ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇದು ಪರ್ಸನಲ್ ಫೈನಾನ್ಸ್ ಸೀರಿಸನ ಎರಡನೇ ಲೆಸನ್ ಆಗಿದೆ. ಈ ಲೆಸನನಲ್ಲಿ ನಾನು ನಿಮಗೆ ನನ್ನ ಲೈಫಿನ ಬೆಸ್ಟ ಇನ್ವೆಸ್ಟಮೆಂಟ ಬಗ್ಗೆ ಹೇಳ್ತಾ ಇರುವೆ. ಇದು ನಿಮ್ಮ ಲೈಫಿನ ಬೆಸ್ಟ ಇನ್ವೆಸ್ಟಮೆಂಟ ಕೂಡ ಆಗಬಹುದು. ಸೋ ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತೆ ಓದಲು ಶೇರ್ ಮಾಡಿಟ್ಟುಕೊಳ್ಳಿ.
ಗೆಳೆಯರೇ, ಸೆಲ್ಪ ಇನ್ವೆಸ್ಟಮೆಂಟ ಬೆಸ್ಟ ಇನ್ವೆಸ್ಟಮೆಂಟ ಆಗಿದೆ. ನಾವು ನಮ್ಮ ಹಣವನ್ನು ಬೇರೆ ಎಲ್ಲಾದರೂ ಇನ್ವೆಸ್ಟ ಮಾಡುವ ಮೊದಲು ನಮ್ಮ ಮೇಲೆ ಇನ್ವೆಸ್ಟ ಮಾಡಬೇಕು. ನಮ್ಮ ಹೆಲ್ತ್ ಮೇಲೆ, ಎಜುಕೇಶನ್ ಮೇಲೆ, ಸ್ಕೀಲ್ಸ ಮೇಲೆ ಇನ್ವೆಸ್ಟ ಮಾಡಬೇಕು. ನಮ್ಮ ನಿಜವಾದ ಆಸ್ತಿ ಎಂದರೆ ನಾವೇ. ಅದಕ್ಕಾಗಿ ನಾವು ತಪ್ಪದೇ ಸೆಲ್ಪ ಇನ್ವೆಸ್ಟಮೆಂಟ ಮಾಡಬೇಕು. ನಮ್ಮ ಗ್ರೋಥಗಾಗಿ, ಸಕ್ಸೆಸಗಾಗಿ, ಹೆಲ್ತಗಾಗಿ, ವೆಲ್ತಗಾಗಿ ನಾವು ನಮ್ಮ ಟೈಮ, ಟ್ಯಾಲೆಂಟ್ ಹಾಗೂ ಮನಿಯನ್ನು ಇನ್ವೆಸ್ಟಮೆಂಟ ಮಾಡಲೇಬೇಕು. ಫಸ್ಟ ಸೆಲ್ಪ ಇನ್ವೆಸ್ಟಮೆಂಟ ಮಾಡಬೇಕು. ಆವಾಗ ಎಲ್ಲವೂ ಬೆಸ್ಟ ಆಗಿರುತ್ತದೆ.
ನಾನು ಸರಿಯಾದ ಟೈಮಿಗೆ ಸರಿಯಾಗಿ ಸೆಲ್ಪ ಇನ್ವೆಸ್ಟಮೆಂಟ ಮಾಡಿರುವೆ ಎಂಬ ಖುಷಿ ನನಗಿದೆ. ಸೆಲ್ಪ ಇನ್ವೆಸ್ಟಮೆಂಟನಲ್ಲಿ ಮುಖ್ಯವಾಗಿ ಮೂರು ಇನ್ವೆಸ್ಟಮೆಂಟಗಳು ಬರುತ್ತವೆ.
1) ಟೈಮ
2) ಟ್ಯಾಲೆಂಟ್
3) ಮನಿ
ನಾನು ನನ್ನ ಟೈಮನ್ನು ಹಣದ ತರಹ ಖರ್ಚು ಮಾಡಿರುವೆ. ಹಾಸ್ಟೇಲನಲ್ಲಿ ಎಲ್ರೂ ಮಧ್ಯರಾತ್ರಿ ತನಕ ಟೈಮಪಾಸ ಮಾಡುತ್ತಾ ಕೂಡುತ್ತಿದ್ದರು. ಆದರೆ ನಾನು ಬೇಗನೆ ಮಲಗಿ ಬೇಗನೆ ಏಳ್ತಿದ್ದೆ. ಎಲ್ರೂ ನಿದ್ದೆ ಮಾಡುವಾಗ ನಾನು ಎಕ್ಸರಸೈಜ ಮಾಡ್ತಿದ್ದೆ, ಯೋಗ, ಪ್ರಾಣಾಯಾಮ ಮಾಡ್ತಿದ್ದೆ. ಅದಕ್ಕೆ ಈಗ ಫಿಟ್ & ಹೆಲ್ದಿಯಾಗಿರುವೆ. ಈಗಲೂ ನಾನು ವರ್ಕೌಟ ಮಾಡುವೆ ಮುಂದೆನು ಮಾಡುವೆ. ಏಕೆಂದರೆ ಹೆಲ್ತ ಇಸ್ ವೆಲ್ತ. ಆರೋಗ್ಯವೇ ಭಾಗ್ಯ.
ಕಾಲೇಜಿನಲ್ಲಿರುವಾಗ ಎಲ್ಲರೂ ಸಿನಿಮಾ, ಲವ್ವು, ಪಾರ್ಕು, ಬರ್ಢಡೇ ಪಾರ್ಟಿ ಅಂತೆಲ್ಲ ಟೈಮ ವೇಸ್ಟ ಮಾಡ್ತಾಯಿದ್ರು. ಬಟ್ ನಾನು ಸ್ಕೀಲ್ಸಗಳ ಮೇಲೆ ಫೋಕಸ ಮಾಡಿದೆ. ಬುಕ್ಸಗಳ ಜೊತೆಗೆ ದೋಸ್ತಿ ಮಾಡಿದೆ. ಪಾರ್ಟಟೈಮ ರೈಟಿಂಗ & ಟೀಚಿಂಗ ಜಾಬ್ ಮಾಡಿ ಹಣ ಸಂಪಾದಿಸಿದೆ. ಈ ಜಾಬ ಕೈತಪ್ಪಿ ಹೋದಾಗ ಪಾರ್ಟಟೈಮ ಡ್ರೈವಿಂಗ ಮಾಡಿದೆ. ಇದರಿಂದ ಬಂದ ಹಣವನ್ನು ಸ್ಕೀಲ್ಸ ಡೆವಲಪ್ಮೆಂಟ್ ಮೇಲೆ ಇನ್ವೆಸ್ಟ ಮಾಡಿದೆ. ಫ್ಯಾಷನ್ ಪೋಟೋಗ್ರಾಫಿ, ವಿಡಿಯೋ ಪ್ರೋಡಕ್ಷನ, ವೆಬ್ ಡೆವಲಪ್ಮೆಂಟ್, ಡಿಜಿಟಲ ಮಾರ್ಕೆಟಿಂಗ್, ಫಿಲ್ಮಮೇಕಿಂಗ್, ಬಿಜನೆಸ ಮ್ಯಾನೇಜ್ಮೆಂಟ್, ಸ್ಟಾರ್ಟಪ, ಪಬ್ಲಿಕ ಸ್ಪಿಕಿಂಗ ಕೋರ್ಸಗಳ ಮೇಲೆ ಲಕ್ಷಕ್ಕಿಂತಲೂ ಅಧಿಕ ಹಣ ಹಾಕಿದೆ. ಅದಕ್ಕೇ ಈಗ ಕೋಟಿಗಳಲ್ಲಿ ಸಂಪಾದಿಸುತ್ತಿರುವೆ. ಬಟ ನನ್ನ ಕ್ಲಾಸಮೇಟ್ಸಗಳು ಇದಕ್ಕಿಂತಲೂ ಹೆಚ್ಚಿನ ಹಣವನ್ನು ಗರ್ಲಫ್ರೆಂಡ್ಸ, ಪಾರ್ಟಿ, ಬೈಕಗಳ ಮೇಲೆ ಹಾಕಿ ಈಗ ಅನುಭವಿಸುತ್ತಿದ್ದಾರೆ.
ಎಲ್ಲರೂ ಕಾಲೇಜ ಮುಗಿಸಿದ ತಕ್ಷಣ ಸಿಕ್ಕ ಜಾಬ ಮಾಡಿ ಲೈಫಲ್ಲಿ ಸೆಟ್ಲಾದೆವು ಅಂತಾ ಅಂದುಕೊಂಡು ಫುಲಸ್ಟಾಪಾದರು. ಬಟ್ ನಾನು ರಿಸ್ಕ್ ತೆಗೆದುಕೊಂಡು ನಮ್ಮ Roaring Creations Pvt Ltd ಕಂಪನಿ ಶುರು ಮಾಡಿದೆ. ಅವರು ಅವರ ಟ್ಯಾಲೆಂಟನ್ನು ಸಿಲ್ಲಿ ಸ್ಯಾಲರಿಗಾಗಿ ಬೇರೆಯವರತ್ರ ಕೆಲಸಕ್ಕೆ ಸೇರಿ ವೇಸ್ಟ ಮಾಡಿದರು. ಆದರೆ ನಾನು ನನ್ನ ಸಂಪೂರ್ಣ ಟೈಮ, ಟ್ಯಾಲೆಂಟ್ ಹಾಗೂ ಮನಿಯನ್ನು ನಮ್ಮ ಕಂಪನಿಯಲ್ಲಿ ಇನ್ವೆಸ್ಟ ಮಾಡಿದೆ. ಅದಕ್ಕೆ ಬೇಗನೆ ಸೆಟ್ಲಾದೆ, ಸಕ್ಸೆಸಫುಲ್ಲಾದೆ, ಫೈನಾನ್ಸಿಯಲಿ ಫ್ರೀಯಾದೆ. ಬಟ ನನ್ನ ಕ್ಲಾಸಮೇಟ್ಸಗಳು ಇನ್ನೂ ಸ್ಟ್ರಗಲ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ. ಏಕೆಂದರೆ ಅವರ ಟ್ಯಾಲೆಂಟನ್ನು ಯುಜ ಮಾಡಿಕೊಂಡು ಅವರ ಬಾಸ ಮುಂದೆ ಹೋಗುತ್ತಿದ್ದಾನೆ, ಇವರು ಕತ್ತೆ ತರಹ ಕೆಲಸ ಮಾಡುತ್ತಾರೆ ಅಷ್ಟೇ. ಲೋನ ಮೇಲೆ ಮನೆ, ಲೋನ ಮೇಲೆ ಕಾರು, ಲೈಫಲಾಂಗ ಅದರ ಬಡ್ಡಿ ಕಟ್ಟಿ ಸಾಯೋದು ಅಷ್ಟೇ ಅವರ ಲೈಫ್.
ಮುಂಚೆ ಕೂಡ ನಾನು ನನ್ನ ಸಂಪೂರ್ಣ ಟೈಮ, ಟ್ಯಾಲೆಂಟ್ ಹಾಗೂ ಹಣವನ್ನು ನನ್ನ ಮೇಲೆ, ನನ್ನ ಗ್ರೋಥ ಮೇಲೆ ಇನ್ವೆಸ್ಟ ಮಾಡಿರುವೆ, ಈಗಲೂ ಮಾಡುತ್ತಿರುವೆ, ಮುಂದೆಯೂ ಮಾಡುವೆ. ಸೆಲ್ಪ ಇನ್ವೆಸ್ಟಮೆಂಟ ಬೆಸ್ಟ ಇನ್ವೆಸ್ಟಮೆಂಟ ಆಗಿದೆ. ಸೇಫ್ ಇನ್ವೆಸ್ಟಮೆಂಟ ಆಗಿದೆ. ಏಕೆಂದರೆ ನಿಮಗೆ ನಿಮಗಿಂತಲೂ ಬೆಸ್ಟ್ ಆಸ್ತಿ ಸಿಗಲೂ ಸಾಧ್ಯವಿಲ್ಲ. ಅದಕ್ಕಾಗಿ ಸ್ವಲ್ಪ ಸೆಲ್ಪ ಇನ್ವೆಸ್ಟಮೆಂಟ ಮಾಡಿ. ನಿಮ್ಮ ನಾಲೇಜ & ಹೆಲ್ತ ಮೇಲೆ ನಿಮ್ಮ ಟೈಮನ್ನು ಮತ್ತು ಮನಿಯನ್ನು ಇನ್ವೆಸ್ಟ ಮಾಡಿ. ನಿಮ್ಮ ಟ್ಯಾಲೆಂಟನ್ನು ನಿಮ್ಮ ಬಿಜನೆಸ್ಸಲ್ಲಿ ಇನ್ವೆಸ್ಟ ಮಾಡಿ. ಈ ಮ್ಯಾಟರ್ ನಿಮ್ಮ ಟೂಬಲೈಟಿಗೆ ಟಚ್ ಆಗಿದ್ರೆ ಈ ಅಂಕಣಕ್ಕೆ ಲೈಕ ಮಾಡಿ ಕಮೆಂಟ ಮಾಡಿ ಮತ್ತೆ ಶೇರ್ ಮಾಡಿ. ಧನ್ಯವಾದಗಳು...