ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                                    ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                                  ಹಾಯ್ ಗೆಳೆಯರೇ, ಇವತ್ತಿನ ಈ ಅಂಕಣ‌ ಎಲ್ಲರಿಗೂ ಅಪ್ಲಾಯ ಆಗಲ್ಲ. ಯಾರು ಸ್ನೇಹದ ಹೆಸರಲ್ಲಿ ನಾಟಕವಾಡಿ ತಮ್ಮ ಸ್ವಾರ್ಥ ಸಾಧಿಸಿಕೊಂಡು ಮಾಯವಾಗುತ್ತಾರೋ ಅವರಿಗಷ್ಟೇ ಅಪ್ಲಾಯ ಆಗುತ್ತದೆ. ಫ್ರೆಂಡ್ಸ್ ಈ ಜಗತ್ತಿನಲ್ಲಿ ಎಲ್ಲರಿಗೂ ಎರಡೆರಡು ಮುಖಗಳಿವೆ. ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನಾವು ಮೋಸ ಹೋಗಿರುತ್ತೇವೆ. ಈಗ ಈ ಸ್ನೇಹ ಪ್ರೀತಿಗಳು ಬರೀ ಸಂಬಂಧಗಳಾಗಿ ಉಳಿದಿಲ್ಲ. ಇವೆಲ್ಲವೂ ಅನುಕೂಲಕ್ಕೆ ತಕ್ಕಂತೆ ‌ಮಾಡುವ ಪಾರ್ಟಟೈಮ ಜಾಬಗಳಾಗಿವೆ. ಪ್ರೀತಿ ಒಂದ್ಸಲ ಮೋಸ ಮಾಡಿದರೆ ಸ್ನೇಹ ಪದೇಪದೇ ಮೋಸ ಮಾಡುತ್ತದೆ. 

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                                         ಈಗ ಎಲ್ಲರೂ ಬೆನಫಿಟ್ಸ ನೋಡಿ ದೋಸ್ತಿ ಮಾಡುತ್ತಿದ್ದಾರೆ. ನಿಮ್ಮಿಂದ ಏನಾದರೂ ‌ಲಾಭವಾಗುತ್ತಿದ್ದರೆ ಮಾತ್ರ ಜನ ನಿಮ್ಮೊಂದಿಗೆ ದೋಸ್ತಿ ಮಾಡುತ್ತಾರೆ. ನಿಮ್ಮಿಂದ ಏನ ಸಿಗುತ್ತೋ ಅದನ್ನೆಲ್ಲವನ್ನು ದೋಚಿಕೊಂಡು ದೂರಾಗುತ್ತಾರೆ. ನಿಮ್ಮಿಂದ ಸ್ನೇಹ ಪ್ರೀತಿ ಸಹಾಯ ಸಂಪತ್ತು ಸಹಾಯ ಸೆಕ್ಸ ಹಣ ಏನೇನ ಸಿಗುತ್ತೋ ಅದನ್ನೆಲ್ಲವನ್ನು ಬಾಚಿಕೊಂಡು ನಿಮ್ಮನ್ನು ಬೋಳಿಸಿ ನಿಮ್ಮಿಂದ ದೂರ ಹೋಗುತ್ತಾರೆ. ಎರಡು ರೂಪಾಯಿಯ ಯುಜ & ಥ್ರೋ ಪೆನ್ ತರಹ ಜನ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಬೆನಫಿಟ ಇಲ್ಲದೇ ಈಗ ಯಾರು ದೋಸ್ತಿ ಮಾಡಲ್ಲ. ಲಾಭವಿದ್ದರೆ ಮಾತ್ರ ದೋಸ್ತಿ ಮಾಡುತ್ತಾರೆ. ಇಂಥ ನಕಲಿ ಫ್ರೆಂಡ್ಸಗಳಿಂದ, ಹೊಲಸು ಜನರಿಂದ ದೂರವಿರಿ. ಏಕೆಂದರೆ ಇಂಥವರು ನಮ್ಮಿಂದ ಲಾಭ ಪಡೆದುಕೊಂಡು ನಮಗೆ ನಷ್ಟ ಮಾಡಿ‌ ಹೋಗುವುದಲ್ಲದೆ ಸಮಾಜದಲ್ಲಿ ನಮ್ಮ ಹೆಸರನ್ನು ಬದನಾಮ ಮಾಡಿ ಹೋಗುತ್ತಾರೆ. ಇಂಥವರಿಂದ ದೂರವಿರಿ. ಇಂಥವರಿಂದ ಅಲರ್ಟಾಗಿರಿ. 

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                       ನಾನು ಡಿಗ್ರಿ ಮುಗಿಸಿದ ನಂತರ ಬಿಜಿನೆಸ್ ನೆಪದಲ್ಲಿ ನನ್ನ ಕೆಲ ಗೆಳೆಯರು ನನ್ನನ್ನು ವಂಚಿಸಿದಾಗ ನಾನು ನನ್ನ ಸಿಮಕಾರ್ಡನ್ನು‌ ಮುರಿದಾಕಿ ಹೊಸ ಸಿಮ ತಗೊಂಡು ಎಲ್ಲರಿಂದ ದೂರ ಹೋದೆ. ನಾನು ಬಿಜನೆಸ್ಸಲ್ಲಿ ಬಿಜಿಯಾದೆ. ಎರಡು ವರ್ಷ ಯಾರಿಗೂ ನಾನು ಎಲ್ಲಿರುವೆ? ಏನು ಮಾಡುತ್ತಿರುವೆ? ಬದುಕಿದಿನಾ ಅಥವಾ ಇಲ್ವಾ? ಎಂಬುದು ಗೊತ್ತಿರಲಿಲ್ಲ. ಸಡನ್ನಾಗಿ ನಾನೊಂದು ಮುಖ್ಯ ಡಾಕ್ಯುಮೆಂಟಗಾಗಿ ನಮ್ಮ ಕಾಲೇಜಿದೆ‌ ಹೋದೆ. ಬಟ್ ನನ್ನ ದುರಾದೃಷ್ಟಕ್ಕೆ ಅವತ್ತು ನಮ್ಮ ಎಲ್ಲ ಕ್ಲಾಸಮೇಟ್ಸಗಳು ಕಾಲೇಜಲ್ಲೆ ಮೀಟಪ ಪಾರ್ಟಿ ಮಾಡ್ತಿದ್ರು. ನನ್ನನ್ನು ಕೂಡ ಜಾಯಿನಾಗಲು ಬಲವಂತ ಮಾಡಿದರು. ನಾನು ಮನಸ್ಸಿಲ್ಲದಿದ್ದರೂ ಹೋದೆ. ಕೆಲವರು ಗವರ್ನಮೆಂಟ್ ಜಾಬ ಸೇರಿದರೆ ಕೆಲವರು ಪ್ರೈವೆಟ್ ಜಾಬ ಸೇರಿದ್ದರು. ಕೆಲವರು ತಮ್ಮ‌ ತಂದೆಯ ಬಿಜನೆಸ್ಸಲ್ಲಿ ಸೇರಿಕೊಂಡಿದ್ದರು. ಮಿಕ್ಕವರು ಟೀಚರ್ ಲೆಕ್ಚರರ ಆಗಿದ್ದರು. ನಾನು ನನ್ನ ಸ್ವಂತ ಕಂಪನಿ ಒಪನ ಮಾಡಿದ್ದೆ. ನನ್ನ ಸ್ಟ್ರಗಲ ದಿನಗಳಲ್ಲಿ ನಾನಿದ್ದೆ. ಎಲ್ಲರೂ ದೊಡ್ಡ ಸಾಧನೆ ಮಾಡಿದ್ದೇವೆ ಎಂಬ ಜೋಷನಲ್ಲಿದ್ದರು. ಎಲ್ಲರೂ ತಮ್ಮತಮ್ಮಲ್ಲೇ ಫೋನ ನಂಬರಗಳನ್ನು ಬೇಡಿ ಎಕ್ಸ್ಚೇಂಜ್ ಮಾಡಿಕೊಂಡರು. ಹುಡುಗರು ಹುಡುಗಿಯರು ಮೊಬೈಲ್ ನಂಬರ ಎಕ್ಸ್ಚೇಂಜ್ ಮಾಡಿಕೊಂಡರು. ಆದರೆ ಒಬ್ಬರೂ ಕೂಡ ನನ್ನನ್ನು  ಸರಿಯಾಗಿ ಮಾತಾಡಿಸಲಿಲ್ಲ. ಮೊದಲಿನಿಂದಲೂ ಅವರು ನನ್ನ ದುಶ್ಮನ ತರಾನೇ ನೋಡ್ತಿದ್ರು. ಯಾರು ನನ್ನ ಮೊಬೈಲ್ ನಂಬರನ್ನು ಕೇಳಲಿಲ್ಲ. ಏಕೆಂದರೆ ಅವರಿಗೆ ನನ್ನಿಂದ ಯಾವುದೇ ಬೆನಫಿಟ ಇರಲಿಲ್ಲ. ಏಕೆಂದರೆ ನಾನು ಮಹಾರಾಷ್ಟ್ರದವನು, ಮುಂಬೈಯಲ್ಲಿರುವೆ. ಸೋ ಅವರಿಗೆ ನನ್ನಿಂದ ಯಾವುದೇ ಲಾಭವಿರಲಿಲ್ಲ. ಅದಕ್ಕೆ ಅವರು ನನ್ನ ಇಗ್ನೋರ ಮಾಡಿದರು. 

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                         ನಾನು ಜಾಬ ಮಾಡುವವರ ಮೈಂಡಸೆಟ ಅಷ್ಟೇ ಇರುತ್ತದೆ ಅಂತೇಳಿ ಸುಮ್ಮನೆ ನನ್ನ ಕೆಲಸ ಮುಗಿಸಿಕೊಂಡು ನಮ್ಮ ಮುಂಬೈಗೆ ಮರಳಿ ಕೆಲಸದಲ್ಲಿ ಬಿಜಿಯಾದೆ. ನಾನು ಫೇಸ್‌ಬುಕ್‌ ಇನಸ್ಟಾಗ್ರಾಮ ಯುಟ್ಯೂಬ ಯಾವುದನ್ನು ಕೂಡ ಪರ್ಸನಲ್ಲಾಗಿ ಯುಜ ಮಾಡಲ್ಲ. ಆದರೆ ಲಾಕಡೌನನಲ್ಲಿ ಸ್ವಲ್ಪ ಯುಜ ಮಾಡಿದೆ. ಆಗ ಮೆಸೆಜ ಓದ್ತಾಯಿದ್ದೆ. ಅದರಲ್ಲಿ ನಮ್ಮ ಕ್ಲಾಸಮೇಟ್ಸಗಳು ಮೆಸೆಜ ಹಾಕಿದ್ದರು. ತುಂಬಾ ಮುಂದೆ ಹೋಗಿರುವೆ. ಪಾರ್ಟಿ ಕೊಡು, ಸ್ವಲ್ಪ ಹಣ ಕೊಡು, ನಿನ ಕಾರ ತಗೊಂಡು ಬಾ ಗೋವಾ ಟೂರ ಹೋಗೋಣಾ, ನಮ್ಮ ಕ್ಲಾಸ ಹುಡ್ಗಿರು ನಿನ ನಂಬರ ಕೇಳ್ತಿದಾರೆ ನಿನ ಪರ್ಸನಲ್ ನಂಬರ ಕೊಡು ಅಂತೆಲ್ಲ ಮೆಸೆಜ ಹಾಕಿದ್ದರು. ಅವುಗಳನ್ನು ಓದಿ ನನಗೇನೆ ಅಚ್ಚರಿಯಾಯಿತು. ಅವತ್ತು ಇಗ್ನೋರ ಮಾಡಿದವರು ಇವತ್ತು ನಂಬರ ಕೇಳ್ತಿದಾರಲ್ಲ ಅಂತಾ. ಬರೀ ಹುಡುಗರಲ್ಲ ಹುಡುಗಿಯರು ಬಹಳಷ್ಟು ಜನ ನಂಬರ ಕೇಳಿದ್ದರು. ಇದನ್ನು ನೋಡಿ ನನಗೆ ಜನ ಕಷ್ಟದಲ್ಲಿದ್ದಾಗ ಇದಿಯಾ ಏನಾದರೂ ಬೇಕಾ ಅಂತಾ ಕೇಳಲ್ಲ. ಆದರೆ ನಾವು ಸ್ವಲ್ಪ ಮೇಲೆ ಹೊಂಟರೆ ಸಾಕು ಹಾಳು ಮಾಡೋಕೆ ಬಂದು ಬಿಡ್ತಾರೆ ಅಂತಾ ನನಗೆ ಖಾತ್ರಿಯಾಯಿತು. ಅವತ್ತು ನನ್ನ ಮೊಬೈಲ ನಂಬರಿಗೆ ಬೆಲೆ ಇರಲಿಲ್ಲ. ಆದರೆ ‌ಇವತ್ತು ನನ್ನ ಮೊಬೈಲ ನಂಬರಿಗೆ ದೊಡ್ಡ ಬೆಲೆ ಇದೆ. ಸಾವಿರಾರು ಜನ ನನ್ನೊಂದಿಗೆ ಮಾತಾಡಲು ಕಾಯ್ತಿದಾರೆ. ಅವರಿಗೆ ನಾನು ಟೈಮ ಕೊಡುವೆ. ಆದರೆ ಅನುಕೂಲಕ್ಕೆ ತಕ್ಕಂತೆ ಬೆಣ್ಣೆ ಹಚ್ಚುವ ಊಸರವಳ್ಳಿಗಳಿಗೆ ಟೈಮ ಕೊಟ್ರೆ ನಮ್ಮ ಟೈಮ ಜೊತೆಗೆ ಲೈಫ‌ ಕೂಡ ಬರ್ಬಾದ ಆಗುತ್ತದೆ. 

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

                            ಫ್ರೆಂಡ್ಸ್ ಅನುಕೂಲಕ್ಕೆ ತಕ್ಕಂತೆ ಪಾರ್ಟಟೈಮ ದೋಸ್ತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಇಂಥವರಿಂದ ಅಲರ್ಟಾಗಿರಿ.‌ ಒಂದು ವೇಳೆ ನೀವು ಇಂಥ ಹೊಲಸು ದೋಸ್ತಿ ‌ಮಾಡ್ತಿದ್ರೆ ಅದನ್ನು ಪ್ಲೀಜ ನಿಲ್ಲಿಸಿ. ಏಕೆಂದರೆ ನಿಮ್ಮನ್ನು ನಿಜವಾದ ಸ್ನೇಹಿತ ಅಂತಾ ನಂಬಿ ಮುಂದಿನಾತ ತನ್ನ ಟೈಮ ಎನರ್ಜಿ ಹಣದ ಜೊತೆಗೆ ಸೆಕ್ರೆಟ್ಸಗಳನ್ನು ಕೂಡ ಶೇರ್ ಮಾಡಿರುತ್ತಾನೆ. ಬಹಳಷ್ಟು ನಂಬಿಕೆ ಇಟ್ಟಿರುತ್ತಾನೆ‌. ನಂಬಿಕೆ ದ್ರೋಹ ಮಾಡಬೇಡಿ. ಊಟ ಮಾಡಿದ ತಟ್ಟೆಯನ್ನು ಒದೆಯಬೇಡಿ. ಎಲ್ಲರಿಗೂ ಒಂದು ಟೈಮ ಬರುತ್ತದೆ. ಆವಾಗ ನಿಮ್ಮ ಟೈಮ ಖರಾಬಾಗಿರುತ್ತದೆ. ಆವಾಗ ನೀವು ನಾಚಿಕೆ ಬಿಟ್ಟು ಹೆಲ್ಪ ಕೇಳಿದ್ರೂ ಹೆಲ್ಪ ಮಾಡಲು ನಮಗೆ ಮನಸ್ಸಾಗಲ್ಲ. ಏಕೆಂದರೆ ನೀವೇ ನಮ್ಮ‌ ಮನಸ್ಸಲ್ಲಿ ಮೋಸದ ಬೀಜ ಬಿತ್ತಿರುತ್ತಿರಾ. ಸೋ ಇಂಥ ಹೊಲಸು ದೋಸ್ತಿ ಮಾಡಬೇಡಿ. ಮಾಡೋದಿದ್ರೆ ನಿಜವಾದ ದೋಸ್ತಿ ಮಾಡಿ.‌‌ ಇಲ್ಲಂದ್ರೆ ಸೀದಾ ದುಶ್ಮನ ಆಗಿ. ನಂಬಿರುವವರನ್ನು ನಂಬಿಸಿ ಕತ್ತು ಕೋಯ್ಯಬೇಡಿ. ಮ್ಯಾಟರ್ ಅರ್ಥವಾಗಿದ್ದರೆ ಅಂಕಣಕ್ಕೆ ಲೈಕ ಮಾಡಿ ಶೇರ್ ಮಾಡಿ. ಸ್ವಾರಿ,  ಧನ್ಯವಾದಗಳು...

ಇಂಥ ಹೊಲಸು ದೋಸ್ತಿ ಮಾಡಬೇಡಿ - Don't Do Dirty Friendship

Blogger ನಿಂದ ಸಾಮರ್ಥ್ಯಹೊಂದಿದೆ.