
ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನೀವು ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ್ ಮಾಡಿಕೊಂಡು ಕೊರಗುತ್ತಿದ್ದರೆ ಇವತ್ತೇ ಈ ರೀತಿ ಮಾಡುವುದನ್ನ ನಿಲ್ಲಿಸಿ. ಬೇರೆಯವರನ್ನು ನೋಡಿ ನಾನು ತೆಳ್ಳಗಿರುವೆ, ಕುಳ್ಳಗಿರುವೆ, ದಪ್ಪಗಿರುವೆ, ಕಪ್ಪಗಿರುವೆ, ನಾನು ನೋಡೋಕೆ ಚೆನ್ನಾಗಿಲ್ಲ, ಹೈಟಿಲ್ಲ, ವೇಟಿಲ್ಲ, ದುಡ್ಡಿಲ್ಲ, ಕಾರಿಲ್ಲ, ದೊಡ್ಡ ಬಂಗಲೆಯಿಲ್ಲ ಎಂದೆಲ್ಲ ಸ್ಯಾಡ ಫೀಲ ಮಾಡುವುದನ್ನ ನಿಲ್ಲಿಸಿ. ಏಕೆಂದರೆ ನೀವು ಸ್ಪೆಷಲ್ ಆಗಿದ್ದೀರಾ. ಯುನಿಕ್ ಆಗಿದ್ದೀರಾ.
ಸದ್ಯಕ್ಕೆ ಜಗತ್ತಿನ ಜನಸಂಖ್ಯೆ ಸುಮಾರು 700 ಕೋಟಿ ಆಗಿದೆ. ಒಂದು ಹೇಳಿಕೆಯ ಪ್ರಕಾರ ಜಗತ್ತಿನಲ್ಲಿ ನಿಮ್ಮನ್ನು ಹೋಲುವ 7 ಜನರಿರುತ್ತಾರೆ. ಅಂದರೆ ನೀವು 100 ಕೋಟಿ ಜನರಲ್ಲಿ ಒಬ್ಬರಾಗಿರುವಿರಿ. ನೀವು 100 ಕೋಟಿಗೊಬ್ಬರು. ನಿಮ್ಮ ಡಿಎನ್ಎ ಬೇರೆ ಯಾರೊಂದಿಗೂ ಮ್ಯಾಚ್ ಆಗಲ್ಲ, ನಿಮ್ಮ ಫಿಂಗರಪ್ರಿಂಟ ಕೂಡ ಬೇರೆ ಯಾರೊಂದಿಗೂ ಮ್ಯಾಚ್ ಆಗಲ್ಲ. ನೀವು ಯುನಿಕ್ ಆಗಿದ್ದೀರಾ, ಸ್ಪೆಷಲ್ ಆಗಿದ್ದೀರಾ. ಹುಡುಕಿ ತೆಗೆದರೂ ನಿಮ್ಮಂತಿರುವ ಮತ್ತೊಬ್ಬ ವ್ಯಕ್ತಿ ನಿಮಗೆ ಸಿಗಲ್ಲ. ಸೋ ಗೆಳೆಯರೇ ನಿಮ್ಮನ್ನು ಬೇರೆಯವರೊಂದಿಗೆ ಕಂಪೇರ ಮಾಡಿಕೊಂಡು ಕೊರಗಬೇಡಿ. ನಾನು 100 ಕೋಟಿಗೊಬ್ಬನಾಗಿರುವೆ, ಸ್ಪೆಷಲಾಗಿರುವೆ ಎಂಬ ಹೆಮ್ಮೆಯಿಂದ ಬದುಕಿ. ಆಲ ದ ಬೆಸ್ಟ್...
