ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

                           ಹಾಯ್ ಗೆಳೆಯರೇ, ಇವತ್ತಿನ ಪರ್ಸನಲ್ ಫೈನಾನ್ಸ್ ಲೆಸನನಲ್ಲಿ ನಾನು "ಶ್ರೀಮಂತರಾಗಲು ಇಡಬೇಕಾದ ಮೊದಲ ಹೆಜ್ಜೆ"ಯ ಬಗ್ಗೆ ಡಿಸ್ಕಸ್ ಮಾಡುತ್ತಿರುವೆ‌‌‌. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಕೊನೆಯ ತನಕ ಓದಿ. 

                         ಶ್ರೀಮಂತರು ಹಣದ ಇಂಪಾರಟನ್ಸನ್ನು ಒಪನಾಗಿ ಒಪ್ಪಿಕೊಳ್ಳುತ್ತಾರೆ ಹಾಗೂ ಹಣಕ್ಕೆ ರೆಸ್ಪೆಕ್ಟ ಕೊಡುತ್ತಾರೆ. ಆದರೆ ಬಡವರು ಹಾಗೂ ಮಿಡಲ್ ಕ್ಲಾಸನವರು ಹಣದ ಮಹತ್ವವನ್ನು ಒಪನಾಗಿ ಒಪ್ಪಿಕೊಳ್ಳಲ್ಲ. ಇದರ ಬದಲಾಗಿ ಅವರು ಹಣವನ್ನು ಒಪನಾಗಿ ದ್ವೇಷಿಸುತ್ತಾರೆ ಮತ್ತು ಗುಟ್ಟಾಗಿ ಪ್ರೀತಿಸುತ್ತಾರೆ. ಅದಕ್ಕಾಗಿ ಶ್ರೀಮಂತರಾಗಬೇಕೆಂದರೆ ಎಲ್ಲದಕ್ಕಿಂತ ಮೊದಲು ನಮ್ಮ ಇನ್ನರ ವಲ್ಡನ್ನು ಸುಧಾರಿಸಬೇಕಾದ ಅವಶ್ಯಕತೆ ಬಹಳಷ್ಟಿದೆ‌. ಆಂತರಿಕ ಜಗತ್ತಿನಲ್ಲಿರುವ ಹೊಲಸನ್ನು ಹಸನಾಗಿಸದೆ ಶ್ರೀಮಂತರಾಗಲು ಸಾಧ್ಯವಿಲ್ಲ. ನಾವು ಶ್ರೀಮಂತರಾಗಬೇಕೆಂದರೆ ನಾವು ಮೊದಲು ನಮ್ಮ ಇನ್ನರ ವಲ್ಡನ್ನು ಚೇಂಜ್ ಮಾಡಬೇಕು. ಇದೇ ಶ್ರೀಮಂತರಾಗಲು ಮೊದಲ ಹೆಜ್ಜೆಯಾಗಿದೆ... 

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

               ಈಗ ಇನ್ನರ ವಲ್ಡನ್ನು ಬದಲಾಯಿಸುವುದು ಹೇಗೆ ಅಂತಾ ನೋಡೋಣಾ‌. ಇನ್ನರ ವಲ್ಡನ್ನು ಬದಲಾಯಿಸಲು ಮುಖ್ಯವಾಗಿ ಎರಡು ಮಾರ್ಗಗಳಿವೆ‌. 

1) Stop Blaming Rich & Richness. 

                   ಶ್ರೀಮಂತರನ್ನು ಮತ್ತು ಶ್ರೀಮಂತಿಕೆಯನ್ನು ತೆಗಳುವುದನ್ನು ನಿಲ್ಲಿಸುವುದು. ಬಹಳಷ್ಟು ಜನ ಪ್ರತಿದಿನ ಪ್ರತಿಕ್ಷಣ ಶ್ರೀಮಂತರನ್ನು, ಶ್ರೀಮಂತಿಕೆಯನ್ನು ಹಾಗೂ ಹಣವನ್ನು ತೆಗಳುತ್ತಲೇ ಇರುತ್ತಾರೆ. ಶ್ರೀಮಂತರು ವಂಚಕರಾಗಿದ್ದಾರೆ, ಶ್ರೀಮಂತರು ಅಹಂಕಾರಿಗಳಾಗಿದ್ದಾರೆ, ಶ್ರೀಮಂತರೆಲ್ಲ ಕ್ರಿಮಿನಲಗಳಾಗಿದ್ದಾರೆ ಎಂದೆಲ್ಲ ಬೊಗಳುತ್ತಲೇ ಇರುತ್ತಾರೆ. ಈ ರೀತಿ ದಿನರಾತ್ರಿ ಶ್ರೀಮಂತಿಕೆಯನ್ನು ದ್ವೇಷಿಸಿ ಅವಮಾನಿಸಿದರೆ ಇವರೇಗೆ ಶ್ರೀಮಂತರಾಗುತ್ತಾರೆ? ಇವರು ಶ್ರೀಮಂತಿಕೆಯನ್ನು ಅವಮಾನಿಸುತ್ತಿರುವಾಗ ಶ್ರೀಮಂತಿಕೆ ಇವರತ್ರ ಬರಲು ಸಾಧ್ಯವೇ ಇಲ್ಲ. ಸೋ ಫ್ರೆಂಡ್ಸ್ ನಿಮಗೆ ನಿಜವಾಗಿಯೂ ಶ್ರೀಮಂತರಾಗಬೇಕು ಎಂಬಾಸೆಯಿದ್ದರೆ ಇವತ್ತೇ ಶ್ರೀಮಂತಿಕೆಯನ್ನು ತೆಗಳುವುದನ್ನ ನಿಲ್ಲಿಸಿ. ಶ್ರೀಮಂತಿಕೆಗೆ ರೆಸ್ಪೆಕ್ಟ ಕೊಡಲು ಸ್ಟಾರ್ಟ ಮಾಡಿ. 

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

2) Delete -Ve Beliefs about money. 

                   ಬಹಳಷ್ಟು ಜನರಿಗೆ ಹಣದ ಬಗ್ಗೆ ತಪ್ಪು ಕಲ್ಪನೆಗಳಿವೆ‌. ಹಣ ಒಳ್ಳೆಯದಲ್ಲ, ಹಣ ಮನುಷ್ಯನನ್ನು ಹಾಳು ಮಾಡುತ್ತದೆ, ಹಣವಿದ್ದರೆ ರೋಗಗಳು ಬರುತ್ತವೆ ಎಂದೆಲ್ಲ ಅವರು ಯೋಚಿಸುತ್ತಾರೆ. ಹಣದ ಬಗ್ಗೆ ಇವರಿಗೆ ಬರೀ ನೆಗೆಟಿವ ನಂಬಿಕೆಗಳಿರುತ್ತವೆ. ಹಣವನ್ನು ಇವರು ಇದೇ ಕಾರಣಕ್ಕಾಗಿ ದ್ವೇಷಿಸುತ್ತಾರೆ. ಸೋ ಹೀಗಿರುವಾಗ ಇವರತ್ರ ಹಣ ಹೇಗೆ ಬರುತ್ತದೆ? ಸೋ ಗೆಳೆಯರೇ ನಿಮಗೆ ನಿಜವಾಗಿಯೂ ಶ್ರೀಮಂತರಾಗಬೇಕೆಂಬ ಆಸೆಯಿದ್ದರೆ ಹಣದ ಬಗ್ಗೆ ನಿಮಗಿರುವ ಎಲ್ಲ ನೆಗೆಟಿವ್ ಮೊದಲು ಡೀಲಿಟ ಮಾಡಿ. ಹಣದ ಬಗ್ಗೆ ಪಾಸಿಟಿವ್ ಅಭಿಪ್ರಾಯವನ್ನು ಬೆಳೆಸಿಕೊಳ್ಳಿ. 

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

                          ಈ ಎರಡು ಮಾರ್ಗಗಳ ಮೂಲಕ ನೀವು ನಿಮ್ಮ ಇನ್ನರ ವಲ್ಡನ್ನು ಸುಧಾರಿಸಬಹುದು. ಎಲ್ಲಿ ತನಕ ನೀವು ನಿಮ್ಮ ಇನ್ನರ ವಲ್ಡನ್ನು ಚೇಂಜ್  ಮಾಡಲ್ಲವೋ ಅಲ್ಲಿ ತನಕ ನೀವು ಶ್ರೀಮಂತರಾಗಲ್ಲ. ಲಕ್ಷ್ಮೀದೇವಿಯನ್ನು ಜನ ಹಣದ ದೇವತೆಯಾಗಿ ಪೂಜಿಸುತ್ತಾರೆ. ಹಣವನ್ನು ಸಹ ಪೂಜಿಸುತ್ತಾರೆ, ಗೌರವಿಸುತ್ತಾರೆ. ಹೀಗಿರುವಾಗ ನೀವು ಪದೇಪದೇ ಶ್ರೀಮಂತಿಕೆಗೆ ಹಾಗೂ ಹಣಕ್ಕೆ ಬೈದು ಅವಮಾನ ಮಾಡಿದ್ರೆ ನಿಮ್ಮ ಮನೆಗೆ ಲಕ್ಷ್ಮೀಮಾತೆ ಹೇಗೆ ಬರುತ್ತಾಳೆ? ನೀವು ಪದೇಪದೇ ಹುಡುಗಿಯರಿಗೆ ಬೈದರೆ ಯಾವುದಾದರೂ ಹುಡುಗಿ ನಿಮ್ಮತ್ರ ಬರ್ತಾಳಾ? ಇಲ್ಲಾ ತಾನೇ? ಲಕ್ಷ್ಮೀ ಮಾತೆಯೂ ಹಂಗೆ. ಅದಕ್ಕಾಗಿ ಮೊದಲು ನಿಮ್ಮ ಇನ್ನರ ವಲ್ಡನ್ನು ಕ್ಲೀನ ಮಾಡಿ. ಹಣಕ್ಕೆ ಗೌರವ ಕೊಡಿ, ಹಣದ ಬಗ್ಗೆ ಪಾಸಿಟಿವ್ ಅಭಿಪ್ರಾಯ ಬೆಳೆಸಿಕೊಳ್ಳಿ. ಆವಾಗ ನೀವು ಶ್ರೀಮಂತರಾಗಲು ಮೊದಲ ಹೆಜ್ಜೆಯನ್ನು ಇಡುತ್ತೀರಿ. ಆಲ ದ ಬೆಸ್ಟ್. ಧನ್ಯವಾದಗಳು...

ಶ್ರೀಮಂತರಾಗಲು ಮೊದಲ ಹೆಜ್ಜೆ - First Step to Become Rich

Blogger ನಿಂದ ಸಾಮರ್ಥ್ಯಹೊಂದಿದೆ.