ಹಾಯ್ ಫ್ರೆಂಡ್ಸ್ ಇವತ್ತಿನ ಅಂಕಣದಲ್ಲಿ ನಾನು ನಿಮ್ಮೊಂದಿಗೆ ಒಂದು ಸೆಕ್ರೆಟನ್ನು ಶೇರ್ ಮಾಡುತ್ತಿರುವೆ. ಇದರಿಂದ ನಿಮಗೆ ಹೆಲ್ಪಾಗುತ್ತದೆ ಎಂಬ ನಂಬಿಕೆಯಿದೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತೆ ಶೇರ್ ಮಾಡಿ.
ಗೆಳೆಯರೇ, ಬಹಳಷ್ಟು ಜನ ನನ್ನತ್ರ ದುಡ್ಡಿಲ್ಲ, ನನಗ್ಯಾರು ರೆಸ್ಪೆಕ್ಟ ಕೊಡ್ತಿಲ್ಲ, ನನ್ನನ್ಯಾರು ಲವ್ ಮಾಡ್ತಿಲ್ಲ, ಕೇರ್ ಮಾಡ್ತಿಲ್ಲ ಅಂತಾ ಕೊರಗುತ್ತಲೇ ಇರುತ್ತಾರೆ. ಅಂಥವರಲ್ಲಿ ನೀವು ಕೂಡ ಒಬ್ಬರಾಗಿದ್ದಾರೆ ಈ ಟಿಪನ್ನು ಫಾಲೋ ಮಾಡಿ. ನಿಮ್ಮತ್ರ ಅದಿಲ್ಲ ಇದಿಲ್ಲ ಅಂತಾ ಕೊರಗುವುದನ್ನು ಕಂಪ್ಲಿಟಾಗಿ ನಿಲ್ಲಿಸಿ. ನಿಮಗೇನು ಬೇಕೋ ಅದನ್ನು ಕೊಡಲು ಸ್ಟಾರ್ಟ ಮಾಡಿ. ನಿಮಗೊಂದು ರಿಯಲ್ ಇನ್ಸಿಡೆಂಟನ್ನು ಹೇಳುವೆ.
ಇದು 2018ರ ಇನ್ಸಿಡೆಂಟಾಗಿದೆ. ನಾನು ಮತ್ತೆ ನಮ್ಮಕ್ಕ ನಮ್ಮನೆ ದೇವತೆ ತುಳಜಾಪುರದ ಅಂಬಾಭವಾನಿಗೆ ಹೋಗಿದ್ದೇವು. ಆಗ ಒಬ್ಬಳು ದೇವದಾಸಿ ನಮಗೆ ಹೊಸ ಸೀರೆ ತಗೋಬೇಕು 100 ರೂ ಕೊಡಿ ಅಂತಾ ಕೇಳಿದಳು. ನಾನು ಇಲ್ಲ ಮುಂದಕ್ಕೋಗಿ ಅಂತಾ ಹೇಳಿದೆ. ಏಕೆಂದರೆ ಆಗತಾನೆ ನಮ್ಮ ಬಿಜನೆಸ ಸ್ಟಾರ್ಟ ಆಗಿತ್ತು. ಲೋನ ಕೂಡ ಸಿಕ್ಕಾಪಟ್ಟೆ ಇತ್ತು. ದುಡ್ಡಿನ ಅವಶ್ಯಕತೆ ಬಹಳಷ್ಟಿತ್ತು. ಆಗ ನಾವು ಒಂದೊಂದು ರೂಪಾಯಿಗೂ ಲೆಕ್ಕ ಹಾಕುತ್ತಿದ್ದೆವು. ಆದರೆ ಆ ದೇವದಾಸಿ ಹೋಗಲಿಲ್ಲ. 100 ರೂ ಹಣ ಬೇಕೆಬೇಕು ಅಂತಾ ಬೆನ್ನು ಬಿದ್ದಳು. ನಮ್ಮತ್ರ ಮತ್ತೆ ನಮ್ಮನೆಗೆ ಬರಲು ಅಂದ್ರೆ ಪುಣೆಗೆ ರಿಟರ್ನ್ ಬರೋವಷ್ಟು ಮಾತ್ರ ಹಣವಿತ್ತು. ಆದರೆ ನಮ್ಮಕ್ಕ ಜಾಸ್ತಿ ಯೋಚಿಸದೇ ಆ ದೇವದಾಸಿಗೆ 200 ರೂಪಾಯಿ ಹಣ ಕೊಟ್ಟಳು. ಆದರೆ ಆ ದೇವದಾಸಿ ಬರೀ 100 ರೂಪಾಯಿಯ ಒಂದು ನೋಟನ್ನಷ್ಟೇ ತೆಗೆದುಕೊಂಡಳು. ನಂತರ ನಮಗೆ "ಅಂಬಾಭವಾನಿ ನಿಮ್ಮನ್ನು ತುಂಬಾ ಎತ್ತರಕ್ಕೆ ಬೆಳೆಸುತ್ತಾಳೆ, ನಿಮಗೆ ಯಾವತ್ತೂ ಯಾವುದರ ಕೊರತೆ ಬೀಳಲ್ಲ, ನಿಮ್ಮೆಲ್ಲ ಕನಸುಗಳು ಬೇಗನೆ ನನಸಾಗ್ತವೆ, ಚಿಂತಿಸದಿರಿ, ಚೆಂದಾಗಿರಿ" ಅಂತಾ ಹರಸಿ ಹೋದಳು.
ಅವತ್ತು ನಾವು ನಮ್ಮನೆಗೆ ಬರುತ್ತಿದ್ದಂತೆಯೇ ನಮಗೊಂದು ದೊಡ್ಡ ರಿಯಲ್ ಎಸ್ಟೇಟ್ ಅಡ್ವಟೈಜಮೆಂಟ ಸಿಕ್ಕಿತು. ನಾವದನ್ನ ಸಕ್ಸೆಸಫುಲ್ಲಾಗಿ ಮಾಡಿದೆವು. ಅಲ್ಲಿಂದ ನಮ್ಮ ಲಕ್ ಟರ್ನಾಯಿತು. ನಮ್ಮ ಬಿಜನೆಸ ಗ್ರೋ ಆಯ್ತು. ನಮ್ಮ ಲೋನ ತೀರಿತು. ನಮಗೀಗ ನಮ್ಮ ಲೈಫಲ್ಲಿ ಎಲ್ಲವೂ ಇದೆ, ಯಾವುದರ ಕೊರತೆ ಇಲ್ಲ. ಅವತ್ತಿನಿಂದ ನಾನು & ನಮ್ಮಕ್ಕ ಇಬ್ರು ಈ ಫಾರ್ಮುಲಾವನ್ನು ಯುಜ ಮಾಡುತ್ತಾ ಬಂದಿದ್ದೇವೆ. ನಮಗೇನು ಬೇಕು ಅದನ್ನ ಕೊಡುತ್ತಾ ಬಂದಿದ್ದೇವೆ. ನಮಗೆ ಬೇಕಾಗಿರುವುದನ್ನ ದೇವರು ಕೊಟ್ಟೆ ಕೊಡುತ್ತಾನೆ. ನೀವು ಇದೇ ರೀತಿ ಮಾಡಿ.
ನಿಮಗೆ ಹಣದ ಕೊರತೆ ಇದ್ದರೆ ಸ್ವಲ್ಪ ಹಣವನ್ನು ದೇವಸ್ಥಾನದಲ್ಲಿ ದಾನ ಮಾಡಿ ಇಲ್ಲವೇ ಯಾರಿಗಾದರೂ ಹೊಟ್ಟೆ ತುಂಬ ಊಟ ಮಾಡಿಸಿ. ಅವರು ನಿಮ್ಮನ್ನು ಹರಸುತ್ತಾರೆ. ನಿಮ್ಮ ಮನೆಗೆ ಲಕ್ಷ್ಮೀ ಬರುತ್ತಾಳೆ. ನಿಮಗೆ ರೆಸ್ಪೆಕ್ಟ ಬೇಕೆಂದರೆ ಮೊದಲು ಎಲ್ಲರಿಗೂ ರೆಸ್ಪೆಕ್ಟ ಕೊಡಲು ಸ್ಟಾರ್ಟ ಮಾಡಿ. ನಿಮಗೆ ಪ್ರೀತಿ ಸಿಗಬೇಕೆಂದರೆ ನೀವು ಪ್ರೀತಿಯನ್ನು ಹಂಚಲು ಶುರು ಮಾಡಿ. ಜನ ನಿಮಗೆ ಹೆಲ್ಪ್ ಮಾಡಬೇಕೆಂದರೆ ನೀವು ಜನರಿಗೆ ಮೊದಲು ಹೆಲ್ಪ್ ಮಾಡಿ. ಈ ರೀತಿ ನಿಮಗೇನು ಬೇಕೋ ಅದನ್ನ ಕೊಡಿ. ನೀವು ಬಯಸಿದ್ದು ನಿಮಗೆ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಈ ಫಾರ್ಮುಲಾ ಇಷ್ಟವಾದರೆ ಒಮ್ಮೆ ಅಪ್ಲಾಯ ಮಾಡಿ ನೋಡಿ. ಈ ಅಂಕಣಕ್ಕೆ ಲೈಕ ಮಾಡಿ, ನಿಮ್ಮ ಅನಿಸಿಕೆ ಕಮೆಂಟ ಮಾಡಿ. ಆಲ ದ ಬೆಸ್ಟ್...