ಹಣದ ಮನೋವಿಜ್ಞಾನ : ಝೀರೋದಿಂದ ಕೋಟಿ ಸಂಪಾದಿಸುವ ಸೂತ್ರ - Psychology of Money Book Summary in Kannada
ಹಾಯ್ ಗೆಳೆಯರೇ ನಮಸ್ತೆ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಅಂಕಣದಲ್ಲಿ ನಾನು Morgan Housel ಅವರು ಬರೆದ "The Psychology of Money" ಬುಕನಿಂದ ಕಲಿತ ಕೆಲವು ಲೆಸನಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ. ನಿಮಗೆ ಈ ಬುಕ್ಕನ್ನು ಓದುವ ಆಸೆಯಿದ್ದರೆ ಓದಿ ಲಿಂಕ್ ಇಲ್ಲಿದೆ - https://www.roaringcreationsfilms.com/the-psychology-of-money-book-in-kannada
ದಿ ಸೈಕಾಲಜಿ ಆಫ್ ಮನಿ ಅಥವಾ ಹಣದ ಮನೋವಿಜ್ಞಾನ ಇದೊಂದು ಬೆಸ್ಟ ಪರ್ಸನಲ್ ಫೈನಾನ್ಸ್ ಬುಕ್ ಆಗಿದೆ. ನಾವು ಹಣದ ಮನೋವಿಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಾವು ಝೀರೋದಿಂದ ಕೋಟಿ ಸಂಪಾದಿಸಬಹುದು. ಈ ಬುಕನಿಂದ ನಾನು ಕಲಿತ ಬೆಸ್ಟ ಲೆಸನಗಳು ಇಂತಿವೆ ;
1) We Human beings are not Logical, We are Psychological
ನಾವು ಮನುಷ್ಯರು ಲಾಜಿಕಲ್ಲಾಗಿಲ್ಲ, ಸೈಕಾಲಾಜಿಕಲ್ ಆಗಿದ್ದೇವೆ. ನಾವು ಡಾಟಾಗಳನ್ನು ನೋಡಿ ಅಥವಾ ಎಕ್ಸೆಲ್ ಶೀಟ ನೋಡಿ ಡಿಸಿಜನ ತೆಗೆದುಕೊಳ್ಳಲ್ಲ. ನಾವು ಭಯ ಹಾಗೂ ದುರಾಸೆಗಳಂಥ ಎಮೋಷನಗಳ ಆಧಾರದ ಮೇಲೆ ಎಲ್ಲ ಡಿಸಿಜನಗಳನ್ನು ತೆಗೆದುಕೊಳ್ಳುತ್ತೇವೆ, ನಂತರ ಅದನ್ನ ಲಾಜಿಕನಿಂದ ಜಸ್ಟಿಫೈ ಮಾಡುತ್ತೇವೆ. We take decisions based on Emotions and then justify them by logic. ಸೋ ನಾವು ಮನುಷ್ಯರು ಸೈಕಾಲಾಜಿಕಲ ಆಗಿದ್ದೇವೆ. ನಾವು ಬೇಗನೆ ಕಲಿಯಬೇಕಾದ ವಿಷಯಗಳನ್ನು ತುಂಬಾ ಲೇಟಾಗಿ ಕಲಿತು ನಂತರ ಪಶ್ಚಾತ್ತಾಪ ಪಡುತ್ತೇವೆ. ಜನ ಸೈಕಾಲಾಜಿಕಲ್ ಆಗಿದ್ದಾರೆ ಎಂಬುದಕ್ಕೆ ಬೆಸ್ಟ ಎಕ್ಸಾಮಪಲ್ ಇಂತಿದೆ ;
ಲಾಟರಿ ಒಂದು ಟ್ರ್ಯಾಪ್ ಆಗಿದೆ, ಅದರಲ್ಲಿ ಗೆಲ್ಲೋ ಚಾನ್ಸಸ 0.001% ಇದೆ. ಆದರೂ ಕೂಡ ಮಿಡಲ ಕ್ಲಾಸ್ ಹಾಗೂ ಲೋ ಕ್ಲಾಸ್ ಜನ ಲಾಟರಿಯಲ್ಲಿ ದುಡ್ಡಾಕುತ್ತಾರೆ. ಅವರತ್ರ ಯಾವುದೇ ಸೇವಿಂಗ ಇರುವುದಿಲ್ಲ, ಎಮರ್ಜೆನ್ಸಿ ಹಣ ಇರುವುದಿಲ್ಲ, ಮಕ್ಕಳ ಎಜುಕೇಶನಗೆ ಹಣ ಇರುವುದಿಲ್ಲ. ಆದರೂ ಕೂಡ ಇವರು ಲಾಟರಿಯಲ್ಲಿ ಧೈರ್ಯವಾಗಿ ಹಣ ಹಾಕುತ್ತಾರೆ. ಇವರ ಪ್ರಕಾರ ಶ್ರೀಮಂತರಾಗೋಕೆ ಇರುವ ಏಕೈಕ ದಾರಿಯೆಂದರೆ ಲಕ್ ಮಾತ್ರ, ಲಾಟರಿ ಮಾತ್ರ. ಹಾರ್ಡವರ್ಕನಿಂದ ಶ್ರೀಮಂತರಾಗಲ್ಲ, ಲಕನಿಂದ ಶ್ರೀಮಂತರಾಗಬಹುದು ಎಂಬುದು ಈ ಮೂರ್ಖರ ಬಲವಾದ ನಂಬಿಕೆಯಾಗಿದೆ. ಈ ಮೂರ್ಖರಿಗೆ ಇನ್ವೆಸ್ಟಮೆಂಟ ಮಾಡಲು ಹಣ ಇರುವುದಿಲ್ಲ, ಆದರೆ ಲಾಟರಿ ಆಡಲು ಜೂಜು ಆಡಲು ಹಣ ಇರುತ್ತದೆ. ಇಂಥ ಕೀಳು ಸೈಕಾಲಜಿಯಿಂದಲೇ ಇವರು ಬಡವರಾಗಿ ಬದುಕಿ ಬಡತನದಲ್ಲೇ ಸಾಯುತ್ತಾರೆ. ಈ ರೀತಿಯ ಮೆಂಟ್ಯಾಲಿಟಿ ನಿಮಗೂ ಇದ್ದರೆ ಇವತ್ತೆ ಅದನ್ನು ಬದಲಾಯಿಸಿಕೊಳ್ಳಿ. ಶ್ರೀಮಂತರಾಗುವ ಆಸೆಯಿದ್ದರೆ ಶ್ರೀಮಂತರ ಮನೋವಿಜ್ಞಾನವನ್ನು ಫಾಲೋ ಮಾಡಿ. ಶಾರ್ಟಕಟ್ಸಗಳನ್ನು ಮರೆತು ಬಿಡಿ.
2) True Wealth is Invisible
ನಿಜವಾದ ಸಂಪತ್ತು ಅದೃಶ್ಯವಾಗಿದೆ. ಅಂದರೆ ನಿಜವಾದ ಸಂಪತ್ತು ಕಣ್ಣಿಗೆ ಕಾಣಿಸುವುದಿಲ್ಲ. ನಾವು ಬೇರೆಯವರ ದೊಡ್ಡ ಮನೆಯನ್ನು, ಐಷಾರಾಮಿ ಕಾರನ್ನು ನೋಡಿ ಅವರನ್ನು ಶ್ರೀಮಂತರೆಂದುಕೊಂಡು ಬಾಯಿ ಬಿಡುತ್ತೇವೆ. ನಮಗೆ ಅವರ ಕಾರು ಹಾಗೂ ಬಂಗಲೆಗಳು ಮಾತ್ರ ಕಾಣಿಸುತ್ತವೆ. ಅದರ ಹಿಂದಿರುವ ಲೋನ ಹಾಗೂ EMI ಕಾಣಿಸುವುದಿಲ್ಲ. ಸ್ಟ್ರೆಸ ಕಾಣುವುದಿಲ್ಲ, ಲೈಫಪಾರ್ಟನರ್ ಜೊತೆಗಿನ ಫೈಟ ಕಾಣಿಸುವುದಿಲ್ಲ. ನಮಗೆ ಅಸಲಿ ಸಂಪತ್ತು ಕಾಣಿಸುವುದಿಲ್ಲ. ಕಂಪ್ಲೀಟ ಪಿಕ್ಚರ ನಮಗೆ ಕಾಣಿಸುವುದಿಲ್ಲ. ನಾವು ಹೊರಗಿನ ಹೊಳಪನ್ನು ನೋಡಿ ಇದನ್ನೇ ನಿಜವೆಂದು ನಂಬುತ್ತೇವೆ. ಆದರೆ ಒಳಗಿನ ಹುಳುಕನ್ನು ನಾವು ನೋಡಲ್ಲ. ನಾವು ಸುಳ್ಳು ಶ್ರೀಮಂತರನ್ನು ನೋಡಿ ಮೋಸ ಹೋಗುತ್ತೇವೆ. ಅವರು ನಿಜವಾಗಿಯೂ ಶ್ರೀಮಂತರಾ ಎಂಬುದನ್ನು ಸರಿಯಾಗಿ ಗುರ್ತಿಸುವಲ್ಲಿ ನಾವು ಫೇಲಾಗುತ್ತೇವೆ.
ಶೋಅಪ ಮಾಡಲು ಕಾರು ಖರೀದಿಸುತ್ತೇವೆ. ಆದರೆ ಯಾರು ನಮಗೆ ರೆಸ್ಪೆಕ್ಟ ಕೊಡಲ್ಲ, ನಮ್ಮತ್ರ ಇರುವ ಕಾರಿಗೆ ರೆಸ್ಪೆಕ್ಟ ಕೊಡುತ್ತಾರೆ. ಜನ ರೀಚನೆಸಗೆ ರೆಸ್ಪೆಕ್ಟ ಕೊಡುತ್ತಾರೆಯೇ ವಿನಃ ನಮಗಲ್ಲ. ಅದಕ್ಕಾಗಿ ನಾವು ಶೋಅಪಗಾಗಿ ಕಾರು ಮನೆ ಖರೀದಿಸಬಾರದು. ನಮ್ಮ ಅವಶ್ಯಕತೆ ಎಷ್ಟಿದೇನೋ ಅಷ್ಟನ್ನೆ ಖರೀದಿಸಬೇಕು. ಶೋಅಪ ಬಡವರಾಗಲು ಇರುವ ಸುಲಭ ಮಾರ್ಗವಾಗಿದೆ. ನಿಜವಾದ ಶ್ರೀಮಂತಿಕೆ ಟೈಮನಲ್ಲಿದೆ. ನಿಮ್ಮತ್ರ ನಿಮಗಿಷ್ಟವಾಗಿರುವುದನ್ನೆಲ್ಲ ಮಾಡಲು, ಬಯಸಿದ ಜಾಗಕ್ಕೆ ಹೋಗಲು ಟೈಮಿದ್ರೆ ಅದೇ ನಿಜವಾದ ಶ್ರೀಮಂತಿಕೆಯಾಗಿದೆ. ಇದು ಕಣ್ಣಿಗೆ ಕಾಣಿಸುವುದಿಲ್ಲ.
ಗೆಳೆಯರೇ, ನಿಮಗೆ ಶ್ರೀಮಂತರಾಗುವ ಆಸೆಯಿದ್ದರೆ ನಿಜವಾದ ಶ್ರೀಮಂತಿಕೆಯನ್ನು ಗುರ್ತಿಸಲು ಕಲಿಯಿರಿ. ಇಂಡಿಪೆಂಡೆಂಟ್ ಆಗಿ ಡಿಸಿಜನಗಳನ್ನು ತೆಗೆದುಕೊಳ್ಳಿ. ಶೋಅಪ ಮಾಡಿ ಬಡವರಾಗಬೇಡಿ. ಕರೋಡಪತಿಯಿಂದ ರೋಡಪತಿಯಾಗಬೇಡಿ. ರೀಚದಿಂದ Rag ಆಗಬೇಡಿ. ರಿಯಲ್ ರೀಚ್ ಆಗಿ.
3) Nothing is Free. Everything has its own price.
ಯಾವುದೇ ವಸ್ತು ಕೂಡ ಫ್ರೀಯಾಗಿಲ್ಲ. ಎಲ್ಲದಕ್ಕೂ ತನ್ನದೇ ಆದ ಒಂದು ಪ್ರೈಜಿದೆ. ನಾವು ಎಲ್ಲದಕ್ಕೂ ಬೆಲೆ ತೆರಲೇಬೇಕು. We have to pay for everything. ನೀವು ನಿಮ್ಮ ಗರ್ಲಫ್ರೆಂಡ ಜೊತೆಗೆ ಶಾಪಿಂಗಗೆ ಹೋಗಿದ್ದೀರಿ ಅಂತಾ ಅನ್ಕೊಳ್ಳಿ. ಆವಾಗ ನಿಮ್ಮ ಗರ್ಲಫ್ರೆಂಡ ವಾಚ್ ಕೇಳ್ತಾಳೆ ಅಂತಾ ಅನ್ಕೊಳ್ಳಿ. ಆಗ ನೀವು ಹಣ ಕೊಟ್ಟು ವಾಚ್ ತಗೊಂತಿರಾ. ಏಕೆಂದರೆ ಕಳ್ಳತನ ಮಾಡಿದ್ರೆ ಜೈಲಾಗುತ್ತೆ ಅಂತಾ ನಿಮಗೆ ಗೊತ್ತು. ಅದಕ್ಕೆ ನೀವು ಕಳ್ಳತನಕ್ಕೆ ಬೆಲೆ ತೇರೊದು ಬೇಡ ಅಂತಾ ವಾಚಿನ ಬೆಲೆಯನ್ನು ತೆರುತ್ತೀರಾ. ಇದೇ ರೀತಿ ಎಲ್ಲದಕ್ಕೂ ಒಂದು ಬೆಲೆಯಿದೆ. ನಾವು ಆ ಬೆಲೆಯನ್ನು ತೆರಲೇಬೇಕು.
ಗ್ರೋಥ ಕಂಪೌಂಡಿಂಗ ಆಗಿದೆ ಮತ್ತು ಟೈಮ ತೆಗೆದುಕೊಳ್ಳುತ್ತದೆ. ಆದರೆ ಡಿಸ್ಟ್ರಕ್ಷನ ಸೆಕೆಂಡಲ್ಲಿ ಆಗುತ್ತದೆ ಮತ್ತು ಸಡನ್ನಾಗಿ ಆಗುತ್ತದೆ. ಅಂದರೆ ಹಣ ಗಳಿಸೋಕೆ ತುಂಬಾ ಕಷ್ಟಪಡಬೇಕಾಗುತ್ತದೆ, ಆದರೆ ಅದನ್ನ ಖರ್ಚು ಮಾಡೋಕೆ ಸೆಕೆಂಡ್ ಸಾಕು. ಇನ್ವೆಸ್ಟಮೆಂಟ ಕಂಪೌಂಡಿಂಗ ಆಗಿದೆ. ಇನ್ವೆಸ್ಟಮೆಂಟದಿಂದ ನಾವು ಶ್ರೀಮಂತರಾಗಬೇಕೆಂದರೆ ನಾವು Fear, Doubt, Uncertainty, Greed & Regretಗಳ ಬೆಲೆಯನ್ನು ತೆರಲೇಬೇಕು. ಇಲ್ಲವಾದರೆ ನಾವು ಎಂದಿಗೂ ಶ್ರೀಮಂತರಾಗುವುದಿಲ್ಲ.
4) Staying Wealthy is Difficult
ಶ್ರೀಮಂತರಾಗಿ ಉಳಿಯುವುದು ತುಂಬಾನೇ ಕಷ್ಟಕರವಾಗಿದೆ. ಶ್ರೀಮಂತರಾಗೋದು ಸುಲಭವಾಗಿದೆ. ಆದರೆ ಶ್ರೀಮಂತರಾಗಿ ಉಳಿಯೋದು ಕಠಿಣವಾಗಿದೆ. ಏಕೆಂದರೆ ನಮ್ಮ ಇನಕಮ ಟೆಂಪರರಿಯಾಗಿದೆ, ಆದರೆ ನಮ್ಮ Expensesಗಳು ಪರ್ಮನೆಂಟಾಗಿವೆ. ಎಷ್ಟೋ ಜನ ಶ್ರೀಮಂತರಾಗುತ್ತಾರೆ ಆದರೆ ಮತ್ತೆ ಬೇಗನೆ ಬಡವರಾಗುತ್ತಾರೆ. ಇದಕ್ಕಿರುವ ಕಾರಣ ಏನಪ್ಪಾ ಅಂದರೆ ಇವರಿಗೆ ಮನಿ ಮ್ಯಾನೇಜ್ಮೆಂಟ್ ಗೊತ್ತಿರಲ್ಲ. ಹಣವನ್ನು ಮ್ಯಾನೇಜ ಮಾಡಲು ಇವರಿಗೆ ಬರಲ್ಲ. ಅದಕ್ಕೇನೆ ಇವರು ಬಡವರಾಗುತ್ತಾರೆ.
ನಾವು ಶ್ರೀಮಂತರಾಗಬೇಕೆಂದರೆ ಮತ್ತು ಕೊನೆತನಕ ಶ್ರೀಮಂತರಾಗೇ ಉಳಿಯಬೇಕೆಂದರೆ ನಾವು ಹಣವನ್ನು ಮ್ಯಾನೇಜ ಮಾಡಲು ಕಲಿಯಬೇಕು. ನಮ್ಮ ಯೋಗ್ಯತೆಕ್ಕಿಂತ ಕಡಿಮೆ ಖರ್ಚು ಮಾಡಬೇಕು. ನಮ್ಮ ಎಮೋಷನ್ಸಗಳನ್ನು ಸೆಲ್ಪ ಕಂಟ್ರೋಲ ಮಾಡಬೇಕು, ಸೇವಿಂಗ & ಇನ್ವೆಸ್ಟಮೆಂಟ ಮಾಡಬೇಕು, ಫೈನಾನ್ಸಿಯಲಿ ಅನಬ್ರೇಕೆಬಲ್ ಆಗಬೇಕು. ಮಾರ್ಕೆಟನಲ್ಲಿ ಎಂಥದ್ದೇ ದುಸ್ಥಿತಿ ಬಂದರೂ ನಾವು ಸ್ಥಿರವಾಗಿರಬೇಕು. ಶೋಅಪ ಮಾಡದೇ ರಿಯಲ್ ರೀಚ್ ಆಗಿ ಬದುಕಬೇಕು. ಯೋಗಾ ಮೆಡಿಟೆಷನ್, ಟ್ರಾವೆಲಗಳಂಥ ಲೋ ಕಾಸ್ಟ ಆ್ಯಕ್ಟಿವಿಟಿಗಳಲ್ಲಿ ಪ್ಲೀಜರನ್ನು ಹುಡುಕಬೇಕು. ಇವುಗಳಲ್ಲೇ ನಿಜವಾದ ಪ್ಲೀಜರಿದೆ.
5) High Savings and Long Term investments are key to financial success.
ಹೈ ಸೇವಿಂಗ್ಸ ಹಾಗೂ ಲಾಂಗಟರ್ಮ ಇನ್ವೆಸ್ಟಮೆಂಟಗಳು ಫೈನಾನ್ಸಿಯಲ್ ಸಕ್ಸೆಸಗೆ ಕೀಲಿಕೈಗಳಾಗಿವೆ. ಜಗತ್ತಿನಲ್ಲಿ 3 ತರಹದ ಜನ ಇರುತ್ತಾರೆ.
1) ಹಣವನ್ನು ಸೇವಿಂಗ ಮಾಡುವ ಜನ
2) ನಮ್ಮಿಂದ ಹಣ ಸೇವಿಂಗ ಆಗಲ್ಲ ಅನ್ನೋ ಜನ
3) ನಮಗೆ ಹಣವನ್ನು ಸೇವಿಂಗ ಮಾಡುವ ಅವಶ್ಯಕತೆ ಏನಿದೆ ಅನ್ನೋ ಮೂರ್ಖ ಜನ
ನಿಮಗೆ ಶ್ರೀಮಂತರಾಗುವ ಆಸೆಯಿದ್ದರೆ ನೀವು ಮೊದಲನೇ ತರಹದ ಜನರನ್ನು ಫಾಲೋ ಮಾಡಬೇಕು. ಹಣವನ್ನು ಸೇವಿಂಗ ಮಾಡಬೇಕು. ನೀವು ಕ್ರಿಯೆಟ ಮಾಡಿರುವ ಹಣವನ್ನು ಪ್ರೊಟೆಕ್ಟ ಮಾಡಿಟ್ಟುಕೊಳ್ಳಬೇಕು. ಹೈ ಸೇವಿಂಗ್ಸ ಮಾಡಬೇಕು, ತಾಳ್ಮೆಯಿಂದ ಇರಬೇಕು, ಲಾಂಗ ಟರ್ಮ ಇನ್ವೆಸ್ಟಮೆಂಟ ಮಾಡಬೇಕು. ಆಥರನ ಪ್ರಕಾರ Index Funds & Long Term Investment ಬೆಸ್ಟಾಗಿವೆ. ನಾವು ಸರಿಯಾಗಿ ಸೇವಿಂಗ್ಸ & ಇನ್ವೆಸ್ಟಮೆಂಟ ಮಾಡಿದರೆ ಗ್ಯಾರಂಟಿ ಶ್ರೀಮಂತರಾಗುತ್ತೇವೆ.
ನಾವು ಯಾವಾಗಲೂ ನಮ್ಮ 20% ಹಣವನ್ನು ಕ್ಯಾಷನಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ಸ್ಟಾಕ್ ಮಾರ್ಕೆಟ ಕ್ರ್ಯಾಷ್ ಆದರೆ ನಮಗೆ ನಮ್ಮ ಸ್ಟಾಕಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಕೆಟ್ಟ ಪರಿಸ್ಥಿತಿ ಬರಲ್ಲ. ಅದಕ್ಕೆ ಕ್ಯಾಷನಲ್ಲಿ ಎಮರ್ಜೆನ್ಸಿಗಾಗಿ ಹಣವನ್ನು ಇಟ್ಟುಕೊಳ್ಳಬೇಕು.
ಓಕೆ ಫ್ರೆಂಡ್ಸ್ ಇವಿಷ್ಟು ಲೆಸನಗಳನ್ನು ನಾನು The Psychology of Money ಬುಕನಿಂದ ಕಲಿತಿರುವೆ. ನಿಮಗೆ ಇವು ಇಷ್ಟವಾಗಿದ್ದರೆ ತಪ್ಪದೇ ಈ ಅಂಕಣಕ್ಕೆ ಲೈಕ ಮಾಡಿ, ಶೇರ್ ಮಾಡಿ ಕಮೆಂಟ ಮಾಡಿ. ಇದೇ ರೀತಿಯ ಯುಜಫುಲ್ ಫೈನಾನ್ಸಿಯಲ್ ಆರ್ಟಿಕಲಗಳನ್ನು ಫ್ರೀಯಾಗಿ ಓದಲು ಡೈರೆಕ್ಟರ್ ಸತೀಶಕುಮಾರ ಫೇಸ್‌ಬುಕ್ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...