
ಹೈ ಫ್ರೆಂಡ್ಸ್, ಈ ಕೆಟ್ಟ ಟೈಮ್ ಅನ್ನೋದು ಯಾರಿಗೆ ಯಾವಾಗ ಹೇಗೆ ಬಂದು ಏನ್ ಹಾನಿ ಮಾಡುತ್ತೆ ಅಂತಾ ಹೇಳೋಕ್ಕಾಗಲ್ಲ. ಅದಕ್ಕಾಗಿ ನೀವು ಏನಿಟೈಮ್ ಅಲರ್ಟ್ ಆಗಿರಬೇಕು ಹಾಗೂ ನೀವು ಡ್ರೈವ್ ಮಾಡುವ ಕಾರ ಬಗ್ಗೆ A to Z ಮಾಹಿತಿಯನ್ನು ತಿಳಿದುಕೊಳ್ಳಬೇಕು. ನಿಮ್ಮ ನಾಲೇಜನ್ನು ಹೆಚ್ಚಿಸಿಕೊಳ್ಳಬೇಕು. ಎಮರ್ಜೆನ್ಸಿ ಟೈಮಲ್ಲಿ ಈ ನಾಲೇಜ್ ನಿಮ್ಮನ್ನು ಸೇವ್ ಮಾಡುತ್ತದೆ. ಈ ಅಂಕಣದಲ್ಲಿ "ಡ್ರೈವಿಂಗ್ ಮಾಡುವಾಗ ಬ್ರೇಕ್ ಫೇಲಾದರೆ ಯಾವ ರೀತಿ ಕಾರನ್ನು ಸ್ಟಾಪ್ ಮಾಡುವುದು?" ಅಂತಾ ನೋಡೋಣಾ. ಈಗಲೇ ಈ ಅಂಕಣಕ್ಕೆ ಲೈಕ್ ಮಾಡಿ ಮತ್ತು ಇದನ್ನು ಶೇರ್ ಮಾಡಿಟ್ಟುಕೊಳ್ಳಿ.

ಡ್ರೈವಿಂಗ್ ಮಾಡುವಾಗ ಬ್ರೇಕ್ ಫೇಲಾದರೆ ಈ ರೀತಿ ಮಾಡಿ :
Step - 1 : ನೀವು ಡ್ರೈವಿಂಗ್ ಮಾಡುವಾಗ ಸಡನ್ನಾಗಿ ಕಾರಿನ ಬ್ರೇಕ್ ಫೇಲಾದರೆ ಪ್ಯಾನಿಕ್ ಆಗಬೇಡಿ, ಧೈರ್ಯ ಕಳೆದುಕೊಳ್ಳಬೇಡಿ. ಮೊದಲು ಎಮರ್ಜೆನ್ಸಿ ಲೈಟ್ಸಗಳನ್ನ ಅಂದರೆ Hazard Lights ಆನ್ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಕಾರ ಡೆಂಜರ ಝೋನನಲ್ಲಿದೆ ಎಂಬುದು ಹಿಂದೆ ಮುಂದೆ ಬರುತ್ತಿರುವವರಿಗೆ ಗೊತ್ತಾಗುತ್ತದೆ. ಅವರು ನಿಮ್ಮಿಂದ ಸೇಫ್ ಡಿಸ್ಟನ್ಸ ಕಾಯ್ದುಕೊಂಡು ಹೋಗುತ್ತಾರೆ.

Step - 2 : ನಿರಂತರವಾಗಿ ಹಾರ್ನ್ ಮಾಡುತ್ತೀರಿ. ನಿರಂತರವಾಗಿ ಬ್ರೇಕ್ ಪೆಡಲನ್ನು ತುಳಿಯುತ್ತಲೇ ಇರಿ. ಹೈಡ್ರಾಲಿಕ್ ಪ್ರೆಷರ್ ಕ್ರಿಯೇಟ್ ಆಗಿ ಮತ್ತೆ ಬ್ರೇಕ್ ಕೆಲಸ ಮಾಡುವ ಚಾನ್ಸ್ ಕೂಡ ಇರುತ್ತದೆ. ಅದಕ್ಕಾಗಿ ಸೀರಿಯಸ್ಲೀ ಟ್ರೈ ಮಾಡಿ. ನಿಮ್ಮ ಕಾರನ್ನು ರಸ್ತೆಯಿಂದ ಸೈಡಿಗೆ ತನ್ನಿ. ಆಫ್ ರೋಡನಲ್ಲಿ ಚಲಿಸಿ.

Step - 3 : ಸ್ಲೋ ಆಗಿ ಎಲ್ಲ ಗೇರಗಳನ್ನ ಡೌನ್ ಶಿಫ್ಟ್ ಮಾಡಿ. ಕಾರಿನ ಎಲ್ಲ ವಿಂಡೋಗಳನ್ನು ಓಪನ್ ಮಾಡಿ. ಏರ್ ರೆಸಿಸ್ಟನ್ಸದಿಂದ ಕಾರ ಸ್ಲೋ ಆಗುತ್ತದೆ. ಈ ಟೈಮಲ್ಲಿ ಕಾರಿನ ಕೀಯನ್ನು ತೆಗೆಯಬೇಡಿ ಅಂದರೆ ಕಾರನ್ನು ಟರ್ನ್ ಆಫ್ ಮಾಡಬೇಡಿ. ಈ ರೀತಿ ಮಾಡಿದರೆ ಸ್ಟೀಯರಿಂಗ್ ಲಾಕ್ ಆಗುವ ಚಾನ್ಸಸ್ ಇರುತ್ತದೆ. ಜಸ್ಟ್ ಕಾರಿನ ಸ್ಪೀಡ್ ಕಮ್ಮಿ ಮಾಡಿ.

Step - 4 : ಕಾರಿನ ಸ್ಪೀಡ್ ಕಮ್ಮಿ ಆಗುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಹಾಕಿ. ಆನಂತರ ಕಾರನ್ನು ಸ್ಟಾಪ್ ಮಾಡಿ. ಹೈ ಸ್ಪೀಡನಲ್ಲಿ ಹ್ಯಾಂಡ್ ಬ್ರೇಕ್ ಹಾಕಿದ್ರೆ ಕಾರ ಸ್ಕಿಡ್ ಆಗುತ್ತದೆ. ಅದಕ್ಕೆ ಕಾರಿನ ಸ್ಪೀಡ್ ಕಮ್ಮಿಆದ ಮೇಲೆ ಹ್ಯಾಂಡ್ ಬ್ರೇಕ್ ಹಾಕಿ. ಈ ಪ್ರಾಬ್ಲಮ್ ಮತ್ತೆ ರಿಪೀಟ್ ಆಗಬಾರದೆಂದರೆ ಟೈಮ್ ಟು ಟೈಮ್ ಕಾರನ್ನು ಸರ್ವಿಸಗೆ ಕೊಡಿ.

ಓಕೆ ಫ್ರೆಂಡ್ಸ್ ಈ ಅಂಕಣದಿಂದ ನಿಮಗೆ ಹೊಸ ನಾಲೇಜ ಸಿಕ್ಕಿದೆ ಅಂತಾ ಭಾವಿಸುವೆ. ಸೋ ಈ ಅಂಕಣಕ್ಕೆ ತಪ್ಪದೇ ಲೈಕ್ ಮಾಡಿ ಮತ್ತು ಇದನ್ನು ಶೇರ್ ಮಾಡಿ. ಜೊತೆಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಧನ್ಯವಾದಗಳು...
