ಹಾಯ್ ಗೆಳೆಯರೇ, ಯಾರಾದರೂ ನಿಮಗೆ "ನಾನು ನಿನ್ನ ತುಂಬಾ ಪ್ರೀತಿಸ್ತಿನಿ, I Love You so much, ನಿನ್ನ ಹಂಗ ಲವ್ ಮಾಡ್ತಿನಿ, ಹಿಂಗ ಲವ್ ಮಾಡ್ತಿನಿ..." ಅಂತೆಲ್ಲ ಪದೇಪದೇ ಹೇಳ್ತಿದ್ರೆ ಅವರನ್ನು ನಂಬಬೇಡಿ. ಏಕೆಂದರೆ ನಿಜವಾಗಿ ಲವ್ ಮಾಡುವವರು ಲವ್ ಮಾಡ್ತಿನಿ ಅಂತೆಲ್ಲ ಬಾಯ್ ಬಡಿದುಕೊಳ್ಳಲ್ಲ. ಮಾತಲ್ಲಿ ಮನೆ ಕಟ್ಟಲ್ಲ. ನಿಜವಾದ ಪ್ರೇಮಿಗಳು ಪ್ರೀತಿಸ್ತಿನಿ ಅಂತಾ ಬಾಯಲ್ಲಿ ಹೇಳಲ್ಲ, ಅದನ್ನು ಅವರು ಮಾತಾಡದೇನೆ ಪ್ರೂವ ಮಾಡಿ ತೋರಿಸುತ್ತಾರೆ.
ದೊಡ್ಡ ಮಾತಾಡುವವರು ಒಂಥರಾ ರಾಜಕಾರಣಿಗಳಿದ್ದಂತೆ, ದೇಶವನ್ನು ಹಂಗ ಮಾಡ್ತಿನಿ ಹಿಂಗ ಮಾಡ್ತಿನಿ ಅಂತಾ ಭಾಷಣ ಬಿಗಿದು ಕೊನೆಗೆ ಎಲ್ಲವನ್ನೂ ಮರೆತು ಗಜನಿ ಆಗ್ತಾರೆ. "ನಾನು ನಿನ್ನ ಪ್ರೀತಿಸ್ತಿನಿ, ನೀನಿಲ್ಲದೇ ಬದುಕಲ್ಲ, ನಿನ್ನನ್ನು ನಾನು ಮುಖ ನೋಡಿ ಪ್ರೀತಿಸ್ತಿಲ್ಲ, ಮನಸ್ಸು ನೋಡಿ ಪ್ರೀತಿಸ್ತಿರುವೆ, Etc Etc..." ಯಾರು ಇಂಥ ಮಾತುಗಳನ್ನು ಪದೇಪದೇ ಆಣೆ ಪ್ರಮಾಣ ಮಾಡಿ ಹೇಳ್ತಾ ಇರ್ತಾರೋ ಅವರೇ ಹೆಚ್ಚು ಮೋಸ ಮಾಡ್ತಾರೆ. ಇದು ಹುಡುಗರಿಗೆ ಹುಡುಗಿಯರಿಗೆ ಇಬ್ಬರಿಗೂ ಅಪ್ಲಾಯ ಆಗುತ್ತದೆ.
ಜೇಬ ಗಟ್ಟಿಯಾಗಿರುವ ತನಕ ಹುಡುಗಿಯರು "ನನ್ ಜೀವನ ಇರೋ ತನಕ ನೀನೇ ನನಗೆಲ್ಲ" ಅಂತಾರೆ. ಜೇಬು ಖಾಲಿಯಾದಾಗ "ನಾನು ನಿನ್ನ ಆ ರೀತಿ ನೋಡಿಲ್ಲ, ನಾವಿಬ್ಬರು ಜಸ್ಟ ಫ್ರೆಂಡ್ಸ್" ಅಂತೇಳಿ ಮತ್ತೊಬ್ಬನ ಹಿಂದೆ ಓಡುತ್ತಾರೆ. ಹುಡುಗರು "ನಾನು ನಿನ್ನೇ ಮದುವೆಯಾಗ್ತಿನಿ, ನಿನ್ನ ಬಿಟ್ಟು ಬೇರೆಯವಳನ್ನ ನೋಡಲ್ಲ" ಅಂತೇಳಿ ಸಾಕಾಗುವ ತನಕ ಸೆ** ಮಾಡಿ ನಂತರ ನಮ್ಮನೇಲಿ ಒಪ್ಪಲ್ಲ ಅಂತೇಳಿ ಮಾಯವಾಗುತ್ತಾರೆ. ಸೋ ಫ್ರೆಂಡ್ಸ್ ಪ್ರೀತಿ ಮಾತುಗಳನ್ನು ನಂಬಬೇಡಿ. ಯಾರು ಮಾತಾಡದೇ ಪ್ರೀತಿಯನ್ನು ಪ್ರೂವ ಮಾಡ್ತಾರೋ ಅವರನ್ನು ನಂಬಿ, ಬಾಯಲ್ಲಿ ಬಡಬಡಿಸುವವರನ್ನು ನಂಬಿ ಮೋಸ ಹೋಗಬೇಡಿ. ಏಕೆಂದರೆ ರಾತ್ರಿ ಬೆಡರೂಮಲ್ಲಿ ಕೊಟ್ಟ ಮಾತುಗಳಿಗೆ ಬೆಳಕಲ್ಲಿ ಬೆಲೆ ಇರಲ್ಲ. ಮ್ಯಾಟರ್ ಅರ್ಥವಾಗಿದ್ದರೆ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಇದನ್ನು ಶೇರ್ ಮಾಡಿ. ಧನ್ಯವಾದಗಳು...