ಹಾಯ್ ಗೆಳೆಯರೇ, ಈ ಜಗತ್ತಿನಲ್ಲಿ 99% ಜನ ಬಡವರಾಗಿದ್ದಾರೆ ಮತ್ತೆ ಬಡವರಾಗುತ್ತಲೇ ಹೋಗುತ್ತಿದ್ದಾರೆ. ಅದಕ್ಕಿರುವ ಕಾರಣಗಳಲ್ಲಿ ಮುಖ್ಯ ಕಾರಣ ಏನಪ್ಪಾ ಅಂದ್ರೆ ಅವರು ತಮ್ಮ ಹಣವನ್ನು ಸುಡುತ್ತಿದ್ದಾರೆ. ಹೌದು ಗೆಳೆಯರೇ ಅವರು ತಮ್ಮ ಹಣವನ್ನು ಒಣ ಶೋಕಿಗಳಲ್ಲಿ, ಅನಾವಶ್ಯಕ ಲಕ್ಸುರಿಗಳನ್ನು ಖರೀದಿಸುವಲ್ಲಿ, ಶೋಅಪ ಮಾಡುವುದರಲ್ಲಿ, ಲೋನಗಳಲ್ಲಿ, ದುಶ್ಚಟಗಳಲ್ಲಿ ಸುಡುತ್ತಿದ್ದಾರೆ. ಅದಕ್ಕಾಗಿಯೇ 99% ಜನ ಬಡವರಾಗುತ್ತಿದ್ದಾರೆ. ನಿಮಗೆ ಬಡವರಾಗಬಾರದು ಎಂಬಾಸೆ ಇದ್ದರೆ ಈ ಕ್ಷಣದಿಂದಲೇ ನೀವು ಹಣವನ್ನು ಸುಡುವುದನ್ನ ನಿಲ್ಲಿಸಿ ಮತ್ತೆ ಶ್ರೀಮಂತರಾಗಲು ಶುರು ಮಾಡಿ.
ಇವತ್ತೆ ನಿಮ್ಮ ಹಣ ಎಲ್ಲೆಲ್ಲಿ ಅನಾವಶ್ಯಕವಾಗಿ ಸುಡುತ್ತಿದೆ ಎಂಬುದನ್ನು ಲಿಸ್ಟ ಮಾಡಿ ಮತ್ತು ಅದನ್ನ ಸೇವ ಮಾಡಿ. ಅಂದಾಗಲೇ ನೀವು ಶ್ರೀಮಂತರಾಗುತ್ತೀರಿ ಮತ್ತು ಶ್ರೀಮಂತರಾಗಿ ಉಳಿಯುತ್ತೀರಿ. ಸೋ ಹಣವನ್ನು ಸುಡುವುದನ್ನ ಬಿಟ್ಟು ಬಿಡಿ. ನಿಮಗೆ ನಿಮ್ಮ ಹಣ ಎಲ್ಲಿ ಸುಡುತ್ತಿದೆ ಎಂಬುದು ಗೊತ್ತಿಲ್ಲದಿದ್ದರೆ ಡೊಂಟ್ ವರಿ ನಾನೇ ಅದನ್ನು ಹೇಳುವೆ. ಜನ ಅನಾವಶ್ಯಕವಾಗಿ ಎಕ್ಸಟ್ರಾ ಶೂಸಗಳನ್ನು ಡ್ರೆಸಗಳನ್ನು, ಬ್ರ್ಯಾಂಡೆಡ್ ಡ್ರೆಸ, ಕಾಸ್ಟ್ಲಿ ಮೊಬೈಲ, ಕಾಸ್ಟ್ಲಿ ಬೈಕ ಖರೀದಿಸುವಲ್ಲಿ ಹಣ ಸುಡುತ್ತಿದ್ದಾರೆ. ಗ್ರ್ಯಾಂಡಾಗಿ ಮದುವೆ ಮಾಡಿಕೊಂಡು ಹಣ ಸುಡುತ್ತಿದ್ದಾರೆ. ಬೇರೆಯವರನ್ನು ಇಂಪ್ರೆಸ ಮಾಡಲು ಲಕ್ಸುರಿ ಐಟೆಮಗಳನ್ನು ಖರೀದಿಸಿ ಹಣ ಸುಡುತ್ತಿದ್ದಾರೆ. ಕಾರ ಲೋನ, ಹೋಮ ಲೋನ, ಮ್ಯಾರೇಜ ಲೋನ, ಹನಿಮೂನ ಲೋನಗಳಲ್ಲಿ ಹಣ ಸುಡುತ್ತಿದ್ದಾರೆ. ಒಣ ಶೋಕಿ ಹಾಗೂ ಶೋಅಪಗಳಲ್ಲಿ ಹಣ ಸುಡುತ್ತಿದ್ದಾರೆ. ಅನಾವಶ್ಯಕ ವಸ್ತುಗಳನ್ನು ಖರೀದಿಸುವಲ್ಲಿ ಹಣ ಸುಡುತ್ತಿದ್ದಾರೆ. ಗುಟಕಾ, ತಂಬಾಕು, ಸಿಗರೇಟ್, ಆಲ್ಕೊಹಾಲ್, ಸೆಕ್ಸ ಇತ್ಯಾದಿ ದುಶ್ಚಟಗಳನ್ನು ಮಾಡುವಲ್ಲಿ ಹಣವನ್ನು ಸುಡುತ್ತಿದ್ದಾರೆ. ಇವುಗಳಲ್ಲಿ ನಿಮ್ಮ ಹಣ ಎಲ್ಲಿ ಸುಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿ. ಅದನ್ನು ಸೇವ್ ಮಾಡಿ. ಆನಂತರ ಇನ್ವೇಸ್ಟ ಮಾಡಿ. ಶ್ರೀಮಂತರಾಗಿ. ನೀವು ಶ್ರೀಮಂತರಾಗಬೇಕೆಂದರೆ, ಶ್ರೀಮಂತರಾಗಿ ಉಳಿಯಬೇಕೆಂದರೆ ನೀವು ಹಣವನ್ನು ಸುಡುವ ಬದಲು ಸೇವ್ ಮಾಡಲೇಬೇಕು. ಹಣವನ್ನು ಸುಡುವುದನ್ನ ನಿಲ್ಲಿಸಿ ಶ್ರೀಮಂತರಾಗಿ. ಆಲ ದ ಬೆಸ್ಟ್...