ಹಾಯ್ ಫ್ರೆಂಡ್ಸ್ ಈವತ್ತಿನ ಅಂಕಣ ನನ್ನ ವಯಸ್ಸಿಗೆ ಮೀರಿದ್ದಾಗಿದೆ. ಆದರೆ ಬಹಳಷ್ಟು ಜನ ಅಕ್ಕಂದಿರು ಮತ್ತೆ ಅಣ್ಣಂದಿರು "ದಾರಿ ತಪ್ಪಿದ ಗಂಡನನ್ನು / ಹೆಂಡತಿಯನ್ನು ಸರಿದಾರಿಗೆ ತರುವುದು ಹೇಗೆ?" ಎಂದು ಪದೇಪದೇ ಕೇಳುತ್ತಿದ್ದಾರೆ. ಎಲ್ಲರಿಗೂ ಪರ್ಸನಲ್ಲಾಗಿ ಉತ್ತರಿಸಲು ಸಾಧ್ಯವಿಲ್ಲ. ಬಹಳಷ್ಟು ಜನ ಅಕ್ಕಂದಿರು "ನನ್ನ ಗಂಡ ನನಗೆ ಬೆಲೆ ಕೊಡುತ್ತಿಲ್ಲ, ಬೇರೆಯವಳೊಂದಿಗೆ ಸಂಬಂಧ ಬೆಳೆಸಿದ್ದಾರೆ. ನನ್ನ ಮಾತನ್ನು ಕೇಳ್ತಿಲ್ಲ" ಅಂತೆಲ್ಲ ಮೆಸೇಜ್ ಮಾಡಿ ಸಹಾಯ ಕೇಳುತ್ತಿದ್ದಾರೆ. ಆದರೆ ನಾನು ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ಗಂಡ ಹೆಂಡತಿ ಹಾಗೂ ಅಣ್ಣ ತಮ್ಮಂದಿರ ಜಗಳದಲ್ಲಿ ಯಾವತ್ತೂ ನಾವು ಮೂಗು ತೂರಿಸಬಾರದು. ಏಕೆಂದರೆ ಆಮೇಲೆ ನೀವೆಲ್ಲ ಒಂದಾಗುತ್ತೀರಿ ನಾವು ವಿಲ್ಲನ್ ಆಗುತ್ತೇವೆ. ಅಕ್ಕಾ ನನಗೆ ನಿಮ್ಮ ಸಮಸ್ಯೆ ಅರ್ಥವಾಗಿದೆ. ಆದರೆ ನನಗೆ ಇಂಥ ಸಾಂಸಾರಿಕ ಜಗಳಗಳ ಅನುಭವ ದೂರದ ಮಾತು ಪರಿಚಯ ಕೂಡ ಇಲ್ಲ. ನಾನು ನಿಮಗಿಂತ ಚಿಕ್ಕವನು ನನಗಿನ್ನೂ ಮದುವೆಯಾಗಿಲ್ಲ. ಅದಕ್ಕಾಗಿ ಸಾಂಸಾರಿಕ ಕಲಹಗಳಲ್ಲಿ ನಾನೇನು ಹೆಚ್ಚಿಗೆ ಹೇಳಲಾರೆ. ನಾನು ಬಿಜನೆಸಮ್ಯಾನ. ಬಿಜನೆಸ್ಸಲ್ಲಿ ಏನೇ ಹೆಲ್ಪ್ ಬೇಕಿದ್ರೂ ಕೇಳಿ ನಾನು ಮಧ್ಯರಾತ್ರಿಯಾದರೂ ಹೆಲ್ಪ್ ಮಾಡುವೆ. ನನ್ನ ಬುದ್ಧಿ ಬಿಜನೆಸ ಬುದ್ಧಿಯಿದೆ, ನಾನು ಎಲ್ಲ ಸಮಸ್ಯೆಗಳನ್ನು ಇದರಿಂದಲೇ ಖತಮ ಮಾಡುವೆ, ಅದರ ಆಧಾರದ ಮೇಲೆ ಕೆಲವೊಂದಿಷ್ಟು ಐಡಿಯಾ ಹೇಳುವೆ ಸರಿಯೆನಿಸಿದರೆ ಮಾಡಿ ನೋಡಿ...

1) ನಿಮ್ಮ ಗಂಡ ಯಾರಿಗೆ ಹೆದರುತ್ತಾರೋ ಅವರಿಗೆ ನಿಮ್ಮ ಗಂಡನ ಕಿತಾಪತಿ ಗೊತ್ತಾಗುವಂತೆ ಮಾಡಿ. ಅಂದರೆ ಸೈಲೆಂಟಾಗಿ ನಿಮ್ಮ ಗಂಡನ ಕಿತಾಪತಿಯ ಪ್ರೂಫ್ಸಗಳನ್ನು, ಕಾಲ ರೆಕಾರ್ಡ್, ಮೆಸೆಜ, ಫೋಟೋ ಇತ್ಯಾದಿಗಳನ್ನು ನಿಮ್ಮ ಗಂಡನ ತಂದೆತಾಯಿಗಳಿಗೆ ತೋರಿಸಿ ಇಲ್ಲ ನಿಮ್ಮ ಹಿರಿಯರಿಗೆ ತೋರಿಸಿ ವಿಷಯ ತಿಳಿಸಿ. ನೀವೇ ಹೇಳಿದ್ದಿರಿ ಎಂಬುದು ನಿಮ್ಮ ಗಂಡನಿಗೆ ಗೊತ್ತಾಗಬಾರದು ಆ ರೀತಿ ಎಲ್ಲ ಹಿರಿಯರಿಗೆ ವಿಷಯ ತಿಳಿಸಿ. ಅವ್ರು ಬೈದು ಬುದ್ಧಿವಾದ ಹೇಳಿದರೆ ದಾರಿಗೆ ಬರ್ತಾರೆ.

2) ನಿಮ್ಮ ಗಂಡ ಯಾವಳ ಜೊತೆಗೆ ಅಫೇರ್ ಮಾಡ್ತಿದಾರೋ ಅವಳ ಗಂಡನಿಗೆ, ಅವಳ ತಂದೆತಾಯಿಗೆ, ಅತ್ತೆಮಾವನಿಗೆ ಈ ವಿಷಯವನ್ನು ಮೂರನೇ ವ್ಯಕ್ತಿ ಕಡೆಯಿಂದ ತಿಳಿಸಿ. ಅವರು ಒಂದ್ಸರಿ ಹೊಡೆದು ಅವಮಾನ ಮಾಡಿ ಬುದ್ಧಿ ಕಲಿಸುತ್ತಾರೆ. ಆಮೇಲೆ ನಿಮ್ಮ ಗಂಡ ತೆಪ್ಪಗೆ ಇರ್ತಾರೆ. ಕತ್ತೆಗೆ ದೊಣ್ಣೆ ಏಟು ಮಾತ್ರ ಉತ್ತಮ, ಬಾಯಿ ಮಾತು ಕೇಳಿಸಲ್ಲ. ಅವಳಿಗೆ ಬಿಸಿ ಮುಟ್ಟಿಸಿದರೆ ನಿಮ್ಮ ಗಂಡ ಹೆದರಿ ಹಿಂದೆ ಸರಿಯುತ್ತಾರೆ.

3) ನಿಮ್ಮ ಗಂಡ ಸರ್ಕಾರಿ ನೌಕರಿ ಮಾಡ್ತಿದ್ರೆ ಮೇಲಾಧಿಕಾರಿಗಳಿಂದ ಬುದ್ಧಿ ಹೇಳಿಸಿ ಹೆದರಿಸಿ. ಖಾಸಗಿ ನೌಕರಿ ಮಾಡ್ತಿದ್ರೆ ನಿಮ್ಮ ಸಮೀಪದ ಮಹಿಳಾ ಪೋಲಿಸ್ ಯಾರಾದರೂ ಇದ್ದರೆ ಅವರನ್ನು ಒಮ್ಮೆ ಮೀಟಾಗಿ. ಅವರಿಗೆ "ನನ್ನ ಗಂಡನನ್ನು ಒಮ್ಮೆ ಕರೆಸಿ ವಾರ್ನ ಮಾಡಿ" ಅಂತಾ ಹೇಳಿ. ನಿಮ್ಮ ಗಂಡ ಯಾವಳ ಜೊತೆಗೆ ಇದಾರೋ ಅವಳನ್ನು ಒಮ್ಮೆ ಕರೆಸಿ ವಾರ್ನ ಮಾಡಿ ಅಂತಾ ಹೇಳಿ. ಆದರೆ ವಾರ್ನ ಮಾಡಲು ಹೇಳಿದ್ದು ನೀವು ಅಂತಾ ನಿಮ್ಮ ಗಂಡನಿಗೆ ಗೊತ್ತಾಗಬಾರದು. ನಿಮ್ಮ ಸವತಿಯ ಗಂಡ ಪೊಲೀಸರಿಗೆ ಹೇಳಿದ್ದಾರೆ ಅಂತಾ ಸುದ್ದಿ ಹಬ್ಬಬೇಕು, ನಿಮ್ಮ ಹೆಸರು ಎಲ್ಲೂ ಆಚೆ ಬರಬಾರದು. ಒಮ್ಮೆ ಪೋಲಿಸರಿಂದ ವಾರ್ನಿಂಗ ಬಂದ್ರೆ ಸಾಕು ಇಬ್ಬರು ತೆಪ್ಪಗೆ ಸಂಸಾರ ಮಾಡ್ತಾರೆ. ಇತ್ತೀಚಿಗೆ ಇಂಥ ಗಂಡಸರ ಹೆಂಗಸರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ.

4) ನಿಮ್ಮ ಗಂಡನಿಗೆ ನಾನು ಮಾಡಿದ "ಅಕ್ರಮ ಸಂಬಂಧದ ಸೈಡ ಎಫೆಕ್ಟ್ಸ್" ವಿಡಿಯೋ ವಾಟ್ಸಾಪ ಮಾಡಿ, ಇಲ್ಲ ಅವರಿಗೆ ತೋರಿಸಿ. ಅವರಿಗೆ ಅವರ ತಪ್ಪಿನ ಅರಿವಾಗಿ ಅವರು ಮುಂದೆ ಸರಿ ಹೋಗಬಹುದು. ನಿಮ್ಮ ಮಗು ಭವಿಷ್ಯಕ್ಕಾಗಿ ಆದರೂ ಸರಿ ಹೋಗಬಹುದು.
ವಿಡಿಯೋ ಲಿಂಕ್ - https://www.youtube.com/watch?v=Zdp8uBmT9TI

5) ನಿಮ್ಮ ಗಂಡನನ್ನು ಸೆರಗಲ್ಲಿಟ್ಟುಕೊಳ್ಳಲು ಟ್ರಾಯ ಮಾಡಿ. ಅವರ ಮೇಲೆ ಬೆಡ್ರೂಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ. ಯಾವುದೇ ಕಾರಣಕ್ಕೂ ಅವರೊಂದಿಗೆ ಬೆಡಶೇರ್ ಮಾಡಬೇಡಿ. ಅವರ ಜೊತೆಗೆ ಮಲಗಬೇಡಿ. ಅವರನ್ನು ಸ್ವಲ್ಪ ನರಳಿಸಿ. ಆನಂತರ ಅವರೆ ನಿಮ್ಮಿಂದೆ ನಾಯಿಯಂತೆ ಬರುತ್ತಾರೆ ನೀವು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಾರೆ. ಹೆಣ್ಣಿನ ಸ್ಪರ್ಷ ಸಿಗದಿದ್ದರೆ ಗಂಡಸು ಗುಲಾಮನಾಗಲು ಸಹ ರೆಡಿಯಾಗುತ್ತಾನೆ. ನಿಮ್ಮ ಗಂಡನನ್ನು ಕಂಟ್ರೋಲನಲ್ಲಿಡಿ. ಎಲ್ಲಿ ತನಕ ಅವರು ಸರಿ ದಾರಿಗೆ ಬರಲ್ಲವೋ, ನಿಮ್ಮೊಂದಿಗೆ ಸರಿಯಾಗಿ ವರ್ತಿಸಲ್ಲವೋ ಅಲ್ಲಿ ತನಕ ಅವರೊಂದಿಗೆ ಬೆಡ ಶೇರ್ ಮಾಡಬೇಡಿ.

6) ಒಂದು ವೇಳೆ ನಿಮ್ಮ ಜಾಗದಲ್ಲಿ ನಾನಿದ್ರೆ ಗಂಡ ಹಾಗೂ ಅವರ ಅಫೇರ್ ಇಬ್ಬರನ್ನು ರೆಡಹ್ಯಾಂಡಾಗಿ ಹಿಡಿದು ಅವರ ಮಾನ ಹರಾಜಾಕುತ್ತಿದ್ದೆ. ಆರು ತಿಂಗಳು ಬಿಟ್ಟು ಗಂಡನನ್ನು ನೈಸ ಮಾಡಿ ಸೆರಗಲ್ಲಿ ಇಟ್ಟುಕೊಂಡು ಅವನನ್ನು ಕಂಟ್ರೋಲನಲ್ಲಿಟ್ಟು ಸಂಸಾರ ಮಾಡುತ್ತಿದ್ದೆ. ಇಲ್ಲವೇ ಸೀದಾ ಡೈವೋರ್ಸ್ ಕೊಟ್ಟು ಹೊಸ ಲೈಫ್ ಶುರು ಮಾಡ್ತಿದ್ದೆ.

ಅಕ್ಕಾ ಅಥವಾ ಅಣ್ಣಾ ಇವೀಷ್ಟು ನನ್ನ ಐಡಿಯಾಗಳು. ನನಗೆ ಸಂಸಾರದ ಅನುಭವವಿಲ್ಲ. ಒಂದ್ಸರ್ತಿ ನಿಮ್ಮ ಆಪ್ತ ಗೆಳತಿ ಅಥವಾ ನಿಮ್ಮ ತಂದೆತಾಯಿಗಳಿಗೆ ಅಥವಾ ಅಣ್ಣ ಅತ್ತಿಗೆಗೆ ಕೇಳಿ ಅವರೊಂದಿಗೆ ಡಿಸ್ಕಸ ಮಾಡಿ ಆನಂತರ ನಿರ್ಧಾರ ತೆಗೆದುಕೊಳ್ಳಿ. ಡೊಂಟ ವರಿ. ನಿಮ್ಮ ಜೀವನ ಸರಿ ಹೋಗಲೆಂದು ನಮ್ಮನೆ ದೇವತೆ ಅಂಬಾಭವಾನಿ ಹತ್ರ ಪ್ರಾರ್ಥಿಸುವೆ. ನಿಮ್ಮ ಲೈಫ ಸರಿ ಹೋಗುತ್ತದೆ, ಧೈರ್ಯವಾಗಿ ಮುನ್ನುಗ್ಗಿ. ಆಲ ದ ಬೆಸ್ಟ್ ಗಾಡ್ ಬ್ಲೆಸ್ ಯು & ಟೇಕ ಕೇರ್ ಅಕ್ಕಾ & ಅಣ್ಣಾ....
