಸ ಮಾಡಿ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಲೇ ಹೋಗುತ್ತಾನೆ. ಸೋ ಸೋದರಿಯರೇ, ನಿಮ್ಮ ಸಾಫ್ಟ ಕಾರ್ನರ ಮೇಲೆ ಒಂದು ಸ್ಟ್ರಾಂಗ ಕಂಟ್ರೋಲ ಸಾಧಿಸಿ. ನಿಮಗೆ ಎಮೋಷನಲ ಸಪೋರ್ಟ್ ಕೊಟ್ಟವರ ಜೊತೆಗೆ ಇಲ್ಲ ಮಾನಸಿಕವಾಗಿ ಖುಷಿಪಡಿಸಿದವರ ಜೊತೆಗೆ ಬೇಗನೆ ಫಿಜಿಕಲ ಕಾಂಟ್ಯಾಕ್ಟ್ ಬೆಳೆಸಿ ಮೋಸ ಹೋಗಬೇಡಿ. ಎಲ್ಲದಕ್ಕೂ ಒಂದು ವೇಟಿಂಗ ಪೀರಿಯಡ ಅಂತಾ ಇರುತ್ತದೆ. ಸ್ವಲ್ಪ ವೇಟ ಮಾಡಿ ನಿಮಗೆ ಅವರು ಸರಿಯಾದ ವ್ಯಕ್ತಿಯಾಗಿದ್ದರೆ ಮಾತ್ರ ಅವರೊಂದಿಗೆ ಮುಂದುವರೆಯಿರಿ ಇಲ್ಲವಾದರೆ ಮುಂದೆ ನೀವೇ ಕಣ್ಣೀರಾಗುತ್ತೀರಿ.
ಇದೀಷ್ಟು ಕಾರಣಗಳಿಂದಾಗಿ ಹುಡುಗಿಯರು ಪದೇಪದೇ ಬೇಗನೆ ಮೋಸ ಹೋಗುತ್ತಾರೆ ಅಂತಾ ನನಗನಿಸುತ್ತದೆ. ಈ ಕಾರಣಗಳಲ್ಲಿ ನಿಮ್ಮ ಪ್ರಕಾರ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಕಮೆಂಟ ಮಾಡಿ. ಈ ಅಂಕಣವನ್ನು ಲೈಕ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಆಫೀಸಿಯಲ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು...