ಯೋಗಿಯ ಆತ್ಮಕಥೆ - The Autobiography of Yogi Book Summary in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಯೋಗಿಯ ಆತ್ಮಕಥೆ - The Autobiography of Yogi Book Summary in Kannada

                                 ಯೋಗಿಯ ಆತ್ಮಕಥೆ - The Autobiography of Yogi Book Summary in Kannada

                                        ಹಾಯ್ ಗೆಳೆಯರೇ ನಾನು ಇವತ್ತಿನ ಅಂಕಣದಲ್ಲಿ ನಿಮ್ಮೊಂದಿಗೆ ಶ್ರೀ ಪರಮಹಂಸ ಯೋಗಾನಂದರ "The Autobiography of Yogi" ಬುಕನಿಂದ ಕಲಿತ ಕೆಲವು ಜೀವನಪಾಠಗಳನ್ನು ಶೇರ್ ಮಾಡುತ್ತಿರುವೆ. The Autobiography of Yogi ಇದೊಂದು ಬೆಸ್ಟ್ ಸೆಲ್ಲಿಂಗ್ ಸ್ಪಿರಿಚುವಲ್ ಬುಕ್ ಆಗಿದೆ. ಈ ಬುಕನ ಬಗ್ಗೆ ಕೆಲವೊಂದಿಷ್ಟು ನೆಗೆಟಿವ್ ಮಾತುಗಳು ಕೂಡ ಮಾರ್ಕೆಟನಲ್ಲಿವೆ. ಈ ಬುಕನಲ್ಲಿ ಹೇಳಿದ ಎಲ್ಲ ಪವಾಡ ಕಥೆಗಳನ್ನು ‌ಬಹಳಷ್ಟು ಜನ ನಂಬುವುದಿಲ್ಲ. ಅದಕ್ಕಾಗಿ ಅವರು ಈ ಬುಕಗೆ ಕೆಲವೊಂದಿಷ್ಟು ಕ್ರಿಶ್ಚಿಯನ್ ಬುಕಗಳಂತೆ ಇದು ಹಿಂದು ಪ್ರೊಪಗಂಡಾ ಬುಕ್ ಎನ್ನುತ್ತಾರೆ. ಕ್ರಿಯಾಯೋಗದ ಕೋರ್ಸಗಳನ್ನು ಮಾರಲು ಬರೆದ ಕಮರ್ಷಿಯಲ್ ಬುಕ್ ಎನ್ನುತ್ತಾರೆ. ಬೇರೆಬೇರೆ ಜನ ಬೇರೆಬೇರೆ ಮಾತಾಡುತ್ತಾರೆ. ಅದರ ಬಗ್ಗೆ ನಾನು ಏನನ್ನೂ ಹೇಳಲಾರೆ. ಏಕೆಂದರೆ ಈ ಬುಕ್ಕಲ್ಲಿ ಹೇಳಲಾದ ಪವಾಡಗಳು ಆ ರೀತಿ ಇವೆ. ಒಂದೇ ಟೈಮಿಗೆ ಎರಡು ಕಡೆ ಇರುವ ಸಾಧುಗಳು, ಕೃತಕವಾಗಿ ಸುಗಂಧ ತಯಾರಿಸುವ ಸಾಧುಗಳು, ಮಾಯವಾಗುವ ಸಾಧುಗಳು, ಹುಲಿಯೊಂದಿಗೆ ಹೋರಾಡುವ ಸಾಧುಗಳು, ಊಟ ಮಾಡದೇ ವರ್ಷಗಟ್ಟಲೆ ಇರುವ ಸಾಧುಗಳು ಈ ರೀತಿ ಬಹಳಷ್ಟು ಪವಾಡ ಮಾಡುವ ಸಾಧುಗಳ ಉಲ್ಲೇಖ ಈ ಬುಕ್ಕಲ್ಲಿರುವುದರಿಂದ ಕೆಲವರು ಈ ಬುಕ್ಕಿನ ಬಗ್ಗೆ ನೆಗೆಟಿವ ಆಗಿ ಮಾತಾಡುತ್ತಾರೆ. ಅವರ ಬಗ್ಗೆ ನಾನೇನು ಹೇಳಲಾರೆ. ನನಗಂತು ಭಗವದ್ಗೀತೆ ಬಿಟ್ಟರೆ ಬೇರೆ ಯಾವ ಆಧ್ಯಾತ್ಮಿಕ ಬುಕ್ ಕೂಡ ಅಷ್ಟೊಂದು ಇಷ್ಟವಾಗಿಲ್ಲ. ನಿಮ್ಮ ವೈಯಕ್ತಿಕ ವಿಚಾರ ನಿಮಗೆ ಬಿಟ್ಟಿದ್ದು. ನಿಮಗೂ ಕೂಡ ಈ ಬುಕ್ಕನ್ನು ಓದುವ ಆಸೆಯಿದ್ದರೆ ಓದಿ ಲಿಂಕ್ ಇಂತಿದೆ 

Book Link - https://www.roaringcreationsfilms.com/the-autobiography-of-yogi-by-paramahamsa-yogananda-book-in-kannada

ಯೋಗಿಯ ಆತ್ಮಕಥೆ - The Autobiography of Yogi Book Summary in Kannada

ನಾನು ಈ ಬುಕನಿಂದ ಕಲಿತ‌ ಕೆಲವು ಪಾಠಗಳು ಇಂತಿವೆ ; 

1) ನಿಮ್ಮತ್ರ ಬಹಳಷ್ಟು ಹಣವಿದ್ದರೂ ಆಂತರಿಕ ಶಾಂತಿ ಇಲ್ಲದಿದ್ದರೆ ನೀವು ಸಮುದ್ರದಲ್ಲಿ ಸ್ನಾನ ಮಾಡುವಾಗ ಬಾಯಾರಿಕೆಯಿಂದ ನರಳಿ ಸತ್ತಂತೆ. ಅದಕ್ಕಾಗಿ ದೈವಿಕ ಸಂಪತ್ತನ್ನು, ಆಧ್ಯಾತ್ಮಿಕ ಸಂಪತ್ತನ್ನು ಸಂಪಾದಿಸಿ. 

2) ಮನಸ್ಸು ಎಲ್ಲದರ ಸೃಷ್ಟಿಕರ್ತನಾಗಿದೆ. ಅದಕ್ಕಾಗಿ ಮನಸ್ಸಿಗೆ ಬರೀ ಒಳ್ಳೆಯದನ್ನಷ್ಟೇ ಸೂಚಿಸಿ. ಕೆಟ್ಟ ಆಲೋಚನೆಗಳನ್ನು ಸೂಚಿಸಿದರೆ ನೀವು ಕೊಳಕಾಗುತ್ತೀರಿ. ಅದಕ್ಕಾಗಿ ಮನಸ್ಸಿಗೆ ಒಳ್ಳೆ ವಿಚಾರಗಳನ್ನು ಕೊಡಿ. 

3) ನಾವು ಕಲಿತಿರುವುದನ್ನು ಪ್ರ್ಯಾಕ್ಟೀಸ್ ಮಾಡದಿದ್ದರೆ ಆ ಜ್ಞಾನವು ವ್ಯರ್ಥವಾಗಿ ಹೋಗುತ್ತದೆ. ಬೇಗನೆ ಮರೆತೋಗುತ್ತದೆ. 

4) ರೋಗ ಮತ್ತು ಚಿಕಿತ್ಸೆ ಎರಡಕ್ಕೂ ಕಲ್ಪನೆಯೊಂದೆ ಬಾಗಿಲಾಗಿದೆ. ಎರಡಕ್ಕೂ ಕಲ್ಪನೆಯೇ ಕಾರಣವಾಗಿದೆ. ಅದಕ್ಕಾಗಿ ಕೆಟ್ಟ ಕಲ್ಪನೆಗಳನ್ನು ಮಾಡಬೇಡಿ‌. ಸದಾ ಒಳ್ಳೇ ಕಲ್ಪನೆಗಳನ್ನು ಮಾಡಿ. ಕೆಟ್ಟ ಕಲ್ಪನೆಯಿಂದ ಕಾರಣವಿಲ್ಲದೇ ರೋಗ‌ ಬರಬಹುದು. ಒಳ್ಳೇ ಕಲ್ಪನೆಯಿಂದ ಔಷಧಿಯಿಲ್ಲದೆ‌ ರೋಗ ವಾಸಿಯಾಗಬಹುದು. Your health is reflection of your Subconscious mind. 

5) ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೆ ಹೋಗುವ ಅವಶ್ಯಕತೆ ಇಲ್ಲ. ಈ ಜಗತ್ತಿನಲ್ಲಿ ಒಂದೇ‌ ಒಂದು ಧರ್ಮವಿದೆ. ಏಕೆಂದರೆ ದೇವರು ಒಬ್ಬನೇ ಆಗಿದ್ದಾನೆ‌. ಧ್ಯಾನದಿಂದ ನಾವು ದೇವರನ್ನು ಸೇರಬಹುದು. ಧ್ಯಾನದಿಂದ ನಾವು ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. 

6) You belongs to No one and No one belongs to you. ನೀವು ಯಾರಿಗೂ ಸಂಬಂಧಪಟ್ಟಿಲ್ಲ. ನಿಮಗ್ಯಾರು ಸಹ ಸಂಬಂಧಪಟ್ಟಿಲ್ಲ. ಒಂದಿನ ನೀವು ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಸೈಲೆಂಟಾಗಿ ಈ ಜಗತ್ತನ್ನು ತೊರೆಯಬೇಕಾಗುತ್ತದೆ. ಅದಕ್ಕಾಗಿ ಇಂದೇ ದೇವರನ್ನು ಪರಿಚಯ ಮಾಡಿಕೊಳ್ಳಿ. 

ಯೋಗಿಯ ಆತ್ಮಕಥೆ - The Autobiography of Yogi Book Summary in Kannada

7) ನೀವು ಬೇರೆಯವರಲ್ಲಿ ಏನನ್ನು ನಿಂದಿಸುತ್ತಿರೋ ಮುಂದೊಂದು ದಿನ ಆ ಕೆಟ್ಟ ಗುಣಗಳು ನಿಮ್ಮಲ್ಲೇ ಹೆಚ್ಚಾಗುತ್ತವೆ. ಮುಂದೊಂದು ದಿನ ನೀವು ಅವುಗಳನ್ನು ಅನುಭವಿಸಬೇಕಾಗುತ್ತದೆ. ಇದು ಕರ್ಮದ ನಿಯಮವಾಗಿದೆ. ಅದಕ್ಕಾಗಿ ನಿಮ್ಮ ಮನಸ್ಸನ್ನು ಹಾಳು ಮಾಡುವ ಇಂಥ ಕೆಲಸಗಳನ್ನು ಮಾಡಬೇಡಿ. 

8) ನಿಮಗೆ ನೀವು ಪ್ರಾಮಾಣಿಕರಾಗಿರಿ. ಏಕೆಂದರೆ ಈ ಜಗತ್ತು ನಿಮ್ಮೊಂದಿಗೆ ಪ್ರಾಮಾಣಿಕವಾಗಿಲ್ಲ. ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿದ್ದರೆ ಮಾತ್ರ ಆಂತರಿಕ ಶಾಂತಿಯ ದಾರಿಯನ್ನು ಕಂಡುಕೊಳ್ಳುತ್ತೀರಿ. 

9) ನಮ್ಮ ಲೈಫಲ್ಲಿ ಬರುವ ಪರೀಕ್ಷೆಗಳು ನಮ್ಮನ್ನು ಶಿಕ್ಷಿಸಲು ಬರಲ್ಲ. ನಮ್ಮನ್ನು ಜಾಗೃತರನ್ನಾಗಿಸಲು ಬರುತ್ತವೆ. ನಾವು ಆತ್ಮದ ಒಂದು ಭಾಗವಾಗಿದ್ದೇವೆ. ನಮ್ಮ ಲೈಫಿನ ಉತ್ಸಾಹದ ಹಿಂದೆ ಅನಂತದ ಜ್ವಾಲೆಯಿದೆ. 

10) ಸೋಲಿನ ಸಮಯ ಸಕ್ಸೆಸನ ಬೀಜಗಳನ್ನು ಬಿತ್ತಲು ಬೆಸ್ಟ್ ಟೈಮಾಗಿದೆ. 

11) ದೇವರು ನಮ್ಮ ಆತ್ಮದ ಸೌಂದರ್ಯವನ್ನು ನೋಡುತ್ತಾನೆ. ಹೇಗೆ ವಜ್ರದ ಮೇಲೆ ಧೂಳು ಮಣ್ಣು ಬಿದ್ದರೂ ಅದರ ಬೆಲೆ ಕಡಿಮೆಯಾಗುವುದಿಲ್ಲವೋ ಅದೇ ರೀತಿ ನಮ್ಮ ಆತ್ಮದ ಬೆಲೆ ಕಡಿಮೆಯಾಗಲ್ಲ. 

12) ನಾವು ನಮ್ಮ ಲೈಫನ್ನು ಆರ್ಡಿನರಿ ಮಾಡಿಕೊಳ್ಳಬಾರದು. ನಾವು ಜಗತ್ತಿನಲ್ಲಿ ಯಾರೂ ಮಾಡಿರದ Extraordinary ಕೆಲಸಗಳನ್ನು ಮಾಡಿ ಜಗತ್ತನ್ನು ಬೆರಗುಗೊಳಿಸಬೇಕು. ದೇವರ‌ ಸೃಜನಶೀಲ ತತ್ವ ನಮ್ಮಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸಬೇಕು. 

                            ಓಕೆ ಗೆಳೆಯರೇ, ಇವೀಷ್ಟು ಜೀವನ ಪಾಠಗಳನ್ನು ನಾನು ಯೋಗಿಯ ಆತ್ಮಕಥೆಯಿಂದ‌‌ ಕಲಿತಿರುವೆ. ನಿಮಗಿವು ಅರ್ಥವಾಗಿದ್ದರೆ ಪ್ಲೀಜ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಎಲ್ಲರೊಂದಿಗೆ ಶೇರ್ ಮಾಡಿ. ಇದೇ ರೀತಿಯ ಯುಜಫುಲ್ ಅಂಕಣಗಳನ್ನು ಓದಲು ಡೈರೆಕ್ಟರ್ ಸತೀಶಕುಮಾರ ಫೇಸ್‌ಬುಕ್‌ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...

ಯೋಗಿಯ ಆತ್ಮಕಥೆ - The Autobiography of Yogi Book Summary in Kannada

Blogger ನಿಂದ ಸಾಮರ್ಥ್ಯಹೊಂದಿದೆ.