ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money - Best Money Management Formula - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money - Best Money Management Formula

                                           ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula

                               ಹಾಯ್ ಗೆಳೆಯರೇ, ನಮಸ್ತೆ ನಾನು ನಿಮ್ಮ ಸತೀಶಕುಮಾರ. ಇವತ್ತಿನ ಅಂಕಣದಲ್ಲಿ ನಾವು ಬೆಸ್ಟ್ ಮನಿ ಮ್ಯಾನೇಜ್ಮೆಂಟ್ ಫಾರ್ಮುಲಾದ ಬಗ್ಗೆ ಶಾರ್ಟ್ & ಸ್ವೀಟಾಗಿ ತಿಳಿದುಕೊಳ್ಳೊಣಾ. ಲೆಟ್ಸ ಬಿಗಿನ್... 

                     ಫ್ರೆಂಡ್ಸ್ ಹಣವನ್ನು ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಉಳಿಸುವುದು ಹಾಗೂ ಬೆಳೆಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಅರ್ಥಾತ  ನೀವು ಸಂಪಾದಿಸಿದ ಹಣವನ್ನು ಸರಿಯಾಗಿ ಮ್ಯಾನೇಜ ಮಾಡುವುದು ತುಂಬಾನೇ ಇಂಪಾರಟಂಟಾಗಿದೆ‌‌. ಹಣವನ್ನು ಮ್ಯಾನೇಜ ಮಾಡುವುದಕ್ಕಾಗಿ 40:30:20:10 ಫಾರ್ಮುಲಾ ಬೆಸ್ಟಾಗಿದೆ. ಈ ಫಾರ್ಮುಲಾ ಏನ ಹೇಳುತ್ತದೆ ಅಂದರೆ ನಾವು ನಮಗೆ ಬಂದ ಇನಕಮದಲ್ಲಿ 

1) 40% ಹಣವನ್ನು ನಮ್ಮ Needsಗಳಿಗಾಗಿ ಬಳಸಿಕೊಳ್ಳಬೇಕು. ಅಂದರೆ ನಮ್ಮ ತುರ್ತು ಅವಶ್ಯಕತೆಗಳು ಏನಿವೇನೋ ಅವುಗಳಿಗಾಗಿ ಬಳಸಿಕೊಳ್ಳಬೇಕು. ಉದಾಹರಣೆಗೆ ; ಮನೆಗೆ ರೇಷನ ತರೋದು, ಗ್ಯಾಸ ತರೋದು, ಮನೆ ಬಾಡಿಗೆ, ಕರೆಂಟ ಬಿಲ್, ಮಕ್ಕಳ ಟ್ಯೂಷನ್ ಫೀಜ, ಪೇರೆಂಟ್ಸಗಳ ಟ್ಯಾಬ್ಲೆಟ್ಸ ಇತ್ಯಾದಿ‌. ಈ 40% ಹಣದಲ್ಲಿ ನಮ್ಮ ತಿಂಗಳ ಖರ್ಚುಗಳ ಜೊತೆಗೆ ಎಲ್ಲ ಅವಶ್ಯಕತೆಗಳನ್ನು ಸಹ ನಾವು ನೀಗಿಸಬೇಕು. 

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula

2) 30% ಹಣವನ್ನು ನಮ್ಮ Wantsಗಳಿಗಾಗಿ ಮತ್ತು ಎಮರ್ಜೆನ್ಸಿಗಾಗಿ ಸೇವಿಂಗ ಮಾಡಬೇಕು. ನಮ್ಮ Wantsಗಳೆಂದರೆ ಸ್ವಂತ ಮನೆ, ಕಾರು, ಜಮೀನು ಇತ್ಯಾದಿಗಳನ್ನು ಖರೀದಿಸುವುದಕ್ಕಾಗಿ 30% ಹಣವನ್ನು ಸೇವಿಂಗ ಮಾಡಬೇಕು. ಇವುಗಳನ್ನು ನೀವು ಲೋನ ಮೇಲೆ ಖರೀದಿಸಿದರೆ ಸುಳ್ಳು ಶ್ರೀಮಂತರಾಗುತ್ತೀರಿ. ಹತ್ತರಿಂದ ಹದಿನೈದು ವರ್ಷ ಬಡ್ಡಿ ಕಟ್ಟಿ ಬಡವರಾಗುತ್ತೀರಿ. ಅದಕ್ಕಾಗಿ ನೀವು ನಿಮ್ಮ Wantsಗಳಿಗಾಗಿ ಸರಿಯಾಗಿ ಸೇವಿಂಗ ಮಾಡಬೇಕು. ಜೊತೆಗೆ ಸಡನ್ ಹಾಸ್ಪಿಟಲ್ ಖರ್ಚು, ಮನೆಯವರಿಗೆ ಅಥವಾ ಪ್ರೀತಿಪಾತ್ರರಿಗೆ ಹೆಲ್ಪ ಮಾಡುವುದಕ್ಕಾಗಿ ಎಮರ್ಜೆನ್ಸಿ ಫಂಡಗಾಗಿ ನೀವು ಸೇವಿಂಗ ಮಾಡಬೇಕು. ಒಣ ಶೋಕಿಗಳನ್ನು ಮಾಡದೇ ಸ್ಯಾಲರಿ ಬಂದ ನಂತರ ಖರ್ಚುಗಳನ್ನೆಲ್ಲ ನೀಗಿಸಿ 30% ಹಣವನ್ನು ಸೇವಿಂಗ ಮಾಡಬೇಕು. 

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula

3) 20% ಹಣವನ್ನು ನೀವು ಇನ್ವೇಸ್ಟ ಮಾಡಬೇಕು. ನಿಮಗೆ ನಾಲೇಜ ಇದ್ದರೆ ನೀವು ನಿಮ್ಮ ಹಣವನ್ನು ಸ್ಟಾಕ್ ಮಾರ್ಕೆಟನಲ್ಲಿ ಹೂಡಿಕೆ ಮಾಡಿ. 

ಫ್ರೀ ಕೋರ್ಸ ಲಿಂಕ್ ಇಲ್ಲಿದೆ - https://www.youtube.com/c/RoaringCreationsKannada/featured

ಒಂದು ವೇಳೆ ನಿಮಗೆ ಸ್ಟಾಕ್ ಮಾರ್ಕೆಟನ ನಾಲೇಜ ಇರದಿದ್ದರೆ ನೀವು ನಿಮ್ಮ ಹಣವನ್ನು FD-RDಗಳಲ್ಲಿ, Mutual Fundsಗಳಲ್ಲಿ ಇನ್ವೆಸ್ಟ್ ಮಾಡಿ. ಇಲ್ಲ ಗೋಲ್ಡ್ ಖರೀದಿಸಿ ಬಿಡಿ. 

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula

4) ಇನ್ನೂ ಮಿಕ್ಕ 10% ಹಣವನ್ನು ನೀವು ಯಾವಾಗಲೂ ಕ್ಯಾಷನಲ್ಲಿಟ್ಟುಕೊಳ್ಳಬೇಕು. ಇದಕ್ಕಿಂತಲೂ ಜಾಸ್ತಿ ಹಣವನ್ನು ನಿಮ್ಮ ಬಳಿ ಇಟ್ಟುಕೊಳ್ಳಬಾರದು. ಇಟ್ಟುಕೊಂಡರೆ ನಿಮ್ಮ ಮನಸ್ಸು ಹತೋಟಿ ಮೀರಿ ಹೋಗುತ್ತದೆ, ನೀವು ಅನಾವಶ್ಯಕ ಖರ್ಚುಗಳನ್ನು ಮಾಡುತ್ತೀರಿ‌. ಮೊದಲು ನಿಮ್ಮ ಜೇಬಿಗೆ ತೂತು ಬೀಳುತ್ತದೆ, ಆನಂತರ ನಿಮ್ಮ ಲೈಫಿಗೆ ತೂತುಗಳು ಬೀಳುತ್ತವೆ‌. 10% ಕ್ಯಾಷನಿಂದ ನಿಮ್ಮ ಎಲ್ಲ ಡೇಲಿ ಅವಶ್ಯಕ ಖರ್ಚುಗಳನ್ನು ನೀಗಿಸಿ. ನಿಮ್ಮ ಖರ್ಚು 10% ದಾಟಿ ಹೋಗಬಾರದು‌. 

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula

                              ಗೆಳೆಯರೇ ನಿಮಗೆ ಎಷ್ಟೇ ಸ್ಯಾಲರಿ ಬಂದರೂ ನೀವು ಈ ಫಾರ್ಮುಲಾವನ್ನು ಬಳಸಿ ನಿಮ್ಮ ಹಣವನ್ನು ಸರಿಯಾಗಿ ಮ್ಯಾನೇಜ ಮಾಡಿದರೆ ನೀವು ಕೂಡ ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಲೈಫಲ್ಲಿ ಚೆನ್ನಾಗಿ ಸೆಟ್ಲಾಗುತ್ತೀರಾ ಮತ್ತೆ ಫೈನಾನ್ಸಿಯಲ್ ಫ್ರೀಡಂನ್ನು ಸಾಧಿಸುತ್ತೀರಾ‌‌. ಅದಕ್ಕೆ ಈ ಫಾರ್ಮುಲಾವನ್ನು ಅರ್ಥಮಾಡಿಕೊಳ್ಳಿ ಮತ್ತೆ ಫಾಲೋ ಮಾಡಿ. ಈ ಅಂಕಣಕ್ಕೆ ಲೈಕ್ ಮಾಡಿ ಮತ್ತೆ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...

ಹಣವನ್ನು ಗಳಿಸಿ ಉಳಿಸಿ ಬೆಳೆಸಿ - Earn, Save & Grow Money -  Best Money Management Formula
Blogger ನಿಂದ ಸಾಮರ್ಥ್ಯಹೊಂದಿದೆ.