ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ "ಲೈಫಿನ ಚಾಲೆಂಜಗಳನ್ನು ಫೇಸ್ ಮಾಡುವುದು ಹೇಗೆ?" ಅಂತಾ ನೋಡೋಣಾ. ಈಗಲೇ ಈ ಅಂಕಣಕ್ಕೆ ಲೈಕ್ ಮಾಡಿ ಮತ್ತೆ ಇದನ್ನ ಅವಶ್ಯಕತೆ ಬಿದ್ದಾಗ ಮತ್ತೆಮತ್ತೆ ಓದಲು ಶೇರ್ ಮಾಡಿಕೊಳ್ಳಿ. ಲೆಟ್ಸ್ ಬಿಗಿನ್...
ಫ್ರೆಂಡ್ಸ್ ನಮ್ಮ ಲೈಫ್ ಫುಲ್ ಆಫ್ ಚಾಲೆಂಜಗಳಿಂದ ಕೂಡಿದೆ. ಲೈಫಲ್ಲಿ ಯಾವುದೂ ಕೂಡ ಈಜಿಯಾಗಿಲ್ಲ, ಯಾವುದು ಕೂಡ ಬಿಟ್ಟಿಯಾಗಿ ಸಿಗಲ್ಲ. ಎಲ್ಲದಕ್ಕೂ ಸ್ಟ್ರಗಲ್ ಮಾಡಲೇಬೇಕಾಗುತ್ತದೆ. ಸಕ್ಸೆಸಗೂ ಸ್ಟ್ರಗಲ್ ಮಾಡಲೇಬೇಕು, ಸೆ**ಗೂ ಸ್ಟ್ರಗಲ್ ಮಾಡಲೇಬೇಕು. ಏಕೆಂದರೆ ಈಗ ಎಲ್ಲವೂ ಕಮರ್ಷಿಯಲ್ ಆಗಿದೆ. ಎಲ್ಲರಿಗೂ ಹಣ ಬೇಕೇಬೇಕು. ಎಲ್ಲರೂ ಹಣ ಗಳಿಸಲು ಇಳಿದಿದ್ದಾರೆ. ಸೋ ಹೀಗಿರುವಾಗ ಲೈಫಲ್ಲಿ ಚಾಲೆಂಜಸಗಳು ಬಂದೇ ಬರುತ್ತವೆ. ಈ ಚಾಲೆಂಜಸಗಳನ್ನು ಫೇಸ್ ಮಾಡಿದಾಗಲೇ ನಾವು ಹೀರೋ ಆಗುತ್ತವೆ, ಲೈಫಲ್ಲಿ ಬೇಗನೆ ಸೆಟ್ಲಾಗುತ್ತೇವೆ, ಸಕ್ಸಸಫುಲ್ಲಾಗುತ್ತೇವೆ.

ಈ ಚಾಲೆಂಜಸಗಳನ್ನು ಫೇಸ್ ಮಾಡಲು ಒಂದೇ ಒಂದು ಮೆಥಡ್ ಬೆಸ್ಟ್ ಆಗಿದೆ. ಇದು ನನ್ನ ಪರ್ಸನಲ್ ಮೆಥಡ್ ಆಗಿದೆ. ಲೈಫನ್ನು ಗೇಮ್ ತರಹ ಟ್ರೀಟ್ ಮಾಡಲು ಸ್ಟಾರ್ಟ್ ಮಾಡಿ ಆಗ ನಿಮಗೆ ನಿಮ್ಮ ಲೈಫಲ್ಲಿ ಬರುವ ಚಾಲೆಂಜಸಗಳನ್ನು ಫೇಸ ಮಾಡುವ ಪವರ್ ಬರುತ್ತದೆ. ನಿಮ್ಮ ಕೊರತೆಗಳನ್ನು ಕೊರತೆಯ ತರಹ ನೋಡಬೇಡಿ. ಅವುಗಳನ್ನು ಗೇಮನ್ ರೂಲ್ಸ್ ತರಹ ನೋಡಿ. ರೂಲ್ಸ್ ಅಂದ್ರೆ ರೂಲ್ಸ್. ಅವುಗಳನ್ನು ಬದಲಿಸಲು ಬರಲ್ಲ. ಅವುಗಳನ್ನು ಒಪ್ಪಿಕೊಂಡು ನೀವು ಆಟವಾಡುವುದನ್ನ ಕಲಿಯಬೇಕು.
ಉದಾಹರಣೆಗೆ : ನೀವು ಬಿಜನೆಸ್ ಮಾಡಬೇಕು ಅಂತಾ ಡಿಸೈಡ್ ಮಾಡಿದ್ದೀರಿ. ನಿಮ್ಮತ್ರ ಸಾಕಷ್ಟು ದುಡ್ಡಿಲ್ಲ, ಮನೆಯಲ್ಲಿ ಸಪೋರ್ಟ್ ಮಾಡ್ತಿಲ್ಲ, ನಿಮ್ಮ ನೆಟ್ವರ್ಕ್ ಚೆನ್ನಾಗಿಲ್ಲ ಅಂತಾ ಅಂದುಕೊಳ್ಳಿ. ಇವು ನಿಮ್ಮ ಕೊರತೆಗಳಾಗಿವೆ. ಆದರೆ ದುಡ್ಡಿಲ್ಲ, ಸಪೋರ್ಟ್ ಇಲ್ಲ ಎಂಬ ಕೊರತೆಗಳನ್ನು ಕೊರತೆಯ ತರಹ ನೋಡಬೇಡಿ. ಅವುಗಳನ್ನು ಗೇಮನ್ ರೂಲ್ಸ್ ತರಹ ನೋಡಿ. ಈ ರೂಲ್ಸಗಳನ್ನು as it is ಒಪ್ಪಿಕೊಂಡು ಬಿಡಿ. ಆಟದ ನಿಯಮಗಳನ್ನು ಅರ್ಥ ಮಾಡಿಕೊಂಡು ಆಟವಾಡಲು ಸ್ಟಾರ್ಟ್ ಮಾಡಿ. ಮೊದಲು ಆಟವಾಡಲು ಕಲಿಯಿರಿ. ಯಾವುದೇ ತರಹದ ನೆಪಗಳನ್ನು ಹೇಳಬೇಡಿ. ಕುಣಿಯಲು ಬರದವಳು ನೆಲ ಡೊಂಕು ಅಂದಂತೆ ಮಾಡಬೇಡಿ.

ನಿಮ್ಮ ಲೈಫ್ 100 ವರ್ಷದ ಒಂದು ದೊಡ್ಡ ಟೆಸ್ಟ್ ಮ್ಯಾಚ್ ಆಗಿದೆ. ಎಷ್ಟೇ ಒಳ್ಳೆ ಬೌಲರ್ ಬಂದ್ರು ನಿಮ್ಮ ವಿಕೆಟ್ 100 ವರ್ಷದ ತನಕ ಬೀಳಲ್ಲ ಎಂಬ ಭರವಸೆ ಮೇಲೆ ಆಟವಾಡಿ. ಒಂದು ಬಾಲ್ ಮಿಸ್ ಆದ್ರೆ ಆಗ್ಲಿ, ಎರಡನೇ ಬಾಲ್ ಮಿಸ್ ಆದ್ರೆ ಆಗ್ಲಿ, ಮೂರನೇ ಬಾಲ್ ಕೂಡ ಮಿಸ್ ಆದ್ರೆ ಆಗ್ಲಿ. ನಾಲ್ಕನೇ ಬಾಲನಲ್ಲಿ ಬೌಂಡರಿ ಬಾರಿಸಿ. ನಿಮಗೆ Unlimited ಬಾಲ್ಸ್ ಇವೆ ಅಂದ್ರೆ Unlimited ಚಾನ್ಸಸ್ ಇವೆ. ಒಂದು ಅವಕಾಶ ಮಿಸ್ ಆಯ್ತು ಅಂತಾ ಕೊರಗಬೇಡಿ. ಮುಂದಿನ ಅವಕಾಶವನ್ನು ಸರಿಯಾಗಿ ಕ್ಯಾಚ್ ಮಾಡಿಕೊಳ್ಳಿ. ಸೋಲಿನ ಭಯ ಬಿಟ್ಟು ಬಿಂದಾಸಾಗಿ ಆಟವಾಡಿದರೆ ನೀವು ಗೆದ್ದೇ ಗೆಲ್ಲುತ್ತೀರಿ. ಎಲ್ಲಿ ತನಕ ನೀವು ಮೈದಾನ ಬಿಟ್ಟು ಓಡಿ ಹೋಗಲ್ಲವೋ ಅಲ್ಲಿ ತನಕ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ನಿಮ್ಮ ಆಟದಲ್ಲಿ ನೀವು ಪಕ್ಕಾ ಆಗಿ, ಗೆಲುವು ನಿಮ್ಮದೇ. ಆಲ್ ದಿ ಬೆಸ್ಟ್...
