ಹಾಯ್ ಫ್ರೆಂಡ್ಸ್, ಇವತ್ತಿನ ಅಂಕಣದಲ್ಲಿ ನಾನು ನಿಮ್ಮೊಂದಿಗೆ ಒಂದು ಲೈಫ ಲೆಸನನ್ನು ಶೇರ್ ಮಾಡುತ್ತಿರುವೆ. ಇದನ್ನು ನಾನು ರಿಸೆಂಟಾಗಿ ಕಲಿತಿರುವೆ. ಇನ್ಮುಂದೆ ಇದನ್ನು ಸ್ಟ್ರಿಕ್ಟ್ ಆಗಿ ಪಾಲಿಸಲು ನಿರ್ಧರಿಸಿರುವೆ. ಆ ಲೈಫ ಲೆಸನ ಏನಪ್ಪಾ ಅಂದರೆ "ಜನರಿಗೆ ನಿಜ ಹೇಳಬೇಡಿ". ಹೌದು ಫ್ರೆಂಡ್ಸ್ " ಜನರಿಗೆ ನಿಜ ಹೇಳಬೇಡಿ". ಏಕೆಂದರೆ ಜನರಿಗೆ ನಿಜ ಇಷ್ಟವಾಗಲ್ಲ. ಜನರಿಗೆ ಮಸಾಲೆಭರಿತ ಕಲರಫುಲ್ ಸುಳ್ಳುಗಳು ಮಾತ್ರ ಇಷ್ಟವಾಗುತ್ತವೆ. ಹೇಗೆ ಜನ ಫಾಸ್ಟ ಫುಡನ್ನು ಇಷ್ಟಪಡುತ್ತಾರೋ ಅದೇ ರೀತಿ ಸುಳ್ಳುಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಮಸಾಲೆಭರಿತ ಸುಳ್ಳುಗಳೆಂದರೆ ಜನರಿಗೆ ತುಂಬಾನೆ ಇಷ್ಟ.
ನಾನು ಮುಂಚೆ ಬಹಳಷ್ಟು ಸ್ಟ್ರೇಟ್ ಫಾರವರ್ಡಾಗಿದ್ದೆ. ಮನಸ್ಸಲ್ಲಿರೋದನ್ನ ಡೈರೆಕ್ಟಾಗಿ ಮುಖದ ಮೇಲೆ ಹೇಳಿ ಬಿಡುತ್ತಿದ್ದೆ. ಹೀಗಾಗಿ ಬಹಳಷ್ಟು ಜನ ನನ್ನಿಂದ ದೂರ ಓಡುತ್ತಿದ್ದರು. ಕೆಲ ಫ್ರೆಂಡ್ಸಗಳು ನನ್ನ ಹೇಟ ಮಾಡುತ್ತಿದ್ದರು. ಆದರೂ ಕೂಡ ನಾನು ಇರೋದನ್ನ ನಿಜ ಹೇಳುತ್ತಿದ್ದೆ. ಆದರೆ ಕೇಳುವವರೇ ಇಲ್ಲದಿರುವಾಗ ಯಾರಿಗೆ ನಿಜ ಹೇಳೊದು? ಜನರಿಗೆ ಸತ್ಯ ಇಷ್ಟವಾಗಲ್ಲ. ಏಕೆಂದರೆ ಸತ್ಯ ಯಾವಾಗಲೂ ಕಹಿಯಾಗಿರುತ್ತದೆ, ಸತ್ಯ ಯಾವಾಗಲೂ ಬಿಸಿ ತುಪ್ಪದಂತಿರುತ್ತದೆ, ಸತ್ಯವನ್ನು ಒಪ್ಪಿಕೊಳ್ಳಲು ಗಂಡೆದೆ ಬೇಕಾಗುತ್ತದೆ. ಅದು ಬಹಳಷ್ಟು ಜನರತ್ರ ಇಲ್ಲ. ಅದಕ್ಕೆ ಜನರಿಗೆ ನಿಜ ಇಷ್ಟವಾಗಲ್ಲ. ಅದಕ್ಕೆ ನೀವು ಜನರಿಗೆ ನಿಜ ಹೇಳಬೇಡಿ. ಒಂದು ವೇಳೆ ಹೇಳಿದರೆ ಜನ ನಿಮ್ಮನ್ನು ಹೇಟ್ ಮಾಡುತ್ತಾರೆ, ನಿಮ್ಮನ್ನೇ ವಿಲನ್ ಮಾಡುತ್ತಾರೆ, ನೀವು ಅವರ ಹಿತಕ್ಕಾಗಿ ಸತ್ಯ ಹೇಳಿದರೂ ಸಹ ಅವರು ನಿಮಗೇನೆ ಹರ್ಟ ಮಾಡುತ್ತಾರೆ. ನಿಮಗೆ ಇರಿಟೇಟ ಮಾಡುತ್ತಾರೆ. ಜನರಿಗೆ ರಿಯಾಲಿಟಿಯನ್ನು ಅರಗಿಸಿಕೊಳ್ಳುವಷ್ಟು ಧೈರ್ಯವಿಲ್ಲ, ಕನ್ನಡಿಯಲ್ಲಿ ತಮ್ಮ ನಿಜವಾದ ಮುಖಗಳನ್ನು ನೋಡುವಷ್ಟು ಗಂಡೆದೆಯಿಲ್ಲ. ಅದಕ್ಕೆ ಅವರು ಸತ್ಯವನ್ನು ಹೇಳಿದರೆ ಬುಡಕ್ಕೆ ಬೆಂಕಿಬಿದ್ದು ಸುಟ್ಟಂಗಾಡುತ್ತಾರೆ. ಅದಕ್ಕೆ ಜನರಿಗೆ ನಿಜ ಹೇಳಬೇಡಿ. ನಿಮಗೆ ಉದಾಹರಣೆ ಸಹಿತ ಎಕ್ಸಪ್ಲೇನ ಮಾಡುವೆ. ಆವಾಗ ನನ್ನ ಇಂಟೆನಷನ ನಿಮಗೆ ಅರ್ಥವಾಗಬಹುದು.
1) ನಾನು ಒಂದು ವಿಡಿಯೋದಲ್ಲಿ ನೆಟವರ್ಕ್ ಮಾರ್ಕೆಟಿಂಗನಲ್ಲಿ ಸಕ್ಸೆಸಫುಲ್ಲಾಗಬೇಕೆಂದರೆ ನಿಮಗೆ ಸೇಲ್ಸ್ & ಮಾರ್ಕೆಟಿಂಗ್ ಸ್ಕೀಲ್ಸ ಇರಬೇಕು, ಸೇಲ್ಸ್ ಸ್ಕೀಲ್ಸ ಕಲಿಯಲು ರೆಡಿಯಾಗಿದ್ದರೆ ಮಾತ್ರ ಅದಕ್ಕೆ ಜಾಯಿನಾಗಿ. ಇರದಿದ್ದರೆ ಅದಕ್ಕೆ ಜಾಯಿನಾಗಬೇಡಿ, ಕೆಲಸ ಮಾಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣಬೇಡಿ ಅಂತಾ ನಿಜ ಹೇಳಿದ್ದೆ. ಆದರೆ ಜನರಿಗೆ ಇದು ಇಷ್ಟವಾಗಲಿಲ್ಲ, ಅವರೆಲ್ಲ ಆ ವಿಡಿಯೋಗೆ ನೆಗೆಟಿವ ಕಮೆಂಟ ಮಾಡಿದರು.
2) ನಾನು ಒಂದು ಆನಲೈನ ವಿಡಿಯೋ ಸೆಮಿನಾರನಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಿಂದ ನೀವು ಅಂಬಾನಿಯಾಗುವುದಿಲ್ಲ. ಮುಂದೆ ಪ್ರಿಯಂಕಾ ಗಾಂಧಿ ಪ್ರಧಾನಿಯಾದರೂ ನೀವು ಅಂಬಾನಿಯಾಗಲ್ಲ. ಏಕೆಂದರೆ ರಾಜಕಾರಣಿಗಳೆಲ್ಲ ಅವರಿಗಾಗಿ ಅವರ ಹೆಂಡತಿ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ, ಮರಿಮಕ್ಕಳಿಗಾಗಿ ಕೋಟ್ಯಾಂತರ ಆಸ್ತಿ ಮಾಡಲು ಕೆಲಸ ಮಾಡುತ್ತಿದ್ದಾರೆ ನಿಮಗಾಗಿ ಅಲ್ಲ. ನೀವು ನಿಮಗಾಗಿ ನಿಮ್ಮ ಹೆಂಡತಿ ಮಕ್ಕಳಿಗಾಗಿ ಕೆಲಸ ಮಾಡಿದರೆ ಮಾತ್ರ ನೀವು ಅಂಬಾನಿಯಾಗಬಹುದು ಅಂತಾ ಹೇಳಿದ್ದೆ. ಅದನ್ನು ನೋಡಿ ಬಿಜೆಪಿ ಹಾಗೂ ಕಾಂಗ್ರೆಸನ ಅಂಧಭಕ್ತರು ನನಗೆ ಬೈಯ್ಯೊದಲ್ಲದೆ ನಮ್ಮ ಶಿವಾಜಿ ಮಹಾರಾಜರಿಗೆ ಬೈದರು. ಶಿವಾಜಿ ಮಹಾರಾಜರ ಫ್ಯಾನ್ಸಗಳೆಲ್ಲ ಇವರಿಗೆ ಬೈಯ್ಯಲು ಸ್ಟಾರ್ಟ ಮಾಡಿದರು. ಕಮೆಂಟ ಸೆಕ್ಷನನಲ್ಲಿ ಕೋಮುವಾದ ಶುರುವಾಯಿತು. ನಾನು ಸೆಮಿನಾರ ಕ್ಲೋಜ ಮಾಡಿದೆ. ಆದರೆ ಈಗಲೂ ಈ ಮೂರ್ಖ ಜನ ನನ್ನನ್ನು ಬೈಯ್ಯುತ್ತಾ ಟೈಮವೇಸ್ಟ ಮಾಡುತ್ತಾ ಯಾರನ್ನೋ ಪಿಎಮ್ ಮಾಡಿದರೆ ನಮ್ಮ ಲೈಫ ಸೆಟ್ಲಾಗುತ್ತೆ ಅನ್ನೋ ಹಗಲುಗನಸು ಕಾಣುತ್ತಿದ್ದಾರೆ.
3) ಇದು ಪಬ್ಲಿಕ ಮಾತಾಯಿತು. ಈಗ ನಿಮಗೆ ಒಂದು ಪರ್ಸನಲ್ ಎಕ್ಸಾಮಪಲ್ ಹೇಳುವೆ. ಎರಡು ತಿಂಗಳುಗಳ ಹಿಂದೆ ನಮ್ಮೆಲ್ಲ ಕ್ಲಾಸಮೇಟ್ಸಗಳು ಒಂದು ಮೀಟಪ function ಅರೇಂಜ್ ಮಾಡಿದ್ದರು. ಪಾರ್ಟಿ ಆಗಿದ್ದರೆ ಹೋಗುತ್ತಿರಲಿಲ್ಲ. Function ಆಗಿದೆ ಮತ್ತೆ ನನ್ನನ್ನು ಸಹ ಇನ್ವೈಟ ಮಾಡಿದ್ದಾರೆ ನಾನು ಇರಲಿ ಅಂತಾ ಹೋದೆ. ನಾನು ಮುಂಬೈಯಿಂದ ಪುಣೆ ತನಕ ನಾನಸ್ಟಾಪ ಡ್ರೈವ ಮಾಡಿಕೊಂಡು ಬಂದಿದ್ದೆ. ಅರ್ಜೆಂಟಾಗಿತ್ತು ಅದಕ್ಕೆ ಬರುತ್ತಿದ್ದಂತೆಯೇ ವಾಶರೂಮಿಗೆ ಹೋದೆ. ನಮ್ಮ ಕ್ಲಾಸಮೇಟ್ಸಗಳೆಲ್ಲ ಕಾಲೇಜಿನಲ್ಲಿರುವಾಗ ವಾಶರೂಮಲ್ಲೇ ಸಿಗರೇಟ ಸೇದುತ್ತಾ ಹರಟೆ ಹೊಡೆಯುತ್ತಿದ್ದರು. ಈಗಲು ಅವರು ಅದನ್ನೇ ಮಾಡುತ್ತಿದ್ದರು. ಅವರೆಲ್ಲ ಸೇರಿ ನಮ್ಮ ಕ್ಲಾಸಮೇಟಯೊಬ್ಬಳ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದರು. ಅವಳು ಸಖತ್ತಾಗಿದ್ದಾಳೆ, ಮದುವೆಯಾದ ಮೇಲೆ ಅವಳ ಬ್ಯೂಟಿ ಹೆಚ್ಚಾಗಿದೆ, ಅವಳು ಹಾಕಿಕೊಂಡಿರೋ ಡ್ರೆಸಲ್ಲಿ ಅವಳ ಎದೆಯ ಸಂದಿಗೊಂದಿಗಳು ಕಾಣಿಸ್ತಿವೆ ಎಂದೆಲ್ಲ ಡಿಸ್ಕಸ ಮಾಡುತ್ತಿದ್ದರು. ನನ್ನ ನೋಡಿ ಟಾಪಿಕ ಚೇಂಜ್ ಮಾಡಿದರು. ನಾನು ಫ್ರೆಶ್ ಆಗಿ ಮೀಟಪ ಪಾರ್ಟಿಗೆ ಹೋದೆ. ಎಲ್ಲರ ಜೊತೆಗೆ ಮಾತಾಡಿದೆ.
ನಾನು ಮುಂಚೆ ಹೇಳಿದ ಹುಡುಗರು ಯಾವಳ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದರೋ ಅವಳು ಸಹ ನನ್ನ ಮೀಟಾಗಿ ಮಾತಾಡಿದಳು. ಅವಳು ಸಭ್ಯವಾಗಿ ಡ್ರೆಸ ಹಾಕಿರಲಿಲ್ಲ. ಅವಳ ಸೀರೆ ಯಾವಾಗ ಕಳಚಿ ಬೀಳುತ್ತೋ ಅನ್ನೋ ತರಹ ನೇತಾಡುತ್ತಿತ್ತು. ಬಿಟ್ಟಿ ಬೆನ್ನು ಶೋ ಕಾಣಿಸುತ್ತಿತ್ತು. ಮುಂದೆ ಹೇಳಿದ್ರೆ ನನ್ನ ಮಾನ ಹೋಗುತ್ತೆ. ಅಲ್ಲಿದ್ದ ಎಲ್ಲ ಹುಡುಗರ ಕಣ್ಣುಗಳು ಅವಳ ಮೇಲಿದ್ದವು. ಆ ರೀತಿ ಕೆಟ್ಟದಾಗಿ ಬಟ್ಟೆ ಧರಿಸಿದ್ದಳು. ನನ್ನ ನೋಡಿ "ನೀನೇನು ಈಗ ತುಂಬಾ ಚೇಂಜ್ ಆಗಿರುವೆ, ವಾಟ್ಸಾಪಲ್ಲಿ ಮೆಸೆಜ ಹಾಕಿದ್ರೂ ರಿಪ್ಲೆ ಮಾಡಲ್ಲ, ಕಾಲ ಮಾಡಿದ್ರೂ ಬೇಗನೆ ರೀಸಿವ ಮಾಡಲ್ಲ, ದಿಸ ಇಸ ಟೂ ಮಚ್" ಎಂದಳು. ನಾನು ಸ್ಮೈಲ ಮಾಡಿ ಸುಮ್ಮನಾದೆ. ಆಗವಳು "ನಾನೇಗೆ ಕಾಣಿಸತಿದಿನಿ? ನಿನ್ ಮದುವೆ ಯಾವಾಗ?" ಅಂತೆಲ್ಲ ಕೇಳಿದಳು. ನಾನವಳಿಗೆ ಸೀದಾ "ನೀನು ಸೂಪರಾಗಿದಿಯಾ, ಬಟ ನೀಟಾಗಿ ಡ್ರೆಸ ಮಾಡಿಕೊಂಡರೆ ಸುಂದರವಾಗಿ ಕಾಣ್ತಿಯಾ. ಪ್ಲೀಜ ಮತ್ತೊಮ್ಮೆ ಈ ತರಹ ಡ್ರೆಸ ಹಾಕೋಬೇಡ, ಡಿಸೆಂಟಾಗಿ ಡ್ರೆಸ ಮಾಡಿಕೋ. ಕೆಲ ಹುಡುಗರ ಕಣ್ಣು ಸರಿಯಿರಲ್ಲ. ನನಗೆ ನಿನ್ನ ಮೇಲೆ ರೆಸ್ಪೆಕ್ಟ ಇದೆ. ಪ್ಲೀಜ ಇದು ರಿಕ್ವೆಸ್ಟ" ಎಂದೆ. ಆಗವಳು ನನಗೆ ಕೋಪದಲ್ಲಿ "ನಿನ್ನ ಕಣ್ಣು ಸರಿಯಿಲ್ಲ, ನೀನು ಮೊದಲು ಚೇಂಜ್ ಆಗು" ಅಂತಾ ಬೈದು ಬೇರೆಯವರನ್ನ ಮಾತಾಡಿಸುವ ನೆಪದಲ್ಲಿ ಓಡಿ ಹೋದಳು.
ಅವಳು ನಂತರ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡಳು. ಸೆಲ್ಪಿ ತೆಗೆಸಿಕೊಂಡಳು. ಆದರೆ ನನ್ನೊಂದಿಗೆ ಸೆಲ್ಪಿ ದೂರದ ಮಾತು ನನ್ನೊಂದಿಗೆ ನಂತರ ಐ ಕಾಂಟ್ಯಾಕ್ಟ್ ಕೂಡ ಮಾಡಲಿಲ್ಲ. ನಾನು ಇರಲಿ ಅಂತಾ ಸುಮ್ಮನಾದೆ. ಅವಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ಹುಡುಗರೆಲ್ಲರು ಅವಳೊಂದಿಗೆ ಪೋಟೋ ಸೆಲ್ಪಿ ತೆಗೆದುಕೊಂಡರು. ಅವಳನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ನಮ್ಮ ಕ್ಲಾಸಮೇಟ್ಸಗಳಲ್ಲಿನ ಬೇರೆ ಹುಡುಗಿಯರಿಗೂ ಅವಳ ವರ್ತನೆ ಸರಿ ಕಾಣಿಸಲಿಲ್ಲ. ಅದಕ್ಕೆ ಅವರೆಲ್ಲ ಅವಳನ್ನು ಇಗ್ನೋರ ಮಾಡಿದರು. ನಂತರ ಲಂಚ್ ಮಾಡಿ ಹರಟೆ ಹೊಡೆಯೊವಾಗ ಈ ಹುಡುಗರೆಲ್ಲ ಅವಳೊಂದಿಗೆ ತೆಗೆದುಕೊಂಡಿದ್ದ ಪೋಟೋವನ್ನು ಝೂಮ ಮಾಡಿ ನೋಡುತ್ತಿದ್ದರು. ನನಗ್ಯಾಕೋ ಇದು ಸರಿ ಬರಲಿಲ್ಲ. ನಾನು ಎಲ್ಲರಿಗೂ ಬಾಯ್ ಹೇಳಿ ಬೇಗನೆ ಅಲ್ಲಿಂದ ರಿಟರ್ನ್ ಮನೆಗೆ ಬಂದೆ. ನಾನು ಆ ಹುಡುಗಿಯ ಹಿತಕ್ಕಾಗಿಯೇ ನಿಜ ಹೇಳಿದ್ದೆ. ಬಟ ಅವಳು ನನ್ನೇ ವಿಲನ್ ಮಾಡಿದಳು. ಮುಂದೆ ಅವಳ ಪೋಟೋಗಳು ನಮ್ಮ ಕ್ಲಾಸಮೇಟ್ಸಗಳ ವಾಟ್ಸಾಪ ಗ್ರೂಪಗಳಲ್ಲಿ ವೈರಲ ಆದಾಗ ಅವಳಿಗೆ ಬುದ್ಧಿ ಬಂದು ನನಗೆ ಕಾಲ ಮಾಡಿದಳು. ಆದರೆ ನಾನು ಬೇಕಂತಲೆ ರೀಸಿವ ಮಾಡಲಿಲ್ಲ. ನನ್ನ ದಿದಿಗೆ ಕಾಲ ಮಾಡಿ ಸ್ವಾರಿ ಕೇಳಿ ಕಾಂಪ್ರೋಮೈಸ ಮಾಡಿಸಲು ಕೇಳಿಕೊಂಡಿದ್ದಾಳೆ. ಬಟ ಅವಳ ಮೇಲಿನ ಕೋಪ ಇನ್ನೂ ಹೋಗಿಲ್ಲ.
ಫ್ರೆಂಡ್ಸ್ ಒಂದಲ್ಲ ಎರಡಲ್ಲ ಮೂರಲ್ಲ ಇದೇ ರೀತಿಯ ಸಾವಿರಾರು ಉದಾಹರಣೆಗಳಾಗಿವೆ. ನಿಜ ಹೇಳಿದರೆ ಜನರಿಗೆ ಕೋಪ ಬರುತ್ತದೆ. ಅವರ ಕೋಪದಿಂದ ನಿಮಗೆ ನಷ್ಟದ ಜೊತೆಗೆ ಪ್ರಾಣ ಹಾನಿಯಾಗುವ ಸಾಧ್ಯತೆ ಕೂಡ ಇರುತ್ತದೆ. ಉದಾಹರಣೆಗೆ ; ಭಾರತದ ಹಿತಕ್ಕಾಗಿ ನಿಜ ಹೇಳಿದಕ್ಕೆ ರಾಜೀವ ದಿಕ್ಷಿತರ ಹತ್ಯೆಯಾಯಿತು. ಅದಕ್ಕಾಗಿ ನನ್ನ ಸಗೇಷನ್ಸ ಏನಪ್ಪಾ ಅಂದರೆ ಜನರಿಗೆ ನಿಜ ಹೇಳಬೇಡಿ. ಜನ ಕೋಣ ಕರು ಹಾಕುತ್ತೆ ಎಂದರೆ ಹೂ ಅಂತಾ ಹೇಳಿ ಅಲ್ಲಿಂದ ಜಾರಿಕೊಳ್ಳಿ. ಜನ 2+2=5 ಅಂತಾ ಹೇಳಿದ್ರೆ ಶಬಾಷ್ ಅಂತೇಳಿ ಅಂಥವರಿಂದ ದೂರವಿದ್ದು ಬಿಡಿ. ಇರೋದೊಂದೆ ಜೀವನ, ಯಾಕೆ ಸುಮ್ಮನೆ ಮೂರ್ಖರೊಂದಿಗೆ ದುಶ್ಮನಿ? ಯಾರು ನಿಮ್ಮನ್ನು ನಿಜವಾಗಿಯೂ ನಂಬುತ್ತಾರೋ, ಯಾರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾರೋ, ಯಾರು ನಿಮ್ಮನ್ನು ನಿಜವಾಗಿಯೂ ಕೇರ್ ಮಾಡುತ್ತಾರೆ, ರೆಸ್ಪೆಕ್ಟ ಕೊಡುತ್ತಾರೋ ಅವರಿಗೆ ಮಾತ್ರ ನಿಜ ಹೇಳಿ. ಮಿಕ್ಕವರಿಗೆಲ್ಲ ಕೋಣ ಕರು ಹಾಕುತ್ತದೆ ಅಂತೇಳಿ. ನಾನೇಳಿದ್ದು ನಿಮ್ಮ ಟ್ಯೂಬಲೈಟಿಗೆ ಟಚ್ ಆಗಿದ್ದರೆ ಪ್ಲೀಜ ಈ ಅಂಕಣಕ್ಕೆ ಲೈಕ ಮಾಡಿ ಕಮೆಂಟ ಮಾಡಿ ಮತ್ತೆ ಶೇರ್ ಮಾಡಿ. ದಿನಾಲು ಒಳ್ಳೇ ಅಂಕಣಗಳನ್ನು ಫ್ರೀಯಾಗಿ ಓದಲು ಡೈರೆಕ್ಟರ್ ಸತೀಶಕುಮಾರ ಫೇಸ್‌ಬುಕ್ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು....