ಹಾಯ್ ಗೆಳೆಯರೇ, ಇವತ್ತಿನ ಮಂಡೇ ಮ್ಯಾಟರ್ ಅಂಕಣದ ಟಾಪಿಕ್ ಸ್ವಲ್ಪ ವಿಚಿತ್ರವಾಗಿದೆ. ಆದರೆ ಇದರಿಂದ ಖಂಡಿತ ನಿಮಗೆ ನಾಲೇಜ್ ಸಿಗುತ್ತದೆ. ಸೋ ಈ ಅಂಕಣಕ್ಕೆ ಈಗಲೇ ಲೈಕ ಮಾಡಿ ಮತ್ತು ಶೇರ್ ಮಾಡಿಕೊಂಡು ಓದಲು ಶುರು ಮಾಡಿ.
2017ರಲ್ಲಿ ನಾನು BSc ಮುಗಿಸಿ ಫ್ಯಾಷನ್ ಪೋಟೋಗ್ರಾಫಿ ಹಾಗೂ ವಿಡಿಯೋ ಪ್ರೊಡಕ್ಷನ್ ಕಲಿಯಲು ನಮ್ಮ ಪುಣೆಯ ಒಂದು ಫೇಮಸ್ ಕಾಲೇಜಿಗೆ ಸೇರಿಕೊಂಡಿದ್ದೆ. ಜೊತೆಗೆ ಇದ್ದಬಿದ್ದ ಹಣವನ್ನೆಲ್ಲ ಹಾಕಿ ಒಂದು ಆನಲೈನ ಬಿಜನೆಸ್ಸನ್ನು ಸಹ ಶುರು ಮಾಡಿದ್ದೆ. ಆದರೆ ಚೆನ್ನಾಗಿ ನಡೆಯುತ್ತಿದ್ದ ನನ್ನ ಆನ್ಲೈನ್ ಬಿಜನೆಸ್ ಎರಡ್ಮೂರು ತಿಂಗಳಲ್ಲಿ ಮಕಾಡೆ ಮಲಗಿಕೊಂಡಿತು. ಇದ್ದ ಅಲ್ಪಸ್ವಲ್ಪ ಹಣ ನಷ್ಟವಾಗಿ ಜೇಬು ಖಾಲಿಯಾಯಿತು. ನನಗೆ ನಷ್ಟವಾಯಿತು ಅಂತೇನು ಬೇಜಾರಾಗಿರಲಿಲ್ಲ. ಆದರೆ ಕೆಲವರು ನನ್ನ ಕಿಂಡಲ ಮಾಡಿಕೊಂಡು ನಗುತ್ತಿದ್ದಾರಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೇಜಾರಾಗುತ್ತಿತ್ತು. ಅದೇ ಬೇಜಾರಲ್ಲಿ ನಾನು ಶನಿವಾರವಾಡಾದಲ್ಲಿ ಹೋಗಿ ಕುಳಿತೆ. ಅಲ್ಲಿಯೂ ಮನಸ್ಸು ಬೇಜಾರಲ್ಲಿತ್ತು. ಅಂಥದರಲ್ಲಿ ಅಲ್ಲಿ ಕೈಕೈಹಿಡಿದು ತಿರುಗುತ್ತಿರುವ ಪ್ರೇಮಿಗಳನ್ನು ನೋಡಿ ಮತ್ತಷ್ಟು ಹೊಟ್ಟೆ ಊರಿಯಿತು. ಲೈಫು ಖಾಲಿ, ಜೇಬು ಖಾಲಿ, ಗರ್ಲಫ್ರೆಂಡಿಲ್ಲ, ಬೈಕಗೆ ಪೆಟ್ರೋಲ್ ಖಾಕಿಸಲು ಕಾಸಿಲ್ಲ, ಎಲ್ಲ ಸೇರಿ ಲೈಫ ತಲೆ ಮೇಲೆ ಹೊಡಿತಾಯಿತ್ತು. ನನಗೆ ಅರಿವಿಲ್ಲದಂತೇಯೇ ಕಣ್ಣೀರು ಕಾಲು ಚಾಚಿದವು. ಕಷ್ಟ ಬಂದಾಗ ದೇವರು ತಂತಾನೇ ನೆನಪಾಗುತ್ತಾನೆ. ನಾನು ಎದ್ದು ಕಣ್ಣೀರನ್ನು ಒರೆಸಿಕೊಂಡು ಅಲ್ಲೇ ಸಮೀಪದಲ್ಲಿರುವ ದಗಡುಶೇಠ ಗಣಪತಿ ಮಂದಿರದ ಕಡೆಗೆ ಭಾರವಾಗಿ ಹೆಜ್ಜೆ ಹಾಕುತ್ತಾ ಸಾಗಿದೆ. ಗಣಪತಿ ದರುಶನ ಪಡೆದೆ, ಗಣಪ್ಪನತ್ರ ನನ್ನ ಆನ್ಲೈನ್ ಬಿಜನೆಸ್ಸನ್ನು ಮತ್ತೆ ಸರಿ ಮಾಡಲು ಸಿಕ್ಕಾಪಟ್ಟೆ ಬೇಡಿಕೊಂಡೆ. ಐದು ನಿಮಿಷ ಕೂತು ಮನೆಗೆ ತೆರಳಲು ಮುಂದಾದೆ.

ಟೆನ್ಶನನಲ್ಲಿ ತಲೆ ಓಡುತ್ತಿರಲಿಲ್ಲ. ಬಸ ಸ್ಟಾಪಿನ ಕಡೆಗೆ ಹೋಗುವ ಬದಲು ದಾರಿತಪ್ಪಿ ಬುಧವಾರ ಪೇಠ ಕಾಲೋನಿಯ ದಾರಿ ತುಳಿದೆ. ಬುಧವಾರ ಪೇಠ ಪುಣೆಯ ರೆ*ಡ*ಲೈಟ ಕಾಲೋನಿಯಾಗಿದೆ, ವೇ**ಶ್ಯ**ಯರ ಬೀದಿಯಾಗಿದೆ. ಇದನ್ನು ನೋಡಲು ಪೋಲಿ ಹುಡುಗರು ಬರುತ್ತಾರೆ. ಇದು ದಗಡು ಶೇಠ ಗಣಪತಿ ಮಂದಿರದ ಪಕ್ಕದ ರಸ್ತೆಯಲ್ಲೇ ಇದೆ. ನಾನು ಬೇಜಾರಲ್ಲಿ ಹಾಗೇ ಸಾಗುತ್ತಿದ್ದೆ. ತಲೆಯಲ್ಲಿ ಚೋರ್ ಬಜಾರಗೆ ಹೋಗಿ ಸೆಕೆಂಡ್ ಹ್ಯಾಂಡ ಕ್ಯಾಮರಾ & ಲೆನ್ಸ ಸಿಗುತ್ತಾ ಅಂತಾ ನೋಡೊ ಯೋಚನೆಯೂ ಓಡ್ತಾಯಿತ್ತು. ಆದರೆ ಅಲ್ಲಿ ಸಿಂಗರಿಸಿಕೊಂಡು ನಿಂತಿದ್ದ ವೇ**ಶ್ಯ*ಯರನ್ನು ನೋಡಿ ತಲೆ ತಿರುಗಿತು. ಇವರ ಪರಿಸ್ಥಿತಿಗೆ ಗಂಡಸರೇ ಕಾರಣ ಅಂತಾ ಮನಸ್ಸು ಮರುಗಿತು. ಬೇಜಾವಬ್ದಾರಿ ತಂದೆ, ಕಾಮುಕ ಇಲ್ಲವೇ ಕುಡುಕ ಗಂಡ ಹಾಗೂ ಮೂರು ಬಿಟ್ಟ ಗಂಡಸರ ದೇಹದ ಹಸಿವಿಗಾಗಿ ಈ ಹುಡುಗಿಯರು ಮೈಮಾರಿಕೊಳ್ಳುತ್ತಿದ್ದಾರೆ ಅಂತಾ ಪಾಪಾ ಅನಿಸುತ್ತಿತ್ತು. ಆದರೆ ಅವರ ಮುಖದಲ್ಲಿ ಯಾವುದೇ ಬೇಸರವಿರಲಿಲ್ಲ. ಅವರು ನಗುನಗುತ್ತಾ ತಮ್ಮ ಕಸ್ಟಮರಗಳನ್ನು ಕ್ಯಾಚ್ ಮಾಡಿಕೊಳ್ಳುತ್ತಿದ್ದರು. ತಮ್ಮ ಬಿಜನೆಸ್ಸನ್ನು ಬಿಂದಾಸಾಗಿ ಮಾಡುತ್ತಿದ್ದರು.

ಅಲ್ಲಿದ್ದ ಸುಮಾರು ಮೂವತ್ತು ನಲವತ್ತು ಹುಡುಗಿಯರ ಮಧ್ಯೆದಲ್ಲಿ ನನ್ನ ಗಮನ ಒಬ್ಬಳು ಸ್ಪೆಷಲ್ ಸುಂದರಿಯ ಮೇಲೆ ಹರಿಯಿತು. ಅವಳು ಹಾಕಿಕೊಂಡಿದ್ದ ಶಾರ್ಟ ಸ್ಕರ್ಟ, ಟೈಟ ಟಾಪ, ತುಟಿಗೆ ಹಚ್ಚಿಕೊಂಡಿದ್ದ ಡಾರ್ಕ ರೆಡ ಲಿಪಸ್ಕೀಕ ಹಾಗೂ ಕಣ್ಣಿಗೆ ಹಾಕಿಕೊಂಡಿದ್ದ ಕಪ್ಪು ಕಾಡಿಗೆಯಿಂದ ಆಕೆ ಎಲ್ಲರಲ್ಲಿ ಎದ್ದು ಕಾಣಿಸುತ್ತಿದ್ದಳು. ಮಿಕ್ಕವರೆಲ್ಲ ಬಾಡಿದ ಹೂವಿನಂತೆ ಕಾಣಿಸುತ್ತಿದ್ದರು. ಆದರೆ ಅವಳು ಮಾತ್ರ ಆಗತಾನೆ ಅರಳಿದ ಫ್ರೆಶ್ ಹೂವಿನಂತೆ ಕಾಣಿಸುತ್ತಿದ್ದಳು. ಅವಳನ್ನು ನೋಡಿ ಮನಸ್ಸಲ್ಲಿ ಕಾಮ ಮೂಡುವ ಬದಲು ಮೆದುಳಲ್ಲಿ ಸ್ವಲ್ಪ ಟೂಬಲೈಟ ಆನ್ ಆಯ್ತು. ಅವಳನ್ನು ನಾನು ಅಲ್ಲಿಂದ ಹಾದು ಹೋಗುವಾಗ ಸುಮಾರು ಆರು ನಿಮಿಷ ಗಮನಿಸುತ್ತಲೇ ಹೋದೆ. ಅವಳನ್ನು ಹಾಗೂ ಅಲ್ಲಿದ್ದ ಬೇರೆ ವೇ**ಶ್ಯ*ಯರನ್ನು ನೋಡಿ ನಾನು ಕೆಲವೊಂದಿಷ್ಟು ಜೀವನ ಪಾಠಗಳನ್ನು ಕಲಿತೆ. ಅವುಗಳನ್ನು ನಿಮ್ಮೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದೆ ಶೇರ್ ಮಾಡುತ್ತಿರುವೆ. ಅವು ಇಂತಿವೆ ;

1) ನಾವು ಏನೇ ಆದರೂ ಕಾನ್ಫಿಡೆಂಟಾಗಿರಬೇಕು. ನಮಗೆ ನಮ್ಮ ಮೇಲೆ ಹೆಮ್ಮೆ ಇರಬೇಕು. ಯಾವುದೇ ಕೆಲಸ ಮಾಡಿದರೂ ನಾವು ಗರ್ವದಿಂದ ಮಾಡಬೇಕು. ಹೊಟ್ಟೆ ತುಂಬಿಸಿಕೊಳ್ಳಲು ಮಾಡುವ ಪ್ರತಿ ಕೆಲಸವೂ ಶ್ರೇಷ್ಟವಾಗಿದೆ. ನನ್ನ ಗಮನ ಸೆಳೆದ ಹುಡುಗಿಯ ಮುಖದಲ್ಲಿ ಇಂಥ ಒಂದು ಗ್ರೇಟ್ ಕಾನ್ಫಿಡೆನ್ಸ್ ಇತ್ತು, ಅವಳು ಗರ್ವದಿಂದಲೇ ಮೈಮಾರಿಕೊಳ್ಳುತ್ತಿದ್ದಳು. ಈ ಲೈಫ ಪ್ರತಿದಿನ ನಮ್ಮನ್ನು ತುಳಿಯುತ್ತದೆ. ನಾವು ಮತ್ತೆ ನಗುತ್ತಾ ಎದ್ದು ನಿಲ್ಲಬೇಕು, ಮುಂದೆ ಸಾಗಬೇಕು. Life f**k*s us everyday. We have to stand again and move on.

2) ನಾವು ಅನಾವಶ್ಯಕವಾಗಿ ಎಲ್ಲರೊಂದಿಗೆ ಎಮೋಷನಲಿ ಕನೇಕ್ಟ ಆಗಬಾರದು. ವೇ**ಶ್ಯ*ಯರಿಂದ ಕಲಿಯಬೇಕಾದ ದೊಡ್ಡ ಜೀವನ ಪಾಠವೆಂದರೆ ಇದೆ. ವೇ**ಶ್ಯ*ಯರು ದಿನಕ್ಕೊಬ್ಬರ ಜೊತೆಗೆ ತಮ್ಮ ದೇಹವನ್ನು ಹಂಚಿಕೊಳ್ಳುತ್ತಾರೆ, ನೂರಾರು ಜನರ ಜೊತೆಗೆ ಮಲಗುತ್ತಾರೆ. ಆದರೆ ಯಾರೊಂದಿಗೂ ಸಹ ಅವರು ಎಮೋಷನಲಿ ಕನೇಕ್ಟ ಆಗಲ್ಲ. ಯಾವುದೇ ರೀತಿಯ ಫೀಲಿಂಗ್ಸಗಳಿಗೆ ಜಾಗ ಕೊಡಲ್ಲ. ಯಾವುದಕ್ಕೂ ಕೇರ್ ಮಾಡಲ್ಲ. ಅನಾವಶ್ಯಕವಾಗಿ ಮಾನಸಿಕ ಸಂಬಂಧ ಬೆಳೆಸಿ ನರಳಲ್ಲ. ನಾವು ನಮ್ಮವರಲ್ಲದವರ ಜೊತೆಗೆ ಎಮೋಷನಲಿ ಕನೇಕ್ಟಾಗುತ್ತಿವಿ ಆನಂತರ ಅವರು ಬಿಟ್ಟೋದಾಗ ಅಳುತ್ತಾ ಕೂಡುತ್ತೀವಿ. ನಾವು ಹ್ಯಾಪಿಯಾಗಿರಬೇಕೆಂದರೆ ಅನಾವಶ್ಯಕವಾಗಿ ಎಲ್ಲರೊಂದಿಗೆ ಕನೇಕ್ಟಾಗುವುದನ್ನು ನಿಲ್ಲಿಸಬೇಕು, ಇಲ್ಲವಾದರೆ ಪದೇಪದೇ ನರಳಬೇಕಾಗುತ್ತದೆ.

3) ವೇ**ಶ್ಯ*ಯರಿಂದ ಕಲಿಯಬೇಕಾದ ಇನ್ನೊಂದು ದೊಡ್ಡ ಪಾಠವೆಂದರೆ Profit First, Business is Business. ನಾವು ಬಿಜನೆಸ ಮಾಡುವಾಗ ಮೊದಲು ಪ್ರೋಫಿಟ ಬಗ್ಗೆ ಯೋಚಿಸಲೇಬೇಕು. ನಮ್ಮ ಬಿಜನೆಸ್ಸನ್ನು ಬೇಗನೆ ಪ್ರೋಫಿಟೇಬಲ ಬಿಜನೆಸ ಮಾಡಬೇಕು. ಎಮೋಷನಲಿ ಫೂಲಾಗದೇ ಓರ್ವ ವೇ**ಶ್ಯ*ಯ ತರಹ ಯೋಚಿಸಿ ಬಿಜನೆಸ ಮಾಡಬೇಕು. ಹೇಗೆ ಓರ್ವ ವೇ**ಶ್ಯ ತನ್ನ ಹೊಟ್ಟೆಪಾಡಿಗಾಗಿ ತನ್ನ ವ್ಯಾಪಾರವನ್ನಷ್ಟೇ ನೋಡುತ್ತಾಳೋ ನಾವು ಕೂಡ ಅದೇ ರೀತಿ ನಮ್ಮ ವ್ಯಾಪಾರಕ್ಕೆ ಮೊದಲ ಆದ್ಯತೆ ಕೊಡಬೇಕು. ಎಮೋಷನಲಿ ಫೂಲಾಗದೇ ಬಿಜನೆಸ ಮಾಡಬೇಕು. ಅಂದಾಗಲೇ ನಾವು ಬಿಜನೆಸ್ಸಲ್ಲಿ ಬದುಕುತ್ತೀವಿ, ಬೆಳೆಯುತ್ತೀವಿ.

ನಾನು ನಡೆಯುತ್ತಾ ಹದಿನೈದು ನಿಮಿಷದಲ್ಲಿ ವೇ**ಶ್ಯ*ಯರ ಬೀದಿಯನ್ನು ದಾಟಿ ಹೋಗಿದ್ದೆ. ಅವರನ್ನು ನೋಡುತ್ತಾ ನಾನು ಈ ಮೂರು ಲೈಫ ಪಾಠಗಳನ್ನು ಕಲಿತಿದ್ದೆ. ಅಷ್ಟರಲ್ಲಿ ಚೋರ್ ಬಜಾರ್ ಬಂತು. ನಾನು ಸೆಕೆಂಡ್ ಹ್ಯಾಂಡ ಕ್ಯಾಮರಾ ನೋಡಬೇಕು ಅಂತಾ ಅಂದುಕೊಳ್ತಿದ್ದೆ. ಅಷ್ಟರಲ್ಲಿ ನಮ್ಮಕ್ಕನ ಫೋನ ಬಂತು. ಅಕ್ಕ ಫುಲ್ ಗರಮ ಆಗಿದ್ದಳು. ನಮ್ಮಕ್ಕಳ ಫ್ರೆಂಡ್ ಒಬ್ಬಳು ಬಸ್ಸಲ್ಲಿ ಹೋಗುವಾಗ ನನ್ನನ್ನು ಬುಧವಾರ ಪೇಠದಲ್ಲಿ ನೋಡಿ ನನ್ನ ಫೋಟೋ ಕ್ಲಿಕ ಮಾಡಿ ನಮ್ಮಕ್ಕಳಿಗೆ ಕಳುಹಿಸಿದ್ದಳು. ಪುಣೆಯಲ್ಲಿ ಶಿವಾಜಿನಗರಕ್ಕೆ ಹೋಗುವ ಆಲಮೊಸ್ಟ ಆಲ ಎಲ್ಲ ಬಸಗಳು ಈ ಬುಧವಾರ ಪೇಠದಿಂದಲೇ ಹೋಗುತ್ತವೆ. ವೇ**ಶ್ಯ*ಯರ ಕಾಲೋನಿಯ ಮಧ್ಯೆದಿಂದಲೇ ಹೋಗುತ್ತವೆ. ಆಗವಳು ನನ್ನ ನೋಡಿ ನಮ್ಮಕ್ಕಳಿಗೆ ವಾಟ್ಸಾಪ ಮಾಡಿದ್ದಳು. ಅಕ್ಕ ಗರಮ ಆಗಿ ಕಾಲ ಮಾಡಿ ತಕ್ಷಣವೇ ಮನೆಗೆ ಬರುವಂತೆ ಆರ್ಡರ ಮಾಡಿದಳು. ನಾನು ಕೂಡಲೇ ಮನೆಗೆ ಹೋದೆ. ಅಕ್ಕ ಸ್ವಲ್ಪ ಕ್ಲಾಸ ತೆಗೆದುಕೊಂಡಳು. ಜೊತೆಗೆ ಹೋದ ಹಣ ಹೋಗಲಿ ಮರೆತು ಬಿಡು ಬೇರೆ ಬಿಜನೆಸ ಶುರು ಮಾಡು ಅಂತೇಳಿ 15 ಸಾವಿರ ಕೊಟ್ಟಳು. ನನ್ನ ಬೈಕಗೆ ಪೆಟ್ರೋಲ್ ಹಾಕಿಸಲು ಹಾಗೂ ಮೊಬೈಲಗೆ ರೀಚಾರ್ಜ್ ಮಾಡಿಸಲು ಹಣ ಸಾಕಾಗಲಿ ಅಂತಾ ನನ್ನ ಪಾಕೆಟ ಮನಿಯನ್ನು ಜಾಸ್ತಿ ಮಾಡಿದಳು. ಮುಂದಿನ ವಾರ ನನ್ನ ಬರ್ಥ್ ಡೇ ದಿನ ನನಗೆ ಹೊಸ DSLR ಕ್ಯಾಮರಾವನ್ನು ಗಿಫ್ಟ್ ಮಾಡಿದಳು. ಅವತ್ತಿನಿಂದ ನಾನು ವೇ**ಶ್ಯ*ಯರಿಂದ ಕಲಿತ ಈ ಮೂರು ಲೈಫ ಪಾಠಗಳನ್ನು ಪಾಲಿಸುತ್ತಾ ಬಂದಿರುವೆ. ಅದಕ್ಕೆ ನಾನು ಹ್ಯಾಪಿಯಾಗಿರುವೆ, ಬಿಜನೆಸ್ಸಲ್ಲಿ ಹಣ ಮಾಡುತ್ತಿರುವೆ. ನಿಮಗೆ ಈ ಮೂರು ಜೀವನ ಪಾಠಗಳಲ್ಲಿ ಯಾವುದು ಇಷ್ಟವಾಯಿತು ಅಂತಾ ಕಮೆಂಟ ಮಾಡಿ. ಈ ಅಂಕಣವನ್ನು ಲೈಕ ಮಾಡಿ ಮತ್ತು ಎಲ್ಲರೊಂದಿಗೆ ತಪ್ಪದೇ ಶೇರ್ ಮಾಡಿ. ಧನ್ಯವಾದಗಳು....
