ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend

ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend

                                ಇವತ್ತು ರಾತ್ರಿ ಅಂದ್ರೆ ಈಗ ಜಸ್ಟ ನಾನು ಲ್ಯಾಪ್‌ಟಾಪ್ ಆಫ್ ಮಾಡಿ ಮಲಗಲು ರೆಡಿಯಾಗ್ತಿದ್ದೆ. ಮೊಬೈಲ ಸದ್ದಾಯಿತು. ಯಾವುದೋ ಅಪರಿಚಿತ ನಂಬರದಿಂದ ಕಾಲ ಬರ್ತಾಯಿತ್ತು. ನಾನು ರೀಸಿವ ಮಾಡಲಿಲ್ಲ. ಅಷ್ಟರಲ್ಲಿ "ಸರ್ ಪ್ಲೀಜ ಕಾಲ ರೀಸಿವ ಮಾಡಿ ಅರ್ಜೆಂಟಿದೆ..." ಅಂತಾ ಮೆಸೆಜ ಬಂತು. ನಾನು ಇದ್ಯಾರಿದು ಅಂತಾ ಯೋಚನೆ ಮಾಡ್ತಿದ್ದೆ. ಸಾಮಾನ್ಯವಾಗಿ ನಾನು ಅಪರಿಚಿತ ಕಾಲ್ಸ ರೀಸಿವ ಮಾಡಲ್ಲ. ಕೆಲಸದ ಕಾಲ್ಸ ಅಷ್ಟೇ. ಸೀದಾ ಮಾತು ಸೀದಾ ಕೆಲಸ ಅಷ್ಟೇ. ಮತ್ತೆ ಮತ್ತೆ ಕಾಲ್ಸ ಬರತೊಡಗಿದವು. ನಾನು ರೀಸಿವ ಮಾಡಿದೆ. 

ನಾನು : ಹಲೋ 

ಅಪರಿಚಿತೆ : ಹಲೋ ಸತೀಶಕುಮಾರ

ನಾನು : ಮಾತಾಡಿ ಮೇಡಂ, ನೀವು ಯಾರಂತ ಗೊತ್ತಾಗಲಿಲ್ಲ. 

ಅಪರಿಚಿತೆ : ಸತೀಶಕುಮಾರ ನಾನು ಸೌಮ್ಯ ಅಂತಾ. ನಾನು ನಿನ್ನ ಎಲ್ಲ ಆರ್ಟಿಕಲ್ಸ್ ಓದ್ತಾ ಇರ್ತಿನಿ, ಈಗಿನಿಂದ ಅಲ್ಲ ನಿನ್ನ ಫಸ್ಟ ಆರ್ಟಿಕಲ್ "ಒಮ್ಮೆಯಾದರೂ ಆಗಲೇಬೇಕು ಅವಮಾನದಿಂದ ಓದ್ತಾ ಇದೀನಿ..."

ನಾನು : ಥ್ಯಾಂಕ್ಸ ಯು ಸೋ ಮಚ್ ಮೇಡಂ 

ಅಪರಿಚಿತೆ : ಸತೀಶಕುಮಾರ ನೀ ನನ್ನ ಜಸ್ಟ ಸೌಮ್ಯ ಅಂತಾ ಕರಿಬಹುದು. ನಾನು ನೀನು ಸೇಮ್ ಏಜ್

ನಾನು : ಮೇಡಂ ನಿಜ ಹೇಳಿ ನೀವು ಯಾರು? ಏನ ಕೆಲಸ ಹೇಳಿ? 

ಅಪರಿಚಿತೆ : ನಾನು ನಿನ್ನ ಫ್ಯಾನ ಅಂತಾ ಅನ್ಕೋ. ಬಟ್ ಐ ವಾಂಟ ಟು ಬಿ ಯುರ ಬೆಸ್ಟ ಫ್ರೆಂಡ್. ಸತೀಶಕುಮಾರ ನಾನು ಕೂಡ 2012ರಲ್ಲೇ 10th ಮುಗಿಸಿರುವೆ, ನನಗೂ ಕೂಡ "ಕನ್ನಡ ಮಾಧ್ಯಮ" ಅವಾರ್ಡ ಬಂದಿದೆ. ನಾವಿಬ್ಬರು ಸೇಮ ಏಜ್. ಬೇರೆ ಬೇರೆ ಸ್ಕೂಲಾದ್ರೂ ನಾವು ಕ್ಲಾಸಮೇಟ್ಸೆ. ನೀನು ನನ್ನ ಸೌಮ್ಯ ಅಂತಾ ಕರಿ ಪರವಾಗಿಲ್ಲ. ನಾನು ನಿನಗೆ ಫ್ರೆಂಡಾಗಬೇಕು ಅಂತಾ ಎರಡು ವರ್ಷದಿಂದ ವೇಟ ಮಾಡ್ತಿದ್ದೆ. ಹೋದ ತಿಂಗಳು ನಾನು ನಿನ್ನ ಬರ್ಥಡೇ ವಿಡಿಯೋ ನೋಡಿದೆ ಅದರಲ್ಲಿ ನಿನ್ನ ಡೇಟ ಆಫ್ ಬರ್ಥ, ಅವಾರ್ಡ ಪೋಟೋ ಎಲ್ಲಾ ಇದ್ವಲ್ಲ ಅಲ್ಲಿಂದ ನನಗೆ ನಾನು ನೀನು ಒಂದೇ ಏಜ ಅಂತಾ ಗೊತ್ತಾಯಿತು. 

ನಾನು : ಓ ನೈಸ ಥ್ಯಾಂಕ್ಸ ಮೇಡಂ ಖುಷಿಯಾಯ್ತು. 

ಅಪರಿಚಿತೆ : ಸತೀಶ ಯು ಕ್ಯಾನ ಕಾಲ ಮಿ ಆ್ಯಜ ಸೌಮ್ಯ ಒನ್ಲಿ

ನಾನು : ಯೆಸ್ ಸೌಮ್ಯ

ಅಪರಿಚಿತೆ : ಐ ಕಾಂಟ ಬೀಲಿವ ಇಟ ದ್ಯಾಟ ಐ ಯಾಮ ಟಾಕಿಂಗ ವಿಥ ಯು. ನಿನ್ನ ನಂಬರ ನನಗೆ ಎರಡ ದಿನದ ಹಿಂದೆ ಸಿಕ್ತು. ನಿಮ್ಮ ಆಫೀಸ ನಂಬರಗೆ ಕಾಲ ಮಾಡಿ ತಲೆ ತಿಂದು ನಾ ನಿನ್ನ ಕಾಲೇಜ ಫ್ರೆಂಡಂತ ನಂಬರ ತಗೊಂಡಿರುವೆ. ನಿನಗೆ ಎರಡ ದಿನದಿಂದ ಕಾಲ ಮಾಡ್ತಿದ್ದೆ ಬಿಜಿ ಬರ್ತಾಯಿತ್ತು. ನಾನು ಮಾರ್ನಿಂಗ್ ನಾಲ್ಕಕ್ಕೆ ಕಾಲ ಮಾಡಿದೆ ಆವಾಗ್ಲೂ ಬಿಜಿ, ರಾತ್ರಿ ಹತ್ತಕ್ಕೆ ಕಾಲ ಮಾಡಿದೆ ಆವಾಗ್ಲೂ ಬಿಜಿ ಅಂತಾನೇ ಬರ್ತಾಯಿತ್ತು. ಆಗ ನನ ರೂಮರೇಟ ನನಗೆ ಮೊಸ್ಟಲಿ ನೀ ಕಾಲ್ ಬ್ಲಾಕರ್ ಯುಜ ಮಾಡ್ತಿದಿಯಾ ಅಂತಾ ಹೇಳಿದ್ಲು. ಅದಕ್ಕೆ ವಾಟ್ಸಾಪ ಕಾಲ ಮಾಡಿದೆ. ಕನೇಕ್ಟಾಯ್ತು. 

ನಾನು : ಅದು ಎಲ್ಲರೂ ಕಾಲ್ ಮಾಡಿ ತಲೆ ತಿಂತಾರೆ ಅಂತಾ ಹಾಗೇ ಮಾಡಿರುವೆ. ಬರೀ ಗೊತ್ತಿರೋರ ನಂಬರದಿಂದ ಬಂದಾಗ ಮಾತ್ರ ರೀಸಿವ ಮಾಡುವೆ, ಸ್ವಾರಿ 

ಅಪರಿಚಿತೆ : ಇಟ್ಸ ಓಕೆ ಸತೀಶ. ಕೊನೆಗೂ ನಿಂಜೊತೆ ಮಾತಾಡಿದನಲ್ಲ ಖುಷಿಯಾಯ್ತು. ನನಗೆ ನಿನ್ನ ಎಲ್ಲ ಆರ್ಟಿಕಲ್ಸ್ ಇಷ್ಟ ಎಲ್ಲ ಓದಿರುವೆ, ಈಗ ಎರಡ ತಿಂಗಳಿಂದ ಎಲ್ಲ ವಿಡಿಯೋ ಕೂಡ ನೋಡ್ತಿರುವೆ. ರಿಯಲಿ ಐ ಲವ್ ಯು ಸೋ ಮಚ್. ನಮ್ಮ ಮನೆಯಲ್ಲಿ ‌ನಾನು ನಿನ್ನ ಆರ್ಟಿಕಲ್ಸ್ ವಿಡಿಯೋ ತೋರಿಸಿರುವೆ. ನೀನು ಚಿಕ್ಕವನಾದ್ರೂ ನಿನಗೆ ತುಂಬಾ ನಾಲೇಜಿದೆ. ನಿನ್ನಿಂದ ನಾನು ತುಂಬಾ ಕಲಿತಿರುವೆ. ಯು ಚೇಂಜ್ಡ ಮೈ ಲೈಫ ಆ್ಯಂಡ ಥಿಂಕಿಂಗ. ಆ್ಯಜ ಯು ಟೋಲ್ಡ ನೌ ಐ ಯಾಮ ಹ್ಯಾಪಿ, ಹೆಲ್ದಿ & ಸಕ್ಸೆಸಫುಲ್. ಥ್ಯಾಂಕ್ಸ ಯು ಆ್ಯಂಡ ಲವ್ ಯು... 

ನಾನು : ಥ್ಯಾಂಕ್ಸ ಯು ಸೌಮ್ಯ. ಏನೋ ಅರ್ಜೆಂಟ ಇದೆ ಅಂತಾ ಮೆಸೆಜ ಮಾಡಿದ್ರಲ್ಲ ಏನ ಹೇಳಿ. ಯಾವ ಹೆಲ್ಪ ಬೇಕು ನನ್ನಿಂದ? 

ಸೌಮ್ಯ : ಥ್ಯಾಂಕ್ಸ, ಬಟ ನಿನ್ನತ್ರ ಮಾತಾಡಬೇಕಿತ್ತು ಅದೇ ಕೆಲಸ ಬೇರೆನಿಲ್ಲ. ನನಗೆ ನಿನ್ನ ಫ್ರೆಂಡಶೀಪ ಬೇಕು. ಲೈಫಲಾಂಗ ನಿಭಾಯಿಸುವೆ. ನನ್ನ ಲೈಫಲ್ಲಿ ಹೇಳಿಕೊಳ್ಳುವ ತರ ಯಾರು ಫ್ರೆಂಡ್ಸಿಲ್ಲ. ನೀನೇ ಮೊದಲ ಬೆಸ್ಟ ಫ್ರೆಂಡ ಅಂತಾ ಅನ್ಕೊಂಡಿರುವೆ. ಬರೀ ಫೇಸ್ಬುಕ್ ಫ್ರೆಂಡ ಅನ್ಕೋಬೇಡ, ನಾನು ನಿನಗೆ ಲೈಫ್ಬುಕ ಫ್ರೆಂಡಾಗುವೆ. ನಿನಗೆ ಫೇಸ್ಬುಕಲ್ಲಿ ಎಷ್ಟೋ ಸರ್ತಿ ಮೆಸೆಜ ಮಾಡಿರುವೆ, ನಿಮ ಟೀಮನವರು ಬರೀ ಬಿಜನೆಸ್ ಅಂತಾರೆ. ಒಂದ ವಿಷಯ ಹೇಳ್ತಿನಿ ಬೇಜಾರ ಮಾಡ್ಕೊಳಲ್ಲ ಅಂದ್ರೆ

ನಾನು : ಹೇಳಿ ಮೇಡಂ ಪರವಾಗಿಲ್ಲ... 

ಅಪರಿಚಿತೆ : ಸತೀಶ ಜಸ್ಟ ಕಾಲ ಮಿ ಸೌಮ್ಯ. ಐ ಯಾಮ ಯುವರ ಏಜ ಆ್ಯಂಡ ಕ್ಲಾಸಮೇಟ 

ನಾನು : ಓಕೆ ಸೌಮ್ಯ ಹೇಳು

ಅಪರಿಚಿತೆ : ಸತೀಶ ಆ್ಯಕ್ಚುಲಿ ನೀನು ಅವತ್ತ ರಾತ್ರಿ ಎಲ್ಲ ಸೋಸಿಯಲ ಮೀಡಿಯಾಗೆ ಬೈ ಹೇಳಿ ಪೋಸ್ಟ ಹಾಕಿದ್ದೆಯಲ್ಲ ಅವತ್ತ ನನಗೆ ತುಂಬಾ ಬೇಜಾರಾಗಿತ್ತು. ನಿಂಜೊತೆ ಮಾತಾಡಲು ನಾನು ಬಹಳಷ್ಟು ಟ್ರಾಯ ಮಾಡಿದೆ. ಆದರೆ ನಂಬರ ಸಿಗಲಿಲ್ಲ. ನೀನು ಫೇಸ್ಬುಕಲ್ಲಿ ಫ್ರೆಂಡ ಸಿಗಲಿಲ್ಲ ಬರೀ ಎನಿಮಿ ಸಿಕ್ಕರು ಅಂತಾ ಬರೆದಿದ್ದೆಯಲ್ಲ ಅದ್ನ ನೋಡಿದಾಗ ನನಗೆ ನಾನು ನಿಂಜೊತೆ ಫ್ರೆಂಡಶೀಪ ಮಾಡಬೇಕು ಅಂತಾ ಎರಡು ವರ್ಷದಿಂದ ಟ್ರಾ ಮಾಡ್ತಿರುವೆ ಅಂತಾ ಹೇಳಲು ಟ್ರಾ ಮಾಡಿದೆ. ಇವತ್ತು ಡೈರೆಕ್ಟಾಗಿ ಹೇಳುವೆ. ಐ ಯಾಮ ಯುವರ ಬೆಸ್ಟ ಫ್ರೆಂಡ. ನಿಜವಾಗ್ಲೂ ನೀನು ನನಗೆ ಮೋಟಿವೇಟರ್. ಯಾರು ಏನೇ ಅಂದ್ರು ನೀನು ರೈಟಿಂಗ & ಸ್ಪೀಕಿಂಗ್ ಬಿಡಬೇಡ. ತುಂಬಾ ಜನರಿಗೆ ಹೆಲ್ಪ ಆಗಿದೆ. ಮುಂದೆ ಕೋಟ್ಯಾಂತರ ಜನರಿಗೆ ಹೆಲ್ಪ ಆಗುತ್ತೆ. ಬೊಗಳುವ ನಾಯಿಗಳಿಗೆ ಕೇರ್ ಮಾಡಬೇಡ. ಇಷ್ಟೇ ಹೇಳಬೇಕು ಅಂದುಕೊಂಡಿದ್ದೆ ಅವತ್ತು... 

ನಾನು : ಥ್ಯಾಂಕ್ಸ ಸೌಮ್ಯ ಫಾರ್ ಯುವರ ಸಪೋರ್ಟ್

ಅಪರಿಚಿತೆ : ನೋ ಮೆನ್ಶನ ಸತೀಶ. 

ನಾನು : ಓಕೆ ಸೌಮ್ಯ ಟೈಮಾಗಿದೆ ನಾಳೆ ಮಾತಾಡೋಣ್ವಾ?

ಅಪರಿಚಿತೆ : ಸತೀಶ ಇಫ್ ಯು ಡೊಂಟ ಮೈಂಡ ಈಗಲೇ ನಿನಗೆ ವಿಡಿಯೋ ಕಾಲ್ ಮಾಡ್ಲಾ? 

ನಾನು : ಡು, ನೋ ಪ್ರಾಬ್ಲಮ 

(ಆಡಿಯೋ ಕಾಲ್ ಕಟ್ ಮಾಡಿ, ವಿಡಿಯೋ ಕಾಲ್ ಮಾಡಿದಳು)

ಅಪರಿಚಿತೆ : ಸತೀಶ ನನಗೆ ನಿನ್ನ ಬಗ್ಗೆ ಸಂಪೂರ್ಣವಾಗಿ ತಿಳ್ಕೊಬೇಕು, ನಿಂಜೊತೆ ಇನ್ನೂ ತುಂಬಾ ಮಾತಾಡಬೇಕು. ಸೋ ನಾಳೆ ನಾ ನಿನ್ನ ಮೀಟಾಗಬಹುದಾ? ಫ್ರೀ ಇದಿಯಾ? ಪ್ಲೀಜ ಟೈಮ ಫ್ರೀ ಮಾಡ್ಕೋ ಫ್ರೆಂಡ... 

ನಾನು : ನಾಳೆ ಸಂಡೇ ಜೊತೆಗೆ ಇಂಡಿಪೆಂಡೆನ್ಸ ಡೇ ಕೂಡ ಇದೆ. ನಾನು ಪೇರೆಡ ನೋಡಲು ಹೋಗಲು ಪ್ಲ್ಯಾನ ಮಾಡಿರುವೆ. ಸಂಜೆ ನಾಲ್ಕು ಗಂಟೆ ನಂತರ ಕಾಲ ಮಾಡು ಮಾತಾಡೋಣಾ. 

ಅಪರಿಚಿತೆ : ಸತೀಶ ಐ ವಾಂಟ ಟು ಮೀಟ ಯು ಡೈರೆಕ್ಟಲಿ

ನಾನು : ಸೌಮ್ಯ ನೌ ಐ ಯಾಮ ಇನ ಡೆಲ್ಲಿ ನಾಟ ಇನ್ ಕರ್ನಾಟಕ

ಅಪರಿಚಿತೆ : ಐ ನೋ ಇಟ ವೆಲ್. ಐ ಸೀನ ಯುವರ ಆಲ ವಿಡಿಯೋಸ. ನಾನು ಕೂಡ ಡೆಲ್ಲಿಯಲ್ಲೇ ಇರುವೆ. ಐ ಯಮ್ ವರ್ಕಿಂಗ ಇನ್ PMO. ನಾಳೆ ಸಂಜೆ ಡೈರೆಕ್ಟಾಗಿ ಮೀಟಾಗೋಣಾ ಪ್ಲೀಜ 

ನಾನು : ಓಕೆ ಟುಮಾರೋ 4 O clock ವೀ ವೀಲ ಮೀಟ

ಅಪರಿಚಿತೆ : ಥ್ಯಾಂಕ್ಸ ಯು ಸತೀಶ ಫಾರ್ ಗೀವಿಂಗ ಮಿ ಯುವರ ಟೈಮ್‌. ನೀನು ನಾಳೆ ನನ್ನ ಐಡೆಂಟಿಫೈ ಮಾಡಬೇಕಲ್ಲ ಅದಕ್ಕೆ ವಿಡಿಯೋ ಕಾಲ್ ಮಾಡಿರುವೆ ಅಷ್ಟೇ. ನನ್ ಫೋಟೋಸ ಕೂಡ ವಾಟ್ಸಾಪ ಮಾಡಿರ್ತಿನಿ. ನನ್ ನಂಬರ ಸೇವ ಮಾಡ್ಕೋ ನಾಳೆ ಮಾರ್ನಿಂಗ್ ಲೋಕೋಷನ್ ಡಿಸೈಡ ಮಾಡೋಣಾ. 

ನಾನು : ಓಕೆ 

ಅಪರಿಚಿತೆ : ಓಕೆ ಡನ್, ಗುಡ್ ನೈಟ ಸೀ ಯು ಟುಮಾರೋ... 

ನಾನು : ಟೇಕ ಕೇರ್ ಬಾಯ್... 

                                    ನಾನು ಅಪರಿಚಿತೆ ಅಂತಾ ಅಂದುಕೊಂಡಿದ್ದ ಸೌಮ್ಯ ನನಗೆ ಬೆಸ್ಟ ಫ್ರೆಂಡಾಗಲು ಒಂದೆಜ್ಜೆ ಮುಂದೆ ಇಟ್ಟಿದಾಳೆ. ಈಗ ವಾಟ್ಸಾಪಲ್ಲಿ ಅವಳ ಹತ್ತಾರು ಫೋಟೋಸ ಕೂಡ ಸೆಂಡ ಮಾಡಿದ್ದಾಳೆ. ಅವಳು ‌ಹೇಳಿದಂತೆ ಅವಳಿಗೂ 10thಲ್ಲಿ ಜಾಸ್ತಿ ಸ್ಕೋರ ಮಾಡಿದಕ್ಕೆ ನನ್ನಂತೆ ಕನ್ನಡ ಮಾಧ್ಯಮ ಅವಾರ್ಡ್ ಬಂದಿದೆ. ಕೊನೆಗೂ ನನಗೆ ಒಬ್ಬಳು ಹೊಸ ಫ್ರೆಂಡ್ ಸಿಕ್ಕಿದಾಳೆ‌. ನಾನು ಬರೆದಿದ್ದನ್ನು ಸ್ವಲ್ಪ ಜನ ಓದಿದ್ರು ಪರವಾಗಿಲ್ಲ, ಓದಿದ್ದಾರಲ್ಲ ಸಾಕು, ನನ್ನ ಶ್ರಮ ಸಾರ್ಥಕ ಅಂತನಿಸಿದೆ. ನನಗೊಬ್ಬಳು ಫ್ರೆಂಡ ಸಿಕ್ಕಿದನ್ನ ಯಾರಿಗೂ ಹೇಳಬಾರದು ಸೀಕ್ರೆಟಾಗಿಡಬೇಕು ಅಂತನಿಸಿತು. ಆದ್ರೆ ಯಾಕೆ ಇದನ್ನ ಶೇರ್ ಮಾಡ್ತಿರುವೆ ಅಂತಾ ಗೊತ್ತಿಲ್ಲ. ಏನಿವೇ ನನಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ & ಗುಡ್ ನೈಟ ನೌ....

ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend

ಮರುದಿನ.... 

                             ನಿನ್ನೆ ಅಪರಿಚಿತೆಯಾಗಿದ್ದ ಸೌಮ್ಯ ಇವತ್ತು ಪರಿಚಿತಳಾಗಿದ್ದಾಳೆ. ನಿನ್ನೆ ರಾತ್ರಿ ಅವಳೊಂದಿಗೆ ಮಾತಾಡಿ ಮಲಗುವಷ್ಟರಲ್ಲಿ ರಾತ್ರಿ 12.30 ಆಗಿತ್ತು. ನಾನು ಭವಾನಿ ಅಕ್ಕಾ & ಆಕಾಂಕ್ಷಾ ಅಕ್ಕಾ ಇಬ್ಬರಿಗೂ ಸೌಮ್ಯಳ ಬಗ್ಗೆ ಮೆಸೆಜಲ್ಲಿ ಶಾರ್ಟಾಗಿ ಹೇಳಿ ಮಲಗಿದೆ. ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಎದ್ದೇಳುವ ಮನಸ್ಸಾಗಲಿಲ್ಲ. ಆದರೆ ಅಕ್ಕಾ ಒದ್ದು ಎಬ್ಬಿಸಿದಳು. ರೆಡಿಯಾಗಿ ಮೂವರು ಪೇರೆಡ್ ನೋಡಲು ಹೋದೆವು. ಅದೊಂದು ಖುಷಿಯ ವಿಚಾರ, ಒಮ್ಮೆಲೆ ದೇಶಪ್ರೇಮ ಕಣ್ಣೀರು ತರಿಸಿತು. ಜೊತೆಗೆ ಮುಂದಾಲೋಚನೆ ಇಲ್ಲದ ಮೂರ್ಖರು ದೇಶವಾಳುತ್ತಿರುವುದರಿಂದ ಮಿಡಲ ಕ್ಲಾಸ ಜನ ಮಣ್ಣು ತಿನ್ನೋ ಟೈಮ ಬಂದಿದೆ ಅಂತಾ ಕೋಪವು ಬಂತು. ಬಟ್ ಅಕ್ಕಂದಿರು ಜೊತೆಗಿರುವಾಗ ನಾನು ಯಾವತ್ತೂ ಬೇಜಾರನ್ನು ಕೋಪವನ್ನು ಎಕ್ಸಪ್ರೆಸ ಮಾಡಲ್ಲ. ಏಕೆಂದರೆ ಅವರಿಬ್ಬರು ನಮ್ಮನೆ ಮಹಾಲಕ್ಷ್ಮಿಯರು, ಅವರು ಯಾವಾಗಲೂ ಖುಷಿಯಾಗಿರಬೇಕು ಅಂತಷ್ಟೇ. ನಾವು ಪೇರೆಡ ನೋಡಿ ನಮ್ಮ ಫೇವರೆಟ ರೆಸ್ಟೋರೆಂಟಗೆ ಟಿಫಿನ ಮಾಡಲು ಹೋದೆವು. ಅದು ಸ್ಮಾಲ ರೆಸ್ಟೋರೆಂಟ್ ಆದರೂ ಟೆಸ್ಟ ಚೆನ್ನಾಗಿದೆ, ರೇಟ ಕೂಡ ರೆಸನೇಬಲಾಗಿದೆ. ನಾವು ಟಿಫಿನ ಆರ್ಡರ ಮಾಡಿ ವೇಟ ಮಾಡ್ತಾ ಇದ್ವಿ ಅಷ್ಟರಲ್ಲಿ ಸೌಮ್ಯ ಕಾಲ್ ಮಾಡಿದಳು. 

                         ಸೌಮ್ಯಳ ಕಾಲ್ ಬಂದಾಗ ನಾನ್ಯಾಕೆ ಸ್ಮೈಲ ಮಾಡಿದ್ನೊ ಗೊತ್ತಿಲ್ಲ ಅದನ್ನ ನೋಡಿ ಆಕಾಂಕ್ಷಾ ಅಕ್ಕಾ ನನ್ನ ಮೊಬೈಲ ಕಿತ್ತುಕೊಂಡು ತಾನೇ ಕಾಲ್ ರೀಸಿವ ಮಾಡಿದಳು. ಅತ್ತ ಕಡೆ ಸೌಮ್ಯ ಇವತ್ತಿನ ನಮ್ಮ ಮೀಟಿಂಟ ನೆನಪಿರಲಿ, ನಾನು ಸಂಜೆ ಕಾಲ ಮಾಡುವೆ ರೆಡಿಯಾಗಿರು, ಅಡ್ರೆಸ ವಾಟ್ಸಾಪ ಮಾಡಿರುವೆ ಎಂದಳು. ಆಗ ನಮ್ಮಕ್ಕ "ತಮ್ಮ ಇನ್ನೂ ಎದ್ದಿಲ್ಲ ಸಂಡೇ ಆತ ಮಧ್ಯಾಹ್ನ ನಂತರ ಏಳ್ತಾನೆ..." ಎಂದೆಲ್ಲ ಸುಳ್ಳೆಳಿದಳು. ಅದಕ್ಕೆ ಸೌಮ್ಯ "ನಿಜಾನಾ ಐ ಕಾಂಟ ಬೀಲಿವ ಇಟ್, ಸರಿ ಸತೀಶಕುಮಾರ ಎದ್ದ ತಕ್ಷಣ ನನಗೆ ಕಾಲ್ ‌ಮಾಡಲು ಹೇಳಿ ತುಂಬಾ ಅರ್ಜೆಂಟ ಕೆಲಸ ಇದೆ" ಎಂದಳು. ಆಗ ಅಕ್ಕಾ "ನೀವು ಯಾರು?" ಎಂದಳು‌. ಆಗ ಸೌಮ್ಯ "ಐ ಯಾಮ ಫ್ರೆಂಡ ಆಫ್ ಸತೀಶಕುಮಾರ" ಎಂದಳು. ಅಕ್ಕಾ "ಸರಿ ಕಾಲ ಮಾಡಲು ಹೇಳ್ತಿನಿ" ಅಂತೇಳಿ ಕಾಲ್ ಮಾಡಿದಳು. ನಂತರ ಟಿಫಿನ ಮಾಡುತ್ತಾ ಇಬ್ರು ಅಕ್ಕಂದಿರು ನನ್ನ ಸ್ವಲ್ಪ ಟ್ರೋಲ ಮಾಡಿದರು. ಜೊತೆಗೆ "ಹುಡುಗಿ ಸ್ಪೀಡಾಗಿದಾಳೆ ನೀನು ಸ್ವಲ್ಪ ನಿಧಾನ..." ಎಂದು ಕಿವಿ ಮಾತೇಳಿದರು. ನಂತರ ನಾನು ಅವರಿಗೆ ವಾಟ್ಸಾಪಲ್ಲಿ ನಿನ್ನೆ ಸೌಮ್ಯ ಕಳಿಸಿದ್ದ ಪೋಟೋಸ ತೋರಿಸಿದೆ. ಅವುಗಳನ್ನು ನೋಡಿ ಅವರು "ಲಕ್ಷಣವಾಗಿದಾಳೆ ಕ್ಯೂಟಾಗಿದಾಳೆ" ಎಂದರು. ನಂತರ ನಾವು ಮನೆಗೋದೆವು. 

                        ಅಕ್ಕಂದಿರು ಇವತ್ತ ಸಂಡೇ ಅಂತಾ ಮನೆ ಕ್ಲೀನಿಂಗ ಕೆಲಸ ಸ್ಟಾರ್ಟ ಮಾಡಿದರು. ದಿನಾ ಮೂವರು ಆಫೀಸಗೆ ಹೋಗ್ತಿವಿ, ಫುಲ್ ಡೇ ಅಲ್ಲೇ ಹೋಗುತ್ತೆ, ಮನೆಗೆ ಬಂದು ಫ್ರೆಶ್ಶಾಗಿ ಮೆಸ್ಸಿಗೆ ಹೋಗಿ ಊಟ ಮಾಡಿ ಬಂದು ಮಲಗೋದು ಮತ್ತೆ ನಾಳೆ ಎಳೋದು ಆಫೀಸಗೆ ಹೋಗೊದು, ಯಾವಾಗ ಸನರೈಸ ಆಗುತ್ತೆ ಸನಸೆಟ ಆಗುತ್ತೆ ಅಂತಾ ಸಂಡೇ ಬಂದಾಗ ಮಾತ್ರ ಗೊತ್ತಾಗುತ್ತದೆ. ನಾನು ಕೂಡ ಅಕ್ಕಂದಿರಿಗೆ ಹೆಲ್ಪ ಮಾಡ್ತಿದ್ದೆ. ಅಷ್ಟರಲ್ಲಿ ಸೌಮ್ಯ ಕಾಲ್ ಮಾಡಿದಳು. ಮೀಟಿಂಗ ಲೋಕೊಷನ್ ಓಕೆನಾ‌ ಅಂತಾ ಕೇಳಿದಳು. ನಾನು ಈಗ ವಾಟ್ಸಾಪ ಒಪನ ಮಾಡಿ ಅವಳು ಕಳಿಸಿದ ಅಡ್ರೆಸ್ ನೋಡಿದೆ, ಅದು ನನಗೆ ಗೊತ್ತಿರೋ ಜಾಗವಾಗಿತ್ತು ಸೋ ನಾನು ಅವಳಿಗೆ ಓಕೆ ಅಂತಾ ಹೇಳಿದೆ. ಅವಳು ಓಕೆ ಅಂತಾ ಕಾಲ್ ಕಟ ಮಾಡಿದಳು. ಅಕ್ಕಂದಿರು ಸೌಮ್ಯಳನ್ನು ಮುಂದಿನ ಸಂಡೇ ಮನೆಗೆ ಕರೆದುಕೊಂಡು ಬರಲು ಹೇಳಿದರು. ಹಾಗೇ ಮನೆಕೆಲಸ ಮಾಡುತ್ತಾ ಮಧ್ಯಾಹ್ನ ಮೂರು ಗಂಟೆಯಾಯ್ತು. ಸೌಮ್ಯ ಮತ್ತೆ ಕಾಲ್‌ ಮಾಡಿ "SK ಐ ಯಾಮ ರೆಡಿ ನೌ, ನೀನು ರೆಡಿಯಾಗಿ ಬಂದಬಿಡು, ನಾನು ಹೇಳಿರೋ ಲೊಕೊಷನನಲ್ಲಿ ವೇಟ ಮಾಡ್ತಿರತ್ತೀನಿ" ಎಂದಳು. ನಾನು ಸರಿ ಎಂದು ಬೇಗನೆ ರೆಡಿಯಾಗಿ ಹೊರಟೆ‌. 

                  ನಾನು ಹೋಗುವಷ್ಟರಲ್ಲಿ ಸೌಮ್ಯ ಹೇಳಿದ ಲೊಕೊಷನನಲ್ಲಿ ವೇಟ ಮಾಡ್ತಾಯಿದ್ದಳು. ನಾನು ಹೋದ ನಂತರ ಅವಳು ನನ್ನ ಅಲ್ಲೇ ಸಮೀಪದ ದೇವಸ್ಥಾನಕ್ಕೆ ಕರೆದುಕೊಂಡು ಹೋದಳು. ದೇವರ ದರ್ಶನ ಮಾಡಿ ನಾವು ಅಲ್ಲೇ ಕುಳಿತೆವು. ಪೂರ್ತಿ ಟೆಂಪಲ್ ಭಕ್ತಾದಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಸೌಮ್ಯ ಕೂಡ ಮಾಸ್ಕ ಹಾಕಿದ್ದಳು. ನಾನು ಕೂಡ ಮಾಸ್ಕ ಹಾಕಿದ್ದೆ. ನಾನು ಪೋಲಿಸರು ಫೈನ ಹಾಕ್ತಾರೆ ಅಂತಷ್ಟೆ ಅದನ್ನ ಹಾಕಿಕೊಂಡಿರೋ ತರಹ ಡ್ರಾಮಾ ಮಾಡ್ತಿದ್ದೆ. ಅದವಳಿಗೆ ಹೇಗೋ ಗೊತ್ತಾಯಿತು. ಆಗವಳು "ಸತೀಶಕುಮಾರ ನೀನು ಮಾಸ್ಕ ತೆಗಿಬಹುದು" ಎನ್ನುತ್ತಾ ಮಾಸ್ಕ ತೆಗೆದಳು. ನಂತರ "ನಾನು ಇದನ್ನ ಹೇಟ ಮಾಡುವೆ, ಎಲ್ಲ ಬೋಗಸ ಅಲ್ವಾ?" ಎಂದಳು. ನಾನದಕ್ಕೆ "ನೀನೇ ಹೇಳಬೇಕು, ಗವರ್ನಮೆಂಟ್ ಆಫೀಸರಗಳು" ಎಂದೆ. ಅದಕ್ಕವಳು ನಗುತ್ತಾ "ಗವರ್ನಮೆಂಟನಾ ಕಂಟ್ರೋಲ ಮಾಡೋ ಕಾರ್ಪೊರೆಟಗಳಿಗೆ ಗೊತ್ತಿರುತ್ತಲ್ಲ ಎಲ್ಲ ನಾವ್ಯಾಕೆ ಹೇಳಬೇಕು?" ಅಂತಾ ಕೌಂಟರ ಆ್ಯನ್ಸರ್ ಕೊಟ್ಟಳು. ನಂತರ ನಾವು ಹಾಗೇ ಏನೇನೋ ಮಾತಾಡಿದೆವು. ಇವತ್ತ ನನ್ನ ಮೀಟಾಗೋ ಖುಷಿಯಲ್ಲಿ ಸೌಮ್ಯಳಿಗೆ ನಿದ್ದೆ ಬಂದಿರಲಿಲ್ಲ ಅಂತಾ ಹೇಳಿದಳು. ನಾವಿಬ್ಬರು ಮಾತಾಡ್ತಾ ಇದ್ವಿ ಅಷ್ಟರಲ್ಲಿ ಅಕ್ಕ ಕಾಲ್ ಮಾಡಿದಳು. ನಾನು ರೀಸಿವ ಮಾಡಿದೆ. ಸೌಮ್ಯಳಿಗೆ ಕೊಡಲು ಹೇಳಿದಳು. ನಾನು ಕೊಟ್ಟೆ. ಆಗ ಅಕ್ಕಾ ಸೌಮ್ಯಳಿಗೆ "ಮುಂದಿನ ವಾರ ನಮ್ಮ ಮನೇಲಿ ಸತ್ಯ ನಾರಾಯಣ ಪೂಜೆ ಇದೆ, ನೀನು ಬರಬೇಕು" ಅಂತಾ ಇನ್ವೈಟ ಮಾಡಿದಳು. ಆಗ ಸೌಮ್ಯ ನಿಮ್ಮಕ್ಕಳಿಗೆ ನನ್ನ ಬಗ್ಗೆ ಹೇಗೆ ಗೊತ್ತು ಎಂದು ಕೇಳಿದಳು. ನಾನಾಗ ನನ್ನ ಹಾಗೂ ನಮ್ಮಕ್ಕಂದಿರ ಮಧ್ಯೆ ಯಾವುದೇ ಸೀಕ್ರೆಟ್ಸ್ ಇಲ್ಲ, ನಾನು ರಾತ್ರಿನೆ ಅಕ್ಕಂದಿರಿಗೆ ಮೆಸೆಜ ಮಾಡಿ ಹೇಳಿದ್ದೆ. ಬೆಳಿಗ್ಗೆ ನೀನು ಕಾಲ್ ಮಾಡಿದಾಗ ನಾವು ಟಿಫಿನ ಮಾಡ್ತಾ ಇದ್ವಿ ಆಗ ಅಕ್ಕಾ ಬೇಕಂತಲೆ ನಿನಗೆ ಆ ರೀತಿ ಹೇಳಿದಾಳೆ. ನಾನು ಅವಳಿಗೆ ಎಲ್ಲ ಹೇಳಿರುವೆ ಎಂದೆ. ಆಗ ಸೌಮ್ಯ ನೀವು ಅಕ್ಕಾ ತಮ್ಮಾ ಸೇರಿ ನನ್ನ ಫೂಲ್ ಮಾಡ್ತಿಲ್ಲ ತಾನೇ ಎಂದಳು. ನಾನಾಗ ನಾನು ಮಾಡ್ತಿಲ್ಲ, ಬಟ ನಮ್ಮಕ್ಕ ನಿನ್ನ ಸ್ವಲ್ಪ ಕಾಮಿಡಿ ಮಾಡ್ತಾಳೆ ಎಂದೆ. ಆಗ ಸೌಮ್ಯ ನಿಮ್ಮಕ್ಕ ತಾನೇ ಮಾಡ್ಲಿ ಬಿಡು ಎಂದಳು. ನಂತರ ಮಾತಾಡುತ್ತಾ ನನ್ನೊಂದಿಗೆ ನಾಲ್ಕೈದು ಸೆಲ್ಪಿ ತೆಗೆದುಕೊಂಡಳು‌. 

                                    ಸೌಮ್ಯ ಮಾತಾಡುತ್ತಾ ಅವಳ ಫ್ಯಾಮಿಲಿ ಮೆಂಬರ್ಸ ಜೊತೆಗೆ ಮೊಬೈಲನಲ್ಲಿ ‌ಮಾತಾಡಿಸಿದಳು. ಅವಳ ಫ್ಯಾಮಿಲಿ ಬಗ್ಗೆ ಪೂರ್ತಿ ಹೇಳಿದಳು. ನನ್ನ ಬಗ್ಗೆ ಅವಳಿಗಿದ್ದ ಡೌಟ್ಸಗಳನ್ನ ಎಲ್ಲ ಬಗೆಹರಿಸಿಕೊಂಡಳು. ನಂತರ ಮಿಕ್ಕಿದನ್ನ ನಮ್ಮಕ್ಕಳತ್ರ ಮಾತಾಡುವೆ ಎಂದಳು. ಅಷ್ಟರಲ್ಲಿ ಸಂಜೆ ಆರು ಗಂಟೆಯಾಯ್ತು. ನಾನು ಅವಳನ್ನು ಅವಳ ಹಾಸ್ಟೇಲಗೆ ಟ್ರಾಪ ಮಾಡಿದೆ. ದಾರಿ ಮಧ್ಯೆ ಆಕೆ ನನಗೆ "ನೀನು ಸರಿಯಾಗಿದಿಯಾ ಸಿಂಪಲಾಗಿದಿಯಾ ಸ್ಟ್ರೇಟ ಫಾರವರ್ಡಾಗಿದಿಯಾ ಹಿಂಗೆ ಇರು. ಐ ಲವ್ ಯುವರ ಹಂಬಲ ನೇಚರ & ಆ್ಯಟಿಟುಡ, ಥ್ಯಾಂಕ್ಸ ಫಾರ ಕಮಿಂಗ, ಮುಂದಿನ ವಾರ ನಿಮ್ಮ ಮನೆಯಲ್ಲಿ ಸಿಗುವೆ, ಅಕ್ಕಂದಿರಿಗೆ ನಾನು ಕೇಳಿದೆ ಅಂತೇಳು" ಅಂತೇಳಿದಳು. ಅವಳನ್ನ ಬಿಟ್ಟು ನಾನು ಮನೆಗೆ ಬಂದೆ. ಅಕ್ಕಂದಿರಿಗೆ ನಡೆದ ಮಾತುಕತೆ ಹೇಳಿದೆ. ಆದ್ರೆ ಅವರು ನಂಬಲಿಲ್ಲ. ಅಷ್ಟರಲ್ಲಿ ನನ್ನ ವಾಟ್ಸಾಪಗೆ ಸೌಮ್ಯ ಮೆಸೆಜ ಹಾಕಿದ್ದಳು. ಡಿಪಿಯಲ್ಲಿ ನಮ್ಮಿಬ್ಬರ ಸೆಲ್ಪಿ ಇಟ್ಟಿದ್ದಳು. ನಿಮ್ಮಕ್ಕಳ ನಂಬರ ಸೆಂಡ ಮಾಡು ಅಂತಾ ಹೇಳಿದ್ದಳು. ನಾನು ಇಬ್ರು ಅಕ್ಕಂದಿರ ನಂಬರ ಶೇರ್ ಮಾಡಿದೆ. ಆಕೆ ಆಗಲೇ ನಮ್ಮಕ್ಕಳಿಗೆ ಕಾಲ ಮಾಡಿದಳು. ಅವಳು ಅಕ್ಕಂದಿರ ಜೊತೆಗೆ ಒಂದುವರೆ ಗಂಟೆ ಏನ ಮಾತಾಡಿದಳೋ ಗೊತ್ತಿಲ್ಲ‌. ನನಗೆ ನಿದ್ದೆ ಬರ್ತಾಯಿತ್ತು. ನಾನು ಊಟ ಮಾಡಿ ರೂಮಿಗೆ ಬಂದೆ. ಆದರೆ ಈಗ ನಿದ್ದೆ ಹಾರಿ‌ ಹೋಗಿತ್ತು. ಅದಕ್ಕೆ ಇವತ್ತು ನಡೆದ ಸಮಾಚಾರ ತಿಳಿಸಲು ಲ್ಯಾಪ್‌ಟಾಪ್ ಒಪನ ಮಾಡಿದೆ. ಅಷ್ಟರಲ್ಲಿ ಇಷ್ಟು ಟೈಮಾಮ್ತು. ಸೌಮ್ಯ ವಾಟ್ಸಾಪಲ್ಲಿ ಊಟ ಆಯ್ತಾ ಅಂತಾ ಮೆಸೆಜ ಮಾಡಿದ್ದಾಳೆ. ಬಟ್ ರಿಪ್ಲೆ ಮಾಡಿದರೆ ಮತ್ತೆ ನಿದ್ದೆಗೆಡಬೇಕಾಗುತ್ತದೆ. ನಾಳೆ ಮಂಡೇ ಆಫೀಸಗೆ ಹೋಗಬೇಕಾಗುತ್ತದೆ. ಅದಕ್ಕೆ ಅವಳಿಗೆ ನಾಳೆ ಮೆಸೆಜ ಮಾಡುವೆ. ಈಗ ಎಲ್ಲರಿಗೂ ಗುಡ್ ನೈಟ. ಥ್ಯಾಂಕ್ಸ ಸೌಮ್ಯ ಹೊಸ ಫ್ರೆಂಡಾಗಿ ನನಗೆ ಸಿಕ್ಕಿದಕ್ಕೆ....

ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend

ಒಂದು ವಾರದ ನಂತರ 

                       ಇವತ್ತು ನನ್ನ ಒನ ಆಫ್ ದ ಹೊಸ ಫ್ರೆಂಡ್ ಸೌಮ್ಯ ನಮ್ಮನೆಗೆ ಮೊದಲ‌ ಸಲ ಬಂದಿದ್ದಳು. ಇವತ್ತು ನಮ್ಮನೇಲಿ ಪೂಜಾ ಕಾರ್ಯಕ್ರಮವಿತ್ತು. ನಮ್ಮಕ್ಕ ಸೌಮ್ಯಳನ್ನು ಇನ್ವೈಟ ಮಾಡಿದ್ದಳು. ಸೋ ಸೌಮ್ಯ ನಮ್ಮೆನೆಗೆ ಬಂದಿದ್ದಳು. ಪೂಜೆಗೆ ಹಾಜರಾಗಿ ಪ್ರಸಾದ ಸೇವಿಸಿ ಊಟವೆಲ್ಲ ಆದ ನಂತರ ನಮ್ಮಕ್ಕ ಸೌಮ್ಯಳಿಗೆ ಮನೆ ತೋರಿಸುತ್ತಿದ್ದಳು. ದುರಾದೃಷ್ಟಕ್ಕೆ ನನ್ನ ರೂಮನ್ನು ಸಹ ಅಕ್ಕ ಅವಳಿಗೆ ತೋರಿಸಿದಳು. ನನ್ನ ರೂಮ ನೋಡಿ ಅವಳ ತಲೆ ತಿರುಗಿತು. ಏಕೆಂದರೆ ನನ್ನ ರೂಮಿನ ಗೋಡೆ ತುಂಬೆಲ್ಲ ನನ್ನ ಫ್ಯುಚರ ಗೋಲ್ಸಗಳನ್ನು ದೊಡ್ಡ ಪ್ರಿಂಟ ತೆಗೆಸಿ ಅಂಟಿಸಿರುವೆ. ಅವುಗಳಲ್ಲಿ ‌ಬರೀ 60% ನನಸಾಗಿವೆ, ಇನ್ನೂ ಮಿಕ್ಕ 40% ಗೋಲ್ಸಗಳು ಆರ್ಡಿನರಿ ಜನರ ಕನಸಿಗೂ ತಾಗದಷ್ಟು ದೊಡ್ಡದಾಗಿವೆ. ಜೊತೆಗೆ ಯಾರು ನನಗೆ ಏನೆನೆಲ್ಲ ಹೇಳಿ ಅವಮಾನ ಮಾಡಿದಾರೋ, ನನ್ನ ಕೈಯಿಂದ ಇದು ಆಗಲ್ಲ ಅಂದಿದಾರೋ ಅವುಗಳನ್ನು ಸಹ ಅಂಟಿಸಿರುವೆ. ಅದನ್ನೆಲ್ಲ ನೋಡಿ ಸೌಮ್ಯ ನನಗೆ ಕೆಲವೊಂದು ವಿಷಯಗಳನ್ನು ಪ್ರೀತಿಯಿಂದ ನನಗೆ ಬೇಜಾರಾಗುತ್ತೇನೋ ಎಂಬ ಭಯದಲ್ಲಿ ಹೇಳಿದಳು. ಅವು ನನ್ನ ತಪ್ಪುಗಳಾಗಿದ್ದವು. ನನ್ನ ಅಕ್ಕಂದಿರು ಸಹ ಇವುಗಳನ್ನು ಎಷ್ಟೋ ಸಲ ಹೇಳಿದ್ದರು, ಆದರೆ ನಾನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಇವತ್ತು ತುಂಬಾ ಯೋಚನೆ ಮಾಡಿ ಈ ತಪ್ಪುಗಳನ್ನು ಶಾಶ್ವತವಾಗಿ ಬಿಟ್ಟು ಬಿಡುತ್ತಿರುವೆ. ಇವು ನಿಮ್ಮ ಪ್ರಯೋಜನಕ್ಕೆ ಬರಬಹುದು ಎಂಬ ಕಾರಣಕ್ಕೆ ಶೇರ್ ಮಾಡುತ್ತಿರುವೆ. ನಾನು ಬಿಡುತ್ತಿರುವ ತಪ್ಪುಗಳು ಇಂತಿವೆ ; 

1) ನಾನು ಸ್ವಲ್ಪ ಜಾಸ್ತಿನೇ ಮುಂಗೋಪಿಯಾಗಿರುವೆ. ಅದಕ್ಕೆ ನಾನು ಬೆಳೆದ ಹಾಸ್ಟೆಲ್, ಆಶ್ರಮ & ಒಂಟಿತನ ಕಾರಣ. ಯಾರಾದರೂ ನನ್ನ ಕಾಲೆಳೆಯಲು ಟ್ರಾ ಮಾಡಿದರೆ ನನಗೆ ಕೆಟ್ಟ ಕೋಪ ಬರುತ್ತದೆ. ಆದರೆ ಈ ಕೋಪ ಶತ್ರುವನ್ನು ‌ಸುಡುವ ಬದಲು ನನ್ನ ನಗುವನ್ನು, ನೆಮ್ಮದಿಯನ್ನು ಬಹಳಷ್ಟು ಸಲ ಸುಟ್ಟಿದೆ. ಅದಕ್ಕೆ ನನ್ನ ಮುಂಗೋಪವನ್ನು ಬಿಡುತ್ತಿರುವೆ. ನನ್ನ ಕಾಲೆಳೆಯುವವರನ್ನು ಹಂದಿಗಳೆಂದು ತಿಳಿದು ಅವರನ್ನು ನೋಡಿ ನಗಲು ಕಲಿಯಲು ಶುರು ಮಾಡಿರುವೆ. ನನ್ನ ನೆಮ್ಮದಿಯನ್ನು ಕಿತ್ತು ಕೊಳ್ಳಲು ಯಾರೇ ಟ್ರಾ ಮಾಡಿದರೂ ಅವರು ಇನ್ಮುಂದೆ ನನ್ನ ದೃಷ್ಟಿಯಲ್ಲಿ ಹಂದಿಗಳಷ್ಟೇ... 

2) ನಾನು ನನ್ನ ಪ್ರೀತಿಸುವವರಿಗಿಂತ ದ್ವೇಷಿಸುವವರಿಗೆ ಜಾಸ್ತಿ ಬೆಲೆ ಕೊಡುವೆ. ಅದನ್ನ ಈ ಕ್ಷಣದಿಂದ ಬಿಡುತ್ತಿರುವೆ. ನನಗೆ ಹೇಳಿದ ಪ್ರೀತಿ ಮಾತುಗಳನ್ನು ನಾನು ನನ್ನ ರೂಮ ಗೋಡೆ ಮೇಲೆ ಅಂಟಿಸಿದ್ದರೆ ನಾನು ಇನ್ನೂ ಖುಷಿಯಾಗಿರಬಹುದಿತ್ತು. ಆದರೆ ದ್ವೇಷದ ಮಾತುಗಳನ್ನು ಅಂಟಿಸಿಕೊಂಡು ನನ್ನ ಬಿಪಿಯನ್ನು ನಾನೇ ಏರಿಸಿಕೊಂಡಿರುವೆ. ಅದಕ್ಕೆ ಇದನ್ನು ಶಾಶ್ವತವಾಗಿ ಬಿಡುತ್ತಿರುವೆ. ಸೌಮ್ಯ ಹೇಳಿದಂತೆ ನನ್ನಲ್ಲಿ ಯಾವುದೇ ದೋಷವಿಲ್ಲ, ನಾನು ಕರೆಕ್ಟಾಗಿರುವೆ, ಲೈಫಲ್ಲಿ ಚೆನ್ನಾಗಿ ಸೆಟ್ಲಾಗಿರುವೆ, ಸಕ್ಸೆಸಫುಲ್ಲಾಗಿರುವೆ, ಈಗ ಫೇಮಸ ಕೂಡ ಆಗುತ್ತಿರುವೆ ಅದಕ್ಕೆ ಕೆಲವರಿಗೆ ಊರಿಯುತ್ತಿದೆ. ಅದಕ್ಕವರು ನೆಗೆಟಿವ ಆಗಿ ಕಮೆಂಟ ಮಾಡಿ ನನ್ನನ್ನು ಡಿಸ್ಟರ್ಬ ಮಾಡಲು ಟ್ರಾ ಮಾಡುತ್ತಾರೆ. ನನ್ನನ್ನು ‌ಪ್ರೀತಿಸುವ ಜನ ಬಹಳಷ್ಟಿದ್ದಾರೆ. ಅದಕ್ಕೆ ನಾನು ನನ್ನನ್ನು ‌ಪ್ರೀತಿಸುವವರ ಮೇಲಷ್ಟೆ ಗಮನ ಹರಿಸುವೆ. ಹಂದಿಗಳ ಕಡೆಗೆ ನೋಡಲ್ಲ ಸಹ. 

3) ನಾನು ನನ್ನನ್ನು ಇಷ್ಟಪಟ್ಟ ಕೆಲವರಿಗೆ ಟೈಮ ಕೊಟ್ಟಿಲ್ಲ, ಅವರಿಗೆ ಸ್ವಲ್ಪ ಟೈಮ ಕೊಡಲು ಟ್ರಾಯ ಮಾಡುವೆ. ಎಷ್ಟೋ ಜನ ಅವರ ನೋವುಗಳನ್ನು ನನ್ನತ್ರ ಶೇರ್ ಮಾಡಿಕೊಳ್ಳಲು ಟ್ರಾ ಮಾಡಿದಾಗ ನಾನು ಅವರನ್ನು ಅವೈಡ ಮಾಡಿರುವೆ. ಆದರೆ ಇವತ್ತಿನಿಂದ ಅವರಿಗೆ ದಿನಾ ಸಂಜೆ ಸ್ವಲ್ಪ ಟೈಮ ಕೊಡುವೆ. ನನ್ನತ್ರ ಮಾತನಾಡುವುದರಿಂದ ಅವರ ಮನಸ್ಸಿಗೆ ಖುಷಿ ಸಿಗುತ್ತೆ ಅಂದ್ಮೇಲೆ ಮಾತಾಡಲು ನಾನ್ಯಾಕೆ ಹಿಂಜರಿಯಬೇಕು? ಬಹಳಷ್ಟು ಜನರಿಗೆ ಮನಸ್ಸಲ್ಲಿರುವ ಮಾತುಗಳನ್ನು ಹೇಳಿಕೊಳ್ಳಲು ವ್ಯಕ್ತಿಗಳಿಲ್ಲ. ಅವರ ಶಕ್ತಿಯಾಗಲು ನಾನು ನನ್ನ ಟೈಮನ್ನು ಸ್ವಲ್ಪ ಖರ್ಚು ಮಾಡುವೆ. 

                                  ಥ್ಯಾಂಕ್ಸ ಯು #ಸೌಮ್ಯ ನನ್ನ ತಪ್ಪುಗಳನ್ನು ನನಗೆ ತೋರಿಸಿ ಕೊಟ್ಟಿದ್ದಕ್ಕೆ. ನನ್ನಿಂದ ಯಾರಯಾರಿಗೆ ಬೇಜಾರಾಗಿದೆಯೋ ಅವರಿಗೆಲ್ಲ ಸ್ವಾರಿ. ಶುಭರಾತ್ರಿ....

ನನ್ನ ಮೊದಲ ಫೇಸ್ಬುಕ ಗೆಳತಿ - My First Facebook Girlfriend

Blogger ನಿಂದ ಸಾಮರ್ಥ್ಯಹೊಂದಿದೆ.