ಹಾಯ್ ಗೆಳೆಯರೇ, ನೀವು ಕೂಡ ಕಾಸ್ಟ್ಲಿಯಾದ ಡ್ರೀಮ ಕಾರನ್ನು ತೆಗೆದುಕೊಳ್ಳಲು ಮುಂದಾಗಿದ್ದರೆ ಈ ಅಂಕಣವನ್ನು ಕೊನೆ ತನಕ ಓದಿ. ಇಲ್ಲವಾದರೆ ನೀವು ಸಹ ಬೇರೆಯವರಂತೆ ಪಶ್ಚಾತ್ತಾಪ ಪಡೋ ಸಾಧ್ಯತೆಯಿದೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಓದಿ...
90% ಜನ ಸೋಸಿಯಲ ಸ್ಟೇಟಸಗಾಗಿ, ಲಕ್ಸುರಿಗಾಗಿ, ಶೋಅಪ ಮಾಡುವುದಕ್ಕಾಗಿ, ತಮ್ಮ ಸ್ನೇಹಿತರ, ಸಂಬಂಧಿಕರ ಹಾಗೂ ಪಕ್ಕದ್ಮನೆಯವರ ಹೊಟ್ಟೆ ಊರಿಸುವುದಕ್ಕಾಗಿ, ಹುಡುಗಿಯರನ್ನು ಇಂಪ್ರೆಸ ಮಾಡುವುದಕ್ಕಾಗಿ ಕಾರನ್ನು ಖರೀದಿ ಮಾಡುತ್ತಾರೆ. ಆಡಿ, BMV, ರೇಂಜ ರೋವರ್, ಫಾರ್ಚುನರಗಳಂಥ ಕಾಸ್ಟ್ಲಿ ಕಾರುಗಳಲ್ಲಿ 50 ಲಕ್ಷದಿಂದ ಹಿಡಿದು ಕೋಟಿ ರೂಪಾಯಿ ಹಣವನ್ನು ಸುಟ್ಟು ಬಿಡುತ್ತಾರೆ. ತಮ್ಮ ಲೈಫಲಾಂಗ ಸೇವಿಂಗನ್ನು ಡ್ರೀಮ ಕಾರ ಮೇಲೆ ಸುರಿದು ಆನಂತರ ಪಶ್ಚಾತ್ತಾಪ ಪಡುತ್ತಾರೆ. ನೀವು ಕೂಡ ಇದೇ ರೀತಿ ಮಾಡಿದರೆ ನೀವು ಕೂಡ ಪಶ್ಚಾತ್ತಾಪ ಪಡುತ್ತಿರಾ.
ಡ್ರೀಮ ಕಾರ್ ಒಂದು ದೋಖಾ ಆಗಿದೆ, ಅದು ನಿಮ್ಮನ್ನು ಬಡವರನ್ನಾಗಿಸುತ್ತದೆ. ಈ ಸತ್ಯ ಕೇವಲ 10% ಜನರಿಗಷ್ಟೇ ಗೊತ್ತಿದೆ. ಅವರು ತಮ್ಮ ಅವಶ್ಯಕತೆಗೆ ಅನುಸಾರವಾಗಿ ಒಂದು ಯುಟಿಲಿಟಿ ಅಂತಾ ಕಾರನ್ನು ಖರೀದಿಸುತ್ತಾರೆ, ಬಿಜನೆಸ ಪರಪಜಗಾಗಿ ಕಾರನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೇನೆ ಅವರು ಶ್ರೀಮಂತರಾಗಿ ಉಳಿಯುತ್ತಾರೆ. ಶೋಕಿಗಾಗಿ ಕಾರನ್ನು ತಂದವರು ಸಾಲ ತೀರಿಸುವುದರಲ್ಲಿ ಬಡ್ಡಿ ಕಟ್ಟಿ ಬರ್ಬಾದ ಆಗುತ್ತಾರೆ. ನೀವು ಕೂಡ ಅವಶ್ಯಕತೆ ಇಲ್ಲದಿರುವಾಗ ಕಾರನ್ನು ಖರೀದಿಸಿದರೆ ಬರ್ಬಾದ ಆಗುತ್ತೀರಿ. ಅವಶ್ಯಕತೆ ಇದ್ರೆ ಮಾತ್ರ ಕಾರನ್ನು ಖರೀದಿಸಿ. ಇಲ್ಲವಾದರೆ ಖರೀದಿಸಬೇಡಿ. ಏಕೆಂದರೆ ಡ್ರೀಮ ಕಾರ ಒಂದು ದೊಡ್ಡ ದೋಖಾ ಆಗಿದೆ. ಅದಕ್ಕೆ ಕಾರಣಗಳು ಇಂತಿವೆ ;
1) ನಿಮ್ಮ ಕಾರ ನಿಮ್ಮ ಲೈಫಲಾಂಗ ಸೇವಿಂಗನ್ನು ಸುಡುತ್ತದೆ ಮತ್ತು ನಿಮ್ಮನ್ನು ಬಡವರನ್ನಾಗಿಸುತ್ತದೆ. ಉದಾಹರಣೆಗೆ ; ಹರ್ಯಾಣಾ, ಉತ್ತರಪ್ರದೇಶ ಹಾಗೂ ಬಿಹಾರದ ಜನರಿಗೆ ಕಂಪೇರ್ ಮಾಡಿದರೆ ರಾಜಸ್ತಾನದ ಜನ ಶ್ರೀಮಂತರಾಗಿದ್ದಾರೆ. ಏಕೆಂದರೆ HR, UP & BHನ ಜನ ತಮ್ಮತ್ರ ಹಣ ಬಂದಾಗ ಫಾರ್ಚುನರ್ ಕಾರನ್ನು ತಂದು ಹಾರಾಡುತ್ತಾರೆ. ಆದರೆ ರಾಜಸ್ತಾನದ ಜನ ಇಪ್ಪತ್ತು ತೊಲೆ ಬಂಗಾರ ಖರೀದಿಸಿ ಬಿಜನೆಸ ಮೇಲೆ ಫೋಕಸ ಮಾಡುತ್ತಾರೆ.
2) ಕಾರ ಒಂದು ಲೈಯಾಬಿಲಿಟಿ ಆಗಿದೆ. ನೀವು ಬಿಜನೆಸ ಮಾಡಲು ಕಾರ ತಂದ್ರೆ ಓಕೆ. ಆದರೆ ಅನಾವಶ್ಯಕ ಶೋಕಿಗಾಗಿ ಕಾರ ತಂದ್ರೆ ಅದು ನಿಮಗೆ ಲೈಯಾಬಿಲಿಟಿ ಆಗುತ್ತದೆ. ನೀವು EMI ಹಾಗೂ ಬಡ್ಡಿ ಕಟ್ಟಿ ಬಡವರಾಗುತ್ತಾ ಹೋಗುತ್ತೀರಾ. ಪದೇಪದೇ ಸರ್ವಿಸಿಂಗ, ಮೆಂಟೆನನ್ಸ ಹಾಗೂ ಡೀಸೆಲ ಖರ್ಚಗಳಿಂದ ನಿಮ್ಮ ಜೇಬಿಗೆ ದೊಡ್ಡ ಕತ್ತರಿ ಬೀಳುತ್ತದೆ.
3) ಡ್ರೀಮ ಕಾರ ನಿಮಗೆ ಎರಡ್ಮೂರು ದಿನ ಮಾತ್ರ ಖುಷಿ ಕೊಡುತ್ತದೆ. ಮುಂದೆ ನೀವು EMI, Servicing, Maintains, Fear of accident, Road Trafficಗಳಿಂದ ಬೇಸತ್ತು ಅನಹ್ಯಾಪಿಯಾಗುತ್ತೀರಾ. ಕಾರ ತರುವುದರಿಂದ ನಿಮಗೆ ಸೋಸಿಯಲ ಸ್ಟೇಟಸ ಸಿಗಲ್ಲ, ಎರಡ್ಮೂರು ದಿನ ಮಾತ್ರ ಹವಾ ಆಗುತ್ತದೆ, ಮುಂದೆ ದು:ಖವಾಗುತ್ತದೆ. ಶೋರೂಮದಿಂದ ಹೊರಗೆ ಬಂದ ತಕ್ಷಣವೇ ಅದರ ವ್ಯಾಲೂ ಕಡಿಮೆಯಾಗುತ್ತದೆ. ಒಟ್ನಲ್ಲಿ ನಿಮ್ಮ ಡ್ರೀಮ ಕಾರ ನಿಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಇದೊಂದು ವೇಸ್ಟ ಆಫ್ ಮನಿ ಆಗಿದೆ ಅಷ್ಟೇ.
ಗೆಳೆಯರೇ ಡ್ರೀಮ ಕಾರ ಒಂದು ದೋಖಾ ಆಗಿದೆ. ಅದನ್ನ ಅರ್ಥ ಮಾಡಿಕೊಂಡರೆ ನಿಮ್ಮ ಜೇಬು ಗಟ್ಟಿಯಾಗಿರುತ್ತದೆ. ನಾನು ನಿಮಗೆ ಕಾರನ್ನು ತೆಗೆದುಕೊಳ್ಳಬೇಡಿ ಅಂತಾ ಹೇಳ್ತಿಲ್ಲ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಚೀಪ್ & ಬೆಸ್ಟ ಸೇಫ ಕಾರನ್ನು ಖರೀದಿಸಲು ಸಲಹೆ ಕೊಡುತ್ತಿರುವೆ. ಇನ್ನೂ ನೀವು ಹೆಂಗಸರನ್ನು ಇಂಪ್ರೆಸ ಮಾಡಲು ಕಾರನ್ನು ತರ್ತಾಯಿದ್ರೆ ಒಂದು ಕಿವಿ ಮಾತಿದೆ. ನಿಮ್ಮ ಕಾರು ನೋಡಿ ಬಂದವಳು ನಿಮ್ಮ ಪರ್ಸ ಖಾಲಿಯಾದಾಗ ನಿಮ್ಮನ್ನು ಒದ್ದು ಹೋಗುತ್ತಾಳೆ. ನಿಮ್ಮ ಸಂಪತ್ತು ನೋಡಿ ಸೂ**ಯರು ಸಿಗುತ್ತಾರೆಯೇ ವಿನಹ: ಸಂಸ್ಕಾರವಂಥ ಹುಡುಗಿಯರಲ್ಲ. ಸೋ ಕಾರಿನಿಂದ ಯಾರನ್ನು ಇಂಪ್ರೆಸ ಮಾಡಲು ಟ್ರಾಯ ಮಾಡಬೇಡಿ. ಸಾಮಾನದಿಂದ ಸನ್ಮಾನವನ್ನು ಗಿಟ್ಟಿಸಲು ಟ್ರಾಯ ಮಾಡಬೇಡಿ, ನಿಮ್ಮ ಕೆಲಸದಿಂದ ಹಾಗೂ ಒಳ್ಳೇ ಸ್ವಭಾವದಿಂದ ಸನ್ಮಾನವನ್ನು ಸಂಪಾದಿಸಿ. ಅನಾವಶ್ಯಕವಾಗಿ ಕಾರನ್ನು ತಂದು ನೆಮ್ಮದಿ ಕೆಡಿಸಿಕೊಂಡು ಲೋನ ಲೈಫಲ್ಲಿ ಒದ್ದಾಡಬೇಡಿ. ಈಗಾಗಲೇ ನೀವು ಡ್ರೀಮ ಕಾರ ತಂದಿದ್ದರೆ ನಿಮಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಇನ್ನೂ ನೀವು ಡ್ರೀಮ ಕಾರನ್ನು ತರುವವರಿದ್ದರೆ ಸ್ವಲ್ಪ ಯೋಚನೆ ಮಾಡಿ. ಇದು ನಿಮ್ಮ ಟ್ಯೂಬಲೈಟಗೆ ಟಚ್ ಆಗಿದ್ದರೆ ಇದಕ್ಕೆ ಲೈಕ ಮಾಡಿ. ಆಲ ದ ಬೆಸ್ಟ್...