ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

                      ಹಾಯ್ ಫ್ರೆಂಡ್ಸ್, ಇವತ್ತಿನ ಲೆಸನ‌ ಬರೀ‌ ಬಿಜನೆಸಮ್ಯಾನಗಳಿಗೋಸ್ಕರ‌ ಇದೆ. ಉಳಿದವರು ಇದನ್ನು ನೋಡದಿದ್ದರೂ ನಡೆಯುತ್ತೆ, ಒಂದು ವೇಳೆ ನೋಡಿದರೂ ಕೂಡ ತಪ್ಪೇನಿಲ್ಲ. ಫ್ರೆಂಡ್ಸ್ ಇವತ್ತಿನ ಲೆಸನನಲ್ಲಿ ನಾನು ಹೇಳುತ್ತಿರುವ ವಿಷಯವನ್ನು ನಾನು ಸ್ವತಃ ತಪ್ಪನ್ನು ಮಾಡಿ ಕಲಿತಿರುವೆ. ನೀವು ಆ ತಪ್ಪನ್ನು ಮಾಡಬಾರದು ಅಂತಾ ಅಡ್ವಾನ್ಸ್ಡ್ ಆಗಿ ಹೇಳುತ್ತಿರುವೆ. ಇಷ್ಟವಾದರೆ ಫಾಲೋ ಮಾಡಿ, ಕಷ್ಟವಾದರೆ ನೆಗ್ಲೆಕ್ಟ್ ಮಾಡಿ. ಗೆಳೆಯರೇ, ನೀವು ಯಾವುದೇ ಕಾರಣಕ್ಕೂ ನಿಮ್ಮ ಇನಕಮನ್ನು ಬೇರೆಯವರತ್ರ ರೀವಿಲ್ ಮಾಡಬೇಡಿ. ಅಂದರೆ ನಿಮ್ಮ ಆದಾಯ ಎಷ್ಟಿದೆ? ನಿಮಗೆ ಎಷ್ಟು ಹಣ ಬರುತ್ತೆ? ಎಲ್ಲಿಂದ ಬರುತ್ತೆ? ಹೇಗೆ ಬರುತ್ತೆ? ಯಾವಾಗ ಬರುತ್ತೆ? ಎಂಬುದನ್ನು ಯಾರಿಗೂ ಹೇಳಬೇಡಿ ಗುಟ್ಟಾಗಿಡಿ. ಯಾಕಂತಾ ಹೇಳುವೆ ಡೊಂಟ ವರಿ...! 

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

                      ನಾನು ಆರು ತಿಂಗಳ ಹಿಂದೆ "How to Earn 1 Crore Rupees in one Year" ಅಂತಾ ಒಂದು ಬಿಜನೆಸ್ ಲೆಸನ ಮಾಡಿದ್ದೆ. ಅದನ್ನ ‌ನೋಡಿ ಕೆಲವೊಂದಿಷ್ಟು ಹಂದಿಗಳು ನೆಗೆಟಿವ ಕಮೆಂಟ ಮಾಡಿದ್ದವು. ಆಗ ನಾನು ಕೋಪದಲ್ಲಿ ನನ್ನ ಬ್ಯಾಂಕ್ ಬ್ಯಾಲೆನ್ಸನ ಸ್ಕ್ರೀನ ಶಾಟ್ಸ ಅಪಲೋಡ ಮಾಡಿದೆ. ಇದನ್ನು ನೋಡಿ ಹಂದಿಗಳು ಮತ್ತಷ್ಟು ಉರಿದುಕೊಂಡು ಸೈಲೆಂಟಾದವು. ಆದರೆ ಆಗ ಸೈಲೆಂಟ್ ಹೇಟರ್ಸ ಹುಟ್ಟಿಕೊಂಡರು. ಅವತ್ತು ನನ್ನ ಯೂಟ್ಯೂಬ ಚಾನೆಲಗೆ ಸುಮಾರು 3000 ಜನ ಅನಸಬಸ್ಕ್ರೈಬ ಮಾಡಿದರು, ಫೇಸ್ಬುಕ್ ಪೇಜನ್ನು ಐದಾರು ಸಾವಿರ ಜನ ಅನಫಾಲೋ ಮಾಡಿದರು. ಜನ ಸಡನ್ನಾಗಿ ನನ್ನ ವಿಡಿಯೋ ನೋಡುವುದನ್ನ ನಿಲ್ಲಿಸಿದರು, ಆರ್ಟಿಕಲ ಓದುವುದನ್ನು ನಿಲ್ಲಿಸಿದರು. ಯಾಕೆ ಹೀಗೆ ಮಾಡ್ತಿದಾರೆ ಅಂತಾ ನನಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ನಮ್ಮಕ್ಕ ನನ್ನ ಪೋಸ್ಟ ನೋಡಿ ನನಗೆ ಸ್ವಲ್ಪ ಲೈಟಾಗಿ ಕ್ಲಾಸ್ ತೆಗೆದುಕೊಂಡಳು.

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

                    "ಹಂದಿಗಳು ಏನೋ ಕಮೆಂಟ ಮಾಡ್ತವೆ ಅಂತಾ ನಿನ್ಯಾಕೆ ಅಟೆನಷನ ಕೊಡ್ತಿಯಾ? ಇವತ್ತ ಇವರು ನೀನು ಕೋಟ್ಯಾಧಿಪತಿ ಅನ್ನೋದಕ್ಕೆ ಪ್ರೂಫ್ ಕೇಳ್ತಾರೆ ಅಂತಾ ಪ್ರೂಫ್ ಕೊಟ್ರೆ ನಾಳೆ ಎಲ್ಲದಕ್ಕೂ ಪ್ರೂಫ್ ಕೇಳ್ತಾರೆ. ನಿನ್ನನ್ನು ಲವ್ ಮಾಡೋರ ಮೇಲೆ ಮಾತ್ರ ಫೋಕಸ ಮಾಡು, ಹೇಟ ಮಾಡೋ ಹಂದಿಗಳನ್ನು ನೋಡದಿರು..." ಅಂತೆಲ್ಲ ಬುದ್ಧಿವಾದ ಹೇಳಿದಳು. ಆದರೆ ಅಷ್ಟರಲ್ಲಿ ಫಾಲೋವರ್ಸಗಳ ಹಾಗೂ ಸಬಸ್ಕೈಬರ್ಸಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಯ್ತು. ಬರೀ ಕನ್ನಡದಲ್ಲಿ ಅಷ್ಟೇ ಅಲ್ಲ ಹಿಂದಿ ಪೇಜ ಹಾಗೂ ಹಿಂದಿ ಯೂಟ್ಯೂಬ್ ಚಾನೆಲನಲ್ಲೂ ಫಾಲೋವರ್ಸಗಳ ಸಂಖ್ಯೆ ಸಡನ್ನಾಗಿ ಕಡಿಮೆಯಾಯ್ತು. ನಮ್ಮ ಟೀಮನವರು ಚೆಕ್ ಮಾಡಿದಾಗ ನಮಗೆ ಅಸಲಿ ಕಾರಣ ಗೊತ್ತಾಯಿತು. ಅದೇನಪ್ಪಾ ಅಂದರೆ "ನಾವು ಇವನ ವಿಡಿಯೋ ನೋಡುವುದರಿಂದ ಇವನು ಕೋಟ್ಯಾಧಿಪತಿ ಆಗಿದ್ದಾನೆ..." ಅಂತಾ ಅನಫಾಲೋ ಮಾಡಿದ್ದರು. ಬಟ್ ಅಸಲಿಗೆ ಅದು ನಮ್ಮ‌ ಕಂಪನಿಯಿಂದ ಬಂದ ಸ್ಯಾಲರಿಯಾಗಿತ್ತು. ಆದರೆ ಜನ ಅವರು ವಿಡಿಯೋ ನೋಡುವುದರಿಂದ ನನಗಷ್ಟು ಹಣ ಬರುತ್ತದೆ ಅಂತಾ ಮಿಸ್ಟೇಕ್ ಮಾಡಿಕೊಂಡು ನನ್ನ ಅನಫಾಲೋ ಮಾಡಿದರು. ಮತ್ತಷ್ಟು ಜನ ಜಲಸಿಯಿಂದ ನೆಗೆಟಿವ ಕಮೆಂಟ ಮಾಡಿದರು. ಇನ್ನಷ್ಟು ಜನ ನನಗೆ ಹಣದ ಅವಶ್ಯಕತೆ ಇದೆ ಸಾಲ ಕೊಡಿ ಅಂತಾ ಕೇಳಲು ಶುರು ಮಾಡಿದರು. ಕೆಲವರು ನಮಗೆ ಹಣ ಡೊನೆಟ ಮಾಡಿ ಅಂತಾ ಪೀಡಿಸಿದರು. ಕೆಲವರು ಸರ್ ನಮ್ಮ ಪಾಲಿಸಿ ತಗೊಳ್ಳಿ ಅಂತಾ ಬೆನ್ನು ಬಿದ್ದರು. ನನ್ನ ಕ್ಲಾಸಮೇಟ್ಸಗಳೆಲ್ಲ ಕಾಲ ಮಾಡಿ "ಭಾಯ್ ಆಜ ಪಾರ್ಟಿ ಚಾಹಿಯೇ ತೋ ಚಾಹಿಯೇ" ಅಂತೇಳಿ ಪಾರ್ಟಿ ಫಿಕ್ಸ ಮಾಡಿದರು. ಇನ್ನೂ ಏನೇನೋ ಯಡವಟ್ಟುಗಳಾದವು. 

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

                              ನೋಡಿದ್ರಲ್ಲ ಗೆಳೆಯರೇ, ನಮ್ಮ ಇನಕಮನ್ನು ಗುಟ್ಟಾಗಿಡದಿದ್ದರೆ ಏನೆನೆಲ್ಲ ತೊಂದರೆಗಳಾಗುತ್ತವೆ ಅಂತಾ. ‌ನಾನು ತಪ್ಪನ್ನು ಮಾಡಿ ನಷ್ಟ ಅನುಭವಿಸಿರುವೆ. ಅದಕ್ಕೆ ನಿಮಗೆ ಹೇಳುತ್ತಿರುವೆ. ನಿಮ್ಮ ಇನಕಮನ್ನು ಗುಟ್ಟಾಗಿಡಿ. ಇಲ್ಲವಾದರೆ ಜನ ನಿಮ್ಮ ಮೇಲೆ ಹೊಟ್ಟೆ ಉರಿದುಕೊಳ್ಳುತ್ತಾರೆ, ನಿಮ್ಮನ್ನು ಹಾಳು ಮಾಡಲು ಟ್ರಾಯ ಮಾಡುತ್ತಾರೆ, ನಿಮ್ಮ ಬಗ್ಗೆ ಗಾಸಿಪಗಳನ್ನು ಹಬ್ಬಿಸುತ್ತಾರೆ, ನಿಮಗೆ ಹಣವನ್ನು ಕೊಡುವಂತೆ ಕಾಡುತ್ತಾರೆ, ಹಣ ಡೊನೆಟ ಮಾಡಿ ಅಂತಾ ಪೀಡಿಸುತ್ತಾರೆ, ಸ್ನೇಹಿತರು ಪಾರ್ಟಿ ಅಂತಾ ದೋಚುತ್ತಾರೆ, ಹುಡುಗಿಯರು ಪ್ರೀತಿ ಅಂತಾ ದೋಚುತ್ತಾರೆ, ಒಟ್ನಲ್ಲಿ ನಿಮ್ಮನ್ನ ಹಾಗೂ ನಿಮ್ಮ ಹಣವನ್ನ ಹಾಳು ಮಾಡಲು ಎಲ್ಲ ತಯಾರಿ ಮಾಡ್ತಾರೆ. ನಿಮ್ಮ ಮೇಲೆ ಕೆಟ್ಟ ಕಣ್ಣುಗಳು ಬೀಳುತ್ತವೆ. ಕೆಟ್ಟ ದೃಷ್ಟಿಯಾಗುತ್ತದೆ. ಅದಕ್ಕಾಗಿ ನಿಮ್ಮ ಇನಕಮನ್ನು ಗುಟ್ಟಾಗಿಡಿ. ಜಾಸ್ತಿ ಹೇಳಿದರೆ ಜನ ಸಾಲ ಕೇಳಿ ಸಾಯಿಸ್ತಾರೆ, ಕಮ್ಮಿ ಹೇಳಿದರೆ ಕೀಳಾಕಿ ನೋಡಿ ಕಿಂಡಲ್ ಮಾಡ್ತಾರೆ. ಅದಕ್ಕೆ ನಿಮ್ಮ ಇನಕಮ ಎಷ್ಟಿದೆ ಅಂತಾ ಯಾರಿಗೂ ನಿಜ ಹೇಳಬೇಡಿ. ಯಾರಾದರೂ ಫೋರ್ಸ ಮಾಡಿ ಕೇಳಿದರೆ ಸ್ಮೈಲ್ ಮಾಡಿ ಸೈಲೆಂಟಾಗಿ ಬಿಡಿ. ನನಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ. ನೀವು ಕೆಡೊದಕ್ಕಿಂತ ಮುಂಚೆ ಅಲರ್ಟಾದರೆ ನನ್ನ ಶ್ರಮ ಸಾರ್ಥಕ‌. ಈ ಅಂಕಣ ಯುಜಫುಲ್ ಅಂತನಿಸಿದರೆ ಲೈಕ ಶೇರ್ ಕಮೆಂಟ ಮಾಡಿ, ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ.‌ ಧನ್ಯವಾದಗಳು...

ನಿಮ್ಮ ಇನಕಮನ್ನು ಗುಟ್ಟಾಗಿಡಿ - Don't Reveal your Income - Money Management Tips in Kannada

Blogger ನಿಂದ ಸಾಮರ್ಥ್ಯಹೊಂದಿದೆ.