ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು ನಿಮಗೆ ಜಗತ್ತನ್ನು ಗೆಲ್ಲುವ ಫಾರ್ಮುಲಾವನ್ನು ಹೇಳುತ್ತಿರುವೆ. ಇದನ್ನು ಈಗಾಗಲೇ ಎಲ್ಲ ಮಹಾತ್ಮರು ಹೇಳಿದ್ದಾರೆ. ಅದನ್ನೇ ನಾನು ಮತ್ತೊಮ್ಮೆ ಹೇಳ್ತಿರುವೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಕೊನೆಯ ತನಕ ಓದಿ.
ಫ್ರೆಂಡ್ಸ್ ನಾನು ನಿಮಗೆ ಅಲೆಕ್ಸಾಂಡರನ ತರಹ ಯುದ್ಧ ಮಾಡಿ ಜಗತ್ತನ್ನು ಗೆಲ್ಲಲು ಹೇಳುತ್ತಿಲ್ಲ. ನಾನು ನಿಮಗೆ ನಿಮ್ಮ ಜಗತ್ತನ್ನು ಗೆಲ್ಲಲು ಹೇಳುತ್ತಿರುವೆ. ನಿಮ್ಮ ಫ್ಯಾಮಿಲಿ ಹಾಗೂ ನಿಮ್ಮ ಗೋಲ್ಸಗಳು ನಿಮ್ಮ ಜಗತ್ತಾಗಿವೆ. ನೀವು ನಿಮ್ಮ ಫ್ಯಾಮಿಲಿಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಅವರು ನಿಮ್ಮ ಮೇಲಿಟ್ಟ ಭರವಸೆಗಳನ್ನು ನಿಜವಾಗಿಸಿದರೆ ಸಾಕು ನೀವು ನಿಮ್ಮ ಜಗತ್ತನ್ನು ಗೆದ್ದಂತೆ. ನಿಮ್ಮ ಮೇಲೆ ನಿಮ್ಮ ತಂದೆತಾಯಿಗಳು ಕನಸನ್ನು ಕಟ್ಟಿರುತ್ತಾರೆ, ನನ್ನ ಮಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ, ನನ್ನ ಮಗಳು ದೊಡ್ಡ ಲೆವೆಲಗೆ ಬೆಳೆಯುತ್ತಾಳೆ ಅಂತಾ ನೂರಾರು ಕನಸು ಕಟ್ಟಿರುತ್ತಾರೆ. ಮುಂದೆ ನಿಮಗೆ ಮದುವೆ ಹೆಂಡತಿ ಮಕ್ಕಳಾದಾಗ ಅವರು ಕೂಡ ನಿಮ್ಮ ಮೇಲೆ ಭರವಸೆ ಇಟ್ಟಿರುತ್ತಾರೆ. ಅದಕ್ಕೆ ನೀವು ಯಾವತ್ತೂ ಮೋಸ ಮಾಡಬಾರದು. ನಿಮ್ಮ ಹೆಂಡತಿ ನನ್ನ ಗಂಡ ಮುಂದೆ ಸ್ವಂತ ಮನೆ ಮಾಡ್ತಾನೆ, ಕಾರಲ್ಲಿ ಕೂಡಿಸಿಕೊಂಡು ಒಂದು ರೌಂಡ ಲಾಂಗ್ ಡ್ರೈವ ಹೋಗ್ತಾನೆ ಅಂತೆಲ್ಲ ಕನಸು ಕಂಡಿರುತ್ತಾಳೆ, ಮಕ್ಕಳು ನಮ್ಮಪ್ಪ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ, ನಮ್ಮನ್ನು ಚೆನ್ನಾಗಿ ಓದಿಸುತ್ತಾನೆ ಅಂತೆಲ್ಲ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಅವುಗಳಿಗೆ ನೀವು ಮೋಸ ಮಾಡಬಾರದು. ನಿಮ್ಮ ಫ್ಯಾಮಿಲಿಯವರು ನಿಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡರೆ, ಅವರ ಕನಸುಗಳನ್ನು ನನಸಾಗಿಸಿದರೆ ನೀವು ಜಗತ್ತನ್ನು ಗೆದ್ದಂತೆ. ಏಕೆಂದರೆ ಅವರೇ ನಿಮ್ಮ ಜಗತ್ತು. ಜೊತೆಗೆ ನೀವು ನಿಮ್ಮ ಗೋಲ್ಸಗಳನ್ನೆಲ್ಲ ನನಸಾಗಿಸಿದರೆ ಪೂರ್ತಿ ಜಗತ್ತನ್ನು ಗೆದ್ದಂತೆ.
ಮೊದಲಿನಿಂದಲೂ ರಾಣಿ ನನ್ನ ಮೇಲೆ ಬೆಟ್ಟದಷ್ಟು ಕನಸುಗಳನ್ನು ಕಟ್ಟಿದ್ದಾಳೆ. ಬಾಲ್ಯದಿಂದಲೂ ಬೆಸ್ಟಫ್ರೆಂಡಾಗಿದ್ದವಳು ಈಗ ಲೈಫ ಪಾರ್ಟನರ ಆಗುತ್ತಿದ್ದಾಳೆ. ಆಕೆ ನನ್ನನ್ನು ಒಬ್ಬ ಸಕ್ಸೆಸಫುಲ್ ವ್ಯಕ್ತಿಯಾಗಿ ನೋಡಲು ನನ್ನೊಂದಿಗೆ ಸೇರಿ ಕಷ್ಟಪಡುತ್ತಿದ್ದಾಳೆ. ನನ್ನನ್ನು ಜಗತ್ತಿನ ಟಾಪ್ ಬಿಜನೆಸಮ್ಯಾನ ಮಾಡಲು ಹಾರ್ಡವರ್ಕ ಮಾಡುತ್ತಿದ್ದಾಳೆ. ಜಗತ್ತಿಗೆ ಕಷ್ಟ ಬಂದಾಗ ದೇವರು ನನ್ನ ಪಾಕೆಟನಿಂದ ಹಣ ದಾನ ಮಾಡಬೇಕು ಅಷ್ಟು ದೊಡ್ಡ ಲೆವೆಲಗೆ ನನ್ನನ್ನು ಕರೆದೊಯ್ಯಲು ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಸಣ್ಣಪುಟ್ಟ ಗೋಲ್ಸಗಳಿಲ್ಲ. ನನ್ನನ್ನು ಮತ್ತೆ ನಮ್ಮ Roaring Creations Private Limited ಕಂಪನಿಯನ್ನು ಜಗತ್ತಿನ ಬೆಸ್ಟ ಕಂಪನಿಯನ್ನಾಗಿಸಿ ಕೋಟ್ಯಾಂತರ ಜನರಿಗೆ ಹೆಲ್ಪ ಮಾಡೋದು ಅವಳ ಕನಸಾಗಿದೆ. ರತನ ಟಾಟಾರಂತೆ ನನ್ನನ್ನು ದೊಡ್ಡ ಬಿಜನೆಸಮ್ಯಾನ ಆಗಿ ನೋಡಲು ರಾಣಿ ಕಾಯುತ್ತಿದ್ದಾಳೆ. ಅದಕ್ಕಾಗಿ ನಾನು ಕೆಲಸ ಮಾಡುತ್ತಿರುವೆ.
ರಾಣಿಗೆ ಐಷಾರಾಮಿ ಆಸೆಗಳೇನಿಲ್ಲ. ಒಂದು ಪುಟ್ಟ ಮನೆ, ಒಂದು ಸೇಫ್ ಕಾರು, ಆಕೆ ಕೇಳಿದ ಟೂರಿಸ್ಟ ಸ್ಪಾಟಗೆ ಕರೆದೋಯ್ದರೆ ಆಯ್ತು, ಅವಳು ಬೇರೆನು ಕೇಳಲ್ಲ. ಅವಳಿಗೆ ರೋಡ ಸೈಡ ಟೀ, ಹಳ್ಳಿ ಸೈಡ ಊಟ ಎರಡು ಸಿಕ್ರೆ ಮುಗೀತು ಅವಳು ನದಿ, ಗುಡ್ಡ, ಪರ್ವತ, ಜಲಪಾತ ಅಂತಾ ಕಾಲ ಕಳೆಯುತ್ತಾಳೆ. ಅವಳ ಎಲ್ಲ ಆಸೆಗಳನ್ನು ಈಡೇರಿಸುತ್ತಿರುವೆ. ಫ್ಯಾಮಿಲಿಯನ್ನು ಗೆದ್ದಿರುವೆ. ಇನ್ನೂ ನನ್ನ ಪರ್ಸನಲ್ ಗೋಲ್ಸಗಳು ಕೂಡ ಅವೇ ಆಗಿವೆ. ನನಗೆ ರತನ ಟಾಟಾರಂತೆ ದೊಡ್ಡ ಬಿಜನೆಸಮ್ಯಾನ ಆಗಬೇಕು ಅನ್ನೋ ಕನಸಿದೆ. ಅದಕ್ಕಾಗಿಯೇ ಕೆಲಸ ಮಾಡುತ್ತಿರುವೆ. ಜೊತೆಗೆ ನನಗೆ ಬೆಸ್ಟ ಟೀಚರ್ ಆಗುವ ಕನಸಿತ್ತು. ಆಗುತ್ತಿರುವೆ ನಿಧಾನಕ್ಕೆ. ನಾನು ಕಾಲೇಜಿನಲ್ಲಿರುವಾಗ ಕೆಲವರು ನನ್ನನ್ನು ಟೀಚರ್ ಆಗುವುದರಿಂದ ತಡೆದಿದ್ದರು. ಅದಕ್ಕೆ ನಾನು ಜಗತ್ತಿನ ಬೆಸ್ಟ ಟೀಚರ ಆಗುತ್ತಿರುವೆ. ನನ್ನ ರಾಣಿ, ಅವಳ ಆಸೆಗಳು, ನನ್ನ ಗೋಲ್ಸಗಳು ಇವೇ ನನ್ನ ಜಗತ್ತು. ಇವುಗಳನ್ನು ನನಸಾಗಿಸಿದರೆ ನಾನು ಈಡೀ ಜಗತ್ತನ್ನೇ ಗೆದ್ದಂತೆ. ನೀವು ಸಹ ಈ ರೀತಿ ಮೊದಲು ನಿಮ್ಮ ಜಗತ್ತು ಯಾವುದಂತ ಅರ್ಥ ಮಾಡಿಕೊಳ್ಳಿ. ಆನಂತರ ಜಗತ್ತನ್ನು ಗೆಲ್ಲೋದು ಹೇಗೆ ಅಂತಾ ಮುಂದೆ ಓದಿ ಗೊತ್ತಾಗುತ್ತದೆ.
ಫ್ರೆಂಡ್ಸ ನಾವು ಜಗತ್ತನ್ನು ಗೆಲ್ಲಬೇಕೆಂದರೆ ಮೊದಲು ನಮ್ಮ ಮನಸ್ಸನ್ನು ಗೆಲ್ಲಬೇಕು. ಏಕೆಂದರೆ ನಾವು ಮಾಡುವ ಎಲ್ಲ ಕೆಲಸಗಳಲ್ಲಿ ಮನಸ್ಸಿನ ಸಪೋರ್ಟ್ ಬೇಕೆ ಬೇಕು. ಲವ್ ಮಾಡೋದಿರಲಿ, ಊಟ ಮಾಡೋದಿರಲಿ, ನಿದ್ದೆ ಮಾಡೋದಿರಲಿ, ಕೆಲಸ ಮಾಡೋದಿರಲಿ ಎಲ್ಲದಕ್ಕೂ ಮನಸ್ಸಿನ ಸಾಥ ಬೇಕೆ ಬೇಕು. ಮನಸ್ಸಿದ್ದರೆ ಮಾರ್ಗ. ಆದರೆ ಈ ಮನಸ್ಸು ಒಳ್ಳೆ ಕೆಲಸಕ್ಕೆ ಈಜಿಯಾಗಿ ಸಾಥ ಕೊಡಲ್ಲ. ಯಾವ ಕೆಲಸಗಳಲ್ಲಿ ನಮಗೆ ಪೇನ ಆಗುತ್ತೋ ಅಲ್ಲಿ ಮಾತ್ರ ಗೇನ್ ಇರುತ್ತದೆ. ಆದರೆ ಪೇನ ಆಗುವ ಕೆಲಸಗಳನ್ನು ಮಾಡಲು ನಮ್ಮ ಮನಸ್ಸು ಮುಂದಾಗಲ್ಲ.
ಉದಾಹರಣೆಗೆ ; ಬೆಳಿಗ್ಗೆ ಬೇಗನೆದ್ದು ಯೋಗಾ ಮಾಡಿ ಬೇಗನೆ ಕೆಲಸ ಮಾಡಲು ಶುರು ಮಾಡಿದರೆ ನಮ್ಮ ಹೆಲ್ತ ಹಾಗೂ ವೆಲ್ತ ಎರಡೂ ಸೂಪರಾಗಿರುತ್ತವೆ. ಆದರೆ ಬೆಳಿಗ್ಗೆ ಬೇಗನೇಳಲು ಮನಸ್ಸು ಕೇಳಲ್ಲ. ಆದರೆ ಹಾಳಾಗಲು ಇದೇ ಮನಸ್ಸು ಫುಲ್ ಸಾಥ ಕೊಡುತ್ತದೆ. ಟೈಮಪಾಸ ಮಾಡಲು, ದುಶ್ಚಟ ಮಾಡಲು, ಲೇಜಿಯಾಗಿ ಬಿದ್ದಿರಲು ಮನಸ್ಸು ಫುಲ್ ಸಾಥ ಕೊಡುತ್ತದೆ. ಆದರೆ ಸ್ಟಡಿ ಮಾಡಲು, ಕೆಲಸ ಮಾಡಲು ಮನಸ್ಸು ಖುಷಿಯಿಂದ ಸಾಥ ಕೊಡಲ್ಲ. ಯಾವ ಕೆಲಸಗಳು ನಮ್ಮನ್ನು ಸಕ್ಸೆಸಫುಲ್ ಮಾಡುತ್ತವೆಯೋ, ಒಳ್ಳೆಯದನ್ನು ಮಾಡುತ್ತವೆಯೋ ಅವೆಲ್ಲ ಕೆಲಸಗಳನ್ನು ಮಾಡೋಕೆ ಮನಸ್ಸು ರೆಡಿಯಾಗಲ್ಲ. ನಾವು ಮನಸ್ಸಿಗೆ ಮೂಗುದಾರ ಹಾಕಿ ಅದನ್ನು ಎಳೆದುಕೊಂಡು ಹೋಗಬೇಕು. ಅರ್ಥಾತ್ ಮನಸ್ಸನ್ನು ಕಂಟ್ರೋಲನಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ಮನಸ್ಸನ್ನು ಕಂಟ್ರೋಲನಲ್ಲಿಟ್ಟರೆ ಮುಗೀತು ನಾವು ಜಗತ್ತನ್ನು ಗೆಲ್ಲುತ್ತೇವೆ. ನಾವು ನಮ್ಮ ಮನಸ್ಸಿನ ಮೇಲೆ ಕಂಟ್ರೋಲ ಸಾಧಿಸದಿದ್ದರೆ ನಾವು ಸಕ್ಸೆಸಫುಲ್ ಆಗಲು ಸಾಧ್ಯವೇ ಇಲ್ಲ. ಮನಸ್ಸನ್ನು ನಮ್ಮ ಗುಲಾಮನನ್ನಾಗಿಸಿದರೆ ನಾವು ರಾಜನಾಗುತ್ತೇವೆ. ಮನಸ್ಸನ್ನು ರಾಜ ಮಾಡಿದರೆ ನಾವು ಗುಲಾಮನಾಗುತ್ತೇವೆ. ಅದಕ್ಕಾಗಿ ಮನಸ್ಸನ್ನು ಕಂಟ್ರೋಲ್ ಮಾಡುವುದು ಬಹಳಷ್ಟು ಇಂಪಾರಟಂಟಾಗಿದೆ. ನಿಮಗೆ ಜಗತ್ತನ್ನು ಗೆಲ್ಲಬೇಕೆಂಬ ಆಸೆಯಿದ್ದರೆ ಮೊದಲು ನಿಮ್ಮ ಮನಸ್ಸನ್ನು ಕಂಟ್ರೋಲ ಮಾಡಿ.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕೂಡ ಮನಸ್ಸಿನ ಬಗ್ಗೆ ಹೇಳಿದ್ದಾರೆ. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿದ್ದರೆ ಅದೇ ನಮ್ಮ ಮಿತ್ರ, ಅದೇ ಮನಸ್ಸು ಹಿಡಿತದಲ್ಲಿರದೇ ಇದ್ದರೆ ಅದಕ್ಕಿಂತಲೂ ಕೆಟ್ಟ ಶತ್ರು ಬೇರೆ ಯಾರಿಲ್ಲ ಅಂತಾ ಹೇಳಿದ್ದಾರೆ. ಸೋ ಗೆಳೆಯರೇ ನಿಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಮತ್ತೆ ನಿಮ್ಮ ಜಗತ್ತನ್ನು ಗೆಲ್ಲಿ. ಆಲ ದ ಬೆಸ್ಟ್...