1) ಇತಿಹಾಸವನ್ನು ಮರೆಯುವವರಿಗೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ...
2) ಜೀವನ ದೊಡ್ಡದಾಗಿರುವುದಕ್ಕಿಂತ ಗ್ರೇಟ ಆಗಿರಬೇಕು...
3) ಮೆದುಳಿನ ವಿಕಾಸ ಮಾನವ ಅಸ್ತಿತ್ವದ ಅಂತಿಮ ಗುರಿಯಾಗಿದೆ...
4) ಮಹಿಳೆಯರ ಪ್ರಗತಿಯ ಆಧಾರದ ಮೇಲೆ ಸಮುದಾಯದ ಪ್ರಗತಿಯನ್ನು ಅಳೆಯಬೇಕು...
5) ಗಂಡ ಹೆಂಡತಿಯರ ಸಂಬಂಧ ಕ್ಲೋಜ ಫ್ರೆಂಡ್ಸಗಳಂತೆ ಇರಬೇಕು...
6) ರಾಜಕೀಯ ದಬ್ಬಾಳಿಕೆಯು ಸಾಮಾಜಿಕ ದಬ್ಬಾಳಿಕೆಯೊಂದಿಗೆ ಹೋಲಿಸಿದರೆ ಏನು ಅಲ್ಲ. ಸಮಾಜವನ್ನು ಧಿಕ್ಕರಿಸುವ ಒಬ್ಬ ಸುಧಾರಕನು ಸರ್ಕಾರವನ್ನು ಧಿಕ್ಕರಿಸುವ ರಾಜಕಾರಣಿಗಿಂತ ಹೆಚ್ಚು ಧೈರ್ಯಶಾಲಿ ವ್ಯಕ್ತಿ...
7) ಕಾನೂನು ಹಾಗೂ ಸುವ್ಯವಸ್ಥೆಗಳು ರಾಜಕೀಯ ದೇಹದ ಔಷಧಿಯಾಗಿವೆ. ರಾಜಕೀಯ ದೇಹ ಅನಾರೋಗ್ಯಕ್ಕೆ ತುತ್ತಾದಾಗ ಔಷಧಿಯನ್ನು ನೀಡಲೇಬೇಕು...
8) ಸಮುದ್ರಕ್ಕೆ ಬಿದ್ದಾಗ ತನ್ನ ಮೂಲ ಸ್ಥಿತಿ ಕಳೆದುಕೊಳ್ಳುವ ಹನಿಗಳಂತೆ ಮನುಷ್ಯ ಸಮಾಜದಲ್ಲಿ ತನ್ನ ಮೂಲ ಅಸ್ತಿತ್ವ ಹಾಗೂ ಸ್ಥಿತಿಯನ್ನು ಕಳೆದುಕೊಳ್ಳಬಾರದು. ಮನುಷ್ಯನ ಜನ್ಮ ಸಮಾಜದ ಉದ್ಧಾರಕ್ಕಿಂತ ಹೆಚ್ಚಾಗಿ ಸ್ವತಃದ ಉದ್ಧಾರಕ್ಕಾಗಿ ಆಗಿದೆ...
9) ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸದಿದ್ದಾಗ ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಒದಗಿಸಿದರೂ ನಿಮಗೆ ಯಾವುದೇ ಪ್ರಯೋಜನವಿಲ್ಲ...
10) ಸಮಾನತೆಯು ಒಂದು ಕಲ್ಪನೆಯಾಗಿರಬಹುದು. ಆದರೆ ಅದೇನೆ ಇದ್ದರೂ ಅದನ್ನು ಆಡಳಿತ ತತ್ವವಾಗಿ ಸ್ವೀಕರಿಸಬೇಕು...
11) ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯವಾಗಿದೆ. ಮನಸ್ಸಿನಿಂದ ಮುಕ್ತವಾಗಿರದ ವ್ಯಕ್ತಿ ಸರಪಳಿಯಿಂದ ಬಂಧಿಸಲ್ಪಡದಿದ್ದರೂ ಗುಲಾಮನೇ...
12) ಉದಾಸೀನತೆಯು ಜನರ ಮೇಲೆ ಕೆಟ್ಟ ಪರಿಣಾಮ ಬೀರುವ ಒಂದು ಕೆಟ್ಟ ರೋಗವಾಗಿದೆ...
13) ಕಹಿ ವಿಷಯವನ್ನು ಸಿಹಿ ಮಾಡಲು ಸಾಧ್ಯವಿಲ್ಲ. ಯಾವುದರ ರುಚಿಯನ್ನು ಬೇಕಾದರೂ ಬದಲಿಸಬಹುದು, ಆದರೆ ವಿಷವನ್ನು ಅಮೃತವಾಗಿ ಬದಲಿಸಲು ಸಾಧ್ಯವಿಲ್ಲ...